You are here
Home > ಪುಟ ೪ > ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS)

ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS)

click here aruna_yantra

http://www.bechburgmusikanten.ch/?medicine-admission-essay ಆಂಟಿ-ಲಾಕ್ ಬ್ರೇಕಿಂಗ್ ವಾಹನಗಳಲ್ಲಿರುವ ಹಾಗೂ ಇರಲೇಬೇಕಾದ ಒಂದು ಸುರಕ್ಷತಾ ವ್ಯವಸ್ಥೆ. ಜನರು ಸಾಮಾನ್ಯವಾಗಿ ಇದರ ಬಗ್ಗೆ ಅಷ್ಟೇನು ತಿಳಿದುಕೊಂಡಿಲ್ಲ ಹಾಗೂ ಹೆಚ್ಚಾಗಿ ತಪ್ಪು ತಿಳುವಳಿಕೆಯೇ ಕಂಡುಬರುತ್ತದೆ. ಎಷ್ಟೋ ಜನ ABS ಅನ್ನು ಆಂಟಿ ಬ್ರೇಕಿಂಗ್ ಸಿಸ್ಟಮ್ ಎಂದು ಕರೆಯುವುದನ್ನು ಕಂಡಿದ್ದೇನೆ. ಇದು ತಪ್ಪು. ABS ಇರುವುದು ವಾಹನ ನಿಲ್ಲಿಸಬೇಕಾದಾಗ, ಬ್ರೇಕ್ ಅನ್ನು ಒತ್ತಿದಾಗ ಚಕ್ರವು ತಡೆನಿಲ್ಲದಂತೆ ಅಂದರೆ ಲಾಕ್ ಆಗದಂತೆ ನೋಡಿಕೊಳ್ಳುವುದಕ್ಕೆ. ಆದರೆ ಬಹಳ ಜನ ABS ನಿಂದ ಒಮ್ಮಲೇ ವಾಹನವು ನಿಂತು ಬಿಡುತ್ತದೆ, ಇದರಿಂದ ತುಂಬಾ ಅಪಾಯ, ಹಿಂದಿನಿಂದ ಬರುವ ವಾಹನಗಳಿಂದ ತೊಂದರೆ ಆಗುತ್ತದೆ, ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನದ ಬಗ್ಗೆ ಹೇಳುವುದನ್ನ ಕೇಳಿರುತ್ತೇನೆ. ಇಂತಹ ಎಲ್ಲಾ ತಪ್ಪು ಅಭಿಪ್ರಾಯ ಕಲ್ಪನೆಗಳಿಂದ ದೂರ ಸರಿದು ಇದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ.

go ABS ಒಂದು ಆಟೋಮೊಬೈಲ್ ಸುರಕ್ಷತಾ ವ್ಯವಸ್ಥೆಯಾಗಿದ್ದು, ಇದು ವಾಹನಗಳ ಚಕ್ರಗಳು ರಸ್ತೆಯ ಮೇಲ್ಮೈಯೊಂದಿಗೆ ಸಕ್ರಿಯ ಸಂಪರ್ಕವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಸದಾ ವಾಹನಗಳ ಚಕ್ರಗಳು ರಸ್ತೆಯ ಸಂಪರ್ಕ ಹೊಂದಿದ್ದು, ಸದಾ ತಿರುಗುವ ಪ್ರಕ್ರಿಯೆ ಕೂಡ ಹೊಂದಿರುತ್ತದೆ.
ಚಕ್ರಗಳನ್ನು ಲಾಕ್ ಮಾಡುವುದನ್ನು ತಡೆಗಟ್ಟುತ್ತದೆ (ತಿರುಗುವಿಕೆಯಿಂದಾಗಿ) ಮತ್ತು ಅನಿಯಂತ್ರಿತ ಸ್ಕ್ಡಿಡಿಂಗ್ ಅನ್ನು ತಪ್ಪಿಸುತ್ತದೆ. ಇದು ಸರಿಯಾಗಿ ಅರ್ಥವಾಗಬೇಕೆಂದರೆ ABS ರಹಿತ ವಾಹನಗಳು ಬ್ರೇಕ್ ಒತ್ತಿದಾಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ.

http://chemicalpharmaconsociation.com/?q=plants-homework-help ವಾಹನಗಳಲ್ಲಿ ಬ್ರೇಕ್ ಒತ್ತಿದಾಗ ಒಮ್ಮೆಲೆ ವಾಹನಗಳ ಚಕ್ರಗಳು ನಿಲ್ಲುವಂತೆ ಬ್ರೇಕ್ ಪ್ಯಾಡ್ ಗಳನ್ನು ಅಥವಾ ಡಿಸ್ಕ್ ಬ್ರೇಕ್ ಅನ್ನು ವಿನ್ಯಾಸಗಳಿಸಲಾಗಿರುತ್ತದೆ. ವಾಹನವು ಕಡಿಮೆ ವೇಗದಲ್ಲಿದ್ದಾಗ ಎರಡು ಚಕ್ರಗಳು ನಿಂತು ವಾಹನವು ನಿಲ್ಲುವಂತಾಗುತ್ತದೆ. ಒಂದು ವೇಳೆ ವಾಹನವು ಅತಿ ವೇಗದಲ್ಲಿದ್ದಾಗ ಬ್ರೇಕ್ ಒತ್ತಿದಾಗ ಬ್ರೇಕ್ ಪ್ಯಾಡ್ ಅಥವಾ ಡಿಸ್ಕ್ ಬ್ರೇಕ್ ಗಳು ಚಕ್ರವನ್ನು ಒಮ್ಮೆಲೆ ನಿಲ್ಲಿಸಿಬಿಡುತ್ತದೆ ಹಾಗೂ ಚಕ್ರವು ಹತೋಟಿ ತಪ್ಪಿ ಜಾರುವ ಸಂದರ್ಭ ಸರ್ವೇ ಸಾಮಾನ್ಯ. ವೇಗದಲ್ಲಿರುವ ವಾಹನವು ಸ್ವಲ್ಪ ತಿರುವಿನಲ್ಲಿ ಬ್ರೇಕ್ ಒತ್ತಿದಾಗ ಸಹಾ ಅವಗಡ ಸಂಭವಿಸುವ ಸಾದ್ಯತೆ ಹೆಚ್ಚು. ಇದರಿಂದ ವಾಹನ ಸವಾರರು ನೆಲಕ್ಕೆ ಬೀಳುವುದು ಖಂಡಿತ.

follow ಇದಕ್ಕೆ ಮುಖ್ಯವಾದ ಕಾರಣ, ಅತಿ ವೇಗವಿರುವಾಗ ಬ್ರೇಕ್ ಒತ್ತಿದ ಪರಿಣಾಮವಾಗಿ ಶಾಖ ಉತ್ಪತ್ತಿ ಆಗುತ್ತದೆ, ಅದರಿಂದ ಬೇಕ್ ಪ್ಯಾಡ್ ಅಥವಾ ಡಿಸ್ಕ್ ಗಳು ಚಕ್ರಕ್ಕೆ ಅಂಟಿಕೊಳ್ಳುತ್ತದೆ. ಇದನ್ನೇ ಲಾಕ್ ಅನ್ನುವುದು. ವಾಹನವು ಬೇಕಾದ ಹಾಗೆ ತಿರುವು ತೆಗೆದುಕೊಳ್ಳುವುದಿಲ್ಲ. ಜಾರುವಂತಾಗುತ್ತದೆ.

http://yovanathemindcoach.com/?p=attention-getter-for-essay ABS ನಲ್ಲಿ ಈ ಲಾಕಿಂಗ್ ಅಥವಾ ಚಕ್ರ ಮತ್ತು ಬ್ರೇಕ್ ಗಳು ಅಂಟಿಕೊಳ್ಳುವ ಸಮಸ್ಯೆಯನ್ನು ನಿಭಾಯಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಯಾವುದೇ ವೇಗದಲ್ಲಿ ವಾಹನದ ಬ್ರೇಕ್ ಹಿಡಿದಾಗ ಚಕ್ರವು ಜಾಮ್ ಆಗದಂತೆ, ಸಣ್ಣ ಪ್ರಮಾಣದ ಚಾಲನೆಯಲ್ಲಿರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಇದರಿಂದ ವಾಹನದ ನಿಯಂತ್ರಣವನ್ನು ಉತ್ತಮವಾಗಿ ಸುಧಾರಿಸುತ್ತದೆ ಮತ್ತು ಶುಷ್ಕ / ಜಾರು ಮೇಲ್ಮೈಗಳಲ್ಲಿ ಕಡಿಮೆ ಅಂತರದಲ್ಲೇ ವಾಹನವನ್ನು ನಿಲ್ಲಿಸುತ್ತದೆ. ಹಾಗೂ, ಸಡಿಲ ಜಲ್ಲಿ ಅಥವಾ ಹಿಮದಿಂದ ಆವೃತವಾದ ಮೇಲ್ಮೈಗಳಲ್ಲಿ ABS ಗಮನಾರ್ಹವಾಗಿ ಬ್ರೇಕ್ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ, ವಾಹನ ಚಾಲನೆ ನಿಯಂತ್ರಣವನ್ನು ಕೂಡ ಹೆಚ್ಚಿಸುತ್ತದೆ.

http://carstoppervn.com/?q=how-to-write-a-good-application-essay-report ಲಗತ್ತಿಸಿರುವ YouTube ವೀಡಿಯೋ ತುಣುಕು ABS ಸಹಿತ ಮತ್ತು ABS ರಹಿತ ವಾಹನದ ಬ್ರೇಕಿಂಗ್ ಅನ್ನು ವಿವರಿಸುತ್ತದೆ.

write essay service

Top