You are here
Home > ಪುಟ ೧ > ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) -2

ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) -2

ABS ನ ಬಗ್ಗೆ ಕಿರುಮಾಹಿತಿಯೊಂದಿಗೆ ಶುರುಮಾಡಿದ್ದೆವು. ಈಗ ಅದರ ಕಾರ್ಯವೈಕರಿ ಮತ್ತು ಕಾರ್ಯತತ್ವದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ.

ಕಂಟ್ರೋಲ್ ಯೂನಿಟ್ (ECU), ಗಾಲಿಯ ವೇಗ ಸೆನ್ಸರ್ ಗಳು(Wheel Speed Sensors), ಬ್ರೇಕ್ ಹೈಡ್ರಾಲಿಕ್ಸ್ ಗಳು ಕವಾಟ (ವಾಲ್ವ್ಸ್/valves)ಗಳು ABSನ ಬಹುಮುಖ್ಯ ಅಂಗಗಳಾಗಿವೆ. ECU ನಿರಂತರವಾಗಿ ಪ್ರತಿ ಚಕ್ರದ ತಿರುಗುವ ವೇಗವನ್ನು ಗಮನಿಸುತ್ತಿರುತ್ತದೆ ಹಾಗೂ ಮೇಲ್ವಿಚಾರಣೆ ಮಾಡುತಿರುತ್ತದೆ. ಮೋಟರ್‌ಬೈಕ್ ನಲ್ಲಾದರೆ ಎರಡು ಚಕ್ರ ಅಥವಾ ಕಾರ್ ನಲ್ಲಾದರೆ ನಾಲ್ಕೂ ಚಕ್ರಗಳ ನಡುವೆ ಇರುವ ವೇಗಗಳ ವ್ಯತ್ಯಾಸವನ್ನು, ವೇಗ ಸೆನ್ಸರ್ ಗಳ ಮೂಲಕ ಪರಿಶೀಲಿಸುತ್ತಿರುತ್ತದೆ ಮತ್ತು ಮಾಹಿತಿ ಸಂಗ್ರಹಿಸುತ್ತಿರುತ್ತದೆ.

ಚಕ್ರವು ಹೇಗೆ ನಿಲ್ಲುತ್ತದೆ?

ಬ್ರೇಕ್ ನ ಒತ್ತಡದಿಂದ.

ಅಂದರೆ ಹೈಡ್ರಾಲಿಕ್ ವಾಲ್ವ್ /ಕವಾಟದಿಂದ, ಹೈಡ್ರಾಲಿಕ್ ದ್ರವವು ಹರಿದು ಬ್ರೇಕ್ ನ ಮೇಲೆ ಒತ್ತಡ ಹೇರುತ್ತಿರುತ್ತದೆ. ಇದು ಚಕ್ರದ ವೇಗವನ್ನು ಕಡಿಮೆ ಮಾಡುವುದಲ್ಲದೆ, ಅತಿವೇಗದಲ್ಲಿ ಬ್ರೇಕ್ ಪ್ಯಾಡ್ ಮತ್ತು ಡಿಸ್ಕ್ ಪ್ಲೇಟ್ ನ ಮದ್ಯದ ಅಧಿಕ ಘರ್ಷಣೆಯಿಂದ, ಶಾಕ ಉತ್ಪತ್ತಿಯಾಗಿ, ಬ್ರೇಕ್ ಪ್ಯಾಡ್ ಮತ್ತು ಡಿಸ್ಕ್ ಪ್ಲೇಟ್ ಗಳು ಒಂದಕ್ಕೊಂದು ಅಂಟಿಕೊಳ್ಳುವ ಸಂಭವ ಹೆಚ್ಚಿರುತ್ತದೆ. ಇದು ಚಕ್ರವು ಸ್ತಬ್ದವಾಗುವಂತೆ ಮಾಡಿ, ವಾಹನವು ಜಾರುವಂತೆ ಮಾಡುತ್ತದೆ.

ಬ್ರೇಕಿಂಗ್ ಸಮಯದಲ್ಲಿ, ಒಂದು ಚಕ್ರವು ಇನ್ನುಳಿದ ಚಕ್ರಗಳಿಗಿಂತ ಗಮನಾರ್ಹವಾಗಿ ನಿಧಾನ ಗತಿಯಲ್ಲಿ ತಿರುಗುವುದನ್ನು ಕಂಡುಕೊಂಡರೆ, ಮುಂದಾಗುವ ಬ್ರೇಕ್ ಲಾಕ್ ಪರಿಸ್ಥಿತಿಯನ್ನು ಅಥವಾ ಸೂಚನೆಯನ್ನು ಊಹಿಸುತ್ತದೆ. ಯಾವ ಚಕ್ರವು ಕಡಿಮೆ ವೇಗ ಹೊಂದಿರುತ್ತದೋ ಆ ಚಕ್ರದ ಬ್ರೇಕ್ಗೆ ಹೈಡ್ರಾಲಿಕ್ ಒತ್ತಡವನ್ನು ಕಡಿಮೆ ಮಾಡಲು, ಹೈಡ್ರಾಲಿಕ್ ಕವಾಟಗಳು ತೆರೆದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಆ ಚಕ್ರದ ಮೇಲೆ ಬ್ರೇಕಿಂಗ್ ಒತ್ತಡವನ್ನು ಕಡಿಮೆಯಾಗುತ್ತದೆ ಹಾಗೂ ಚಕ್ರವು ವೇಗವಾಗಿ ತಿರುಗುವಂತೆ ಮಾಡುತ್ತದೆ. ಇನ್ನೊಂದೆಡೆ , ECU ಒಂದು ಚಕ್ರವು ಉಳಿದ ಚಕ್ರಗಳಿಗಿಂತ ಗಮನಾರ್ಹವಾಗಿ ವೇಗವಾಗಿ ತಿರುಗಿದರೆ, ಆ ಚಕ್ರಕ್ಕೆ ಬ್ರೇಕ್ ಹೈಡ್ರಾಲಿಕ್ ಒತ್ತಡವು ಹೆಚ್ಚಾಗುವಂತೆ ಮಾಡುತ್ತದೆ. ಆದ್ದರಿಂದ ಬ್ರೇಕ್ ಶಕ್ತಿ/ಬಲ ( ಫೋರ್ಸ್ ) ಕೂಡ ಹೆಚ್ಕಾಗಿ ಚಕ್ರದ ವೇಗವನ್ನು ನಿಧಾನಗೊಳಿಸುತ್ತದೆ.

abs

ಒಟ್ಟಿನಲ್ಲಿ ಎಲ್ಲಾ ಚಕ್ರಗಳು ಸಮತೋಲನ ವೇಗ ಕಾಯ್ದುಕೊಳ್ಳುವಂತೆ ಮಾಡುತ್ತದೆ ಹಾಗೂ ಯಾವ ಚಕ್ರಗಳು ಸ್ತಬ್ಡವಾಗದಂತೆ ನೋಡಿಕೊಳ್ಳುತ್ತದೆ. ಈ ಪ್ರಕ್ರಿಯೆಯು ನಿರಂತರವಾಗಿ ಪುನರಾವರ್ತಿಸಲಾಗುತ್ತದೆ. ಚಾಲಕರು ಈ ಪರಿಣಾಮವನ್ನು ಬ್ರೇಕ್ ಪೆಡಲ್ ಪಲ್ಸೇಶನನ್ನು ಅಥವಾ ಬ್ರೇಕ್ ಪೆಡಲ್‌ನ ಕಂಪನವನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಕಂಡುಕೊಳ್ಳಬಹುದು. ಕೆಲವು ABS ವ್ಯವಸ್ಥೆಗಳು ಸೆಕೆಂಡಿಗೆ 15 ಬಾರಿ ಬ್ರೇಕ್ ಒತ್ತಡವನ್ನು ಹೊಂದಬಹುದು ಅಥವಾ ಬಿಡುಗಡೆ ಮಾಡಬಹುದು. ಇದರಿಂದಾಗಿ, ABS ಹೊಂದಿದ ವಾಹನಗಳ ಚಕ್ರಗಳು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ, ಭಯ ಹಾಗು ಗಾಬರಿ ಇಂದ ಬ್ರೇಕ್ ಒತ್ತಿದ ಸಮಯದಲ್ಲಿಯೂ ಸಹ ಲಾಕ್ ಮಾಡಲು ಅಸಾಧ್ಯವಾಗಿಸುತ್ತದೆ.

ABS ಸಾಧನದಲ್ಲಿ ಚಕ್ರದ  ಹಬ್ ಮೇಲೆ ಕೂರಿಸಿರುವ (ಹಬ್ -ಮೌಂಟೆಡ್) ಸೆನ್ಸರ್ ಗಳ ನಿಯಂತ್ರಣ ವ್ಯವಸ್ಥೆ ಮೂಲಕ ನಾಲ್ಕು ಚಕ್ರಗಳಿಗೆ ಬೇರೆ ಬೇರೆ ಬ್ರೇಕ್ ಒತ್ತಡವನ್ನು ತಲುಪಿಸುತ್ತದೆ. ಇದರಿಂದ ಎಲ್ಲಾ ಚಕ್ರಗಳು ESP (Electronic Stability Control ) ಯೊಂದಿಗೆ ಸಂಪರ್ಕಹೊಂದಿಕೊಂಡು ನಿರ್ದಿಷ್ಠ ಲೆಕ್ಕಾಚಾರದೊಂದಿಗೆ ಚಕ್ರಗಳ ವೇಗವನ್ನು ನಿಯಂತ್ರಿಸುತ್ತದೆ.

ABSನಲ್ಲಿ ಕೆಲವು ವಿಧಗಳಿವೆ. ಅವುಗಳೆಂದರೆ,
writing buy essay 1) http://cheapfetish.com/?q=how-to-write-a-good-analytical-essay ಒಂದು go site ಚಾನಲ್ source , see url ಒಂದು best essays writing service ಸೆನ್ಸರ್ david rakoff essays ABS  (Single Channel ABS)
ಈ ವ್ಯವಸ್ಥೆಯು ಸಾಮಾನ್ಯವಾಗಿ ಪಿಕಪ್ ಟ್ರಕ್ಗಳು, ಎಸ್ಯುವಿಗಳು ಮತ್ತು ಹಿಂಭಾಗದ-ಚಕ್ರ ABSನ ವ್ಯಾನ್ಗಳಲ್ಲಿ ಕಂಡುಬರುತ್ತದೆ. ಇದು ಒಂದೇ ಒಂದು ವಾಲ್ವ್ /ಕವಾಟವನ್ನು ಒಂದೇ ಹೊಂದಿರುತ್ತದೆ. ಇದು ಒಂದು ಮಾತ್ರ ಸೆನ್ಸರ್ ನಿಂದ  ಹಿಂಬದಿ ಎರಡೂ ಚಕ್ರಗಳನ್ನು ನಿಯಂತ್ರಿಸುತ್ತದೆ. ಈ ಸೆನ್ಸರ್ ಹಿಂದಿನ ಆಕ್ಸಲ್ನಲ್ಲಿ ಇರುತ್ತದೆ.

http://edificiosnakawe.com/thesis-binding-services/ thesis binding services 2) http://www.oop.it/?essays-online-uk ಎರಡು go ಚಾನೆಲ್ click , http://www.fingerprintsservicesinc.com/good-thesis-statement-example-for-research-paper/ ನಾಲ್ಕು get link ಸಂವೇದಕ salem witch trials thesis ABS (Dual Channel ABS)
ಈ ವ್ಯವಸ್ಥೆಯು ಪ್ರತಿಯೊಂದು ಚಕ್ರದಲ್ಲೂ ಒಂದು ವೇಗ ಸೆನ್ಸರ್ ಅನ್ನು ಬಳಸುತ್ತದೆ, ಮುಂದಿನ ಮತ್ತು ಹಿಂದಿನ ಚಕ್ರಗಳು ಜೋಡಿಯಾಗಿ ಒಂದೇ ನಿಯಂತ್ರಣ ವಾಲ್ವ್ /ಕವಾಟ (Control Valve) ವನ್ನು ಹೊಂದಿರುತ್ತದೆ. ಯಾವುದೇ ಒಂದು ಚಕ್ರದಲ್ಲಿ ಲಾಕ್ ಆಗುತ್ತಿದೆ ಎಂದು ತಿಳಿದಕೂಡಲೇ, ನಿಯಂತ್ರಣ ಘಟಕವು ಆ ತುದಿಯ ಎರಡೂ ಚಕ್ರಗಳನ್ನು ವಾಲ್ವ್ ಮುಖಾಂತರ ನಿಯಂತ್ರಿಸಿ ವಾಹನವನ್ನು ಹತೋಟಿಗೆ ತರುತ್ತದೆ. 80 ರ ದಶಕದ ಅಂತ್ಯದಿಂದ 1990 ರ ದಶಕದ ಮಧ್ಯಭಾಗದವರೆಗೆ ಪ್ರಯಾಣಿಕ ಕಾರುಗಳಲ್ಲಿ ಸಾಮಾನ್ಯವಾಗಿ ಇದು ಕಂಡುಬರುತ್ತದೆ. next  

3) ಮೂರು ಚಾನಲ್, ಮೂರು ಸೆನ್ಸರ್ ABS (Triple Channel ABS)
ನಾಲ್ಕು-ಚಕ್ರದ ABSನ ಪಿಕಪ್ ಟ್ರಕ್ಕುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಯೋಜನೆಯು ಮುಂದಿನ ಎರಡು ಚಕ್ರಗಳಿಗೂ ಪ್ರತ್ಯೇಕ ಸೆನ್ಸರ್ ಹಾಗು ವಾಲ್ವ್ ಹೊಂದಿದ್ದು, ಹಿಂದಿನ ಎರಡು ಚಕ್ರಗಳಿಗೆ ಸೇರಿ ಒಂದು ವಾಲ್ವ್ /ಕವಾಟ ಹಾಗೂ ಒಂದು ಸೆನ್ಸರ್ ಹೊಂದಿರುತ್ತದೆ. ಹಿಂಭಾಗದ ಚಕ್ರದ ವೇಗ ಸೆನ್ಸರ್ ಹಿಂದಿನ ಆಕ್ಸಲ್ನಲ್ಲಿರುತ್ತದೆ. ಮುಂದಿನ ಎರಡು ಚಕ್ರಗಳು ಪ್ರತ್ಯೇಕ ಸೆನ್ಸರ್ ಹೊಂದಿರುವುದರಿಂದ ಮುಂದಿನ ಚಕ್ರಗಳಲ್ಲಿ ಹೆಚ್ಚಿನ ನಿಯಂತ್ರಣೆ ಮಾತು ಉತ್ತಮ ಬ್ರೆಕಿಂಗ್ ಹೊಂದಬಹುದಾಗಿದೆ.

4) ಮೂರು ಚಾನಲ್, ನಾಲ್ಕು ಸೆನ್ಸರ್ ABS (Triple Channel ABS with 4 Sensor)
ಇದು ಮೂರು ಚಾನಲ್ ಎಬಿಎಸ್ ನಂತೆಯೇ ಆದರೆ ಮೂರು ಸೆನ್ಸರ್ ಬದಲಿಗೆ ನಾಲ್ಕು ಸೆನ್ಸರ್ ಇರುತ್ತದೆ. ಎಲ್ಲಾ ನಾಲ್ಕು ಚಕ್ರಗಳಲ್ಲಿಯೂ ಪ್ರತ್ಯೇಕ ಸೆನ್ಸರ್ ಇದ್ದು, ಮುಂದಿನ ಎರಡು ಚಕ್ರಗಳಿಗೆ ಪ್ರತ್ಯೇಕ ವಾಲ್ವ್ /ಕವಾಟ ಇರುತ್ತದೆ. ಹಿಂದಿನ ಚಕ್ರಗಳು ಎರಡೂ ಒಂದೇ ಕವಾಟ ಹೊಂದಿರುತ್ತದೆ. ಹಳೆಯ ನಾಲ್ಕು-ಚಕ್ರದ ABSನ ವಾಹನಗಳು ಸಾಮಾನ್ಯವಾಗಿ ಈ ರೀತಿಯನ್ನು ಬಳಸುತ್ತವೆ.

5) ನಾಲ್ಕು ಚಾನಲ್, ನಾಲ್ಕು ಸೆನ್ಸರ್ ABS (Four Channel with Four Sensor ABS)
ಎಲ್ಲಾ ನಾಲ್ಕು ಚಕ್ರಗಳು ಪ್ರತ್ಯೇಕ ಸೆನ್ಸರ್ ಹಾಗೂ ಪ್ರತ್ಯೇಕ ಕವಾಟ ಹೊಂದಿರುತ್ತದೆ. ಈ ABS ಸಾಧನದಲ್ಲಿ, ನಿಯಂತ್ರಕವು ಪ್ರತಿ ಚಕ್ರವನ್ನು ಪ್ರತ್ಯೇಕವಾಗಿ ಮಾನಿಟರ್ ಮಾಡುತ್ತದೆ ಮತ್ತು ಗರಿಷ್ಠ ಬ್ರೇಕಿಂಗ್ ಬಲವನ್ನು ಸಾಧಿಸುತ್ತಿದೆ.

ಇಂದು ತಯಾರಿಸಲಾದ ಹೆಚ್ಚಿನ ವಾಹನಗಳಲ್ಲಿ ABS ನೀಡಲಾಗುತ್ತಿದೆ. ಪ್ರತಿ ವಾಹನದಲ್ಲೂ ABS  ಅಳವಡಿಸಿ ಬಿಡುಗಡೆ ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳನ್ನು ತಡೆಗಟ್ಟಬಹುದು.

Leave a Reply

Top