You are here
Home > ಟ್ರಂಕ್ ಕಾಲ್ > ಚೀನಾದ ಗೆಳೆಯನೊಂದಿಗೆ

ಚೀನಾದ ಗೆಳೆಯನೊಂದಿಗೆ

http://www.gitelesprunelles.be/diwali-essay-for-kids/ ಕುವೈಟಿಗೆ ಬಂದು ಒಂದು ತಿಂಗಳಾಗಿದೆ. ಮೈಯಲ್ಲಿನ ರೋಮ ಉರಿದು ಹೋಗುವಷ್ಟು ಬಿಸಿಲು. ನನ್ನ ದೇಹವನ್ನು ಕುವೈಟಿನ ಉರಿ ಬಿಸಿಲಿಗೆ ಒಡ್ಡುವ ಮುನ್ನ, ಇಂತಹ ಒಂದು ಹವಾಮಾನವನ್ನು ನೋಡೆ ಇಲ್ಲ. ಉಷ್ಣಾಂಶ ೫೦ ಡಿಗ್ರಿ ದಾಟಿದೆ. ಎಲ್ಲಾ ಕಡೆ ಬೀಸುವುದು ಬಿಸಿ ಗಾಳಿಯೇ. AC ಇಲ್ಲದೆ ಅರ್ಧ ಗಂಟೆ ಕಳೆಯುವುದನ್ನು ಯೋಚಿಸಲು ಸಾಧ್ಯವಿಲ್ಲ, ಕಿಟಕಿ ಗಾಜುಗಳಲ್ಲಿ ಬಿಸಿಯೇ ಬಿಸಿ. ಇಂತಹ ಸ್ಥಿತಿಯಲ್ಲೂ ಹಸಿರನ್ನು ಉಳಿಸಿಕೊಳ್ಳಲು ಕುವೈಟ್ ಸರ್ಕಾರ ತೋರುತ್ತಿರುವ ಶ್ರಮ ಶ್ಲಾಗನೀಯ, ದಿನಕ್ಕೆ ಎರಡು ಬಾರಿ ರಸ್ತೆ ಬದಿಯಲ್ಲಿರುವ ಮರಗಳಿಗೆ ಟ್ಯಾಂಕರ್ ನಿಂದ ನೀರುಣಿಸಲಾಗುವುದು. ಕಾವೇರಿಯು ಮನೆ ಮನೆಗೆ ಹರಿದರೂ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಪ್ಪಿದಲ್ಲ. ಆದರೆ ಇಂತಹ ಮರುಭೂಮಿಯಂತಿರುವ ಕುವೈಟ್ ನಲ್ಲಿ ಒಂದು ಬಾರಿಯೂ ನೀರಿನ ಸಮಸ್ಯೆ ಕಂಡುಬಂದಿಲ್ಲ. ಸರ್ಕಾರದ ಇಚ್ಛಾಶಕ್ತಿಗೆ ನನ್ನ ನಮನಗಳು.

ನಾನು ಕಳೆದ ಬಾರಿ ಬಂದಾಗಲೂ, ಚೀನಾದ ಸಹೋದ್ಯೋಗಿಗಳು ನನ್ನನ್ನು ಸೇರಿದ್ದರು. ಅದು ಈ ಬಾರಿಯೂ ಪುನರಾವರ್ತಿಸಿದೆ. ಅಲೆನ್ ಮತ್ತು ಆಂಡಿ  ನಾನು ಬಂದ ದಿನವೇ ಚೀನಾದಿಂದ ಕುವೈಟ್ ಗೆ ಬಂದಿದ್ದರು. ನಾವಿಬ್ಬರೂ ಒಂದೇ ಕಚೇರಿಯಲ್ಲೇ ಕೆಲಸ ಮಾಡಿದರೂ, ಮಾಡುವ ಕೆಲಸಗಳು ಬೇರೆ ಬೇರೆ. ನಾನು ಉಳಿದುಕೊಂಡಿರುವ ಹೋಟೆಲಿನ ಮ್ಯಾನೇಜರ್ ಕೇರಳದವನಾದುದ್ದರಿಂದ, ಅವನಿಗೆ ಹೇಳಿ ನನ್ನ ಪಕ್ಕದ ಎರಡು ಕೋಣೆಯನ್ನು ಇವರಿಗೆ ಸಿಗುವಂತೆ ಮಾಡಿದೆ. ಇಂತಹ ಪ್ರದೇಶದಲ್ಲಿ ಪಕ್ಕದ ಕೋಣೆಯಲ್ಲಿ ಯಾರೋ ಪರಿಚಿತನಿದ್ದಾನೆ ಎನ್ನುವ ಅನುಭವ ಬಹಳ ಖುಷಿಯನ್ನು ಕೊಡುತ್ತದೆ. ನಾನು ಮತ್ತು ಚೀನಾದ ಇಬ್ಬರು ಮಿತ್ರರು ಒಂದೇ ಸಮಯಕ್ಕೆ ತಿಂಡಿ ಮುಗಿಸಿ, ಕಛೇರಿಯಲ್ಲಿ ಕೆಲಸ ಮುಗಿಸಿ, ಒಂದೇ ಸಮಯಕ್ಕೆ ಹೋಟೆಲ್ಲಿಗೆ ವಾಪಸಾಗುತ್ತಿದ್ದೆವು. ಯಾರು ಇಲ್ಲದ ದೇಶದಲ್ಲಿ ನನಗೆ ಒಂದು good company ನೀಡಿದ್ದಾರೆ ಅಲೆನ್ ಮತ್ತು ಆಂಡಿ .

http://www.pedijatrija.org/?online-retail-business-plan-template ಆಂಡಿ  ತುಂಬಾ ಪ್ರಶ್ನೆಗಳು ಕೇಳುವ, ಕೆದುಕುವ ಸ್ವಭಾವದವನು. ನನ್ನ ಹಾಗೆ ! ನಾವಿಬ್ಬರೂ ಗಂಟೆಗಟ್ಟಲೆ ಹೋಟೆಲ್ಲಿನ ಕೋಣೆಯಲ್ಲಿ ತಮ್ಮ ತಮ್ಮ ದೇಶದ ಬಗ್ಗೆ ಹರಟುತ್ತಿದ್ದೆವು. ದಿನ ಕಳೆದಂತೆ ನಮ್ಮ ಸ್ನೇಹ ಮತ್ತೂ ಬಲವಾಯಿತು. ನನ್ನ ಮತ್ತು ಆಂಡಿ  ನಡುವಿನ ಸಮಾನ ಮನಸ್ಸುಗಳು ಅದಕ್ಕೆ ಸಾಕ್ಷಿ. ನಾನು ಹೇಗೆ ನನ್ನ ಹುಟ್ಟೂರು ಬಿಟ್ಟು ಓದಲು ಮತ್ತು ಕೆಲಸಕ್ಕೆ ಬೆಂಗಳೂರು ಸೇರಿದೆನೋ, ಹಾಗೆ ಆಂಡಿ  ತನ್ನ ಹುಟ್ಟೂರು ಬಿಟ್ಟು “ಶ್ರಿಂಜೆನ್” ಎನ್ನುವ ಚೀನಾದ “ಬೆಂಗಳೂರಿಗೆ” ಸೇರಿದವ. ನನ್ನ ಹಾಗೆ ಬಾಡಿಗೆ ಮನೆಯಲ್ಲಿ ವಾಸವಿರುವ ಚಿಕ್ಕ ಕಣ್ಣ, ದೊಡ್ಡ ಕನಸ್ಸಿನ ಹುಡುಗ. ನನ್ನ ಹುಟ್ಟೂರು ಮತ್ತು ಬೆಂಗಳೂರಿಗೂ ೪೦೦ ಕಿಮಿ ದೂರವಿರುವ ಹಾಗೆ, ಅವನ ಊರಿಗೂ ಹಾಗೆ. ಆದರೆ ಚೀನಾದ ಪ್ರಗತಿ ಹಾಗೂ ಸಂಪರ್ಕ ಸಾಧನೆಗಳು ಎಷ್ಟು ಮುಂದುವರಿದಿದೆ ಎಂದರೆ, ತನ್ನ ಹೆತ್ತವರನ್ನು ಆಂಡೀ ಕೇವಲ ೪ ಗಂಟೆಗಳಲ್ಲಿ ನೋಡಬಲ್ಲ. “ಬುಲ್ಲೆಟ್” ಟ್ರೈನ್ ಆಧುನಿಕತೆಯ ಅದ್ಬುತ ಇದು.

http://www.sodascore.com/i-need-help-wrting-a-personal-essay/ i need help wrting a personal essay ನಾವಿಬ್ಬರೂ ಮಾತನಾಡಿದ ಹಲವು ವಿಷಯಗಳಲ್ಲಿ ಒಂದನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ. ಆಂಡಿ  ಭಾರತದ ಕಲ್ಪನೆಯ ಬಗ್ಗೆ ನನ್ನ ಬಳಿ ಮಾತನಾಡುತ್ತಿರುವಾಗ, “ಭಾರತದ ಜಾತಿ ಪದ್ದತಿಯ” ಬಗ್ಗೆ ಪ್ರಶ್ನೆ ಕೇಳಿದ. ಅವನ ಮಾತುಗಳು ಹೀಗಿದ್ದವು. “ಭಾರತದಲ್ಲಿ ಯಾರನ್ನೂ ಸಮಾನರೆಂದು ನೋಡುವ ಭಾವನೆಯಿಲ್ಲ, ಅಲ್ಲಿ ಮೇಲ್ಜಾತಿ ಹಾಗೂ ಕೆಳಜಾತಿ ಇದೆ ಅಲ್ವಾ. ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟುವುದಿಲ್ಲ” ಎಂದು ಕೇಳಿದ. ನಾನು ನಿಜವಾಗಿಯೂ ಕದಲಿಹೋದೆ. ಭಾರತದ ಬಗ್ಗೆ ಹೀಗೆಂದ ಮೊದಲ ವಿದೇಶಿ ಮಿತ್ರ ಇವನೆ, ಉಳಿದವರೆಲ್ಲಾ ಹೊಗಳಿದ್ದೇ ಜಾಸ್ತಿ ಅಥವಾ ಎಲ್ಲರೂ ಸುಳ್ಳು ಹೇಳುತ್ತಿದ್ದರ ಎನ್ನುವಷ್ಟು ಕದಲಿಹೋದೆ. ಆದರೆ ಅವನ ಮಾತುಗಳನ್ನು ಒಪ್ಪಲಿಲ್ಲ. ಇದೆ ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತನಾಡಿದೆ. ಭಾರತದ ರಾಜಕೀಯದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ, ಸಾಮಾಜಿಕ ಜೀವನದಲ್ಲಿ ಇದರ ಪ್ರಾಮುಖ್ಯತೆ ವಿವರಿಸಿದೆ. ಆಮೇಲೆ ಹೆಚ್ಚುತ್ತಿರುವ ವಿದ್ಯಾಭ್ಯಾಸ ಹಾಗೂ ಕಮ್ಮಿ ಆಗುತ್ತಿರುವ ಅನಕ್ಷರತೆಯಿಂದ ಭಾರತ ಈ ಸಮಸ್ಯೆಯಿಂದ ಹೊರಬಂದಿದೆ ಎಂದು ಸಮರ್ತವಾಗಿ ನನ್ನ ವಾದ ಮಂಡಿಸಿ ಗೆದ್ದೆ. “ಈ ಪ್ರಶ್ನೆಯ ಮೂಲ, ಚೀನಾದ ಇತಿಹಾಸದ ಪುಸ್ತಕದಲ್ಲಿರುವ ಭಾರತದ ವಿಷಯಗಳು” ಎಂದು ಆಮೇಲೆ ತಿಳಿಯಿತು.

http://tyeshiea.com/help-in-writing-research-papers/ help in writing research papers ಹಾಗೆ ಬೆಳೆದ ಸ್ನೇಹದಿಂದ, ನನ್ನ ಭಾರತೀಯ ಊಟದ ಅಥಿತಿಯಾಗಿ ಒಂದು ದಿನ ಆಂಡಿ  ಮತ್ತು ಅಲೆನ್  ಅನ್ನು ಕರೆದೆ. ಅವರಿಗೆ ಅನ್ನ, ಸಾರು ಹಾಗೂ ಮೀನು ಎಲ್ಲಾ ಭಾರತೀಯ ಶೈಲಿಯಲ್ಲಿ ಮಾಡಿ ಬಡಿಸಿದೆ. ಆಂಡಿ  was very comfortable. ಆಂಡಿ  ಅದೇ ದಿನ “ಬೀಜಿಂಗ್ ಒಪೆರಾ” ಬಗ್ಗೆ ಮಾತನಾಡಿದ. ನಮ್ಮ ಯಕ್ಷಗಾನದ ವೇಷ ಭೂಷಣದ ಹಾಗೆ ಅವರು ಕೂಡ ತಯಾರಾಗಿ ನಟಿಸುವ ಕಲೆ ಅದು. ನಾನು ಅವನಿಗೆ ಯಕ್ಷಗಾನದ ವೀಡಿಯೋಗಳನ್ನು ತೋರಿಸಿದೆ. ಅವನಿಗೂ ಅದು ಇಷ್ಟವಾಯಿತು.

Service Delivery Essay ಆಂಡಿ  ಚೀನಾಕ್ಕೆ ಮರಳುವ ಒಂದು ವಾರದ ಹಿಂದೆ, ಅವನ ಸ್ನೇಹಿತೆಯೊಬ್ಬಳು, ಶ್ರಿಂಜೆನ್ ಬಿಟ್ಟು ಬೇರೆ ಊರಿಗೆ ಹೊರಟು ನಿಂತಿದ್ದಳು. ಬೆಳಗ್ಗಿನ ತಿಂಡಿ ತಿನ್ನುವಾಗ ಅವಳ ಕರೆ ಬಂತು, ಆಂಡಿ  ಮುರಿದು ಬಿದ್ದ. ಒಂದೊಮ್ಮೆ ನೀವು ವಿದೇಶದಲ್ಲಿದ್ದಾಗ ಈ ಚಿಕ್ಕ ಚಿಕ್ಕ ವಿಷಯಗಳೂ ಕೂಡ ತುಂಬಾ ಪರಿಣಾಮ ಬೀರುತ್ತದೆ. ಅವನ ಚಿಕ್ಕ ಕಣ್ಣುಗಳು ಒದ್ದೆಯಾದವು. ಅವತ್ತು ನಾನು ದಿನವಿಡೀ ಅವನ ಬಳಿಯೇ ಇದ್ದೇ. ಅವನಿಗೆ ಆದ ನೋವನ್ನು ನಾನು ಗ್ರಹಿಸಬಲ್ಲೆ. ಕೆಲವು ದಿನಗಳು ಕಳೆದವು ಆಂಡಿಗೆ, ಈ ನೋವಿನಿಂದ ವಾಪಸಾಗಲು. ಅಲ್ಲಿಗೆ ಅವನು ಚೀನಾಕ್ಕೆ ಮರಳುವ ಸಮಯ ಬಂತು. ಈ ತರಹದ ನೂರಾರು ವಿಷಯಗಳ ಬಗ್ಗೆ ಚರ್ಚೆ ಮತ್ತು ಅವನ ನೋವಿನಲ್ಲಿ ನಾನಿದ್ದ ಪರಿ, ನಮ್ಮಿಬ್ಬರ  ಸ್ನೇಹಕ್ಕೆ ಭದ್ರ ಬುನಾದಿಯಾಯಿತು. ಏರ್‌ಪೋರ್ಟ್ ನಿಂದ ಮಾಡಿದ್ದ ಕೊನೆಯ ವೀಡಿಯೋ ಇನ್ನೂ ಹಸಿರಾಗಿದೆ.

go to link ಆಂಡಿ  ಚೀನಾಕ್ಕೆ ತೆರಳಿ ಒಂದು ವಾರ ಕಳೆದಿದೆ. ಪಕ್ಕದ ಕೋಣೆ ವಾರದಿಂದ ಖಾಲಿ. ಸಹೋದ್ಯೋಗಿಯ ಮನೆಗೆ ಊಟಕ್ಕೆ ತೆರಳಿದ್ದೆ. ಮರಳಿ ಬರುವಾಗ ಹೊರಗೆ ಉರಿ ಗಾಳಿ, ಒಳಗೆ ತಣ್ಣಗಿನ AC, FM ನ ಕಿವಿ ಹಿಂಡಿದರೆ ಮೊಳಗುತ್ತಿದ್ದದ್ದು, ಅದೇ ಆಂಡಿ  ಹಾಡುತ್ತಿದ್ದ ಇಂಗ್ಲೀಷ್ ಹಾಡೊಂದು. Will miss him.

2 thoughts on “ಚೀನಾದ ಗೆಳೆಯನೊಂದಿಗೆ

Leave a Reply

Top