You are here
Home > ಪುಟ ೧ > ಮಾಧ್ಯಮಗಳಿಗೆ ಕೆಲವೊಂದಿಷ್ಟು ಉಚಿತ ಸಲಹೆಗಳು – ಸುಧಿ ಆಚಾರ್ಯ

ಮಾಧ್ಯಮಗಳಿಗೆ ಕೆಲವೊಂದಿಷ್ಟು ಉಚಿತ ಸಲಹೆಗಳು – ಸುಧಿ ಆಚಾರ್ಯ

http://gpsemirates.com/dissertation-editing-help-uk/ ಮಾಧ್ಯಮವನ್ನು ಅಲಿಖಿತವಾಗಿ ಸಂವಿಧಾನದ ನಾಲ್ಕನೆಯ ಅಂಗವಾಗಿ ಕರೆಯಲ್ಪಡುತ್ತದೆ. ಈ ಕಾರಣವೇ ತಿಳಿಯುವುದು ಜನ ಸಾಮಾನ್ಯರು ಮಾಧ್ಯಮಗಳನ್ನು ನಂಬುವ ಬಗೆ. ಇಂತಿಪ್ಪ ಮಾಧ್ಯಮಗಳು ತಮ್ಮ ಮೇಲಿಟ್ಟ ನಂಬುಗೆಗೆ ಅರ್ಹವೇ? ಯೋಚಿಸಬೇಕಾದ ವಿಚಾರ. ಅಂದಾಗೆ ಯೋಚಿಸ ಬೇಕಾದವರು ನಾವಲ್ಲ, ಸ್ವತಃ ಮಾಧ್ಯಮದವರು. ಕಾರಣ ನಮಗೆ ಆಯ್ಕೆ ಸ್ವಾತಂತ್ರ್ಯ ಇದೆ ಬದಲಾಯಿಸಲು, ಕೊನೆ ಪಕ್ಷ ಚಾನೆಲ್ನಾದರು.

ಯಾವಾಗ ಎಲೆಕ್ಟ್ರಾನಿಕ್ ಮಿಡಿಯಾ( ಸುದ್ದಿ ವಾಹಿನಿಗಳು) TRP ಯ ಹಿಂದೆ ಬೀಳಲು ಶುರು ಮಾಡಿದವೋ ಇವುಗಳ ಹೊಣೆಗೇಡಿತನ ಬಟಾಬಯಲಾಗತೊಡಗಿತು. ಸುದ್ದಿಯ ನೆಪದಲ್ಲಿ‌ ಅಶ್ಲೀಲತೆಗಳನ್ನೇ ಬಿತ್ತರಿಸುವುದು, ಒಂದೊಂದು ಸುದ್ದಿ ವಾಹಿನಿಗಳು ಒಂದೊಂದು ರಾಜಕೀಯ ಪಕ್ಷಗಳ ಪರ ಓಲೈಕೆ ಮಾಡುವುದು ಗುಟ್ಟಾಗಿ ಉಳಿದಿಲ್ಲ. ಇನ್ನು ಪ್ಯಾನಲ್ ಡಿಸ್ಕಷನ್ ಎನ್ನುವ ದೊಂಬರಾಟದ ಬಗ್ಗೆ ಮಾತನಾಡದೆ ಸುಮ್ಮನಿರುವುದೇ ಒಳಿತು. ಚರ್ಚಾ ವಿಷಯದ ಹೆಸರಿಗೆ ಪರ ವಿರೋಧ ಚರ್ಚಿಸಲು ಬರುವವರಿಗೆ ಮಾತನಾಡಲೂ ಬಿಡದೆ ಮಧ್ಯ ಮಧ್ಯ ವಿಷಯಾಂತರ ಮಾಡಿ ಅಬ್ಬರಿಸಿ ಬೊಬ್ಬಿಡಿದು ಮೇಜು ಕುಟ್ಟಿ ಕುಟ್ಟಿ ನಿರೂಪಕರೇ ಜಡ್ಜ್ಮೆಂಟ್ ಕೊಟ್ಟು, ನೆಪಕ್ಕೆ ಮಾತ್ರ ಕೊನೆಗೆ ವೀಕ್ಷಕರಿಗೆ ಬಿಟ್ಟ ವಿಚಾರ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುವುದೇ ಹಾಸ್ಯಾಸ್ಪದ.

go site ದಶಕಗಳ ಹಿಂದೆ ಕಾಲ ಮಿತಿಗಳಲ್ಲಿ ವಾರ್ತೆಗಳು ಪ್ರಸಾರವಾಗುತ್ತಿದ್ದ ಕಾಲದಲ್ಲಿ ಕಾದು ಕುಳಿತಿರುತ್ತಿದ್ದದ್ದು ಈಗ ಬರಿ ನೆನಪುಗಳು ಮಾತ್ರ. ನಿರೂಪಕ/ ನಿರೂಪಕಿಯರ ಭಾಷಾ ಹಿಡಿತ, ಉಚ್ಚಾರಣೆಯಲ್ಲಿನ ಸ್ಪಚ್ಟತೆ, ನಿರರ್ಗಳತೆ, ಅವರ ಸೌಮ್ಯ, ಸ್ನಿಗ್ಧ ನೋಟ, ಅವರ ಉಡುಪುಗಳು ಗೌರವ ಕೊಡಬೇಕು ಅನ್ನಿಸುತ್ತಿತ್ತು. ಮತ್ತು ಸುದ್ದಿಗಳು ಎಷ್ಟೋ ವರ್ಷಗಳ ನಂತರವೂ ನೆನಪಿನಲ್ಲಿ ಉಳಿಯುವಂತಿರುತ್ತಿತ್ತು.

source ನಿಜ ಕಾಲ ಬದಲಾಗಿದೆ! ಇಂದು ಬರಿಯ ಎರಡು ಮೂರು ವಾಹಿನಿಗಳು ಇಲ್ಲ. ಹತ್ಹನ್ನೆರಡು ಸುದ್ದಿ ವಾಹಿನಿಗಳಿಗೆ ಪೈಪೋಟಿ ಕೊಟ್ಟು ಜನರನ್ನು ತನ್ನತ್ತ ಸೆಳೆದುಕೊಳ್ಳುವುದು ಸುಲಭದ ಮಾತಲ್ಲ. ಜನರೂ ಕೂಡ ಕಮರ್ಷಿಯಲ್ಗೆ ಒಗ್ಗಿಕೊಂಡಿದ್ದಾರೆ. ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತ ಮಾತು ಮಾತಿಗೆ ಬೇಡದಿದ್ದರೂ ಸಹ ಆಂಗ್ಲ ಪದ ಪ್ರಯೋಗ ಮಾಡುವುದು, ಮಾತನಾಡಲು ಸರಿಯಾಗಿ ಬರದಿದ್ದರೂ ಸಹ ಮುಗುಳ್ನಕ್ಕು ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಲೆ ಗೊತ್ತಿರುವ ಸೋ ಕಾಲ್ಡ್ ವಾರ್ತಾ ವಾಚಕರೇ ಚಾನೆಲ್ ನಡೆಸುವ ವ್ಯವಸ್ಥಾಪಕರಿಗೆ ಬೇಕಿರುವುದು.

go to site ಇನ್ನು ಬ್ರೇಕಿಂಗ್ ನ್ಯೂಸ್ ಗಳ ವಿಷಯಕ್ಕೆ ಬರೋಣ. ಚಾನಲ್ ಗಳ ದೃಷ್ಟಿಯಲ್ಲಿನ, ಬೆಳಿಗ್ಗೆ ಶುರುವಾದ ಬ್ರೇಕಿಂಗ್ ಎಂದೆನಿಸಿಕೊಂಡ ( *ಇವರುಗಳ ಪಾಲಿಗೆ ಮಾತ್ರ) ನ್ಯೂಸ್ ಗಳು ಮಧ್ಯ ರಾತ್ರಿ ಆದರೂ ಬ್ರೇಕಿಂಗ್ ನ್ಯೂಸ್ ಆಗಿಯೇ ಉಳಿಯುವುದು, ಮರುದಿನವೂ ಮುಂದುವರಿಸಿಕೊಂಡು ಹೋಗುವುದೇ ಯಕ್ಷ ಪ್ರಶ್ನೆ. ಏಕೆಂದರೆ ಇವರುಗಳ ಚಾನೆಲ್ ಗಳೇ 24/7 ಅಲ್ಲವಾ! ಇವರುಗಳ ಪಾಲಿನ ಕೆಲವೊಂದು ಬ್ರೇಕಿಂಗ್ ನ್ಯೂಸ್ ಗಳು ದಿನವಿಡೀ ಬ್ರೇಕಿಂಗ್ ನ್ಯೂಸ್ ಆಗಿ ಉಳಿದರೂ ಸಹ ರಾತ್ರಿ ಮಲಗಿ ಬೆಳಿಗ್ಗೆ ಎದ್ದ ನಮ್ಮಗಳಿಗೆ ತಲೆ ಚಚ್ಚಿಕೊಂಡು ತಲೆ ಕೂದಲು ಕಿತ್ತುಕೊಂಡರೂ ನಿನ್ನೆಯಿಡೀ ನಮ್ಮ ತಲೆ ತಿಂದ ಇವರುಗಳ ಬ್ರೇಕಿಂಗ್ ನ್ಯೂಸ್ ನ ವಿಷಯವೇ ಕೆಲವೊಮ್ಮೆ ಮರೆತು ಹೋಗುವುದೇ ನಿಗೂಢ ಪ್ರಶ್ನೆ. ನಾ ಮುಂದು ತಾ ಮುಂದು ಎಂದು ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡೋ ಭರದಲ್ಲಿ ಅಕ್ಷರಗಳನ್ನು ತಪ್ಪು ತಪ್ಪಾಗಿ ಬರೆದು ಅಭಾಸವಾಗಿ ಕೊನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಮಕ ಮಕ ಬೈಸಿಕೊಳ್ಳುವುದು ಇವರುಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಇವರುಗಳು ಮಾಡೋ special episode ಗಳೋ 30 ನಿಮಿಷಗಳ ಕಾರ್ಯಕ್ರಮದ ವಸ್ತು ವಿಷಯ, ಕಾರ್ಯ ಕಾರಣ ಸಂಬಂಧ ತಿಳಿಯಬೇಕಾದರೆ ಕೊನೆಯ ಎರಡು ನಿಮಿಷಗಳವರೆಗೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯ ಕರ್ಮ ವೀಕ್ಷಕರದ್ದು.

enter site ನಾಡಿನಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕಾರಣವೇನು? ರೈತರ ಸಮಸ್ಯೆಗಳೇನೇನು? ಎಂಬುವುದನ್ನು ಅಧ್ಯಯನ ಮಾಡಿ, ಪರಿಹಾರ ಒದಗಿಸಲು ಸರ್ಕಾರದ ಗಮನ ಸೆಳೆಯಬೇಕಿದ್ದ ಮಾಧ್ಯಮಗಳು ಯಾರದ್ದೋ ತೊಡೆಗೆ ಯಾರೋ ಬಾಯಿ ಹಾಕಿದ್ದೇ ಗಂಭೀರ ವಿಚಾರ ಏನೋ ಅಂತ ನಮಗೇ ಕನ್ಫ್ಯೂಸ್ ಆಗೋ ಮಟ್ಟಿಗೆ ತೋರಿಸ್ತೀರ! ದುಷ್ಟರಿಂದ ಅತ್ಯಾಚಾರಕ್ಕೊಳಗಾದ ಸಂತೃಸ್ತೆಯ ಮುಖ ಮಾರ್ಪಿಂಗ್ ಯಾ ಬ್ಲರ್ ಮಾಡದೇ ತೋರಿಸ್ತೀರಲ್ಲ ತಪ್ಪಲ್ಲವಾ?

ಮೊನ್ನೆ ಯಾವುದೋ ಒಂದು ಚಾನೆಲ್ ನವರು ಇವರ ಬಾಯಿಯ ತುರಿಕೆಗೆ ದೇಶದ ಅತ್ಯಂತ ಗೌಪ್ಯ ವಿಚಾರವನ್ನೂ ಸಹ ವಿಷಯ ವಸ್ತು ಮಾಡಿಸಿಕೊಂಡು ಚೀನಾ ಎಲ್ಲಾದರೂ ಭಾರತದ ವಿರುದ್ಧ ಯುದ್ಧ ಮಾಡಿದರೆ 15 ದಿನಗಳಲ್ಲೇ ಶಸ್ತ್ರಾಸ್ತ್ರ , ಮದ್ದು ಗುಂಡುಗಳು ಖರ್ಚಾಗಿ ಹೋಗುತ್ತೆ ಅಂತಾರಲ್ಲ, ಎಲ್ಲಾ ಇವರ ಸ್ಟೂಡಿಯೋದಲ್ಲೇನೇ ಸ್ಟೋರ್ ಮಾಡಿ ಇಡ್ಕೊಂಡವರ ತರಹ. ಏನು ಸ್ವಾಮಿ? ಛೇ ಬಯ್ಯೋಕೂ ಪದಗಳಿಗೆ ಬರ ಬರ್ತಿದೆ.

ಅಂದ ಹಾಗೆ ದೆವ್ವಾ ಭೂತಗಳನ್ನು ನೀವಿನ್ನು ನೋಡಿಲ್ಲವೇ, ತಡ ಮಾಡ ಬೇಡಿ ಈವಾಗಲೇ ಯಾವುದಾದರೂ ಕನ್ನಡ ನ್ಯೂಸ್ ಚಾನೆಲ್ ನೋಡಿ ಹತ್ತರಲ್ಲಿ ಒಂದಾದರೂ ಚಾನೆಲ್ ನಲ್ಲಿ I am damn sure ಭೂತಗಳ ಉಪದ್ರವ, ಚೇಷ್ಟೆ ನಡೆಯುತ್ತಿರುತ್ತದೆ. ಭೂತಗಳ, ಅತೃಪ್ತ ಆತ್ಮಗಳ ಅಡಗು ತಾಣ ನಮ್ಮ ಸುದ್ಧಿ ವಾಹಿನಿಗಳ ಸ್ಟೂಡಿಯೋ ಅನ್ನೋದು ಸುಳ್ಸುದ್ದಿ.

ಇವರುಗಳ ಸಿನೆಮಾ ಪ್ರಚಾರದ ಬಗ್ಗೆ ಮಾತನಾಡದೇ ಹೋದರೆ ಇಷ್ಟು ಬರೆದದ್ದು ಅಪೂರ್ಣ ಆಗುತ್ತೆ. ಕನ್ನಡ ಸಿನೆಮಾಗಳು ಎಷ್ಟೇ ಚೆನ್ನಾಗಿರಲಿ ಇವರಿಗೆ ಅಷ್ಟಾಗಿ ರುಚಿಸುವುದಿಲ್ಲ. ಪರ ಭಾಷಿಗರು ಎಲ್ಲಾದರೂ (*ಸಂದೇಹ) ಇವರುಗಳ ಚಾನೆಲ್ ನೋಡುವವರಾಗಿದ್ದರೆ ಇವರುಗಳ ಅನ್ಯ ಭಾಷೆಯ ಚಲನಚಿತ್ರಗಳ ಅತಿಯಾದ ವ್ಯಾಮೋಹ ಕಂಡು ವಾಕರಿಕೆ ಬರುತ್ತದೋ ಏನೋ.

ಕೊನೆಯದಾಗಿ: ನೀವು ಕೊಡೊ ಪ್ರತಿಯೊಂದನ್ನೂ ಪ್ರಸಾದ ಎಂದು ಸ್ವೀಕಾರ ಮಾಡೋಕೆ ಇಲ್ಯಾರು ದಾಸವಾಳ ಹೂವನ್ನು ಕಿವಿನಲ್ಲಿ ಇಟ್ಟುಕೊಂಡಿಲ್ಲ. ಆದಷ್ಟು ಬೇಗ ಎಚ್ಚರಗೊಳ್ಳಿ ಚಾನೆಲ್ ನವರೆ, ನಾಳೆ ಇನ್ನೊಂದು ಚಾನೆಲ್ ನಿಮ್ಮ ಬಗ್ಗೆ ಬ್ರೇಕಿಂಗ್ ನ್ಯೂಸ್ ಮಾಡೋ ಮೊದಲು. ಅಂದಾಗೆ ಹೇಳೋದು ಮರೆತೆ, ಒಂದು ಚಾನೆಲ್ ನ ಕರ್ಮಕಾಂಡವನ್ನು ಇನ್ನೊಂದು ಚಾನೆಲ್ ಬಯಲಿಗೆಳೆದದ್ದು ನೀವು ಎಲ್ಲಾದರೂ, ಎಂದಾದರೂ ನೋಡಿದ್ದೀರಾ? ಕೇಳಿದ್ದೀರಾ? ಈ ವಿಷಯದಲ್ಲಿ ನೀವು ಏನೇ ಹೇಳಿ ಒಬ್ಬರು ಇನ್ನೊಬ್ಬರನ್ನು ಬಿಟ್ಟು ಕೊಡದ ಇವರುಗಳ ವೃತ್ತಿ ನಿಷ್ಠೆ ಮೆಚ್ಚಲೇಬೇಕು.

Leave a Reply

Top