You are here
Home > ಮಮಕಾರ > ಬೇಲದ ಮರದ ಸುತ್ತ – ಶ್ರುತಿ ವಸಿಷ್ಠ

ಬೇಲದ ಮರದ ಸುತ್ತ – ಶ್ರುತಿ ವಸಿಷ್ಠ

http://www.iolife.eu/resume-review-service/ ಹಳೆಯದನ್ನು ನೆನಪಿಸಿಕೊಳ್ಳುವುದರಲ್ಲಿ ಏನೋ ಖುಷಿ, ಆ ಖುಷಿನ್ನು ಹಂಚುವಾಗ ಇನ್ನು ಆನಂದ. ನಾವು ಹೇಗೆಲ್ಲ ಇದ್ದೇವಾ? ಎಂದು ನಮ್ಮನ್ನೇ ನಾವು ಕೆಲವೊಮ್ಮೆ ಪ್ರಶ್ನಿಸಿ ಕೊಳ್ಳುತ್ತವೆ. ನಾನು ಈಗ ಹೇಳಲು ಹೊರಟಿರುವುದು ಇಂಥದೇ ಸುಂದರ  ಕ್ಷಣವನ್ನು . ಇದು ನಡೆದು ಸುಮಾರು ೩೦ ವರ್ಷಗಳೇ ಕಳೆದಿವೆ. ಆದರೂ ಆ ಪಾತ್ರಗಳನ್ನ ನೆನೆದರೆ ಈಗಲೂ ನಗುವೇ …

ನಾನು ಕೆಲಸಕ್ಕೆ ಹೋಗುವ ಜಾಗದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಸುತ್ತೆಲ್ಲ ಬರಿ ಹೆಂಗಸರೇ ಇರುವುದರಿಂದ ನಮ್ಮ ಮಾತು ಕಥೆ ಓದುಗರೇ ಊಹಿಸಬಹುದು . ಸಂಕೋಚದ ಅರ್ಥವೇ ಇಲ್ಲದಂತೆ ಮಾತು, ಹರಟೆ . ಮಾತಾನಾಡುತ್ತಾ ಹೀಗೆ ಈ ವಿಷಯವನ್ನು ನನ್ನ ಸ್ನೇಹಿತೆ ಅವರ ತಮ್ಮನ ಕಥೆಯನ್ನು ಅವರ ಪಾತ್ರದಲ್ಲೇ ಹೇಳಿದರು  ಸ್ವಾರಸ್ಯವಾಗಿ ಹೇಳಿದರು.

source ಆಗಿನ್ನೂ ನಮ್ಮ ಊರು ಈಗಿನಶ್ಟು ಬೆಳೆದಿರಲಿಲ್ಲ. ಕಾಡಿಗಿಂತ ಒಂದೇ ಒಂದು ಹೆಜ್ಜೆ ಮುಂದಿತ್ತು. ಪ್ರಾಣಿ ಪ್ರಪಂಚದಲ್ಲಿ ಮನುಷ್ಯರ ವಾಸ. ಸಣ್ಣ ಪುಟ್ಟ ವಸ್ತುವಿಗೂ ಸಹ ಪೇಟೆಗೆ ಹೋಗುವುದು ಅನಿವಾರ್ಯ. ತೀರ ಕೊತ್ತಂಬರಿ ಇಲ್ಲದೆ ಅಡುಗೆ ಮಾಡಿದ ದಿನಗಳೆಷ್ಟೋ. ಪೇಟೆಗೆ ಹೋಗುವುದು ಸಾಹಸವೇ ಸರಿ. ಬುಧವಾರ ಪೇಟೆಗೆ ಹೋಗುವುದಾದರೆ ಭಾನುವಾರದಿಂದಲೇ ತಯಾರಿ  ಶುರು.ಭಾನುವಾರ ಎಲ್ಲ ಸೋಮವಾರದ ತಯಾರಿ ಮಾಡಿ ಸೋಮವಾರ ದೋಸೆ ಗೆ ಹಿಟ್ಟನ್ನು ನೆನಸಿ ಮಂಗಳವಾರ ರುಬ್ಬಿದರೆ, ಬುಧವಾರ ಬೇಗೆ ತಿಂಡಿ ಮಾಡಿ ಪೇಟೆಯ ಪಯಣ ಆರಂಭಿಸಬೇಕಿತ್ತು. ಪೇಟೆಯ ಪ್ರಾಯಾಣಕ್ಕೆ ೩ ಗಂಟೆ ಪ್ರಯಾಣ . ಕೆಲಸ ಮುಗಿಸಿ ಹೊರಟರೆ ಮಕ್ಕಳು ಶಾಲೆ ಇಂದ ಮನೆಗೆ ಬರುವ ವೇಳೆಗೆ ನಾವು ಹಾಜರಿರಬೇಕಿತ್ತು. ಒಮ್ಮೊಮ್ಮೆ ನಾವೇಕೆ ನಮ್ಮ ಊರಲ್ಲಿ ಪ್ರಾಣಿಗಳಂತೆ ಜೀವಿಸುತ್ತಿದ್ದೇವೆ ಅನ್ನಿಸಿದ್ದು ಉಂಟು. ಆದರೆ ಆ ಕಾಡಿಗೂ ನಂಗೂ ಇರುವ ನಂಟು ವಿವರಿಸುವುದು ಕಷ್ಟ.

go to site ಇಂತಹ ಊರಲ್ಲಿ ( ಕಾಡಲ್ಲಿ) ನಮ್ಮಂತೆ ಇನ್ನು ೧೫-೨೦ ಮನೆಗಳಲ್ಲಿ ಮಾನವ ಪ್ರಾಣಿಗಳ ವಾಸವಿತ್ತು. ಜಾತಿ, ಮತ ಅಂತ ನೋಡದೆ ಅಷ್ಟು ಮನೆಯವರು ಒಗ್ಗಟ್ಟಿನಿಂದ ಇದ್ದರು. ಇದುದರಲ್ಲಿ ನಮ್ಮ ಮನೆಗೆ ಒಂದು ಅಂಗಳ ಇದ್ದು ಎಲ್ಲ ಮಕ್ಕಳು ಆಟಕ್ಕೆ ಅಲ್ಲಿ ಸೇರುತ್ತಿದ್ದೆವು. ನಮ್ಮ ಮನೆಯಲ್ಲಿ ನಾನು, ಅಣ್ಣ , ಅಮ್ಮ ಮತ್ತು ಅಪ್ಪ ಇದ್ದುದ್ದು. ತೋಟದ ಕೆಲಸಗಾರರು ಕೆಲಸ ಮುಗಿಸಿ ಅವರವರ ಮನೆ ಸೇರುತ್ತಿದ್ದರು. ನಮ್ಮ ಮನೆಯ ಬಳಿಯಲ್ಲಿ ಒಂದು  ಬೇಲದ ಮರವಿತ್ತು. ಅದನ್ನು ಎಲ್ಲರು “ದೆವ್ವದ ಮರ” ಎಂದು ಕರೆಯುತ್ತಿದ್ದು ಅದಕ್ಕೆ ಕಾರಣ ಮಕ್ಕಳು ಯಾರು ಆ ಮರ ಹತ್ತದಿರಲಿ ಎಂದು.

get link ಆದರೆ ಅಣ್ಣನಿಗೆ ಧೈರ್ಯ  ಜಾಸ್ತಿ. ಒಮ್ಮೆ ನನ್ನ ಅತ್ತೆಯ ಮಗ ಮನೆಗೆ ಬಂದಿದ್ದ. ಸರಿ ಬೆಳಗಿಂದ ಮೂವರು  ಕೂಡಿ ಆಡಿದ್ದೇ ಆಡಿದ್ದು. ಸರಿ ಸಂಜೆಯ ವೇಳೆಗೆ ಅಣ್ಣ ಮತ್ತು ಅತ್ತೆಯ ಮಗ ಇಬ್ಬರು  ಸೇರಿ ಬೇಲದ ಹಣ್ಣನ್ನು ಕಿತ್ತು ತಂದು ತಿನ್ನುವುದೆಂದು ನಿರ್ಧರಿಸಿದರು. ಬೆಳಕಿದ್ದಾಗ ಹೊರಟರೆ ತಾನೇ ಇವರು ನಮ್ಮನು ತಡೆಯುವುದು ಎಂದು ನಿರ್ಧರಿಸಿ ಎಲ್ಲರೂ ಮಲಗಿದ ಮೇಲೆ ಹೊರಡುವುದೆಂದು ನಿರ್ಧರಿಸಿದರು. ನನಗೋ ಒಳಗೆ ಭಯ. ಹೇಳಲು  ಅಂಜಿಕೆ. ಸರಿ ನಾನು ಬರುತ್ತೇನೆ ಎಂದು ಜಂಬದಿಂದ  ಹೇಳಿದೆ. ಸರಿ ಹುಮಸ್ಸಿನಿಂದ ಸಿದ್ದರಾದೆವು. ಸರಿ ರಾತ್ರಿ ಬೇಗೆ ಊಟ ಮಾಡಿ ಮಲಗುವಂತೆ ನಟಿಸಿದೆವು. ಅಪ್ಪ ಅಮ್ಮ ಮಲಗಿದ ಮೇಲೆ ಹೊರಡುವೆದೆಂದು ಮೊದಲೇ ತೀರ್ಮಾನಿಸಿ ನಿದ್ದೆಯ ನಾಟಕ ಮಾಡಿದ್ದಾಯಿತು. ಆದರೆ ನಾನು ಚಿಕ್ಕವನಾದರಿಂದ ನಿದ್ದೆ ಆವರಿಸಿತ್ತು. ಸ್ವಲ್ಪ ಸಮಯದ ನಂತರ ಅಣ್ಣ ನನ್ನನ್ನು ಎಚ್ಚರಿಸಲು ಪ್ರಾಯಾಸ ಪಡುತಿದ್ದ. ನಾನನು ಬಿಟ್ಟು ಹೊರಟರೆ ನಾನು ಎಲ್ಲಿ ಮನೆಯವರಿಗೆ ತಿಳಿಸುತ್ತೇನೋ ಎಂದು ಭಯ ಅವರಿಗೆ. ಗಾಢ ನಿದ್ದೆಯಲ್ಲಿದ್ದ ನಾನು ಗಾಬರಿಯಾಗಿ ಎದ್ದು ಕಣ್ಣುಜಿಕೊಂಡು ಅವರೊಂದಿಗೆ ಹೊರಟೆ . ಸುತ್ತ ಕತ್ತಲು, ಮೊದಲೇ ಕಾಡು, ಇನ್ನು ಭಯಂಕರ ಶಬ್ದಗಳು. ದಾರಿ ತಿಳಿದಿದ್ದ ಅಣ್ಣ ಧೈರ್ಯವಾಗಿ ಮುಂದೆ ಹೋಗುತಿದ್ದ. ನಾನು ಅವನ ಅಂಗಿ ಹಿಡಿದೂ ಅವನನ್ನೇ ಹಿಂಬಾಲಿಸುತ್ತಿದ್ದೆ. ಮನೆಯಿಂದ ಕೊಂಚ ಮುಂದೆ ಹೋಗಿದ್ದೆವು ಅಷ್ಟೇ. ನಮ್ಮ ಮುಂದೆ ಮಾನವಾಕೃತಿ ಬರುತ್ತಿರುವಂತೆ ಭಾಸವಾಯಿತು. ನನಗೆ ನಿದ್ದೆಯಿಂದ ಪೂರ್ತಿ ಎಚ್ಚ್ಚರವಾಯಿತು. ಮೈ ಎಲ್ಲ ತಣ್ಣಗಾಗಿ ಬಟ್ಟೆ ಎಲ್ಲ ಒದ್ದೆ. ಮೊದಲೇ ಬೇಲದ ಮರದ ಬಳಿ ದೆವ್ವಗಳ ಕಾಟ ಎಂದು ಬುದ್ದಿ ತಿಳಿದಾಗಿಂದ ಗೊತ್ತಿತ್ತು. ಇಂದು ಸಾಬೀತಾಯಿತು. ಹಿಂದೆ ಹೋಗೋಕೂ ಭಯ. ಅಣ್ಣ ಹೇಗೋ ಸಾವರಿಸಿಕೊಂಡು ನಿಂತಲ್ಲೇ ನಿಂತ, ಅವನ ಹಿಂದೆ ನಾನು ಎಷ್ಟು ಸಾಧ್ಯವೋ ಅಷ್ಟು ಅಡಗಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನನ್ನ ಹಿಂದೆ ಅತ್ತೆಯ ಮಗ ಅವನ ಪರಿಸ್ಥಿತಿ ತಿಳಿಯಲು ನಂಗೆ ಹಿಂದೆ ತಿರುಗಲು ಭಯ. ನೋಡು ನೋಡುತ್ತಿದ್ದಂತೆ ಆ ಆಕೃತಿ ನಮ್ಮನ್ನು ಸಮೀಪಿಸಿತು. ” ಅಮ್ಮ” ಎಂದು ಕೂಗಲು ಬಾಯಿ ತೆರೆಯಲು ಪ್ರಯತ್ನಿಸುತ್ತೇನೆ, ಯಾರೋ ಬಾಯಿ ಮುಚ್ಚಿದ್ದ ಅನುಭವವಾಯಿತು. ನನ್ನ ಕಥೆ ಮುಗಿಯಿತು. ಸಾವನ್ನು ಕೇಳಿದ್ದೆ ಆದರೆ ಅದು ನನ್ನ ಸಮೀಪಿಸಿತು. ಆದ್ರೆ ಗಾಢ ಕತ್ತಲೆಯಲ್ಲಿ ದೇವಕ್ಕೆ ಸಿಕ್ಕಿ ನನ್ನ ಪ್ರಾಣ ಹೋಗಬೇಕೆ?

ಸರಿ ಮಾನವಾಕೃತಿ ನಮ್ಮಮುಂದೆ  ನಿಂತಿತು. ನೋಡಿದರೆ ಇಬ್ಬರು ಗಂಡಸರು, ನಮ್ಮನು ನೋಡಿ “ಏನೋ”? ಈ ಹೊತ್ತಲ್ಲಿ ಏನು ಕೆಲಸ ನಿಮಗೆ, ಕಳ್ಳರೆನಾದರೂ ಬಂದ್ರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ.ನಡ್ರಿ ಮನೆಗೆ ಕೋತಿಗಳ” ಎಂದಾಗ ನಿಟ್ಟುಸಿರು ಬಿಟ್ಟು ಸಿಕ್ಕ ಕಡೆಗಳಲ್ಲಿ ಓಡುತ್ತಾ ಹೇಗೋ ಮನೆ ತಲುಪಿದೆವು. ಮನೆ ತಲುಪಿದರೆ ಸಧ್ಯ ಅಪ್ಪ ಅಮ್ಮ ಇನ್ನು ನಿದ್ದೆಯಲ್ಲಿದ್ದರು. ಸದ್ಯ ಅಲ್ಲಿನ ಭಯದಿಂದಲೇ ಹೊರಬಂದಿಲ್ಲ ಇನ್ನು ಇಲ್ಲಿ ನಮ್ಮನ್ನು ಕಾಣದೆ ಅಪ್ಪ ಅಮ್ಮ ಏನು ಮಂಗಳಾರತಿ ಮಾಡುವರೋ ಎಂದು ಕೊಂಡ ನಮಗೆ ಕೊಂಚ ಸಮಾಧಾನವಾಯಿತು. ನಮ್ಮ ಜಾಗದಲ್ಲಿ ಮಲಗುವುದೆಂದು ಯಾರು ಹೇಳದೆಯೇ ಆ  ಕೆಲಸ ಮಾಡಿದೆವು. ಬದುಕಿದೆಯಾ ಬಡ ಜೀವವೇ ಎಂಬಾ  ಮಾತಿನ ಅರ್ಥ ನಮಗೆ ತಿಳಿದಿತ್ತು.

ತಡವಾಗಿ ನಿದ್ರಿಸಿದ್ದರಿಂದ ಬೆಳಗ್ಗೆ ಕೊಂಚ ತಡವಾಗಿ ಎದ್ದೆವು. ನೋಡಿದರೆ ಮನೆಯ ಮುಂದೆ ಜನ ಜಮಾಯಿಸಿ ಕೊಂಚ ಏರು ಧ್ವನಿಯಲ್ಲೇ ಮಾತನಾಡುತಿದ್ದರು. ಒಹೋ ರಾತ್ರಿ ನಾವು ಹೊರಗೆ ಹೋಗಿದ್ದು ಯಾರೋ ನೋಡಿದಾರೆ ಎಂದು ಮೆಲ್ಲಗೆ  ತಪ್ಪೊಪ್ಪಿಕೊಳ್ಲಲು ಹೊರಗೆ ಬಂದೆವು. ಅಮ್ಮ ನಮ್ಮನ್ನು ನೋಡಿ ಸುಮ್ಮನಿರುವಂತೆ ಸನ್ನೆ ಮಾಡಿದಳು. ನಾವು ಸಿಕ್ಕಿಕೊಂಡಿರುವುದು ಖಚಿತವಾಯಿತು. ಆದರೆ ಅಪ್ಪ ಏನು ಬೇರೆ ರೀತಿ ಹೇಳುತ್ತಿದ್ದಾರೆ” ಪೊಲೀಸರಿಗೆ ಒಪ್ಪಿಸೋಣ ಅಂತಾ” ಹೊ ಸರಿ ಮೊದಲೇ ನಾವು ಇದ್ದಿದ್ದು ಕಾಡಲ್ಲಿ ಇನ್ನು ಪೊಲೀಸ್ ಸ್ಟೇಷನ್ ದರ್ಶನವು ನಮಗೆ ಆಗ್ಬೇಕಾ? . ಸರಿ ಇವರು ನಮ್ಮನೂ ಕಳಿಸಲು ತೀರ್ಮಾನ ಮಾಡಿದ್ದಾರೆ. ಸರಿ ಇನ್ನು ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೊಂಡು ಅಣ್ಣ ಮುಂದೆ ಸಾಗಿದ. ಅಣ್ಣನ ಮುಖ ನೋಡಿ ಅಪ್ಪ ” ಹಾಲು ಕುಡಿದಿರಾ” ಎಂದು ಎಂದಿನಂತೆ ಕೇಳಿದಾಗ ಮೂವರು ಮುಖ ನೋಡಿಕೊಂಡೆವು.

source link ನಂತರ ಅಪ್ಪ” ಮಕ್ಕಳೇ ಇನ್ನು ಮುಂದೆ ಒಬ್ಬೊಬ್ಬರೇ ಎಲ್ಲೂ ಹೋಗಬೇಡಿ, ತೋಟದೊಳಗೆ   ಹೋಗುವುದಾದರೂ  ಸಹ ಯಾರಾದರೂ ಜೊತೆ ಇರಲಿ. ಯಾಕೆಂದರೆ ನೆನ್ನೆ ರಾತ್ರಿ ನಮ್ಮ ಊರಿಗೆ ಕಳ್ಳರು ಬಂದಿದ್ರು. ಏನೋ ಸದ್ಯ ಹೇಳುವಂತಹ ಯಾವ  ವಸ್ತುವು ಕಳ್ಳತನವಾಗಿಲ್ಲ. ಇನ್ನು ಮುಂದೆ ಜೋಪಾನ ಎಂದಾಗ ನಾನು ಅಣ್ಣ ನಕ್ಕಿದ್ದೆ ನಕ್ಕಿದ್ದು. ಆ ಬಡ್ಡಿ ಮಕ್ಕಳು ನಮಗೆ ಉಪದೇಶ ಮಾಡಿದ್ದರು. ” ಕಳ್ಳರು ಬಂದರೆ ನಿಮ್ಮನ್ನು ಬಿಡುವುದಿಲ್ಲ” ಅಂತಾ ಉಪದೇಶ ನೀಡಿದ್ದರು. ಸದ್ಯ ಅಂದೆ ಕೊನೆ ಇನ್ನು ಯಾರಾದರೂ  ಬೇಲದ ಹಣ್ಣು  ಬೇಕು ಎಂದಾಗ ಎಲ್ಲ ಈ ಸ್ವಾರಸ್ಯವನ್ನು ನೆನೆಯುತ್ತೇವೆ.

ನಮಗೂ ನಗು. ಆ ಅಣ್ಣ ಮತ್ತು ತಮ್ಮ ನಮ್ಮ ಶಾಲೆಯ ಪ್ರಾಂಶುಪಾಲರ ಹುದ್ದೆಯಲ್ಲಿದ್ದಾರೆ. ಅವರನ್ನು ನೋಡಿದಾಗ ಎಲ್ಲ ಈ ಪ್ರಸಂಗ ನೆನೆಯುತ್ತೇವೆ ಮತ್ತು :ಅವರೇನಾ ಇವರು” ಎಂದು ಅನುಮಾನ ಪಟ್ಟಿದ್ದೇವೆ. ಅಂತೂ ಬೇಲದ ಹಣ್ಣು ಒಳ್ಳೆ ರುಚಿಯನ್ನೇ ಇವರಿಗೆ ಕೊಟ್ಟಿದೆ .

One thought on “ಬೇಲದ ಮರದ ಸುತ್ತ – ಶ್ರುತಿ ವಸಿಷ್ಠ

Leave a Reply

Top