You are here
Home > ಪುಟ ೩ > ನಾವೆಷ್ಟು ಬಾರಿ ಅವರಾಗಿದ್ದೇವೆ – ಪಾರ್ವತೀಸುತ

ನಾವೆಷ್ಟು ಬಾರಿ ಅವರಾಗಿದ್ದೇವೆ – ಪಾರ್ವತೀಸುತ

go to site ನಿಮಗೆ ಅವರು ಗೊತ್ತಾ?

ಅಂತವರು ಖಂಡಿತ ನಿಮ್ಮ ಆಚೆ ಈಚೆ ಇರುವವರೇ. ಖಂಡಿತ ನಮ್ಮ ನಿಮ್ಮಂತೇ ಮನುಷ್ಯರು. ನಮ್ಮ ಹಾಗೇ ಅವರು ಕೂಡ ಪ್ರತಿದಿನ ಅಜಮಾಸು 146 ಗ್ರಾಂ ಅಕ್ಕಿಯನ್ನ ಸೇವಿಸುವವರೇ. ನಮ್ಮ ನಿಮ್ಮ ಹಾಗೆ ರಾಜಕಾರಣಿಗಳ ಬಗ್ಗೆ ತಮ್ಮ ರೋಷವನ್ನ ವ್ಯಕ್ತಪಡಿಸುವವರೇ. ನಮ್ಮ ನಡುವೇ ಇರುವವರೇ! ಆದರೆ ಕೊಂಚಮಟ್ಟಿಗೆ ವಿಭಿನ್ನವಾಗಿರುವವರು!
ಕಾಲೆಳೆಯುವ ಕೆಟ್ಟ ಗುಣದವರು!

ಅದ್ಯಾಕೋ ಗೊತ್ತಿಲ್ಲ. ಬಯಲಿನ ಮಾವಿನಮರದ ಹಣ್ಣು ಅವರಿಗೆ ಸಿಗದಿದ್ದರೂ ಚಿಂತೆಯಿಲ್ಲ, ನಿಮಗೆ ಸಿಕ್ಕಿತೋ, ಅವರಿಗೆ ಧಿಮಿ_ಧಿಮಿ ಶುರು. ಸುಂದರವಾಗಿ ಅರಳಿದ ಹೂ ಅವರ ಮುಡಿಗೇ ಸೇರಬೇಕು. ಸೇರದಿದ್ದರೂ ಚಿಂತೆಯಿಲ್ಲ ನಿಮ್ಮ ಮುಡಿಗಂತೂ ಏರಬಾರದು. ಏರಿದರೆ ಆ ಗಿಡವನ್ನೇ ಕಡಿಯಬಯಸುವವರು. ದಾರಿಯಲ್ಲಿ ಹೋಗುವಾಗ ಅವರಿಗೆ ಮಾತ್ರ 2 ರೂಪಾಯಿಯ ನಾಣ್ಯ ಸಿಗಬೇಕು. ಸಂಜೆಯ ವೇಳೆಯಲ್ಲಿ ಸಂತೆಗೆ ಹೋದಾಗ ಅವರಿಗೆ ಮಾತ್ರ ತರಕಾರಿ ಅಂಗಡಿಯವನು 3 ಹೆಚ್ಚಿಗೆ ಟೊಮ್ಯಾಟೊ ಕೊಡಬೇಕು. ಒಂದೊಮ್ಮೆ ನಿಮಗೆ ಸಿಕ್ಕಿತೋ, ಅವರಿಗೆ ಧಿಮಿ_ಧಿಮಿ! ಮೈಯೆಲ್ಲಾ ಉರಿ ಶುರುವಾಗುತ್ತದೆ. ಇವನನ್ನು ಹೆಂಗಾದರೂ ಎಳೆದು ಹಾಕಬೇಕು ಅನ್ನುತ್ತಾರೆ! ಕಾಲೆಳೆಯಲು ಶುರು ಮಾಡುತ್ತಾರೆ.

watch ಅದರಲ್ಲೂ ಕೆಲವರಿರುತ್ತಾರೆ. ಸದಾ ಬಗ್ಗಿಕೊಂಡಿರುತ್ತಾರೆ. ನೋಡಿದರೆ ನಮ್ಮ ಪ್ಯಾಂಟಿನ ಕೊಳೆಯನ್ನು ಒರೆಸುವ ಮುಖೇನ ನಮಗೆ ಸಹಾಯ ಮಾಡಿದ ಹಾಗೆ ಕಾಣಿಸುತ್ತಾರೆ. ಆದರೆ ಎಲ್ಲಿ ಅವಕಾಶ ಸಿಕ್ಕಿತೋ, ಅಲ್ಲಿಯೇ ಕಾಲೆಳೆಯುತ್ತಾರೆ. ತನಗೆ ಒಳ್ಳೆಯ ಕಾಲೇಜು ಸಿಗದಿದ್ದರೂ ಚಿಂತೆಯಿಲ್ಲ ‘ಹೇಗಾದರೂ ಮಾಡಿ’ ಪರರಿಗೆ ಒಳ್ಳೆಯ ಕಾಲೇಜು ಸಿಗಬಾರದು. ನನ್ನ ಪ್ರಕಾರ ಅವರ ಜೀವನದ ಮುಕ್ಕಾಲು ಭಾಗ ಬೇರೆಯವರ ಮಾರ್ಕ್ಸು ಕೇಳುವುದರಲ್ಲಿ, ಬೇರೆಯವರ ಜೊತೆ ತನ್ನನ್ನು ಹೋಲಿಸುವುದರಲ್ಲಿ, ಬೇರೆಯವರ ಕುರಿತಾದ ಆಲೋಚನೆಗಳಿಗೆ ಮೀಸಲಿಟ್ಟಿರುತ್ತಾರೆ. ಉಪದೇಶವನ್ನು ಕೊಡುವಷ್ಟು ಜೀವನಾನುಭವ ಖಂಡಿತ ನನಗಿಲ್ಲ. ಆದರೆ ಈ ನಡುವೆ ನಾವೆಲ್ಲ ಕೇಳಿಕೊಳ್ಳಬೇಕಾದ ಅತ್ಯಂತ ಅಗತ್ಯವಾದ ಪ್ರಶ್ನೆಯೆಂದರೆ:

source link ನಾವೆಲ್ಲ ಎಷ್ಟು ಬಾರಿ ‘ಅವರಾಗಿದ್ದೇವೆ?’ .

Top