You are here
Home > ಮಮಕಾರ > ಇಲ್ಲಿಯೂ, ಅಲ್ಲಿಯೂ ಸಲ್ಲುವರಯ್ಯ – (ಕಲ್ಪ ಶ್ರೀ )

ಇಲ್ಲಿಯೂ, ಅಲ್ಲಿಯೂ ಸಲ್ಲುವರಯ್ಯ – (ಕಲ್ಪ ಶ್ರೀ )

http://www.english.iibit.edu.au/?how-to-write-a-custom-tag-library how to write a custom tag library ಇಲ್ಲಿ ಯಾವುದೊ ವಚನ ಸಾಹಿತ್ಯ ವಿಮರ್ಶೆ ಮಾಡುತ್ತಿಲ್ಲ; ಸಲ್ಲುವ, ಸಲ್ಲದಿರುವ ಬಗ್ಗೆ ಒಂದು ಸ್ವಗತವಷ್ಟೇ..!

blank ಧರಣಿ, ಧರಿತ್ರಿ, ವಸುಂಧರೆ, ಇಳೆ ಎಂಬಿತ್ಯಾದಿ ಸಮಾನಾರ್ಥಕ ಪದಗಳಿಂದ ಕರೆಯಲ್ಪಡುವ ಭೂಮಿ ತಾಯಿ, ಹೆಣ್ಣಾಗಿ ಬಿಂಬಿತಳಾಗಿದ್ದಾಳೆ. ಎಲ್ಲರಿಗು ಸಲ್ಲುವ, ಎಲ್ಲರನ್ನು ಯಾವುದೇ ಬೇಧ-ಭಾವ ಮಾಡದೆ ತನ್ನೊಡಲಲ್ಲಿಟ್ಟುಕೊಂಡಿರುವ ಸ್ತ್ರೀ-ಸ್ವರೂಪಿಣಿ. ಇಂತಹ ಈ ವಿಶಾಲ ಒಡಲೊಳಗೆ ಹೆಣ್ಣು ಜನಿಸಿದಾಗ, ಆಕೆ ಸಲ್ಲುವುದಾದರೂ ಎಲ್ಲಿಗೆ..?

see ಬಾಲ್ಯ ಸವಿದು, ಪ್ರೌಢಾವಸ್ಥೆ ತಲುಪಿ, ಯೌವನ ಕಳೆಯುವುದರೊಳಗೆ ‘ಕಲ್ಯಾಣಮಸ್ತು’ ಎಂದು ಹರಸಿ ಗೃಹಸ್ಥಾಶ್ರಮ ವಾಸಕ್ಕೆ ಅಡಿಯಿಡಿಸುತ್ತಾರೆ; ಹೆತ್ತು-ಸಾಕಿ-ಸಲಹಿ-ಬೆಳೆಸಿದ ಮಗಳು ಇನ್ನು, ‘ಕೊಟ್ಟ ಹೆಣ್ಣು, ಕುಲಕ್ಕೆ ಹೊರಗು’ ಆಗುತ್ತಾಳೆ. ಇನ್ನು ಹೊಸಿಲು ದಾಟಿ ಬಂದ ಮನೆ ತವರು ಮನೆಯಾದರೆ, ಹೊಸಿಲು ತುಳಿದು ಅಡಿಯಿಟ್ಟ ಮನೆ ಗಂಡನ ಮನೆಯಾಗುತ್ತದೆ. ನನ್ನದೆಂದು ಹೇಳಲು ಹೆಣ್ಣಿಗೆ ಸಿಕ್ಕಿದಾದರೂ ಏನು..?

ಎರಡೂ ನನ್ನದೆಂದು ತಿಳಿದು, ಸಾಮರಸ್ಯದ ಸಹಬಾಳ್ವೆ ನಡೆಸುವಲ್ಲಿ, ತನ್ನತನಕ್ಕೆ ನೂರೆಂಟು ಪರೀಕ್ಷೆಗಳು. ಪ್ರತಿಯೊಂದು ಪರೀಕ್ಷೆಯ ಫಲಿತಾಂಶ ಲೆಕ್ಕಿಸದೆ, ಮುಂದಿನ ಪರೀಕ್ಷೆ ಎದುರುಗೊಳ್ಳುವದರಲ್ಲೇ, ತನಗಾಗಿ ತೆಗೆದಿಟ್ಟ ಸಮಯ ಕಳೆದು ಹೋಗಿರುತ್ತದೆ. ತನಗೂ ಮಕ್ಕಳಾದ ಮೇಲೆ ಅವರ ಜೊತೆಗಿನ ಒಡನಾಟದಲ್ಲಿ ಲವಲವಿಕೆ ಮರುಕಳಿಸಿ, ಮತ್ತೆ ಹೆಣ್ಣು ಮಗಳನ್ನು ಅವಳ ಗಂಡನ ಮನೆಗೆ ಕಳುಹಿಸಿಯೋ, ಗಂಡು ಮಗನಿಗಾಗಿ ಮನೆಗೆ ಸೊಸೆಯನ್ನು ಬರಮಾಡಿಕೊಳ್ಳುವುದರಲ್ಲಿಯೋ, ತನ್ನದೆಂಬ ಅಸ್ಥಿತ್ವಕ್ಕೆ ಒಂದರ್ಥ ಬಂದಿರುತ್ತದೆ; ಆದರೂ ತನ್ನ ಅಸ್ಥಿತ್ವ ಕೇವಲ ಇರುವಿಕೆಯಾಗಿತ್ತೋ ಅಥವಾ ಮನಸಾರೆ ಜೀವನದ ಎಲ್ಲ ಕ್ಷಣಗಳನ್ನು ಜೀವಿಸಿದ್ದೇನೋ ಎಂಬುದು ಯಕ್ಷ ಪ್ರಶ್ನೆ.

ನನಗಾಗಿ ನಾ ಜೀವಿಸಿದ್ದಾದರೂ ಎಲ್ಲಿ, ಈ ದಾರಿಯಲ್ಲಿ ಎಂಬ ಗೊಂದಲ. ವಿದ್ಯಾಭ್ಯಾಸದ ನಡುವೆ, ಕಳೆದುಕೊಂಡ ನನ್ನ ಸಂಗೀತ-ನೃತ್ಯಾಭ್ಯಾಸದ ನೆನಪು; ಸಂಬಂಧಿಕರ ಕಾರ್ಯಕ್ರಮಕ್ಕಾಗಿ, ನಾ ಹೋಗದ ಸ್ನೇಹಿತರ ಜೊತೆಗಿನ ಪ್ರವಾಸದ ನೆನಪು; ವರಾನ್ವೇಷಣೆಯ ಭರದಲ್ಲಿ ನಾ ಮರೆತು ಹೋದ ನನ್ನ ಕಸೂತಿಯ ನೆನಪು; ಸ್ನೇಹಿತರ ಜೊತೆಯ ವಿಹಾರದ ಸಲುವಾಗಿ, ಮಗಳಾಗಿ ನನ್ನ ಕರ್ತವ್ಯ ಮರೆತ ನೆನಪು; ಸೋದರಿಗೆ ಸ್ನೇಹಿತೆಯಾಗದ ನೆನಪು, ಸೋದರನಿಗೆ ಬಲವಾಗದ ನೆನಪು; ಹೀಗೆ ಎಲ್ಲ ನೆನಪುಗಳಲ್ಲೂ ನಾನಿರುವೆ, ನಾನಿರಬೇಕಿತ್ತು ಹಾಗೂ ನಾನು ಇರಲಾಗಲಿಲ್ಲ.

get ಹುಟ್ಟಿ-ಬೆಳೆದ ತವರು ಮನೆಯ ನೆನಪು ಒಮ್ಮೆಗೆ ಧಾವಿಸುತ್ತದೆ. ಒಮ್ಮೆಯೂ ಕೈಯಡುಗೆ ಮಾಡಿ ನಾ ತಿನ್ನಿಸದೆ ಇರುವ ಅಮ್ಮ, ಒಮ್ಮೆಯೂ ನಾ ಇಸ್ತ್ರಿ ಮಾಡದೆ ಇರುವ ಅಪ್ಪನ ಅಂಗಿ, ‘ನಿನ್ನಿಷ್ಟ ಏನಪ್ಪಾ’, ‘ನಿನ್ನ ಕಷ್ಟ ಏನಮ್ಮ’ ಎಂದು ಕೇಳದ ಮಾತುಗಳು ನೆನೆಯುತ್ತ, ಅಂತಹ ಹಾದಿಯಲ್ಲೇ ನಾ ನಡೆಯುವ ಹೊತ್ತಿಗೆ, ಎಷ್ಟೋ ಹಿಂದೆ ಮಾಡಬೇಕಾಗಿದ್ದ ಕೆಲಸದ ಪಟ್ಟಿ ಸಿಗುತ್ತದೆ, ಆದರೆ ಚೈತನ್ಯ ಕಡಿಮೆಯಾಗಿರುತ್ತದೆ. ಮತ್ತದೇ ಪರಕೀಯ ಭಾವ. ನಾ ಎಲ್ಲಿಗೆ ಸಲ್ಲುವವಳು ಎಂಬ ಉತ್ತರ ಸಿಗದ ಪ್ರಶ್ನೆ.

ಸದಾ ಜೊತೆಗಿರುವ ಜೊತೆಗಾರನ ಸಾಂಗತ್ಯದ ಹೊರತಾಗಿಯೂ, ತನ್ನತನವನ್ನು ಬಯಸುವ ಮನಸ್ಸು. ಹುಡುಕ ಹೊರಟರೆ ಸಿಗದ ದಾರಿ. ಮಾರ್ಗಸೂಚಿಗಾಗಿ ಹಿಂತಿರುಗಿದರೆ ಕಾಣಿಸುವುದು, ತನ್ನ ಇಷ್ಟೂ ವಸಂತಗಳ ಜೀವನ ಪಯಣದಲ್ಲಿ ಮಾರ್ಗದರ್ಶಕರಾಗಿದ್ದ ಅಪ್ಪ-ಅಮ್ಮ-ಅಕ್ಕ-ತಂಗಿ-ಅಣ್ಣ-ತಮ್ಮ-ಸಂಬಂಧಿಕರು-ಶಿಕ್ಷಕರು-ಅಧ್ಯಾಪಕರು-ಸ್ನೇಹಿತರು-ಮಕ್ಕಳು-ಮೊಮ್ಮಕಳು ಕಾಣಿಸುತ್ತಾರೆ. ಅಲ್ಲೆಲ್ಲ ನನ್ನ ಇರುವಿಕೆ ಕಾಣಿಸುತ್ತದೆ. ಇದುವರೆಗೆ ಎಲ್ಲಿಯೂ ಸಲ್ಲದ ನಾನು, ಒಮ್ಮೆಗೆ ಎಲ್ಲೆಲ್ಲೂ ಸಲ್ಲುವವಳಾಗುತ್ತೇನೆ.

ಭೂತಾಯಿ ತನ್ನೊಡಲ ತುಂಬಿಕೊಂಡಂತೆ, ಎಲ್ಲೆಲ್ಲೂ ನನ್ನ ಇರುವಿಕೆ ತುಂಬಿ, ನನ್ನ ಕೃತಾರ್ಥತೆಯು ತುಂಬಿ ಬರುತ್ತದೆ. ಹೀಗೆಯೇ ಒಂದು ಕಾಲಘಟ್ಟದಲ್ಲಿ ನಿಂತಾಗ ‘ಇಲ್ಲಿಯೂ ಅಲ್ಲಿಯೂ ಸಲ್ಲುವ’ ಪರಿಪೂರ್ಣ ಹೆಣ್ಣು-ಮಹಿಳೆ-ಸ್ತ್ರಿ ಆಗಿ, ಹೆಮ್ಮೆಯ ಮಂದಹಾಸ ಬೀರುತ್ತಾ ನನ್ನಲ್ಲೇ ನಾನು ಕಳೆದು ಹೋಗುತ್ತೇನೆ.

12 thoughts on “ಇಲ್ಲಿಯೂ, ಅಲ್ಲಿಯೂ ಸಲ್ಲುವರಯ್ಯ – (ಕಲ್ಪ ಶ್ರೀ )

  1. ಹೆಣ್ಣಿನ ಒಡಲೊಳಗಿನ ಬೇಗುದಿಯನ್ನು ನಮ್ಮ ಮುಂದೆ ಬಿಚ್ಚಿಟ್ಟ ನೀವು ಅಲ್ಲಿಯೂ ಸಲ್ಲುವಿರಯ್ಯ!!😊

Leave a Reply

Top