You are here
Home > ಪುಟ ೩ > ಪ್ರೀತಿ ಗೀತಿ ಇತ್ಯಾದಿ! -ಭರತ್

ಪ್ರೀತಿ ಗೀತಿ ಇತ್ಯಾದಿ! -ಭರತ್

ಪ್ರೀತಿ, ನಂಬಿಕೆ, ವಿಶ್ವಾಸ. ಈ ಶಬ್ಧಗಳೇನೋ ಚಿಕ್ಕವು. ಆದರೆ ಅವುಗಳ ಭಾವ ಈ ಭೂಮಿಯಷ್ಟು ಹಿರಿದು. ಕೆಲವೊಮ್ಮೆ ಒಂದು ಪ್ರೀತಿಗೋಸ್ಕರ, ಒಬ್ಬರ ವಿಶ್ವಾಸ ಉಳಿಸಿಕೊಳ್ಳಲು, ಒಬ್ಬರಿಗೆ ನಂಬಿಕೆ ದ್ರೋಹ ಮಾಡದೆ ಇರಲು ಹೋಗಿ ಇನ್ನೊಂದನ್ನು ಕಳೆದು ಕೊಳ್ಳುವೆವೋ ಏನೋ. ಕಳೆದು ಕೊಂಡಾಗಿನ ನೋವು ಬಹುಷಃ ಎಲ್ಲದಕ್ಕಿಂತನು ಕಹಿ.

http://bluntmax.com/help-writing-thesis-proposal/ ಅದ್ಯಾಕೋ ಗೊತ್ತಿಲ್ಲ ಆ ಒಂದು ಘಟನೆ ಅದೆಷ್ಟು ಮರಿಬೇಕಂದ್ರು ಕಣ್ಣ ಮುಂದೆ ಬರುತ್ತದೆ. ಒಂದು ಹೆಣ್ಣು, ಆರ್ಥಿಕವಾಗಿ ಒಳ್ಳೆಯ ಮನೆ ಇಂದ ಬಂದವರು, ತನ್ನಷ್ಟು ಹಣವಂತನಲ್ಲದ ಹುಡುಗನ ಕೈ ಹಿಡಿಯುತ್ತಾಳೆ. ಕಾಲಕ್ರಮೇಣ ಮಕ್ಕಳು, ಸಂಸಾರ ಜಂಜಾಟ ಮುಂದುವರೆಯುತ್ತದೆ . ಆರ್ಥಿಕವಾಗಿ ತುಂಬ ಸಂಕಷ್ಟಕ್ಕೆ ಈಡಾಗುತ್ತದೆ, ಈ ಸಂಪೂರ್ಣ ಕುಟುಂಬ. ಆಗ ಸರ್ಹುದಯ ಸಂಬಂಧಿಕರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ, ಆಮೇಲೆ ಈ ಕುಟುಂಬ ಮಹಾನಗರಕ್ಕೆ ಉದ್ಯೋಗ ಅರಸಿ ಬರುತ್ತದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕುಟುಂಬವಾದ ಕಾರಣ ಮೊದಮೊದಲು ತುಂಬ ಕಷ್ಟ. ಆದರೂ ಆ ಮಹಿಳೆಯ ದಿಟ್ಟತನದಿಂದ ಸಂಸಾರ ನೌಕೆ ಶಾಂತಸಮುದ್ರದಲ್ಲಿ ತೇಲುವ ಹಂತ ಸೇರುತ್ತದೆ. ಪಾಪ ಆ ಮಹಿಳೆ ಪಟ್ಟ, ಪಡುತ್ತಿರುವ ಕಷ್ಟ ಬಹುಷಃ ಕಲ್ಲನ್ನು ಕೂಡ ಕರಗಿಸಿವಂತದ್ದು. ಹೋಟೆಲ್ ಒಂದರಲ್ಲಿ ಪಾತ್ರೆ ತೊಳೆಯುವುದು, ಬೇರೆ ಮಕ್ಕಳಿಗೆ ಟ್ಯೂಷನ್ ಕೊಡುವುದು, ಬಟ್ಟೆ ಹೊಲಿಯುವುದು… ಒಂದು ಯಂತ್ರದ ಹಾಗೆ ಕಷ್ಟ ಪಟ್ಟು, ತನ್ನ ಪ್ರತಿಭಾವಂತ ಮಕ್ಕಳಿಗೆ ಒಂಚೂರು ಕಷ್ಟ ಆಗದ ಹಾಗೆ ಸಲಹಿದ ಆಕೆ ಯಾವ ದೇವರಿಗೆ ತಾನೇ ಕಮ್ಮಿ? ಇಂತಿಪ್ಪ ತಾಯಿ, ತನ್ನ ಮಕ್ಕಳು ಮುಂದೊಂದಿನ ಹೀಗೆ ಆಗ್ಬೇಕು ಅಂತ ಕನಸು ಕಾಣೋದು ತಪ್ಪಾ? ಚಿನ್ನದಂತಹ ಮಕ್ಕಳು, ಪಾಪದ ಗಂಡ ಮುಂದೊಂದಿನ ಎಲ್ಲ ಸರಿ ಹೋಗಿ ನೆಮ್ಮದಿಯ ದಿನಗಳು ಹತ್ತಿರ ಬರುತ್ತಿವೆ ಎನ್ನುವಾಗ ಒಂದು ಆಘಾತ. ವಯಸ್ಸಿನ ಮಗಳು ಬೇರೆ ಜಾತಿಯ ಹುಡುಗನ ಜೊತೆ ಓಡಾಡುತ್ತಿದ್ದಾಳೆ, ಪ್ರೀತಿ ಮಾಡುತ್ತಿದ್ದಾಳೆ.

Customresearchpapers.us ಮೊದಮೊದಲು ಎಲ್ಲರೂ ಬುದ್ದಿ ಹೇಳುತ್ತಾರೆ, ತಾಯಿ ಕೂಡ ಸಹನೆ ಇಂದ ಹೇಳುವಷ್ಟು ಹೇಳುತ್ತಾರೆ. ತನ್ನ ಸ್ವಂತ ಮಗಳು, ತನ್ನಿಂದ ಕೈಜಾರುತ್ತಾಳೆ ಎನ್ನುವಾಗ ಯಾರು ತಾನೇ ಕೋಪವಾಗುದಿಲ್ಲ? ಕೋಪದ ನುಡಿಗಳು, ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಮಗಳ ಸ್ಥಿತಿ ನೋಡಿ ತಾಯಿ ಪ್ರತಿ ದಿನ ಕಣ್ಣೀರು ಇಡುತ್ತಾರೆ. ಸಂಬಂಧಿಕರೆಲ್ಲ “ನಿನ್ನ ಮುದ್ದಿನಿಂದ ಹೀಗಾದಳು”ಎಂದು ನಿಂದಿಸುತ್ತಾರೆ. ಜಾತಿ ಗೀತಿಗಿಂತ ನನ್ನ ಖುಷಿನೇ ಮುಖ್ಯ ನನ್ನ ಪ್ರೀತಿಗೆ ಸಹಕರಿಸಿ ಎಂದು ಮಗಳು ವಿನಂತಿಸುತ್ತಾಳೆ. ಏನು ಮಾಡಬೇಕೆಂದು ತೋಚದ ದಂಪತಿಗಳು ಸುಮ್ಮನಾಗುತ್ತಾರೆ. ಮದುವೆಯಾಗಿ ಮಗಳು ಮನೆ ಬಿಟ್ಟು ಹೋಗುತ್ತಾಳೆ, ಇತ್ತ ಸಂಬಂಧಿಕರು ಕೂಡ ಮಗಳ ತಪ್ಪಿಗೆ, ಹೆತ್ತವರನ್ನ  ಚುಚ್ಚುತ್ತಾರೆ.

ಇಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಜಾತಿ ವ್ಯವಸ್ಥೆ ಇರುವ ಈ ಸಮಾಜದ ತಪ್ಪೋ? ತಾನು ಸುಖವಾಗಿರುವೆ ಎಂಬ ಮಗಳದ್ದೋ? ತಾಯಿಯದ್ದು ತಪ್ಪೋ ಎಂಬ ಪ್ರಶ್ನೆಯೇ ಅಸಮಂಜಸ. ಆಕೆ, ಗಂಧದ ಹಾಗೆ ಸವೆದು ಹೋಗಿ, ಸಂಸಾರಕ್ಕೆ ಸುಗಂಧ ಬೀರಿದ್ದಾಳೆ. ನಾ ಕಂಡ ಹಾಗೆ ಇದು ಇಂದಿನ ಸಮಾಜ. ಪ್ರೀತಿ ಇರಲಿ ಆದರೆ ಆದಷ್ಟು ಎಲ್ಲರಿಗೂ ಖುಷಿ ನೀಡುವ ಹಾಗೆ.

Top