You are here
Home > ಪುಟ ೨ > ಅವಳು ಬಯಸಲಿಲ್ಲ-ಅವನು ಸಿಗಲಿಲ್ಲ – ಕಲ್ಪನಾಲೋಕ

ಅವಳು ಬಯಸಲಿಲ್ಲ-ಅವನು ಸಿಗಲಿಲ್ಲ – ಕಲ್ಪನಾಲೋಕ

ಅಗ್ನಿಯಿಂದ ನಾ ಬಂದೆನಂತೆ, ಮಹಾಪತಿವ್ರತೆಯಲ್ಲೊಬ್ಬಳಂತೆ |

go to site ಬಾಲ್ಯ ಕಂಡಿಲ್ಲ, ಪ್ರೇಮ ಅನುಭವಿಸಲಿಲ್ಲ, ಮಾತೃ ವಾತ್ಸಲ್ಯ ನಾ ನೀಡಲಾಗಲಿಲ್ಲ |

http://www.aftlv.com/writing-a-dissertation-in-2-days/ ಅರಗಿನರಮನೆ ಇಂದ ಬಂದ ಅವರನ್ನು ವರಿಸಿದೆ,

follow link ಮಹಾ ಅರಮನೆಗೆ ಒಡತಿಯಾದೆ |

ನಾಶಕ್ಕೆ ನಾಂದಿಯಾದೆನೆಂದು ನಿಂದಿಸಲ್ಪಟ್ಟೆ||

source site  

ಬಯಸಿದ ಗುಣಗಳು ಅವನಲ್ಲಿದ್ದರು ನಾ ಅವನ ಬಯಸಲಿಲ್ಲ|

ವೀರನೆಂದು ಅರಿತಿದ್ದರು, ನಾ ನೋಡ ಬಯಸಲಿಲ್ಲ |

ತಿಳಿದೋ ತಿಳಿಯದೆಯೋ, ಮನಸಿನ ಮಾತಾ ಮೌನಕ್ಕೊಪ್ಪಿಸಿ

ಅರಿತಿದ್ದ ನಿಜವ ಜಗ ಕೇಳುವಂತೆ ಹೇಳಿದೆ  |

ಅವ ನನ್ನವನಾಗಲಿಲ್ಲ, ಬಯಸಿದ್ದಂತೂ ಸಿಗಲೇ ಇಲ್ಲ ||

 

ಸತ್ಯಕ್ಕಾಗಿ ನಾ ಹುಡುಕಿ ಹೊರಟೆ |

ಜೀವನದ ಹೆಜ್ಜೆ-ಹೆಜ್ಜೆಯಲೂ, ಸುಳ್ಳು ಹೇಳಿಕೊಳ್ಳುತ್ತಾ |

ಸತ್ಯ ತಿಳಿದಾಗ ಮೌನವಾಗಿ ಹಿಂತಿರುಗಿದೆ |

ಅದರ ಗೊಡವೆಯೇ ಬೇಡವೆಂದು ||

 

ಪಾಪಿಯೆಂದೆನಿಸಲಿಲ್ಲ ಪಾಪಗಳ ಮಾಡುವಾಗ |

ಪುಣ್ಯ ಸಂಪಾದಿಸುತ್ತಲೇ ಬದುಕಿದೆ ಬಹುಶಃ|

ಮಾಡುವುದಾದರೂ ಏನಿತ್ತು, ಈ ಜನುಮದಲಿ |

ಗತಜನ್ಮದ ಕರ್ಮಫಲ ತೀರಿಸಲು ಈ ಜನ್ಮವಿತ್ತಾಗ||

ಕಲ್ಪನಾ ಲೋಕ
writings from kalpa shree

Leave a Reply

Top