You are here
Home > ಚಿಂತನೆ > ಕರ್ಮ

ಕರ್ಮ

follow site karma_arun

click ನಮ್ಮ ದೈನಂದಿನ ಕೆಲಸಗಳು, ಆಚರಣೆಗಳು, ನಮ್ಮ ಗತಕಾಲದ ಕಾರ್ಯಗಳು ಇವೆಲ್ಲ ಸುಮ್ಮನೆ ಹಾಗೆ ಪ್ರತಿಫಲ ಇಲ್ಲದೆ ಕಳೆದುಹೋಗುವಂತದಲ್ಲ. ಎಲ್ಲಾದಕ್ಕೂ ಒಂದು ಲೆಕ್ಕ ಅಂತ ಇರಬೇಕಲ್ಲಾ? ನಾವು ಮಾಡಿದ ಕೆಲಸಗಳ ಪರಿಣಾಮ ಅಥವಾ ಫಲಿತಾಂಶ ಏನೇ ಇದ್ದರು ಅದನ್ನು ನಾವೇ ಅನುಭವಿಸಬೇಕು. ಈ ಲೆಕ್ಕಾಚಾರವೇ ಕರ್ಮ.

http://admisiones.uprrp.edu/wp-content/?essay=521&writingservice=best-mba-essay-services best mba essay services ವಿಜ್ಞಾನವೇ ಹೇಳುವಂತೆ ಇಲ್ಲಿನವು ಎಲ್ಲ ಇಲ್ಲಿಯೇ ಹುಟ್ಟಿ, ಇಲ್ಲೆ ಬದುಕಿ, ಇಲ್ಲೆ ನಶಿಸಬೇಕು. ಇದಕ್ಕೆ ನ್ಯೂಟನ್ ನ ಮೂರನೇ ನಿಯಮವನ್ನು ಕೂಡ ಹೊಂದಿಸಬಹುದು. ಅಂತೆಯೇ,  ಆಧ್ಯಾತ್ಮಿಕ ಜಗತ್ತಿನಲ್ಲೂ, ಲೌಕಿಕ ಜೀವನದಲ್ಲೂ ಕರ್ಮವು, ಇಲ್ಲೆ ಹುಟ್ಟಿ ಇಲ್ಲೆ ಅಂತ್ಯವಾಗುವಂಥದ್ದು.

what are the factors affecting youth culture ಕರ್ಮ ಅಂದರೆ ಕ್ರಿಯೆ. ಪ್ರತಿಯೊಂದು ಕ್ರಿಯೆಗೆ ಒಂದು ಸಮಪ್ರಮಾಣದ ಪ್ರತಿಕ್ರಿಯೆ ಸಿದ್ಧವಾಗಿರುತ್ತದೆ. ವಿಜ್ಞಾನದಲ್ಲಿ ನ್ಯೂಟನ್ನಿನ ಮೂರನೇ ನಿಯಮವೂ ಇದನ್ನೇ ಹೇಳುತ್ತದೆ. ಕರ್ಮ ಶಿಕ್ಷೆಯಲ್ಲ. ಅದು ಶಿಕ್ಷಣ. ಪ್ರತಿಫಲ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ, ಕೆಟ್ಟದ್ದಕ್ಕೆ ಕೆಟ್ಟದ್ದು. ಸಕಾರಾತ್ಮಕ ಮನೋಭಾವನೆಯಿಂದ ಕಾರ್ಯ ನಿರ್ವಹಿಸಿದರೆ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ಭಿತ್ತಿದ ಬೀಜದಂತೆ ವೃಕ್ಷ. ಅದೇ ಪ್ರಕೃತಿಯ ನಿಯಮ.

source site ನಮಗೆ ಶಾಂತಿ, ನೆಮ್ಮದಿ, ಖುಷಿಯ ಅಗತ್ಯವಿದೆಯಾ, ಹಾಗಾದರೆ, ಸಾಧ್ಯವಾದಷ್ಟು ಶಾಂತವಾಗಿದ್ದು, ಖುಷಿಯನ್ನು ಹಂಚಬೇಕು. ಜೀವನದ ಪ್ರತಿಯೊಂದು ಘಟನೆಗಳಿಗೂ ನಮ್ಮ ನಿರ್ಧಾರ, ನಮ್ಮ ಕಾರ್ಯವೈಕರಿಯೇ ಕಾರಣ. ಜೀವನ ಅದಾಗೆ ನಡೆಯುವುದಕ್ಕೂ, ನಾವು ರೂಪಿಸಿಕೊಳ್ಳುವುದಕ್ಕೂ ವ್ಯತ್ಯಾಸವಿರುವಂತೆ, ನಮ್ಮ ಕರ್ಮಗಳು ಭವಿಷ್ಯಕ್ಕೆ ಅಂಟಿಕೊಂಡಿರುತ್ತದೆ.

http://historyintampa.com/?q=research-papers-to-buy ವೇದ ಪುರಾಣಗಳಲ್ಲಿ ಹೇಳಿರುವಂತೆ ಕರ್ಮದಲ್ಲಿ ಹಲವು ವಿಧ. ಅವುಗಳಲ್ಲಿ ಪ್ರಮುಖವಾಗಿ ಮೂರನ್ನು ಪರಿಗಣಿಸಲಾಗುತ್ತದೆ. ಸಂಚಿತ್ತ, ಪ್ರಾರಬ್ಧ ಮತ್ತು ಅಗಾಮಿ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ವಿವರಿಸಿರುವಂತೆ ಕರ್ಮ, ಅಕರ್ಮ, ವಿಕರ್ಮ ವೆಂಬುದು ಪ್ರತಿಯೊಬ್ಬನ ಜೀವನದಲ್ಲೂ ನಡೆಯುವಂತದ್ದು.  ನಾವುಗಳು ಮಾಡುವ ಕ್ರಿಯೆಯಲ್ಲಿ ಹಾಗೂ ಕ್ರಿಯೆಯಿಂದ ನಾವೇ ಅನುಭವಿಸುವಂತದ್ದು. ಪ್ರತಿಯೊಬ್ಬರೂ ಕರ್ಮದ ಲೆಕ್ಕವನ್ನು ಹೊತ್ತವರೇ. ಕೆಲವರು ಸಂಚಿತ್ತ ಕರ್ಮ ವಾದರೆ, ಕೆಲವರದು ಪ್ರಾರಬ್ಧ ಕರ್ಮ, ಇನ್ನುಕೆಲವರು ಅಗಾಮಿ ಕರ್ಮ ಪ್ರಾಪ್ತರು.

http://hrcoachuk.com/78219/hareov.php?sj=attack-on-titan-volume-23 Buy Adobe Acrobat 9 Pro Extended ಸಂಚಿತ್ತ ಕರ್ಮ ಅಂದರೆ ನಾವು ಈಗಾಗಲೇ ಮಾಡಿರುವ ಪಾಪ ಪುಣ್ಯದ ಅಥವಾ ಕ್ರಿಯೆಗಳ, ಸಂಗ್ರಹವಾಗಿರುವ ಅಥವಾ ಫಲಪ್ರದಕ್ಕಾಗಿ ಕಾದಿರುವಂತಹ ಕರ್ಮಗಳು. ಸರಳವಾಗಿ ಹೇಳಬೇಕೆಂದರೆ ಸಂಚಿತ್ತ ಕರ್ಮವು ಹಿಂದಿನ ಜೀವಿತಾವಧಿಗಳ, ಕರ್ಮಫಲಗಳ ಉಗ್ರಾಣ. ಹಿಂದೆ ಬಗೆಹರಿಯಲಾಗದೆ ಈಗ ಪರಿಹಾರಕ್ಕಾಗಿ  ಉಳಿದುಕೊಂಡಿರುವುದು.

master thesis data mining how to start a high school essay ಪ್ರಾರಬ್ಧ ಕರ್ಮ ಅಂದರೆ ಈಗಾಗಲೇ ಅನುಭವಿಸುತ್ತಿರುವ ಕರ್ಮದ ಫಲಗಳು. ಅಂದರೆ ಈ ಕರ್ಮವು ಹಿಂದಿನ ಕಾರ್ಯಗಳ, ಭೂತಕಾಲದ ಕ್ರಿಯೆಗಳ ಪ್ರಸ್ತುತ ಫಲ. ಪ್ರಾರಬ್ಧವು ಸಂಚಿತ ಕರ್ಮದ ಇಂದಿನ ಜೀವನದ ಫಲ. ಈ ಕರ್ಮವು ತಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ, ಅನುಭವಿಸಿಯೇ ತೀರಬೇಕು. ಹಿಂದಿನ ಸಾಲವನ್ನು ತೀರಿಸಲೇಬೇಕು. ನಾವು ಹಿಂದೆ ನೆಟ್ಟ ಮರದ ಹಣ್ಣು ಈಗ ಸೇವನೆಗೆ ಕಾದು ಕುಂತಂತೆ.

next http://alshaibany.com/?q=altruistic-service-essays ಅಗಾಮಿ ಕರ್ಮ ಅಂದರೆ ಈಗಿನ ಕರ್ಮಗಳು. ಈಗೇನು ಮಾಡುತ್ತಿರುವಿರಿ, ಇಂದಿನ ಜನುಮದಲ್ಲಿ, ವರ್ತಮಾನದ ಎಲ್ಲ ಕ್ರಿಯೆಗಳ ಫಲಿತಾಂಶದ ಫಲ, ಭವಿಷ್ಯಕ್ಕೆ ಸಿದ್ದವಾಗುತ್ತಿದೆ. ಹಣ್ಣಿಗಾಗಿ ಮರವನ್ನು ನೆಟ್ಟಂತೆ. ನೆಡುವ ಮರದ ಕಾರ್ಯ ಪ್ರಸ್ತುತವಾದರೂ ಅದರ ಫಲ ಭವಿಷ್ಯಕ್ಕೆ.

ಸಂಚಿತ್ತ ಕರ್ಮ “ಸಂಗ್ರಹ”, ಅಗಾಮಿ ಕರ್ಮ “ಶುರುವಾಗದ”, ಪ್ರಾರಬ್ಧ ಕರ್ಮ ” ಆರಂಭ” ಎನ್ನಬಹುದು.

ಒಂದುವೇಳೆ ಇಂದಿನ ಕ್ರಿಯೆಗಳು ಈ ಜೀವಿತಾವದಿಯಲ್ಲಿ ಫಲಪ್ರದವಾಗದಿದ್ದರೆ ಏನಾಗಬಹುದು? ಅದು ಸಂಚಿತ್ತ ಕರ್ಮವಾಗಬಹುದು, ಪ್ರಾರಬ್ಧವಾಗಿ ಕರ್ಮ ಪ್ರಾಪ್ತಿಯಾಗಬಹುದು. ಒಟ್ಟಾರೆ ಸಂಕ್ಷಿಪ್ತವಾಗಿ ಹೇಳಬಯಸುವುದಾದರೆ ಈಗ ಮಾಡುವ ಕಾರ್ಯಗಳು ಅಗಾಮಿ ಕರ್ಮವಾಗಿ, ಸಂಚಿತ್ತ ಕರ್ಮಕ್ಕೆ ತಿರುಗಿ, ಪ್ರಾರಬ್ಧ ಕರ್ಮವಾಗಿ ತನ್ನ ಕರ್ತವ್ಯ ಸಂಪೂರ್ಣಗೊಳಿಸುವುದು.

ಆದ್ದರಿಂದ ಕರ್ಮ ಒಳ್ಳೆಯದು ಅಥವಾ ಕೆಟ್ಟದ್ದು ಎಂಬುದು ನಮ್ಮನ್ನೆ ಅವಲಂಬಿಸಿರುತ್ತದೆ. ನಾವು ಯಾರಿಗಾದರೂ ಏನನ್ನಾದರೂ ಬಯಸಿದರೆ, ಮಾಡಿದರೆ, ಅದರ ಸೂಕ್ತ ಫಲ ನಮ್ಮೆಡೆಗೆ ತಿರುಗುತ್ತದೆ, ನಮಗೆ ಲಭಿಸುತ್ತದೆ.

ಇದೇ  http://entirecontracting.com/?p=batman-2-asylum-assignment-help ಕರ್ಮ ತತ್ವ.

2 thoughts on “ಕರ್ಮ

Leave a Reply

Top