You are here
Home > ಪುಟ ೧ > ನಿರ್ಧಯಿ – ಪ್ರದೀಪ್ ನಾಗರಾಜ್

ನಿರ್ಧಯಿ – ಪ್ರದೀಪ್ ನಾಗರಾಜ್

ಯಾಕೋ ಮನೆಯಿಂದ ಹೊರಡುವಾಗಲೇ ಮನಸ್ಸು ಕೊಂಚ ಭಾರವಾಗಿತ್ತು ,ಆಫೀಸಿಗೆ ತಡವಾಗೇ ಪ್ರವೇಶಿಸಿದೆ .ಬ್ಯಾಗ್ನ್ನು ಟೇಬಲ್ ಮೇಲಿಟ್ಟು ದಣಿವಾರಿಸಿಕೊಂಡೆ ,ಸೌಮ್ಯ ನನ್ನನೇ ಗಮನಿಸುತಿದ್ದಳು ,ಅವಳೆಡೆಗೆ ತಿರುಗಿ ಒಂದು ಒಂದು ಕಿರುನಗೆ ಬೀರಿದೆ. ಮನಸ್ಸಿನಲ್ಲಿ ಯಾಕೋ ಮೋಡ ಕವಿದಂತಾಗುತಿತ್ತು ,ಟೇಬಲ್ ಮೇಲಿಟ್ಟಿದ್ದ ಬ್ಯಾಗು ನಡುಗಲಾರಂಭಿಸಿತು ,ಬ್ಯಾಗಿನೊಳಗಿದ್ದ ಮೊಬೈಲನ್ನು ಕೈಗೆತ್ತಿಕೊಂಡೆ ಅಮ್ಮ ಕರೆ ಮಾಡುತಿದ್ದಳು ,ಆಗಲೇ ನನ್ನೊಳಗಿದ್ದ ಭಯ ಹುಟ್ಟಿಸುವ ಕಲ್ಪನೆಗಳಿಗೆ ರೆಕ್ಕೆ ಹುಟ್ಟಿಕೊಂಡವು , ಕರೆ ಸ್ವೀಕರಿಸಿದೆ!

enter site “ಅಮ್ಮ” ಗಧ್ಗಧಿತ ಧ್ವನಿಯಲ್ಲಿ ,ಹೇಮಾ ? ಆ ಹೇಳಮ್ಮ ,ಅಪ್ಪ ನಿಗೆ ಸೀರಿಯಸ್ ಆಗಿದೆ ಕಣೆ ಹೋಸ್ಪಿಟಲ್ಗೆ ಸೇರ್ಸಿಧಿನಿ , ತುಂಬ ಭಯ ಆಗ್ತಾ ಇದೆ ಬೇಗ ಬಾರೇ ! ಸರಿನಮ್ಮ ಈಗ್ಲೇ ಬರ್ತೀನಿ ನೀನೇನು ಭಯ ಪಡ್ಬೇಡ ನಾನ್ ಬರ್ತೀನಿ ! ಕರೆ ನಿಶ್ಯಬ್ದ ವಾಯಿತು …. ಸೌಮ್ಯ ಳೆಡೆಗೆ ತಿರುಗಿದ್ಹೇ ಎಲ್ಲ ಹರಿತವಳಾದರಿಂದ “ಸರಿ ನಾನ್ ಇನ್ಫಾರಂ ಮಾಡ್ತಿನಿ ನಿನ್ ಹೋಗು ,ಏನಾದ್ರು ಪ್ರಾಬ್ಲಮ್ ಆದ್ರೆ ಕಾಲ್ ಮಾಡು ” . ರಸ್ತೆಗೆ ಇಳಿದು ಆಟೋ ಏರಿ ಕೂತೆ , ಗಿಜುಗುಡುತಿದ್ದ ಟ್ರಾಫಿಕ್ ಶಬ್ದ ನಿಶಬ್ದವಾಗತೊಡಗಿತು.

http://www.you-select.nl/?custom-essay-meister-login ಅಪ್ಪನ ಚಿತ್ರಣ ಕಣ್ಣ್ ಮುಂದೆ ಬರುತ್ತ ಹೋಯಿತು ,ಕೇವಲ ಕುತೂಹಲದ ಕಣ್ಣುಗಳಿಂದ ನನ್ನ ಸುತ್ತಲಿನ ಜಗತ್ತ ಕಾಣುತ್ತಲಿದ್ದ,ಬದುಕಿನ ಭಾರ ಇನ್ನು ಅರಿವಿಗೆ ಬಾರದ ದಿನಗಳು . ವನವಾಸದ ಸೀತೆ ಯಂತೆ ಇದ್ದ ಅಮ್ಮ ,ವನವಾಸಕ್ಕೆ ಸಿದ್ದವಾದ ಇಬ್ಬರು ಅಕ್ಕಂದಿರು ,ನನಗಿಂತ ಹಿರಿಯಳಾದ ಮತ್ತೊರ್ವಳು .ನನ್ನ ಮತ್ತು ಅಕ್ಕಂದಿರ ವಯಸ್ಸಿನ ಅಂತರ ಹೆಚ್ಚಾಗಿದ್ದರಿಂದ ಅವರೊಂದಿಗೆ ಬೆರೆಯುವುದು ಕಷ್ಟವಾಗಿತ್ತು ಇದರಿಂದ ನನ್ನೊಳಗೆ ಒಂಟಿತನ ಕಾಡುತ್ತಲಿತ್ತು ಆದರೆ ಪುಸ್ತಕ ಪ್ರೇಮ ,ಓದಿನ ಯೆಡೆಗಿನ ಒಲವು ಇದೇಲ್ಲವನು ಮರೆಸಿತ್ತು .

ಅಪ್ಪ ಹಿರಿಯಕ್ಕ ವೀಣಾಳ ಮತ್ತು ಎರಡನೆಯಾಕೆ ಕಮಲಳನ್ನು ಗೃಹಸ್ಥಾಶ್ರಮಕ್ಕೆ ಸೇರಿಸಿ ತಮ್ಮ ಬದುಕಿನ ಉಸಿರಾಟವನ್ನು ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿದ್ದರು . ಅಕ್ಕ ಕಲ್ಪನಾ ವಿದ್ಯಾಭ್ಯಾಸದ ನಂತರ ಕೆಲಸಕ್ಕೆ ಸೇರಿದ್ದಳು ಅಪ್ಪ ಇದಾವುದಕ್ಕೂ ಅಡ್ಡಿಪಡಿಸಿರಲಿಲ್ಲ ಮತ್ತು ಅವಳ ವರಮಾನದ ಬಿಡಿಗಾಸನ್ನು ಪಡೆಧಿರಲಿಲ್ಲ .ಅಪ್ಪನಿಗೆ ಉಳಿದ ನಮ್ಮಿಬ್ಬರ ಚಿಂತೆ ವಯಸ್ಸಾದಂತೆ ,ನೆರೆಹೊರೆಯವರ ಸಂಬಂಧಿಗಳ ತಪೋಕಲ್ಪಿತ ಮಾತುಗಳು ನಮ್ಮಿಬ್ಬರ ಬಗ್ಗೆ ಚಿಂತೆ ಹೆಚ್ಚಿಸಿದ್ದವು .

ಕಾಲ ಬದಲಾದಂತೆ ಅಕ್ಕ ಕಲ್ಪನಾಳ ನಡವಳಿಕೆಗಳು ಬದಲಾಗುತ್ತಾ ಹೋಯಿತು ತಾನಹೀತು ತನ್ನ ಕೆಲಸವಾಯಿತು ಎಂಬಂತೆ ನಮ್ಮ ನಡುವಿನ ಬಾಂಧವ್ಯತೆ ಕಡಿಮೆಯಾಯಿತು. ಅಮ್ಮ ,ಮನೆ ಮತ್ತು ಅಪ್ಪನ ಯೋಗಕ್ಷೇಮದ ಬಿಡುವಿಲ್ಲದ ಕಾರ್ಮಿಕಲಾಗಿದ್ದಳು.ಇದರ ನಡುವೆ ಅಪ್ಪ ಅಮ್ಮನನ್ನು ಘಾಸಿಗೊಳಿಸಿದ್ದು ಅಕ್ಕನ ಪ್ರೇಮ ವಿವಾಹ. ಯಾರೊ ಹೊರಗಿನವರಂತೆ ಅಕ್ಕ “ಅಮ್ಮ ನಾಳೆ ನನ್ನ ಮದುವೆ ನೀವಿಬ್ರು ಬಂದ್ ಆಶೀರ್ವಾದ ಮಾಡಿ” ಅಂತ ಹೇಳಿ ಹೋದ್ಲು ಮತ್ತೆ ಮನೆ ಕಡೆ ತಿರುಗಿಯೂ ನೋಡ್ಲಿಲ್ಲ .

source ಅಪ್ಪನಿಗೆ ಆಗಿನಿಂದನೇ ಆರೋಗ್ಯದಲ್ಲಿ ಏರುಪೇರು ಆಗ್ತಾ ಹೊಯ್ತು ,ಯಾಕಂದ್ರೆ ಸಂಬಂಧಿಗಳ ,ನೆರೆಹೊರೆಯವರ ಚುಚ್ಚು ಮಾತುಗಳು ಅಪ್ಪನನ್ನ ಮಾನಸಿಕವಾಗಿ ಕುಗ್ಗಿಸಿದ್ದವು .

ನನ್ನ ಓಧು ಮುಗಿದ ನಂತ್ರ ನಾನು ಕೆಲಸಕ್ಕೆ ಸೇರಬೇಕಾಯಿತು ಅದು ಅನಿವಾರ್ಯ ಕೂಡ ಆಗಿತ್ತು ,ಮನೆಯ ಜವಾಬ್ದಾರಿಗಳು ,ಖರ್ಚು ವೆಚ್ಚಗಳು ಇದೆಲ್ಲ ಅಪ್ಪನ ಸ್ವಾಭಿಮಾನಕ್ಕೆ ಧಕ್ಕೆಯಾಗದ ಹಾಗೆ ನೋಡಿಕೊಳ್ಳ್ತಾ ಇದ್ಧೆ .ಅದರು ಇಬ್ಬರಿಗೂ ಭಯ ಅನ್ನೋದು ಇದ್ಧೆ ಇತ್ತು ನಾನು ಕೂಡ ಎಲ್ಲಿ ಅಕ್ಕನ ಹಾಗೆ ಮಾಡಿಕೊಳ್ಳುತಿನೋ ಅಂತ .ಇದರ ನಡುವೆ ನನ್ನ ನೋಡಲು ಬಂದ ಗಂಡುಗಳು ,ಅವರವರ ಸ್ವಾರ್ಥಗಳು ಒಂದ್ ಕಡೆಯಾದ್ರೆ ನನ್ನ ಓಧು ಅವ್ರೆಲ್ಲರಿಗಿಂತ ಹೆಚ್ಚಾಗಿದ್ರಿಂದ ಯಾವುದು ಹೊಂದಾಣಿಕೆಯಾಗಲಿಲ್ಲ .ಕೆಲಸಕ್ಕೆ ಹೋಗ್ಬೇಕು ಅನ್ನೋರ್ ಒಂದ್ಕಡೆ, ಬೇಡ ಅನ್ನೋರ್ ಒಂದ್ಕಡೆ ಆದ್ರೆ ಬಂದವರ್ಯಾರು ನನ್ನ ಅಪ್ಪ ,ಅಮ್ಮನ ಮುಂದಿನ ಬದುಕಿನ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಲಿಲ್ಲ ಅದ್ರಿಂದನೇ ಏನೋ ನಾನು ನನ್ನ ಮದುವೆಯ ವಯಸ್ಸು ಕೂಡ ಮೀರಿತ್ತು.

go ಆಟೊ ಬಂದು ಆಸ್ಪತ್ರೆ ಮುಂದೆ ಬಂದು ನಿಂತಿದು ಗೊತಾಗ್ಲೆ ಇಲ್ಲ ” ಮೇಡಂ ,ಮೇಡಂ ” ಆಸ್ಪತ್ರೆ ಇದೆ ಅಲ್ವಾ? .. ಆ ಹೌದು ಅಂತ ಕೆಳಗಿಳಿದು ಓಡಿದೆ. ಅಮ್ಮ ನನ್ನ ನೋಡಿದ ತಕ್ಷಣ ಇನ್ನು ಅವಳ ಅಳು ಹೆಚ್ಛಯ್ತು, ತಬ್ಬಿ ಇಬ್ಬರು ಕಣ್ಣೀರಿಟ್ಟೆವು…ಆದ್ರೂ ಅಮ್ಮನಿಗೆ ಧ್ಯೆರ್ಯ ತುಂಬಿದೆ.. ಒಳಗಿನಿಂದ ಬಂದ ನರ್ಸ್ “ಇಲ್ಲಿ ಹೇಮ ಯಾರು ?” ಆ ನಾನೆ , ನಿಮ್ಮನ್ನ ಕರೀತಾ ಇದಾರೆ ನೋಡಿ ,ಅವ್ರ ಜೊತೆಗೆ ನಾನು ಅಮ್ಮ ಒಳಗೆ ಹೆಜ್ಜೆ ಹಾಕುದ್ವಿ.

ಅಪ್ಪನನ್ನ ಕಂಡೊಡನೆ ಅಮ್ಮನ ಕಣ್ಣುಗಳಲ್ಲಿ ನೀರು ತುಂಬಿ ಬಂತು ….ಅಪ್ಪನ ಬಳಿ ಹೋಗಿ ನಿಂತ್ವಿ ಇಬ್ಬರನ್ನು ನೋಡುತಿದ್ದ ಅಪ್ಪನ ಕಣ್ಣುಗಳು ತುಂಬಿ ಬಂದ್ವು ,ಅಪ್ಪ ಏದುಸಿರು ಬಿಡುತ್ತ “ಹೇಮ ದಯವಿಟ್ಟು ನನ್ನ ಕ್ಷಮಿಸ್ಬಿಡಮ್ಮ ,ನಿನ್ನ ಒಂದ್ ದಡ ಮುಟ್ಟಿಸೋಕೆ ಆಗ್ಲಿಲ್ಲ ನಾನು” ,ಉಸಿರಾಟ ನಿಂತಿತ್ತು… ಅಪ್ಪನ ಪಾಶ್ಚ್ಯಾತಾಪದ ಮಾತುಗಳು ಅವನ ಪಾದಗಳನ್ನ ಹಿಡಿದು ನನ್ನ ತಪ್ಪುಗಳನ್ನೂ ಕ್ಷಮಿಸಪ್ಪ ಅನ್ನೋಹಾಗೆ ಮಾಡಿದವು. …….ಬದುಕು ಕೂಡ ನನ್ನ ಪಾಲಿಗೆ ನಿರ್ಧಯಿಯಾಗಿಹೋಯಿತು ………

Leave a Reply

Top