You are here
Home > ಪುಟ ೩ > ಅಜ್ಜಿಯ ಅಪ್ಪುಗೆ – ಪವನ್ ಅಣ್ಣಯ್ಯ

ಅಜ್ಜಿಯ ಅಪ್ಪುಗೆ – ಪವನ್ ಅಣ್ಣಯ್ಯ

go ಮೊನ್ನೆ ತಾನೇ ಒಂದು ಪತ್ರಿಕೆಯಲ್ಲಿ ಹೆಗ್ಗಣ ಅಥವಾ ಕುಂದಾಪುರ ಕನ್ನಡದಲ್ಲಿ ಹೆಗ್ಗುಳದ ಬಗ್ಗೆ ಬರಹಗಳನ್ನು ಸಂಗ್ರಹಿಸುತ್ತಿದ್ದರು. ಹೆಗ್ಗಣಗಳ ಬಗ್ಗೆ ಬರೆಯೆಬೇಕಾದರೆ ನೆನಪಾಗುವುದು ನನ್ನ ಅಜ್ಜಿ. ನಾವು ಅವಳನ್ನ ದೊಡ್ಡಮ್ಮ ಅಂತ ಕರೆಯುತ್ತೇವೆ. ದೊಡ್ಡಮ್ಮ ನಮ್ಮನ್ನ ಆಗಲಿ ವರ್ಷಗಳಾದರೂ ಅವಳ ನೆನಪು ಸದಾ ಹಸಿರು. ಎಷ್ಟಾದರೂ ನನ್ನನ್ನ ಮುದ್ದಿನ ಮೊಮ್ಮಗ ಎಂದು ತನ್ನ ತಟ್ಟೆಯಲ್ಲಿದ್ದ ಮಾಂಸವನ್ನು ಕೊಟ್ಟು ಸಲಹಿದ ಜೀವವಲ್ಲವೆ?. ನಮ್ಮದು ಮುಂಚೆ ತಣ್ಣಗಿದ್ದ ಹಂಚಿನ ಮನೆ. ನಾವೆಲ್ಲಾ ಮಲಗುವುದು ದೊಡ್ಡಮ್ಮನ ಕೋಣೆಯಲ್ಲೇ. ನಾವೆಲ್ಲಾ ನೆಲದಮೇಲೆ ಮಲಗಿದರೆ ದೊಡ್ಡಮ್ಮ ಮಲಗುವುದು ಶಾಲೆಯ ಎರಡು ಬೆಂಚನ್ನ ಜೋಡಿಸಿದರೆ ಆಗುವ ಮಂಚದ ಮೇಲೆ. ನಮ್ಮ ಕೋಣೆಯ ಹಿಂಬದಿಯಲ್ಲಿ ಪೇರಳೆ ಮರದ ಗಿಡ ಇದೆ. ಬೆಂಗಳೂರಲ್ಲಿ ದುಡ್ಡು ಕೊಟ್ಟು ಈಗ ತಿನ್ನುತ್ತೇವೆ, ಮುಂಚೆ ಅದು ಕೊಳೆಯುತ್ತಿದ್ದರು ನೋಡುವವರಿಲ್ಲ. ಅದರ ಬುಡಕ್ಕೆ ತಾಗಿ ಒಂದು ಸಣ್ಣ ಹುತ್ತ ಇದೆ. ಅದೇ ಹಾವಿನ ಮನೆ. ದೊಡ್ಡಮ್ಮ ಹಾವು ಅಂದ್ರೆ ಹೌಹಾರುತ್ತಾರೆ. ಹಾವನ್ನು ನೋಡಿದರೆ ಅಷ್ಟು ಭಯ ಪಡುವವರನ್ನು ನಾನು ನೋಡಿಲ್ಲ. ದೊಡ್ಡಮ್ಮ ಹಾವಿನ ವೈರಿ. ನನ್ನ ಅಣ್ಣ ಆರ್ಎಸ್ಎಸ್ ಶಾಖೆಗೆ ಹೋಗಿ ತಂದ ಬಣ್ಣದ ಕೋಲೇ ಅವಳ ಆಯುಧ.

dissertation conseil constitutionnel bloc constitutionnalit ಪ್ಲಾಸ್ಟಿಕ್ ಹಾವು ಎಸೆದು ಎಷ್ಟೋ ಬಾರಿ ದೊಡ್ಡಮ್ಮನ  ಗೋಳೂಹಿಸಿಕೊಂಡ ಮೊಮ್ಮಕಳ್ಳಲ್ಲಿ ನನ್ನದೇ ಸಿಂಹಪಾಲು. ಈ ಹಾವಿನ ಭಯಕ್ಕೂ ಹೆಗ್ಗಣಕ್ಕೂ ಏನು ಸಂಬಂಧ ಅಂತ ಯೋಚಿಸುತ್ತಿದ್ದೀರಾ ? ಖಂಡಿತ ಇದೆ. ಈ ಹೆಗ್ಗಣಗಳ ಬೇಟೆಗೆ ಹಾವುಗಳು ಸೀದಾ ಬರುತ್ತಿದ್ದದು ನಮ್ಮ ಕೋಣೆಗೇನೇ. ಅದು ಎಂತ ಭಯಾನಕ ಘಟನೆ ಎಂದರೆ ಮನೆಯಲ್ಲಿದ್ದವರದ್ದು ಕೂಗಾಟವೇ ಕೂಗಾಟ. ಹಾವು ಆ ಮರದ ರೀಪಿಗೆ ಸುರುಳಿ ಸುತ್ತಿಕೊಂಡಾಗ ಅದರ ಮೈಯ ಅಡಿಬಾಗದ ಬಿಳಿ ಚರ್ಮ ಎಂತವರ ಮೈಯನ್ನ ನಡುಗಿಸುತ್ತಿತು. ದೊಡ್ಡಮ್ಮ ಕೇಳಬೇಕಾ ಕೂಗಿ ಕೂಗಿ ಅಡ್ಡ ಬೀಳುತಿದ್ದಳು. ಹಾವನೆಲ್ಲ ಓಡಿಸಿದ ಮೇಲೆ, ರಾತ್ರಿ ನಿದ್ದೆಯೆಲ್ಲಿ ಬರಬೇಕು? ನನಗೆ ಆಸರೆ ಮಧ್ಯಾಹ್ನ ಕೂಗಾಡಿದ ದೊಡ್ಡಮ್ಮನೆ.

Buy Writing ದೊಡ್ಡಮ್ಮನ ಪಕ್ಕಕ್ಕೆ ಮಲಗಿದರೆ ಏನೋ ಒಂದು ಧೈರ್ಯ. ದೊಡ್ಡಮ್ಮನ ಮಂಚದಲ್ಲಿ ಒಂದು ಜೀವಕ್ಕೆ ಮಾತ್ರ ಜಾಗ ಇದೆ. ಆದರೂ ನನ್ನನ್ನ ತಬ್ಬಿಕೊಂಡು ಮಲಗುತ್ತಿದ್ದಳು. ಆ ಪ್ರೀತಿ ಅಪ್ಪುಗೆಗೆ ಬೆಲೆಕಟ್ಟ ಬಹುದಾ? ಅವಳ ಹಳೆ ಹತ್ತಿಯ ಸೀರೆ. ತೆಂಗಿನ ನಾರಿನ ಚಾಪೆ. ಅವಳ ಪಕ್ಕದಲ್ಲಿ ಮಲಗಿದರೆ ಘಾಡ ನಿದ್ರೆ ಬರದೇ ಇರದು.  ನಮ್ಮ ಹಳೆ ಮನೆಯಿಂದ ಹೊಸ ಮನೆಗೆ ಬರುವಾಗ ಅದೇ ಪ್ಲಾಸ್ಟಿಕ್ ಹಾವು ನೋಡಿ ನಕ್ಕು ಬಿದ್ದಿದೆ. ಅಷ್ಟೊಂದು ನೆನಪುಗಳಿವೆ ಜೀವವಿಲ್ಲದ ಆ ಪ್ಲಾಸ್ಟಿಕ್ ಹಾವಿನಲ್ಲಿ.

source url ದೊಡ್ಡಮ್ಮನ ಕೊನೆ ದಿನಗಳಲ್ಲಿ ಜೊತೆಗೆ ನಾನಿರಲಿಲ್ಲ ಅನ್ನುವ ಕೊರಗಿದೆ. ದೊಡ್ಡಮ್ಮನ ನೆನಪನ್ನು ಬೆಂಗಳೂರೆಂಬ ಮಾಯಾವಿ ಮರೆಸುತ್ತಿದ್ದಳು, ಊರಿಗೆ ಹೋಗುವ ಅಭ್ಯಾಸವನ್ನ ಬಿಟ್ಟುಬಿಟ್ಟೆ, ಅದು ನಾವೆಲ್ಲಾ ಮಾಡುವ ತಪ್ಪು. ಫೋನ್ನಲ್ಲಿ ಮಾತಾಡಿದೆ ಕೆಲವೇ ಶಬ್ದಗಳು ಮಾತ್ರ ನನ್ನ ಪಾಲಿಗಿದೆ. ದೊಡ್ಡಮ್ಮ ಸತ್ತಾಗ ನನ್ನ ಕಣ್ಣಿನಲ್ಲಿ ಒಂದೇ ಒಂದು ಹನಿ ನೀರು ಬರಲಿಲ್ಲ. ಅದನ್ನ ನೋಡಲು ಅವಳಿಗೆ ಸಾಧ್ಯವಿಲ್ಲ ಅನ್ನುವುದು ನನಗೆ ಗೊತ್ತು. ತುಂಬು ಸಂಸಾರ, ಮನೆ ತುಂಬ ಮೊಮ್ಮಕ್ಕಳ  ನಡುವೆ ಅವಳ ಅಂತಿಮ ಯಾತ್ರೆ ಸಾರ್ಥಕ ಜೀವನದ ಸಂಕೇತ.

page ನಾವು ಹೊಸ ಮನೆಗೆ ಬಂದಾಗ, ಹಳೆ ಮನೆಯನ್ನು ಬಾಡಿಗೆಗೆ ಕೊಟ್ಟೆವು. ಅಲ್ಲಿಗೆ ಹಾರಿ ಬಂದದ್ದು ತಮಿಳು ನಾಡಿನ ಪ್ರೇಮದ ಹಕ್ಕಿಗಳು.  ನ್ಯಾಷನಲ್ ಹೈವೇ ಪ್ರೋಜೆಕ್ಟಿನ ಇಂಜಿನೀಯರ್ ತನ್ನ ಸ್ನೇಹಿತನ ತಂಗಿಯನ್ನೇ ಪ್ರೀತಿಸಿ ಓಡಿ ಬಂದಿದ್ದ.  ವರ್ಷಗಳು ಉರುಳಿದವು. ಆಕೆ ಒಂದು ಮುದ್ದಿನ ಹೆಣ್ಣು ಮಗಳಿಗೆ ಜನ್ಮ ನೀಡಿದಳು. ತಮಿಳುನಾಡಿನ ಹೆತ್ತವರ ಮಗುವಂದು ಮುದ್ದಾದ ಕುಂದಾಪುರ ಕನ್ನಡದಲ್ಲಿ ಮಾತನಾಡುವ ಸೊಗಸೇ ಬೇರೆ.  ಮತ್ತೆ ಅದೇ ಕೋಣೆಯಲ್ಲಿ ಹಾವು ಕಾಣಿಸಿಕೊಂಡಿದೆಯೆಂತೆ. ಮಗು ಹಾಗೂ ಮಗುವಿನ ಅಮ್ಮ ಚೀರಾಡುತ್ತ ಹೊರಗೆ ಓಡಿ ಬಂದಿದ್ದಾರೆ. ಆ ಮಗುವಿಗೆ ಎಷ್ಟು ಭಯವಾಗಿರಬಹುದೆಂದು  ನನಗೆ ಅರಿವಿದೆ. ಪ್ರೀತಿಸಿ ಮನೆ ಬಿಟ್ಟು ಬಂದ ಹೆತ್ತವರ ಮಗುವಾಗಿ ಹುಟ್ಟಿದರೆ,  ಮಗು ಕಳೆದುಕೊಳ್ಳುವುದು ಅಜ್ಜಿಯ ಅಭಯದ ಅಪ್ಪುಗೆ ತಾನೇ?

2 thoughts on “ಅಜ್ಜಿಯ ಅಪ್ಪುಗೆ – ಪವನ್ ಅಣ್ಣಯ್ಯ

Top