You are here
Home > ಪುಟ ೪ > ಗಂಡಸರು ಅಳಬಾರದು, ಆದರೆ.. (ಮುಗುಳು ನಗೆ ವಿಮರ್ಶೆ-ವಿಕ್ರಂ ನಾಯಕ್ )

ಗಂಡಸರು ಅಳಬಾರದು, ಆದರೆ.. (ಮುಗುಳು ನಗೆ ವಿಮರ್ಶೆ-ವಿಕ್ರಂ ನಾಯಕ್ )

go here ಮುಂಗಾರು ಮಳೆಯಲ್ಲಿ ಮೊಲ, ಗಾಳಿಪಟದಲ್ಲಿ ಗಾಳಿಪಟ, ವಾಸ್ತು ಪ್ರಕಾರದಲ್ಲಿ ಮನೆ, ದನ ಕಾಯೋನು ಚಿತ್ರದಲ್ಲಿ ದನ/ಹೋರಿ, ಮುಗುಳ್ನಗೆಯಲ್ಲಿ ಹಳೇ ವ್ಯಾನು , ಹೀಗೆ ಮುಂಗಾರು ಮಳೆಯ ದೇವದಾಸ್ ಮೊಲದ ಯಶಸ್ಸಿನಿಂದ ತಮ್ಮ ಅನೇಕ ಚಿತ್ರಗಳಲ್ಲಿ ಪ್ರೇಮದ ಸಂಕೇತವಾಗಿ ಒಂದಲ್ಲ ಒಂದು ವಸ್ತುವನ್ನು/ಪ್ರಾಣಿಯನ್ನು ಯೋಗರಾಜ್ ಭಟ್ಟರು ಇಡುತ್ತಾ ಬಂದಿದ್ದಾರೆ.

source site ಅವರ ಮೂರು ಚಿತ್ರಗಳಲ್ಲಿ ನಟಿಸಿದ್ದ ನಟ ಗಣೇಶ್, ಯೋಗರಾಜ್ ಭಟ್ಟರ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ ಎಂದು ಹೇಳಬಹುದು.
ಮುಂಗಾರು ಮಳೆ ಒಂದು ವಿಭಿನ್ನ ಶೈಲಿಯ ಕಥೆ, ಸಂಭಾಷಣೆಗಳ ಮೂಲಕ ಕನ್ನಡ ಚಲನ ಚಿತ್ರದಲ್ಲಿ ಒಂದು ಹೊಸ ಶಕೆಯನ್ನು ಆರಂಭಿಸಿತು. ಭಟ್ಟರ ಶೈಲಿಯ ಸಂಭಾಷಣೆಗಳಿಗೆ ಜನ ನಿರೀಕ್ಷಿಸುವಷ್ಟರ ಮಟ್ಟಿಗೆ ಒಂದು ಸಂಚಲನ ಸೃಷ್ಟಿಯಾಯಿತು. ಆದರೆ ಅವರ ಚಿತ್ರಗಳು ಅಷ್ಟಕ್ಕೇ ಸೀಮಿತವಾಗಿಲ್ಲ. ಮುಂಗಾರು ಮಳೆಯಿಂದ ಭಟ್ಟರ ಸಿನೆಮಾವನ್ನು ವೀಕ್ಷಿಸುತ್ತಾ ಬಂದರೆ ಕೆಲವು ಅಂಶಗಳನ್ನು ಒಂದು ಫಾರ್ಮುಲಾದಂತೆ ಭಟ್ಟರು ಬಳಸಿಕೊಂಡು ಬಂದಿದ್ದಾರೆ ಎಂದು ನನಗನ್ನಿಸುತ್ತದೆ.

http://www.ctdesign.it/?dissertation-quantitative-analysis ಈ ಮೊದಲೇ ಹೇಳಿದಂತೆ ಮುಂಗಾರು ಮಳೆ ಸಿನೆಮಾ ತೆಗೆದುಕೊಳ್ಳುವುದಾದರೆ ಅಲ್ಲಿ ದೇವದಾಸ (ಮೊಲ) ಪ್ರೇಮದ ಸಂಕೇತ. ಮೊಲಕ್ಕೆ ನಾಯಕ ದೇವದಾಸ ಎಂದು ಹೆಸರಿಟ್ಟಾಗಲೇ ಇದು ವಿಫಲ ಪ್ರೇಮ ಕಥೆ ಎಂದು ಕಥೆಗಾರ/ನಿರ್ದೇಶಕ ಹೇಳಲು ಹೊರಟಂತಿದೆ ಎಂದು ಊಹಿಸಬಹುದು. ಮೊಲದ ಸಾವು ವಿಫಲ ಪ್ರೇಮಕ್ಕೆ ಒಂದು ತಾರ್ಕಿಕ ಅಂತ್ಯ ನೀಡುತ್ತದೆ. ಗಾಳಿ ಪಟ ಸಿನೆಮಾದಲ್ಲಿ ಗಾಳಿ ಪಟದ ಮೂಲಕ ನಾಯಕ ತನ್ನ ಪ್ರೀತಿಯನ್ನು ವ್ಯಕ್ತ ಪಡಿಸಲು ಪ್ರಯತ್ನಿಸುತ್ತಾನೆ. ಆದರೆ ಗಾಳಿ ಪಟ ಮರದಲ್ಲಿ ಸಿಕ್ಕಿ ಹಾಕಿಕೊಂಡಂತೆ ನಾಯಕನ ಪ್ರೀತಿಯೂ ತಾನು ಬಯಸಿದ ಹುಡುಗಿಯು ಒಪ್ಪಿಗೆ ಸೂಚಿಸದೇ ಮಧ್ಯೆ ಸಿಕ್ಕಿ ಹಾಕಿಕೊಂಡಿರುತ್ತದೆ. ಕೊನೆಗೆ ಹೇಗೋ ಈ ಪ್ರೇಮ ಕಥೆ ಸುಖಾಂತ್ಯವಾಗುತ್ತದೆ.

ಇನ್ನು ವಾಸ್ತು ಪ್ರಕಾರ ಸಿನೆಮಾದಲ್ಲಿ ನಾಯಕ ತನ್ನ ಸೋದರ ಮಾವನೊಡನೆ ಸೇರಿ, ವಾಸ್ತು ನೆಪದಲ್ಲಿ ಒಂದು ಮನೆಯನ್ನು ಒಡೆದು ತನಗೇ ಗೊತ್ತಿಲ್ಲದಂತೆ ವಿಚ್ಛೇದನ ಪಡೆಯಲು ಬಯಸಿದ ಎರಡು ಮನಸ್ಸುಗಳನ್ನು ಒಂದು ಮಾಡುತ್ತಾರೆ. ಇದೇ ಸ್ಥಳದಲ್ಲಿ ತನ್ನ ಪ್ರೀತಿಯನ್ನೂ ಕಂಡುಕೊಳ್ಳುತ್ತಾನೆ. ಭಟ್ಟರ ಸಿನೆಮಾಗಳಲ್ಲಿ ನಾವು ಕಾಣಬಹುದಾದ ಇನ್ನೊಂದು ಸಾಮಾನ್ಯ ಅಂಶ ಅಪ್ಪನ ಅರಚಾಟ. ನಾಯಕ ತಂದೆ ಯಾವಾಗಲೂ ನಾಯಕನ ಮೇಲೆ ಒಂದಿಲ್ಲೊಂದು ವಿಚಾರದಲ್ಲಿ ಕೋಪಿಸಿಕೊಂಡು ಕೂಗಾಡುತ್ತಲೇ ಇರುತ್ತಾರೆ. ಅದಕ್ಕೆ ಸರಿಯಾಗಿ ನಾಯಕನ ದಿವ್ಯ ನಿರ್ಲಕ್ಷ್ಯ ಇದ್ದೇ ಇರುತ್ತದೆ. ಆದರೆ ಈ ತಂದೆಯ ಸಿಟ್ಟು, ಅರಚಾಟಗಳಲ್ಲಿ ಪ್ರೀತಿಯೂ ಅಡಗಿದೆ ಎಂದು ಸೂಚ್ಯವಾಗಿ ತಿಳಿಸುತ್ತಾರೆ.

source link ಈ ಲೇಖನದ ಮುಖ್ಯ ವಿಷಯಕ್ಕೆ ಬರುವುದಾದರೆ ಸಿನೆಮಾದಲ್ಲಿ ಕಾಣ ಸಿಗುವ ಯಥೇಚ್ಛವಾದ ಹಾಸ್ಯ ಮಯ ಸನ್ನಿವೇಶಗಳ ಜೊತೆ ನಮಗೆ ಕಾಣಸಿಗುವುದು ನಾಯಕನ ಅಳು. ಸಾಧಾರಣ ಸಿನೆಮಾಗಳಲ್ಲಿ ನಾಯಕ ನಟ ಅಳೋದೇ ಆಗಿದ್ದರೆ ಬೇರೆ ಸೆಂಟಿಮೆಂಟುಗಳು ಕಾರಣವಾಗಿರುತ್ತವೆ. ಆದರೆ ಭಟ್ಟರ ಸಿನೆಮಾದಲ್ಲಿ ನಾಯಕ ನಕ್ಕಷ್ಟೇ ಅಳುತ್ತಾನೆ. ಅಳುವುದು ತಾನು ಬಯಸಿದ ಹುಡುಗಿ ಸಿಗಲಿಲ್ಲ ಅನ್ನುವ ಕಾರಣಕ್ಕಾಗಿ ಅಥವಾ ಸಿಗಬೇಕು ಅನ್ನುವ ಕಾರಣಕ್ಕಾಗಿ. ಸಾಧಾರಣವಾಗಿ ಗಂಡಸರು ಅಳುವುದಿಲ್ಲ. ಅಥವಾ ಅಳಬಾರದು ಎನ್ನುವುದು ಸಮಾಜದ ನಿಯಮ. ಆದರೆ ಭಟ್ಟರು, ಗಂಡಸರಿಗೂ ಕಣ್ಣೀರಿದೆ ಎಂದು ಸಾಧಿಸಲು ಹೊರಟಂತಿದೆ. ಮುಂಗಾರು ಮಳೆಯಲ್ಲಿ ನಾಯಕ ಅಳುತ್ತಾ ಹೇಳುವ ಸಂಭಾಷಣೆ ಎಷ್ಟು ಪ್ರಸಿದ್ಧವಾಗಿತ್ತು ಎಂದು ಇಲ್ಲಿ ನೆನಪು ಮಾಡಿಕೊಳ್ಳಬಹುದು.

http://passieforchocolate.com/?where-can-i-do-my-essays ಸುಮಾರು ಹತ್ತು ವರ್ಷಗಳ ನಂತರ ಭಟ್ಟರು ಮತ್ತು ಗಣೇಶ್ ಒಂದಾಗಿ ಮಾಡಿದ ಸಿನೆಮಾ “ಮುಗುಳುನಗೆ”. ಭಟ್ಟರ ಈ ಹಿಂದಿನ ಎಲ್ಲಾ ಸಿನೆಮಾಗಳಲ್ಲಿ ಪ್ರೀತಿಗಾಗಿ ಒಂದು ಹುಡುಗಿಯ ಹಿಂದೆ ಬಿದ್ದು ಅದು ಯಶಸ್ಸಾಗುವುದು ಅಥವಾ ಬಿಡುವುದು ಇದೇ ಕಥಾ ವಸ್ತು ಆಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿಗೆ ಮದುವೆಯ ಮುನ್ನ ಕನಿಷ್ಟ ಎರಡು ಮೂರು ಪ್ರೇಮ ಪ್ರಕರಣಗಳು ನಡೆಯಲೇಬೇಕು ಎನ್ನುವ ವಾದ ಭಟ್ಟರದು. ಅದಕ್ಕೆ ಸರಿಯಾಗಿ ನಾಯಕನಿಗೆ (ಗಣೇಶ) ಈ ಸಿನೆಮಾದಲ್ಲಿ ಮೂರು ಪ್ರೇಮ ಪ್ರಕರಣ. ನಾಲ್ಕನೆಯದು ಹೆತ್ತವರು ನೋಡಿದ ಹುಡುಗಿಯೊಡನೆ ಮದುವೆ.

go to site ಚಿತ್ರಕ್ಕೆ ಮುಗುಳುನಗೆ ಎಂದು ಹೆಸರಿಟ್ಟ ಮೇಲೆ ನಾಯಕನಟನ ಮುಗುಳುನಗೆಗೆ ಯಾವ ಕೊರತೆಯೂ ಇಲ್ಲ. ಆದರೆ ಇಲ್ಲಿ ಆಸಕ್ತಿಕರವಾದ ವಿಚಾರ ಏನೆಂದರೆ ನಾಯಕ ಹುಟ್ಟಿದಾಗಲೂ ಅಳದೇ ನಕ್ಕಿದ್ದು. (ಇದು ಸಿನೆಮಾ ಆಗಿರುವುದರಿಂದ ಇದಕ್ಕೆ ಲಾಜಿಕ್ ಹುಡುಕಲು ಹೋಗಬಾರದು). ಇನ್ನೂ ವಿಶೇಷ ಏನೆಂದರೆ ನಾಯಕ ದುಃಖದ ಸಂದರ್ಭದಲ್ಲಿಯೂ ಅಳದೇ ಮುಗುಳ್ನಗುತ್ತಾನೆ. ಆತನ ಗಂಟಲು ತುಂಬಿ ಬಂದು, ಎದೆ ಭಾರವೆನಿಸಿ ಒಂದಕ್ಷರವೂ ಮಾತನಾಡಲು ಸಾಧ್ಯವಾಗದ ಭಾವಾವೇಶದ ಸನ್ನಿವೇಶದಲ್ಲಿ ಬರುವುದು ಅಳುವಲ್ಲ, ಮುಗುಳ್ನಗೆ.

ಭಟ್ಟರ ಹಿಂದಿನ ಸಿನೆಮಾಗಳಲ್ಲೆಲ್ಲಾ ನಾಯಕ ಬಹಳ ಸುಲಭವಾಗಿ ಅಳುತ್ತಿದ್ದ. ಆದರೆ ಈ ಸಿನೆಮಾದಲ್ಲಿ ಅಳು ಬಹಳ ದುಬಾರಿ‌. ಅಳು ಮತ್ತು ನಗು ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಳು ಬೇರೆ ಅಲ್ಲ, ನಗು ಬೇರೆ ಅಲ್ಲ ಎಂದು ನಿರ್ದೇಶಕ ಹೇಳಲು ಹೊರಟಂತಿದೆ. ಕೆಲವೊಮ್ಮೆ ಸಂತೋಷ ಉಕ್ಕಿ ಬಂದಾಗಲೂ ಅಳುತ್ತೇವೆ. ಬೇಸರಗೊಂಡಾಗ ನಗುತ್ತೇವೆ. ಆದರೂ ಇದು ಆನಂದ ಭಾಷ್ಪವೋ ಇಲ್ಲ ದುಃಖದ ನಗುವೋ ಎಂದು ಗುರುತಿಸಬಹುದು.

ನಾಯಕನ ಮೊದಲ ಪ್ರೇಮಿಯ ಜೊತೆಗಿನ ಪಯಣ ಆರಂಭಗೊಳ್ಳುವುದು ಒಂದು ಹಳೇ ವ್ಯಾನಿನಲ್ಲಿ. ಆ ನೆನಪಿಗೋಸ್ಕರ ನಾಯಕ ಅದನ್ನು ಮಾರದಂತೆ ಆ ವ್ಯಾನಿನ ಯಜಮಾನನಿಗೆ ಹೇಳುತ್ತಾನೆ. ಕಾರಣಾಂತರಗಳಿಂದ ಮೊದಲನೇ ಪ್ರೇಮ ಸ್ನೇಹಪೂರ್ವಕವಾಗಿ ಮುರಿದು ಬಿದ್ದಾಗ ಎರಡನೇ ಪ್ರೇಮವನ್ನರಸಿ ಹೋಗುತ್ತಾನೆ. ಆದರೆ ಮದುವೆಯಾಗಿ ಸಂಸಾರದ ಕಟ್ಟುಪಾಡುಗಳಿಗೆ ತಲೆಯೊಡ್ಡಲು ಇಷ್ಟ ಇರದ ಆಕೆಯ ಮನೋಭಾವವನ್ನು ಕಂಡು ಸಂಪ್ರದಾಯಕ್ಕೆ ಬದ್ಧನಾದ ನಾಯಕ ದಿಗಿಲುಗೊಳ್ಳುತ್ತಾನೆ.

ಮನೆಯವರು ಹಾಗೂ ಸ್ನೇಹಿತರ ಒತ್ತಾಯಕ್ಕೆ ಅದೇ ಹಳೇ ಗಾಡಿಯಲ್ಲಿ ಇನ್ನೊಂದು ಹುಡುಗಿಯನ್ನು ನೋಡಲು ಹೋಗುತ್ತಾನೆ. ಆಕೆಯನ್ನು ಮೆಚ್ಚಿಸಿ ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಕಾರಣಾಂತರಗಳಿಂದ ಆಕೆ ಇನ್ನೊಬ್ಬ ವರ ಕಟ್ಟುವ ತಾಳಿಗೆ ತಲೆಯೊಡ್ಡಬೇಕಾಗುತ್ತದೆ. ಮೊದಲೆರಡು ಪ್ರೇಮಿಗಳನ್ನು ಮದುವೆಯಾಗದ ಸಂದರ್ಭ ಬಂದೊದಗಿದಾಗ ಅಳದ, ನಾಯಕ ಮೂರನೇ ಪ್ರೇಮ ಪ್ರಕರಣದಲ್ಲಿ ತನ್ನ ಪ್ರಿಯತಮೆಯ ಮದುವೆಗೆ ಸಾಕ್ಷಿಯಾಗಿ ನಿಂತು ಅಕ್ಷತೆ ಕಾಳು ಹಾಕಿ ತನಗರಿವಿಲ್ಲದಂತೆ ಮೊದಲ ಬಾರಿ ಅಳುತ್ತಾನೆ.

ಎಂದೂ ಅಳದವನು ಈಗ ಯಾಕೆ ಅತ್ತ ಎಂದು ಪ್ರಶ್ನೆ ಮೂಡುವುದು ಸಹಜ. ಸಿನೆಮಾ ವೀಕ್ಷಿಸುವಾಗ ಹಾಡಿನ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದಕ್ಕೂ ಉತ್ತರ ದೊರೆಯುತ್ತದೆ. ಮೂರನೇ ಹುಡುಗಿಯೊಂದಿಗಿನ ಒಂದು ಹಾಡು, ‘ಕೆರೆಯೇರಿ ಮ್ಯಾಲ್ ಬಂದು ಕುಳಿತುಕೊಂಡ’ ಹಾಡಿನ ಸಾಹಿತ್ಯದಲ್ಲಿ ‘ಒಂದು ಸರಿಯಾದ ದುಃಖ ಇರದಿದ್ರೆ ಕಣ್ಣು ಕೂಡ ತುಂಬೋದಿಲ್ಲ’ ಎನ್ನುವ ಸಾಲು ಬರುತ್ತದೆ. ನಾಯಕ ತಾನು ಹುಟ್ಟಿದ್ದು ದುಃಖದ ವಿಚಾರ ಅಲ್ಲದೇ ಇರುವುದರಿಂದ ಅಳದೇ ಇದ್ದಿರಬಹುದು. ತನ್ನ ಮೊದಲನೇ ಪ್ರೇಮಕ್ಕಿಂತ ತನ್ನ ಮನೆಯವರೇ ಮುಖ್ಯವಾಗಿ ತಾನೇ ಆಗಿ ಆ ಸಂಬಂಧವನ್ನು ಕಡಿದುಕೊಂಡಾಗ ಅಷ್ಟೊಂದು ದುಃಖ ಆಗಿರದೇ ಇರಬಹುದು. ತನ್ನ ಎರಡನೇ ಪ್ರೇಮಿಯೂ ಕೂಡ ಮದುವೆ ಮಾತ್ರ ಆಗಲೊಪ್ಪಲಿಲ್ಲ. ಆದರೆ ದೈಹಿಕ ಸಂಪರ್ಕಕ್ಕೆ ತಯಾರಾಗಿದ್ದಳು. ಪ್ರೀತಿಗೂ ಮದುವೆಗೂ ಯಾವ ಸಂಬಂಧವೂ ಇಲ್ಲ ಅನ್ನುವ ಆಕೆಯ ವಿಚಾರಧಾರೆಯನ್ನು ಒಪ್ಪಲು ನಾಯಕನಿಗೆ ಕಷ್ಟವಾಗಿ ಆಕೆಯನ್ನು ತ್ಯಜಿಸಬೇಕಾಗಿ ಬಂತು. ಇದೂ ಕೂಡ ಅಷ್ಟೊಂದು ದುಃಖ ನೀಡಿರಲಿಕ್ಕಿಲ್ಲ.

ಆದರೆ ಮೂರನೇ ಪ್ರೇಮ ಬಹಳ ಉತ್ಕಟವಾಗಿತ್ತು ಅನ್ನಿಸುತ್ತದೆ. ತನ್ನ ಅಕ್ಕ ಮಾಡಿದ ತಪ್ಪಿಗೆ ಒಂದು ಕಠಿಣ ನಿರ್ಧಾರ ನಾಯಕನ ಮೂರನೇ ಪ್ರೇಮಿ ತೆಗೆದುಕೊಳ್ಳುತ್ತಾಳೆ. ಆ ನಿರ್ಧಾರದಿಂದ ಬೇಸರವಾಗಬಾರದು ಎಂಬ ಕಾರಣ ನಾಯಕನ ಬಳಿ ಹೇಳುತ್ತಾಳೆ. ಆದರೆ ಆ ನಿರ್ಧಾರದಿಂದ ಅತಿ ಹೆಚ್ಚು ನಷ್ಟ ಅನುಭವಿಸುವುದು ಮಾತ್ರ ನಾಯಕ. ನಾಯಕಿಗಾದರೂ ತಕ್ಕ ಮಟ್ಟಿಗೆ ನೆಮ್ಮದಿ ಇದೆ. ಆದರೆ ನಾಯಕನಿಗೆ ಉಳಿದದ್ದು ಬರೀ ದುಃಖ!

ಪ್ರೇಮದ ಸಂಕೇತವಾಗಿ ನಾಯಕ ಹಳೇ ವ್ಯಾನನ್ನು ತನ್ನ ಮೂರನೇ ಪ್ರೇಮಿಯ ಮನೆಯಲ್ಲೇ ಬಿಟ್ಟು ಹೋಗುತ್ತಾನೆ. ತನ್ನ ಮದುವೆ ಆಗಿ ಒಂದು ಮಗು ಹುಟ್ಟಿದ ನಂತರವೂ ತನ್ನ ಎಲ್ಲಾ ಪ್ರೇಮಿಗಳ ಜೊತೆ ನಾಯಕನ ಸಂಪರ್ಕ ಮುಂದುವರಿದಿದ್ದು, ಆತ ತನ್ನ ಮಗುವಿನ ಚಿತ್ರ ಮೂರನೇ ಪ್ರೇಮಿಗೆ ಕಳಿಸಿದಾಗ ಆಕೆ ತನ್ನ ಮನೆಯ ಮನೆಯ ಮುಂದೆ ನಿಲ್ಲಿಸಿದ್ದ ಹಳೆ ವ್ಯಾನನ್ನು ನೋಡಿ ಕಣ್ಣು ತುಂಬಿಕೊಂಡಾಗ ಪ್ರೇಮ, ಮದುವೆಯನ್ನು ಮೀರಿದ ಸಂಬಂಧ ಎನ್ನುವ ಸಂದೇಶ ಸಾರುತ್ತದೆ.

ಕ್ಷಮಿಸಿ, ತಕ್ಕ ಮಟ್ಟಿಗೆ ಕಥೆಯನ್ನು ವಿಸ್ತಾರವಾಗಿ ಹೇಳಬೇಕಾಯಿತು. ಆದರೆ ಮುಗುಳು ನಗೆ ಸಿನೆಮಾದ ಹಾಡನ್ನು ನೀವು ಸರಿಯಾಗಿ ಆಸ್ವಾದಿಸಬೇಕಾದರೆ ಆ ಸಿನೆಮಾವನ್ನು ಒಮ್ಮೆ ನೋಡಲೇಬೇಕು.

One thought on “ಗಂಡಸರು ಅಳಬಾರದು, ಆದರೆ.. (ಮುಗುಳು ನಗೆ ವಿಮರ್ಶೆ-ವಿಕ್ರಂ ನಾಯಕ್ )

Leave a Reply

Top