You are here
Home > (ಚದು) ರಂಗ > ಕಟ್ಟುವೆವೋ ನಾವು?

ಕಟ್ಟುವೆವೋ ನಾವು?

online professional resume writing services frederick md “ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ, ಕಟ್ಟುವೆವು ನಾವು ಹೊಸ ನಾಡೊಂದನು” ಇಡೀ ರಂಗಸ್ಥಳ ನಮ್ಮನ್ನು ಕೆಕ್ಕರಿಸಿ ನೋಡುತ್ತಿದೆ. ರಂಗದ ಮೇಲಿನ ಬೆಳಕು ನನ್ನ ಮುಖ ಹಾಗೂ ಇನ್ನೊಂದು ತುದಿಗಿರುವ ನನ್ನ ಪತಿಯ ಮುಖವನ್ನು ಮಾತ್ರ ತೋರಿಸುತ್ತಿದೆ. ದೇಶಕ್ಕೆಸ್ವಾತಂತ್ರ್ಯ ದೊರೆತು ವರ್ಷಗಳೇ ಸಂದರೂ, ಬೌದ್ಧಿಕ , ಮಾನಸಿಕ ಹಾಗೂ ನೈತಿಕ ಕುಸಿತದಿಂದ ಮನುಷ್ಯ ಸಂಬಂಧಗಳು ಶಿಥಿಲವಾಗಿವೆ. ಯುವಜನತೆಯ ಸಂಘಟನೆಯಿಂದ ಮಾತ್ರ ಈ ಕೊಂಡಿಗಳು ಗಟ್ಟಿಗೊಳಿಸುವುದು ಸಾಧ್ಯ ಎಂಬ ತತ್ವವಿರುವ ನಾಟಕ `ಕಟ್ಟುವೆವು ನಾವು’. ಇದರ ಮುಖ್ಯ ಪಾತ್ರ ವಹಿಸಿದ್ದು ನಾನು ಮತ್ತು ನನ್ನ ಪತಿ ಅದ್ವಿಕ್.

source link ಮೊದಲನೆಯ ದೃಶ್ಯ ಮುಗಿಯಿತು. ಇನ್ನೇನಿದ್ದರೂ ನಮ್ಮ ಪ್ರವೇಶ ಮೂರನೇ ದೃಶ್ಯದಲ್ಲಿ. ನನ್ನ ಬ್ಯಾಗೊಳಗಿನ ಒಂದು ಲಕೋಟೆಯನ್ನು ಅದ್ವಿಕ್ ಕೈಲಿಟ್ಟೆ. `ಡೈವೋರ್ಸ್ ನೋಟೀಸ್’. ಅದ್ವಿಕ್ ಚೂರೂ ಕಕ್ಕಾಬಿಕ್ಕಿಯಾಗದೆ, ನಾಟಕ ಮುಗಿಯಲಿ, ಮಾತನಾಡೋಣ ಎಂದ. ಪಾತ್ರದಲ್ಲಿನ ಆವೇಶ ಇನ್ನೂ ನನಗೆ ಇಳಿದಿರಲಿಲ್ಲ. ಎಲ್ಲ ಎಲ್ಲೆ ಮೀರಿ ನಿಂತು, ನನ್ನೆಡೆಗೆ ಒಂದು ಕರುಣೆಯ ನೋಟವನ್ನೂ ಬೀರದೆ ಎಲ್ಲೆಂದರಲ್ಲಿ ಅಲೆಯುತ್ತಿ, ಈ ಕ್ಷಣವೇ ಸಹಿ ಹಾಕಿ ಕೊಡು. ನಾಟಕ ಮುಗಿಯುತ್ತಿದ್ದಂತೆಯೇ ತೆರೆ ಎಳೆಯಲಿ. ನನ್ನ ದಾರಿ- ಗುರಿ ಸ್ಪಷ್ಟವಿಲ್ಲ; ನಿನ್ನ ದಾರಿ-ಗುರಿ ನಾನಲ್ಲ ಅಂದುಬಿಟ್ಟೆ.

ಅವನು ಪ್ರಸಿದ್ಧ ಕಲಾವಿದ.  ರಂಗದ ಮೇಲೂ… ಆಚೆಯೂ… ಅಂತರಂಗ ಮಾತ್ರ ಕೊಳೆತು ನಾರುವಷ್ಟು ಅಸಹನೀಯ. ನಾನು ಅದ್ವಿಕ್‍ನನ್ನು ಮದುವೆಯಾಗಿ ಸರಿ ಸುಮಾರು ಒಂದು ವರ್ಷವಾಯಿತು. ಆರು ವರ್ಷಗಳ ಪ್ರೇಮಕಥೆ ನಮ್ಮದು. 5 ವರ್ಷ ಸಲೀಸಾಗೇ ಹೋದ ಕಥೆ ಆರನೇ ವರ್ಷ ಹೊಸ ತಿರುವು ಪಡೆಯಿತು. ಕೆಲಸಕ್ಕಾಗಿ ದೂರದೂರಿಗೆ ಪ್ರಯಾಣಿಸಿದ ಅದ್ವಿಕ್‍ಗೆ ಬೇರೊಬ್ಬ ಹುಡುಗಿ ಒಲಿದುಬಿಟ್ಟಳು. ನಮ್ಮ ನಿಶ್ಚಿತಾರ್ಥದಲ್ಲಿ ನಾನು ಅವಳನ್ನು ನೋಡಿದ್ದೆ. ಗೆಳತಿ ಎಂದು ಪರಿಚಯಿಸಿದ್ದ ಅದ್ವಿಕ್. ಆಗ `ಗೆಳತಿ ಮಾತ್ರ’ ಆಗಿದ್ದವಳು ನನ್ನ ಬದುಕಿನ ಗೆಳೆಯನ ಮನದ ಕಣಿವೆಯ ಕಣ್ಣನ್ನು ಆವರಿಸಿಬಿಟ್ಟಿದ್ದಳು.

ಅದ್ವಿಕ್‍ಗೆ ಈಗ ನನ್ನೊಂದಿಗೆ ಮಾತು, ಹರಟೆ, ಕವನ, ತುಂಟತನ ಯಾವುದೇ ಸರಿಹೊಂದುತ್ತಿಲ್ಲ. ಕೆದಕಿ ಕೇಳಿದಾಗಲೇ ತಿಳಿದದ್ದು , ವಿಷಯ ಇಷ್ಟು ಆಳಕ್ಕಿಳಿದಿದೆ ಎಂದು. ಮೂರನೇ ಅಂಕದ ಸಮಯ. “ಎಲ್ಲಿದೆ ನಂದನ ಎಲ್ಲಿದೆ ಬಂಧನ, ಎಲ್ಲಾ ಇದೆ ಈ ನಮ್ಮೊಳಗೆ; ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದಾ ಸವಿ ಇದೆ ನಾಲಗೆಗೆ” ಎಂದು ನಾನಂದಾಗ ಅದ್ವಿಕ್,

here “ಉತ್ಸಾ ಹ ಉದ್ವೇಗ ಉದ್ರೇಕಗಳ ವೀರ, ಯುವಜನದ ನಾಡ ಗುಡಿಯು; ಅಳಲುಗಳ ಹೆಡೆಯಲ್ಲೆ, ಸೋಲುಗಳ ತೊಡೆಯಲ್ಲೆ ಅರಳೀತು ನಮ್ಮ ನಾಡು” ಎಂದ. ಹೀಗೆ ವಾಗ್ವಾದಗಳಲ್ಲೇ ಅಂಕ ಮುಗಿಯಿತು. ಮತ್ತೆ ಐದನೇ ದೃಶ್ಯದವರೆಗೂ ತೆರೆಯ ಹಿಂದೆ ನಮ್ಮ ಮೌನ ಮುಂದುವರಿಯಬೇಕು. ಅಷ್ಟಕ್ಕೂ ಎಲ್ಲಾ ತಿಳಿದಿದ್ದು ಮದುವೆ ಆಗಿದ್ದಾದರೂ ಯಾಕೆ ಎಂಬ ಪ್ರಶ್ನೆ ನನ್ನನ್ನು ನಾನೇ ಕೇಳಿದ್ದಿದೆ. ಅವನು ಜೀವ ಕಳೆದುಕೊಳ್ಳುತ್ತಾನೆಂಬ ಭಯಕ್ಕೇ? ಸಮಾಜದಲ್ಲಿ ಅವನ ಗೌರವಕ್ಕೆ ಧಕ್ಕೆಯಾಗುತ್ತದೆಂದೇ? ಕುಟುಂಬದವರ ಮರ್ಯಾದೆಗಂಜಿಯೇ? ಮನಸ್ಸನ್ನು ಅರ್ಪಿಸಿಯಾಯಿತು ಎಂಬ ಗೊಡ್ಡು ಭ್ರಮೆಗಾಗಿಯೇ? ಅವನು ಹೇಗಿದ್ದರೂ ನನ್ನವನಾಗಲಿ ಎಂದೇ? ಕ್ಷಮಿಸಿಬಿಡು, ಮದುವೆಯ ನಂತರ ನಿನ್ನವನಾಗುತ್ತೇನೆ ಎಂಬ ಅವನ ಬೊಗಳೆ ಮಾತಿಗೆ ಮಾರುಹೋಗಿಯೇ? ಇಂದೂ ಪ್ರಶ್ನಿಸಿಕೊಳ್ಳುತ್ತೇನೆ.

follow site ಮದುವೆಯಾದ ಒಂದು ವಾರದಲ್ಲಿ ನನ್ನರಿವಿಗೆ ಬಾರದಂತೆ ನನ್ನದಲ್ಲದ ತೋಳಿನಾಸರೆ ಹುಡುಕಿ ಹೊರಟಿದ್ದನಾತ. ಅವನು ವಾಪಾಸು ಬಂದಾಗ “ನೀ ನುಡಿಯದಿರಲೇನು ಬಯಲಾಗಿಹುದು ಎಲ್ಲ, ಕಣ್ಣಂಚಿನ ಕೊನೆಯ ಭಾವದಲ್ಲಿ ; ಅರೆಘಳಿಗೆ ಸುಖ ಸ್ವಪ್ನ ಬರಲಾರದೆಮ್ಮೊಡನೆ , ವಾಸ್ತವತೆ ಗಹಗಹಿಸಿ ಸೆಳೆಯಲಿಹುದು” ಎಂಬ ಸಾಲುಗಳನ್ನು ಬಾಗಿಲಿಗೆ ನೇತುಹಾಕಿ ವಿಚ್ಚೇದನಕ್ಕೆ ಸಿದ್ಧಳಾಗಿದ್ದೆ. ಆರನೇ ಅಂಕದಲ್ಲೂ ವಾಗ್ವಾದಗಳ ಮಳೆ, ಸಿಡಿಲಿನ ಅಬ್ಬರ. ಯುವಶಕ್ತಿ ಸಂಘಟನೆಯೊಂದಿಗೆ`ಕಟ್ಟುವೆವು ನಾವು’ ಎಂದು ಘೋಷಿಸಿದ್ದೂ ಆಯಿತು. ಆದರೆ ಎಲ್ಲ ಬಿಟ್ಟು ನಡೆಯುವ ಹೊತ್ತಲಿ ಕಟ್ಟುವ ಮಾತೆಲ್ಲಿ? ಕಲಾವಿದನ ಅಂತರಂಗ ಬಹಿರಂಗಗಳು ಒಂದಾದಾಗಲೇ ಬದುಕಿನ ಎಲ್ಲ ಗೆರೆಗಳಿಗೂ ಮುಕ್ತಿ. ವಿವಾಹ ವಿಚ್ಛೇದನ’ ಎಷ್ಟು ಸರಿ, ಎಷ್ಟು ತಪ್ಪು , ಎಷ್ಟು ಅವಶ್ಯ ಎಂದು ವಿಚಾರವಾದಿಗಳು, ಸ್ತ್ರೀವಾದಿಗಳು ಚರ್ಚಿಸುವಾಗೆಲ್ಲ ನಾನು ಖಿನ್ನಳಾಗುತ್ತೇನೆ. ಮದುವೆ ಎಂದರೆ ಜನುಮ ಜನುಮದ ಅನುಬಂಧ ಎಂಬ ನಂಬಿಕೆಯ ನೆಲೆಗಟ್ಟು ಕುಸಿದಿದೆ. ಪತಿ ಪತ್ನಿಯರ ಭಾವಸಾಗರದಲ್ಲಿ ಸುನಾಮಿ ಸೃಷ್ಠಿಯಾಗಿ ಅದೆಷ್ಟೋ ಮದುವೆಗಳು ವಿಚ್ಛೇದನಗಳಲ್ಲಿ ಕೊನೆಗೊಳ್ಳುತ್ತಿದೆ.

click here ಬದುಕಿನುದ್ದಕ್ಕೂ ಜೊತೆಯಾಗಿರುತ್ತೀವಿ ಎಂದು ಪ್ರಮಾಣ ಮಾಡಿ ಒಂದಾದ ಪತಿ ಪತ್ನಿಯರು ಮಾನಸಿಕ ಸಮತೋಲನ ಕಳೆದುಕೊಂಡು, ಕೈಯಾರೆ ಬದುಕನ್ನು ಕೊನೆಗೊಳಿಸಿದ ಮೇಲೂ ಮುಗಿಸದೆ ,ಎಂದೂ ಮುಗಿಯದ ಮೆಗಾಧಾರಾವಾಹಿಗಳಾಗಿಸುತ್ತಿದ್ದಾರೆ. ಕೋರ್ಟಿನ ಮೂಲಕ ನಾವು ಗೆದ್ದೆವೆಂದು ಭ್ರಮಿಸಿ, ಇಬ್ಬರೂ ಸೋತು ಮರಳುವ ಈ ವಿಚ್ಛೇದನಕ್ಕೆ ಅರ್ಥವಿದೆಯೇ?ವಿಚ್ಛೇದನದಿಂದ ಏನು ಸಾಧಿಸಬೇಕೆಂದು ನನಗೂ ತಿಳಿದಿಲ್ಲ. ಹೊಂದಿಕೆ ಎಂಬುದು ಅಷ್ಟು ಕಷ್ಟವೇ? ಅದ್ದೂರಿಯಾಗಿ ತಂದೆ ತಾಯಿ ಮಾಡಿಸಿದ ಮದುವೆಯ ಖರ್ಚನ್ನು ವಾಪಾಸು ಕೊಡಿಸೀತೇ? ನನ್ನ ಅಹಂಕಾರ ತೃಪ್ತಿಯಾದೀತೇ? ಆದರೆ ಇಂದು ನನಗಿದು ಅನಿವಾರ್ಯವಾಗಿದೆ. ರಂಗದ ಮೇಲೆ ನಾಡನ್ನು ಒಟ್ಟಿಗೆ ಕಟ್ಟಿದ್ದೇವೆ. ಕಟ್ಟುತ್ತಿದ್ದೇವೆ. ಯುವಜನರಿಗೆ ಸಂಬಂಧಗಳ ಸರಪಣಿಯಾಗಲು ಮಾದರಿಯಾಗುತ್ತಿದ್ದೇವೆ.

http://wpdalya.com/business-plan-writing-services-san-diego/ ನಾಟಕ ಮುಗಿಯುತ್ತಿದ್ದಂತೆ ಮುಗಿಲಿಗೇರಿದ ಚಪ್ಪಾಳೆ. ಮುರಿದ ಹರಿದ ಮನಸ್ಸುಗಳ ಕಣ್ಣಂಚಿನ ನೀರು ಮತ್ತೆ ಒಂದಾಗಲು ಹಾತೊರೆಯುತ್ತಿದೆ. ವೇಷಧಾರಿಗಳು ಮುಖವಾಡ ಇಳಿಸಿದ್ದಾರೆ. ಬಣ್ಣ ಕಳಚಿದ್ದಾರೆ. ಉಳಿದದ್ದು ನಗ್ನ ಮುಖ. ಬಯಲಾದ ರಂಗದ ಮೇಲಿನಾಟದಲಿ, ರಂಗಿನಾಟದಲಿ ಬಯಲೀಗ ಭಣಭಣ.

One thought on “ಕಟ್ಟುವೆವೋ ನಾವು?

  1. ಅವನು ಪ್ರಸಿದ್ಧ ಕಲಾವಿದ. ರಂಗದ ಮೇಲೂ… ಆಚೆಯೂ… ಅಂತರಂಗ ಮಾತ್ರ ಕೊಳೆತು ನಾರುವಷ್ಟು ಅಸಹನೀಯ….
    ಎಂತಹ ಅದ್ಭುತವಾದ ಪದ ಜೋಡಣೆ…

Leave a Reply

Top