You are here
Home > ಚಿಂತನೆ > ಅಯ್ಯೋ ದೇವರೇ !!

ಅಯ್ಯೋ ದೇವರೇ !!

professional writing uhd ಆ ದೇವರಿಗಿಂತ ಈ ದೇವರು ದೊಡ್ಡವನು, ಒಳ್ಳೆಯವನು. ನಂಬುದ್ರೆ ಕೈ ಬಿಡಲ್ಲ. ಅವನ್ ಮನ್ಸ್ ಮಾಡುದ್ರೆ ಜಾಕ್ಪಾಟೆ!! “ಅಪ್ಪ ದೇವರೇ, 10% ನಿಂಗೆ ಕೊಡ್ತೀನಿ, ಕಣ್ಣ್ ಬಿಡಪ್ಪಾ, ಈ ಕೆಲ್ಸದಲ್ಲಿ ಸಕ್ಕತ್ ಕಮಾಯಿ ಮಾಡ್ಕೊಡು.” ಇದು ನಮ್ ದೇವರು, ಹೆಚ್ಚಿನ ಜನರ ದೇವರ ಜೊತೆಗಿನ ಒಡನಾಟ ಮತ್ತು ಆಚರಣೆ. ಜನರನ್ನ ದೇವ್ರು ಸೃಷ್ಠಿ ಮಾಡ್ದ ಅಂತಾರೆ; ಅವನ್ ತರಾನೆ. ಆದ್ರೆ ಜನರು ದೇವ್ರ್ಗಳನ್ನ ಅವ್ರ್ ಅವ್ರ್ ತರಾನೆ ಸೃಷ್ಠಿ ಮಾಡ್ಕೊಂಡ್ರು!! ಎಷ್ಟ್ ಜನರಿದ್ದಾರೋ ಅಷ್ಟ್ ದೇವ್ರ್ಗಳ್ ಸೃಷ್ಠಿ ಆಯ್ತು. ಮೇಲ್ ಜಾತಿ ದೇವ್ರು, ಕೆಳ್ ಜಾತಿ ದೇವ್ರು, ಒಳ್ಳೆ ದೇವ್ರು, ಕೆಟ್ಟ್ ದೇವ್ರು, ಮೃದು ದೇವ್ರು, ಕ್ರೂರ ದೇವ್ರು, ಕೊಟ್ಟರೆ-ಇಟ್ಟರೆ ಮಾತ್ರ ಸಾಂತ್ವಾನ ಗೊಳ್ಳುವ ದೇವ್ರು.. ಅಬ್ಬಬ್ಬಾ, ಅವರವರ ಭಾವಕ್ಕೆ, ಭಕುತಿಗಲ್ಲ.. ಸ್ವಾರ್ಥಕ್ಕಾ? ನಮಗೊತ್ತಿಲ್ಲಾ..

http://www.3solarbids.com/jiskha-homework-help-psychology/ jiskha homework help psychology

http://pikselartphoto.com/dissertation-abstracts-educational-management/ dissertation abstracts educational management ಮತಿಗೇಡಿ ಭಕ್ತರಿಗೆ ಗತಿಗೇಡು ದೇವ್ರೆಂಬಂತೆ, ಅವರವರ ಭಾವನೆಗೆ, ನಡವಳಿಕೆಗೆ, ಆಸಕ್ತಿಗೆ, ನಂಬಿಕೆಗೆ ತಕ್ಕಂತೆ ದೇವರುಗಳುಂಟು. ದೇವರು ಮುನಿಸಿಕೊಳ್ಳುತ್ತಾನೆ, ದ್ವೇಷ ಸಾಧಿಸುತ್ತಾನೆ, ಹಗೆ ಕಟ್ಟಿಕೊಳ್ಳುತ್ತಾನೆ, ಅಸೂಯೆ ಪಡ್ತಾನೆ.. ಆಹಾ ಮಾನವನ ಮನಸ್ಸಿನ ಪ್ರತಿರೂಪವೇ! ಅವನಂತೆ ದೇವರ ಸೃಷ್ಠಿ ಆಯಿತು. ಮಾಂಸ ತಿನ್ನುವವ, ಕೋಳಿ, ಕುರಿ ಬಲಿಕೊಡಲಾರಂಭಿಸಿದ. ಇನ್ನು ಸಸ್ಯಾಹಾರಿಗಳ ದೇವರನ್ನು ತರಕಾರಿಗೆ ಸೀಮಿತಗೊಳಿಸಲಾಯಿತು. ದೇವರ ಹೆಸರಲ್ಲಿ ಅವನೂ ತಿನ್ನಬಹುದಲ್ಲವೇ? ಅವನಿಗೂ ಪ್ರಿಯವಾದದ್ದು, ದೇವರಿಗೂ ಪ್ರಿಯವಾಗಬಾರದೆ ? ಹೋಗಲಿ ಬಿಡಿ. ಕೆಲ ದೇವರು ಕಳ್ಳು, ಸಾರಾಯಿ, ಮದ್ಯ ವ್ಯಸನಿಯೂ ಹೌದು. ಆ ಹಬ್ಬಕ್ಕೊಬ್ಬ , ಈ ತಿಥಿಗೊಬ್ಬ, ಪಕ್ಷಕ್ಕೊಬ್ಬ, ಅಮಾವಾಸ್ಯೆ-ಹುಣ್ಣಿಮೆಗೊಬ್ಬ ನೇಮಕವಾದರು. ವರ್ಣಗಳಿಂದ ಜಾತಿಸೃಷ್ಠಿ, ಜಾತಿಗೊಬ್ಬ ದೇವಸೃಷ್ಠಿ, ದೇವಗೊಬ್ಬ ಸೇವಕ, ಸೇವಕನಿಗೊಂದು ಉಪಜಾತಿ, ಅದಕ್ಕೊಂದು ಆಚರಣೆ. ಹೋಗಲಿ ಎಲ್ಲಾ ಸುಖವಾಗಿರುತ್ತಾರಾ? ಅದು ಮತ್ತೊಂದು ತರ್ಕ.

http://yellowsubmarina.com/purchase-a-dissertation-in-mla/

http://frasesdaconquistalivro.com/?p=write-college-essay ದೇವರು ಹಾಲು ಕುಡಿದದ್ದಾಯಿತು, ಈ ಕಲಿಯುಗದಲ್ಲಿ. ಅವನಿಗೆ ಹಾಲಿನ ರುಚಿ ತೋರಿಸಿದ್ದಾಯಿತು ನಮ್ಮ ಭಕ್ತರು. ಅದರಿಂದ ಹಲವರೇ ಶ್ರೀಮಂತರಾದರೂ, ಹಾಲು ಮಾತ್ರ ಮಣ್ಣಿಗೆ ಸೇರಿತು. ಮಾನವರ ದೌರ್ಬಲ್ಯವೆಲ್ಲವೂ, ದೇವನಿಗೆ ಅಂಟಿತು, ಈ ಕಲಿಯುಗದಲ್ಲಿ. ದೇವರಿಗೇನು, ಯಾರಿಗೆ ಬೇಕಾದರೂ ಹಾಲು, ನೀರು ಕುಡಿಸಿಬಿಡ್ತಾರೆ ನಮ್ ಜನ. ಇದ್ದ್ ನಂಬಿಕೆಗೆ ಮೌಢ್ಯ ಬಂದು ವಕ್ಕರಿಸಿದ್ದಾಯಿತು. ಪ್ರಶ್ನಿಸಿದರೆ ದೇವ ಸಿಟ್ಟಾಗುವನೆಂದು ಮಾನವರು ರೊಚ್ಚಿಗೆದ್ದರು. ನಿಷ್ಠುರದ ಮಾತಿಗೆ ಸಿಟ್ಟಾಗುವನೇ ದೇವರು ?

http://2kcomputer.com/?q=custom-buy-research-paper

see url ಎಷ್ಟೆಷ್ಟು ಅನ್ಯಾಯ ಅನಾಚಾರಗಳು ನಡೆಯುತ್ತಿವೆ ದೇವರ ಹೆಸರಿನಲ್ಲಿ. ಕೆಲವರಿಗೆ ಅದೇ ಆಚಾರ ವಿಚಾರ. ಆದ್ರೆ ಅದು ವಿಚಾರವಿಲ್ಲದ ಆಚಾರ. ನಮಗಿರುವ ಜಾತಿ, ಮತ, ಮದ, ಮಾತ್ಸರ್ಯ, ಎಲ್ಲವನ್ನೂ ದೇವರಿಗೆ ಅಂಟಿಸಿದವರು ನಾವು. ದೇವರಿಂದ ಸೃಷ್ಠಿಯಾದ ಮಾನವನೇ ಅವನ ಶತ್ರು. ಭಕ್ತಿಯ ಬಿಟ್ಟು ಎಲ್ಲೋ ಸಾಗಿರುವೆವು. ಹಣ, ಆಢಂಬರವೇ ಭಕ್ತಿಯಾಗಿರುವ ಕಾಲದಲ್ಲಿ, ನೈಜ ಭಕ್ತಿಯ ವಿಚಾರವೇ ಮೈಲಿಗೆ. ಅನಾಚಾರ. ದೇವನೊಬ್ಬ ನಾಮ ಹಲವು, ಯಾವಾಗ? ಆಚರಣೆಯಲ್ಲಲ್ಲ, ಉಪದೇಶದಲ್ಲಿ ಮಾತ್ರ. ಉಪದೇಶ ಮುಗಿದ ಬಳಿಕ ಚಂದ ಮೈತೊಳೆದು, ಮಡಿಯಲ್ಲಿ ಮಲಿನ ಮನಸ್ಸಿನಿಂದ, ತಮ್ಮ ತಮ್ಮ ದೌರ್ಬಲ್ಯಗಳಿಂದ ಸೃಷ್ಠಿಯಾಗಿರುವ ದೇವರಿಗೆ ತಪ್ಪು ಕಾಣಿಕೆ ಇಡುವ, ತಮ್ಮ ದೌರ್ಬಲ್ಯಗಳಂತೆ ಸಿಟ್ಟು ಬಂದಿರಬಹುದೆನಿಸಿ, ಉದ್ದುದ್ದ ಅಡ್ಡ ಬೀಳುವ, ನಾವೇ ನಿಜ ಭಕ್ತರೇನೋ?

Top