You are here
Home > ಪುಟ ೨ > ಕನ್ನಡದ ಬ್ಲಾಗ್ ತಾಣಕ್ಕೆ ಒಂದು ವರ್ಷ! – ಕಲ್ಪನಾಲೋಕ

ಕನ್ನಡದ ಬ್ಲಾಗ್ ತಾಣಕ್ಕೆ ಒಂದು ವರ್ಷ! – ಕಲ್ಪನಾಲೋಕ

ಏಕಾಂತ – ಬಯಸಿ ಪಡೆದರೆ ಸಂತಸ. ಬಯಸದೆ ಬಂದರೆ ನೋವು. ಸಮಾಜದಲ್ಲಿ ಯಾರೊಬ್ಬರೂ ಏಕಾಂಗಿಯಾಗಿಲ್ಲ , ಬಳ್ಳಿಗೆ ಮರದ ಆಸರೆಯಂತೆ , write conclusion paragraph essay ಆಯಾಯ ಕಾಲಘಟ್ಟದಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ , ಏಕಾಂತವನ್ನು ಇಲ್ಲವಾಗಿಸುತ್ತಾರೆ. ಆದರೂ see url , ಒಮ್ಮೊಮ್ಮೆ ಏಕಾಂತ ಬಯಸಿದರೆ ತಪ್ಪೇನಿಲ್ಲವಲ್ಲ. ಅಂತೆಯೇ ಪ್ರತಿಯೊಬ್ಬರ ದಾರಿಯು ಅನನ್ಯ enter site , ಅಥವಾ ಆ ದಾರಿಯಲ್ಲಿ ಏಕಾಂಗಿ ಸಂಚಾರ. ಕೆಲವೊಮ್ಮೆ ನಮ್ಮ ಆಲೋಚನೆಗಳು, ಆದರ್ಶಗಳು, ಹೋಗುತ್ತಿರುವ ದಾರಿಯಲ್ಲಿ ನಾವೊಬ್ಬರೆ ಏಕಾಂಗಿಯಾಗಿ ಸಾಗುತ್ತಿದ್ದೇವೆ ಎಂಬ ಒಂಟಿತನ ಕಾಡುತ್ತದೆ; ಕೆಲವೊಮ್ಮೆ ಜಿಜ್ಞಾಸೆ, ಸರಿದಾರಿಯ? ಎಂಬ ಅನುಮಾನ, ನಮ್ಮಂತೆ ಯಾರಿಲ್ಲ ಅಥವಾ ಎಲ್ಲರಂತೆ ನಾನಿಲ್ಲ ಎಂಬ ಗೊಂದಲಗಳ ಜೊತೆಯಲ್ಲಿಯೇ ದಿನದೂಡುತ್ತಿರುತ್ತೇವೆ.

Webತನ ದ ಮೂಲಕ ಸಮಾನಮನಸ್ಕರ ಗುರುತು ಸಿಗತೊಡಗಿತು, ದಾರಿ ಬೇರೆಯಾದರು, ಸೇರುವ ಸ್ಥಳ ಒಂದೇ..! ಕನ್ನಡ ಭಾಷೆಯ ಮೇಲಿನ ಅಭಿಮಾನ, ನಮ್ಮೂರಿನ ಬಗ್ಗೆಯ ಆಪ್ತತೆ, ನಮ್ಮವರ ಮೇಲಿನ ಅಪ್ಯಾಯಮಾನತೆ, ಹೆಂಗರುಳಿಗೆ ಮಿಡಿಯುವ ಮನಸ್ಸು, ಅಪಹಾಸ್ಯವಾಗದಂತಹ ನವಿರು ಹಾಸ್ಯ, ಉತ್ತಮವಾಗಿಯೇ ತಿಳಿಹೇಳುವ ವಿಡಂಬನೆಗಳು, ಕೆಲವು ಪದಗಳಲ್ಲಿಯೇ ತಿಳಿಸುವ ಅರ್ಥಗರ್ಬಿತ “ಮರೆಯದ ಸಾಲು” ಗಳು, ಮಂಥಿಸುವ ಚಿಂತನೆಗಳು, ಕ್ರೀಡಾಪಟುಗಳು, ಯಂತ್ರಗಳ ಬಗೆಗಿನ ಮಾಹಿತಿಗಳು, ವೈವಿಧ್ಯಮಯವಾದ ಕನ್ನಡ ಭಾಷಾ ಸೊಗಡಿನ ಮೂಲಕ ಇಲ್ಲಿ ಬಿತ್ತರಗೊಳ್ಳುತ್ತಲೇ ಇದೆ ಹಾಗು ಅದು ಹಾಗೆಯೇ ಉನ್ನತಿಗೊಂಡು ಮುಂದುವರೆಯಲಿ ಎಂಬ ಆಶಯ.

ಬರವಣಿಗೆಯನ್ನು ಕೇವಲ ಹವ್ಯಾಸವಾಗಿ ರೂಢಿಸಿಕೊಂಡಿದ್ದ ನನಗೆ, ಅದಕ್ಕೊಂದು ರೂಪು-ರೇಷೆ ನೀಡುವಲ್ಲಿ ಸಹಕರಿಸಿದ್ದು Web ತನ. ವೇದಾವತಿ ಯವರಿಂದ ಪರಿಚಯವಾದ “Webತನ” ದಲ್ಲಿ, ನನ್ನ ಮೊದಲ ಕವನ ಪ್ರಕಟವಾಗಿದ್ದು, ನಾಲ್ಕನೇ ಸಂಚಿಕೆಗೆ. ಆನಂತರ, ಬರವಣಿಗೆ ಉತ್ತಮಗೊಳಿಸುತ್ತ, ಲೇಖನಗಳನ್ನು ಬರೆಯುವುದರಲ್ಲೂ ನಾನು ಪ್ರಯತ್ನಿಸಿದೆ. ಓದುಗರ ಅಭಿಪ್ರಾಯಗಳಿಂದ ಖುಷಿ ಇಮ್ಮಡಿಯಾಯಿತು. ಪ್ರತಿ ಸಂಚಿಕೆಗೂ ಸೇರ್ಪಡೆಯಾಗುತ್ತಿದ್ದ ಬರಹಗಾರರು, ಬರಹಗಳು, ಬದಲಾದ ವಿನ್ಯಾಸ, ಎಲ್ಲವು ಈ ಪ್ರಯತ್ನ ಏಳಿಗೆಯಾಗುತ್ತಿರುವ ಸೂಚನೆ ನೀಡುತ್ತಿದ್ದವು. ವರ್ಷದ ಮೈಲಿಗಲ್ಲು ದಾಟುತ್ತಿರುವ ಈ ಪ್ರಯತ್ನಕ್ಕೆ ಅಭಿನಂದನೆಗಳು. ಇಂತಹ ಉತ್ತಮ ಪ್ರಯತ್ನ ಇನ್ನು ಹೆಚ್ಚು ಓದುಗರನ್ನು, ಬರಹಗಾರರನ್ನು ತನ್ನತ್ತ ಆಕರ್ಷಿಸಲಿ ಎಂಬ ಆಶಯ.

Leave a Reply

Top