You are here
Home > ಪುಟ ೪ > ದೇವಮಾನವರು ಮತ್ತವರ ಭಕ್ತ ವೃಂದ – ಸುಧಿ ಆಚಾರ್ಯ

ದೇವಮಾನವರು ಮತ್ತವರ ಭಕ್ತ ವೃಂದ – ಸುಧಿ ಆಚಾರ್ಯ

http://www.bonne-nouvelle.org/villanova-university-masters-thesis-2002/ ಅಲ್ಲಾ, ಮಾನವ ಮಾನವನಾಗೋದು ಬಿಟ್ಟು ದೇವ ಮಾನವನಾಗಲು ಏಕೆ ಹೊರಡುತ್ತಾನೆ? ನಾನೊಬ್ಬ ಪವಾಡ ಪುರುಷ, ದೇವಮಾನವನೆಂದು ಊರು ತುಂಬಾ ಹೇಳುತ್ತಾ ಬರುವಾಗ ಹಿಡಿದು ಸೀದಾ ಅವನನ್ನು ಒಬ್ಬರು ಒಳ್ಳೇ ಆಪ್ತಸಮಾಲೋಚಕರ ಮುಖೇ‌ನ ಕೌನ್ಸಿಲಿಂಗ್ ಮಾಡಿಸುವುದೋ, ಇಲ್ಲ ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸುವುದೋ ಬಿಟ್ಟು ತಲೆ ಮೇಲೆ ಹೊತ್ತು ಏಕೆ ನಡೆಸುತ್ತಾರೆ ಅನ್ನುವುದೇ ವಿಪರ್ಯಾಸ.

http://timorworld.com/help-with-computer-science-homework/ ಈ ಸ್ವಯಂ ಘೋಷಿತ ದೇವಮಾನವರದ್ದೆಲ್ಲಾ ಕಥೆ ಕೊನೆಗೆ ಶೋಚನೀಯ ಸ್ಥಿತಿ ತಲುಪಿದ ಉದಾಹರಣೆಗಳೇ ನಮ್ಮ ಎದುರು ಇರೋದನ್ನು ಅರಿತಿದ್ದರೂ ಸಹ ಯಾಕೆ ಕಾಲ ಕಾಲಕ್ಕೆ ಸ್ವಯಂ ಘೋಷಿತ ದೇವಮಾನವರು ಅಮಾಯಕ ಮುಗ್ಧ ಜನರ ಭಾವನೆಗಳ ಜೊತೆ ಆಟ ಆಡಿ  ಅವರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಕೋಟ್ಯಾಂತರ ರೂಪಾಯಿ ದೋಚಿ ಐಷಾರಾಮಿ ಜೀವನ ಮಾಡಲು ಅವಕಾಶ ಮಾಡಿ ಕೊಡುತ್ತಾರೆ? ಈ ಪವಾಡ ಪುರುಷರ ಬಲೆಗೆ ಬೀಳುವವರಲ್ಲಿ ವಿದ್ಯಾವಂತರೂ, ಶ್ರೀಮಂತರೂ ಇದ್ದಾರೆಂದರೆ.. ಅದೆಷ್ಟರ ಮಟ್ಟಿಗೆ ಈ ದೇವ ಮಾನವರು ಬ್ರೈನ್ ವಾಷ್ ಮಾಡುತ್ತಾರೆ ಅನ್ನೋದು ಸೋಜಿಗದ ವಿಷಯವೇ ಸರಿ.

ಅನೇಕ ಸಾದು, ಸಂತ, ಸನ್ಯಾಸಿಗಳು ತೀರಾ ಸಾಮಾನ್ಯರಲ್ಲಿ ಸಾಮಾನ್ಯ ಜೀವನ ಸಾಗಿಸಿ, ಜನರಿಗೆ ಸದ್ಗುಣಗಳ ಉಪದೇಶಿಸಿದ, ಎಂತೆಂತಹ ಮಹಾ ಮಹಿಮರು ನೆಲೆಸಿದ್ದ  ನಮ್ಮೀ ನೆಲದಲ್ಲಿ  ವೈಭವೋಪೇತ ಜೀವನವ ಸಾಗಿಸುವ, ಕಾಮವಾಂಛೆಗಳನ್ನೇ ಮೈಯೆಲ್ಲಾ ತುಂಬಿಕೊಂಡ ಕೆಲವು ಸೋ ಕಾಲ್ಡ್ ದೇವಮಾನವರನ್ನು ಜನರೇಕೆ ಚಿಗುರುವ ಮೊದಲೇ ಚಿವುಟಿ ಆಟ ನಿಲ್ಲಿಸುವುದಿಲ್ಲ? ಜಾಸ್ತಿ ಹಿಂದೆ ಹೋಗುವುದು ಬೇಡ ಇದೇ ಒಂದೆರಡು ದಶಕಗಳಲ್ಲಿ ಕುಖ್ಯಾತಿ ಗಳಿಸಿದ ದೇವಮಾನವರನ್ನು ಹೆಸರಿಸುವುದಾದರೆ ನಮ್ಮ ಕಣ್ಣೆದುರಿಗೆ ಬರುವವರು ರಾಮ್ ಪಾಲ್, ಅಸ್ಸಾರಾಮ್ ಬಾಪು, ಸ್ವಾಮಿ ನಿತ್ಯಾನಂದ, ಚಂದ್ರಸ್ವಾಮಿ, ಸ್ವಾಮಿ ಸದಾಚಾರಿ, ಸ್ವಾಮಿ ಪ್ರೇಮಾನಂದ, ರಾಧಾ ಮಾ, ಇವುಗಳೆಲ್ಲವುಗಳ ಜೊತೆ ಈವಾಗಿನ ಬಿಸಿ ಬಿಸಿ ಸುದ್ದಿ ಗುರ್ಮೀತ್ ರಾಮ್ ರಹೀಮ್ ಸಿಂಗ್. ಈತನ ಹೆಸರು ಕೇಳಿದಾಕ್ಷಣ ಇವನೊಬ್ಬ ಹಿಂದುವಾ, ಕ್ರಿಶ್ಚಿಯನ್ ನಾ, ಮುಸ್ಲಿಂ ನಾ ಇಲ್ಲಾ ಸಿಖ್ ಪಂಥಕ್ಕೆ ಸೇರಿದವನಾ ಅನ್ನೋ ಅನುಮಾನ ಬರುವುದು ಸಹಜ ಇದು ಅವನಿಗವನೇ ನಾಮಕರಣ ಮಾಡಿಕೊಂಡ ಹೆಸರು. ಎಷ್ಟಾದರು ಸ್ವಯಂ ಘೋಷಿತ ದೇವಮಾನವನಲ್ಲವಾ ಹೆಸರೂ ಸ್ಟ್ರಾಂಗ್ ಇದ್ದರೆ ಮಾತ್ರವೇ ಇವನಿಗೆ ಪಬ್ಲಿಸಿಟಿ ಸಿಗೋದು ಎಂದರಿತ ಮಹಾ ಪ್ರಚಂಡನೀತ. ಅಂದ್ಹಾಗೆ ಇವನದ್ದು ಮೆಟ್ರಿಕ್ ತನಕದ ವಿದ್ಯಾಭ್ಯಾಸವಾದರೂ ಅನೇಕಾನೇಕ ಡಾಕ್ಟರ್, ಎಂಜಿನಿಯರ್ಸ್ ಗಳನ್ನೂ ತನ್ನ ಅನುಯಾಯಿಗಳನ್ನಾಗಿಸಿಕೊಂಡ ಮಹಾನ್ ಚಾಣಾಕ್ಷ. ಈತ ಸಮಾಜಕ್ಕೆ ಒಂದು ಕಳಂಕವಾ ಎಂದಂದುಕೊಂಡರೆ ಪೂರ್ತಿ ನಿಜ ಅಲ್ಲ.. ಗಿನ್ನೀಸ್ ರೆಕಾರ್ಡ್ ಸೇರಿದ ರಕ್ತದಾನ ಶಿಬಿರ, ಈತನ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಈತನ ಸಮಾಜ ಮುಖಿ ಕೆಲಸಗಳನ್ನು ತೋರಿಸುತ್ತವೆ. ಆದರೆ ಇದೆಲ್ಲವನ್ನೂ ಒಬ್ಬ ಸಮಾಜಸೇವಕನಾಗಿ ಮಾಡಿಕೊಂಡು ಹೋಗಿದ್ದರೆ, ತನ್ನದೇ ನಿರ್ದೇಶನ, ನಿರ್ಮಾಣ, ಸಂಗೀತ, ಸಾಹಿತ್ಯ, ಗಾಯನ, ನಟನೆಯ ಸಿನಿಮಾ, ಆಲ್ಬಮ್ ಗಳನ್ನು ಮಾಡಿಕೊಂಡಿದ್ದರೆ, ಇಲ್ಲ ಕೊಂಡುಕೊಂಡ ಎಕರೆಗಟ್ಟಲೆ ಕೃಷಿ ಭೂಮಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದರೆ ತಾಪತ್ರಯ ಇರಲಿಲ್ಲ, ಆದರೆ ಈತ ಸಿಕ್ಕಿ ಬಿದ್ದಿದ್ದು ತನ್ನದೇ ಸಾಧ್ವಿ ಒಬ್ಬಳ ಅನಾಮದೇಯ ಪತ್ರದ ಮುಖೇನ. ಒಬ್ಬ ಪುಟ್ಬಾಲ್ ಗೋಲ್ ಕೀಪರ್  ಬಿಡುವ ಒಂದೇ ಒಂದು ಗೋಲ್ ಮೊದಲು ತಡೆದ ಎಷ್ಟೋ ಗೋಲ್ ಗಳನ್ನು ಮರೆಮಾಚಿ ಜನರ ಮನಸ್ಸಿನಲ್ಲಿ  ಖಳನಾಯಕನ ಸ್ಥಾನವನ್ನಷ್ಟೇ ಕೊಡುವುದು. ಆಕೆ ಆಗಿನ ಮಾನ್ಯ ಪ್ರಧಾನಿ ವಾಜಪೇಯಿಗೆ ಬರೆದ ಮೂರು ಪುಟಗಳ ಸಮಗ್ರ ಈತನ ಕಾಮ ವೃತ್ತಾಂತ ಇಂದು ಈತನ ಆಶ್ರಮದಲ್ಲೇ ನೀಡಿದ ತೀರ್ಪಿನಿಂದ ಕುಸಿದು ಬೀಳುವಂತಾದದ್ದು.. ಈತನ ಮೇಲೆ ೨೪ ಲೈಂಗಿಕ ದೌರ್ಜನ್ಯ, ಕೊಲೆ ಯತ್ನ, ಕೊಲೆ, ೪೦೦ ಪುರುಷ ಅನುಯಾಯಿಗಳ ಪುರುಷತ್ವ ಹರಣ ಮಾಡಿದ ಮತ್ತು ಇತ್ಯಾದಿ ಪ್ರತ್ಯೇಕ ಪ್ರಕರಣಗಳಿದ್ದರೂ ಸದ್ಯ ತೀರ್ಪು ಬಂದದ್ದು ಇಬ್ಬರು ಸಾಧ್ವಿಗಳ ಮೇಲೆ ಆದ ಅತ್ಯಾಚಾರಕ್ಕೆ ೧೫ ವರ್ಷಗಳ ಸುದೀರ್ಘ ವಿಚಾರಣೆ ನಡೆದು ಈತ ದೋಷಿ ಎಂದು ಸಾಬೀತಾಗಿ ೧೦ ವರ್ಷ ಮತ್ತೆ ನಂತರದ ೧೦ ವರ್ಷಗಳ ಕಾಲ ಸೆರೆವಾಸ. ಸ್ವತಃ ನ್ಯಾಯಾಧೀಶರೇ ರೋಹ್ಟಕ್ ಜೈಲಿನ ಕೈದಿ ಸಂಖ್ಯೆ ೧೯೯೭ ಆಗಿರುವ ಈತನ ಬಳಿಗೇ ಹೋಗಿ ತೀರ್ಪು ನೀಡುತ್ತಾರೆಂದರೆ ಈತನ ವರ್ಚಸ್ಸು ಏನೆಂದು ತಿಳಿಯಬಹುದು.

ಇವನ ಇತಿಹಾಸ ಕೆದಕುವುದಾದರೆ ಈತ ಜನಿಸಿದ್ದು ೧೯೬೭ ರ ಅಗಸ್ಟ್ ೧೫ ರಂದು ರಾಜಸ್ಥಾನದ ಗಂಗಾನಗರ ತಾಲ್ಲೂಕಿನ ಒಂದು ಹಳ್ಳಿಯಲ್ಲಿ. ೧೦ ಲಕ್ಷ ಅನುಯಾಯಿಗಳನ್ನು ಹೊಂದಿದ್ದ  ಡೇರಾ ಸಚ್ಚಾ ಸೌದ ವನ್ನು ಈತ ೧೯೯೦ ರಲ್ಲಿ ತನ್ನ ೨೩ರ ಹರೆಯದಲ್ಲೇ ಮುಖ್ಯಸ್ಥನಾದ ಬಳಿಕ ಇದೀಗ ಇದರ ಅನುಯಾಯಿಗಳ ಸಂಖ್ಯೆ ೫ ಕೋಟಿಗೆ ತಗೆದು ಕೊಂಡು ಹೋದದ್ದು ಈತನ ಹೆಗ್ಗಳಿಕೆ. ಸಿರ್ಸಾ ದಲ್ಲಿ ಮುಖ್ಯ ಆಶ್ರಮ ಹೊಂದಿರುವ ಡೇರಾ ಸಚ್ಚಾ ಸೌದಕ್ಕೆ ವಿಶ್ವದೆಲ್ಲೆಡೆ ೨೫೦ ಶಾಖೆಗಳಿವೆ. ಶೋಕಿಲಾಲ, ಹೆಣ್ಣು ಬಾಕನಾಗಿದ್ದ ಈತನಿಗೆ ಸಾಧ್ವಿಗಳೇ ಇವನ ಅಂಗ ರಕ್ಷಕರು.. ಈತ ತನ್ನ ಗುಹೆಯಲ್ಲಿ ನಡೆಸುವ ಅತ್ಯಾಚಾರಗಳಿಗೆ ಪಿತಾಜೀ ಮಾಫೀ ಅನ್ನೋ ಕೋಡ್ವರ್ಡ್ ಇಡಲಾಗಿತ್ತು. ಹನಿಪ್ರೀತ್ ಎನ್ನುವವಳನ್ನು ದತ್ತು ಪುತ್ರಿಯನ್ನಾಗಿ ಪಡೆದು  ಆಕೆಯನ್ನೂ ಸಹ ತನ್ನ ಕಾಮತೃ಼ಷೆಗೆ ಬಳಸಿಕೊಳ್ಳುತ್ತಾನೆ ಎಂದರೆ ಅದಿನ್ನೆಂತ ವಿಷಜಂತು ಆಗಿರಬಹುದು ಈತ.

go here ಭಾರತದ ರೂಪಾಯಿಗೆ ಇವನ ಆಶ್ರಮದಲ್ಲಿ ನಯಾಪೈಸೆಯ ಬೆಲೆ ಇಲ್ಲ ಇವನದ್ದೇ ಟಂಕಸಾಲೆಯಲ್ಲಿ ಅಚ್ಚಾಗುವ ನೋಟುಗಳು ಟೋಕನ್ ಗಳೇ ವ್ಯವಹಾರಕ್ಕೆ ಬಳಕೆಗಳು ಇವನ ಅನುಯಾಯಿಗಳೇ ಇವನ ಕಾರ್ಖಾನೆಗಳ ಉತ್ಪಾದನಾ ಸಾಮಗ್ರಿಗಳ ಗ್ರಾಹಕರು ಮತ್ತು ಮಾರಾಟಗಾರರು. ಸಾವಿರಾರು ಕೋಟಿ ಆಸ್ತಿಯ ಒಡೆಯನಾದ ನಮನ ಈತನ ಸರಕಾರವನ್ನೇ ಕೊಂಡುಕೊಳ್ಳುವಷ್ಟು ಪ್ರಭಾವಿ. ಲಕ್ಷಕ್ಕೂ ಅಧಿಕ ಸಂಖ್ಯೆಯ ಇವನ ಖಾಸಗಿ ಸೇನೆಗೆ ಅಕ್ರಮ ಶಸ್ತ್ರಾಸ್ತ್ರ ತರಬೇತಿ ನೀಡುವ ಗುರುತರ ಆರೋಪವೂ ಇದೆ.

follow url ರಾಮ್ ರಹೀಮ್ ಗುರ್ಮೀತ್ ನನ್ನು ಬಂಧಿಸಿದ ತರುವಾಯ

integrated business plan ನಿಷೇದಾಜ್ಙೆಯ ನಡುವೆಯೂ ನುಗ್ಗಿಬಂದ ಈತನ ಭಕ್ತ ಗಣ ಸಮೂಹ ನಡೆಸಿದ ದಾಂದಲೆಗೆ ೩೬ ಜನರು ಸತ್ತು ೩೦೦ ಕ್ಕೂ ಅಧಿಕ ಮಂದಿಗೆ ಗಾಯವಾಗಿ ಕೋಟಿಗಟ್ಟಲೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಯಿತಲ್ಲ. ಇದಕ್ಕೆಲ್ಲ ಯಾರು ಜವಾಬ್ದಾರರು? ಯಾವನೋ ಒಬ್ಬ ತನ್ನನ್ನು ತಾನು ಪವಾಡ ಪುರುಷ, ದೇವಮಾನವನೆಂದರೆ ಆತನ ಬೆಂಬಲಕ್ಕೆ ನಿಲ್ಲುತ್ತಾರಲ್ಲ ಕೆಲವರು ಅವರಿಗೆ ಸ್ವಲ್ಪವೂ ಸ್ವಂತ ಬುದ್ದಿ ಇರುದಿಲ್ಲವಾ?

ಕೊನೆಯದಾಗಿ:

ದೇವಮಾನವ, ಪವಾಡ ಪುರುಷ ಎನ್ನುವವರನ್ನು ಕುರುಡಾಗಿ ನಂಬುವುದರ ಮೊದಲು ಅವರ ಪೂರ್ವಾಪರ ಇತಿಹಾಸ ತಿಳಿದುಕೊಳ್ಳುವುದು ಒಳಿತು. ಈ ಜಗತ್ತಿನಲ್ಲಿ ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೋ ಅಲ್ಲಿಯ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ.

Leave a Reply

Top