You are here
Home > ತಿಳಿ ಹಾಸ್ಯ > ಮೇ ಹಂದಿನೋ

ಮೇ ಹಂದಿನೋ

masters thesis prospectus ಪ್ರಪಂಚದಲ್ಲಿ ಹಿಂದಿನ ಅನುಭವವಿದ್ದರೆ ತಿರಸ್ಕರಿಸಲ್ಪಡುವ ಏಕೈಕ ಹುದ್ದೆ ಗಂಡ ಎನ್ನುವ ಪಟ್ಟ.  ಹಿಂದೆ ಸಂಪ್ರದಾಯ ಬದ್ದವಾಗಿ ಮದುವೆಯಾಗಿ ಸತಿ-ಪತಿಗಳಾದಾಗ ಆಗುತಿತ್ತು ಸಂಸಾರ. ಇಂದು ಮದುವೆ ಆಗೋಣ ಬಾ ಡಾಟ್ ಕಾಮ್ ಮೂಲಕ ಮದುವೆಯಾಗಿ ಸತಿ-ಪತಿಗಳಲ್ಲಿ ಕಿತಾಪತಿ ಜಾಸ್ತಿಯಾಗಿ ಆಗುತಿದೆ ಸಂಸಾರದ ಸಂಹಾರ.

uvic creative writing ಬಹುಶಃ ಹುಡುಗನಿಗೆ ಕಾಣಿಸಲು ಒಂದು ಗತಿ ಹುಡುಗಿ ಮಾಡಿಕೊಂಡಳು ಅವನನ್ನ ಅವಳ ಪತಿ. ಒಬ್ಬ ಸಂಸಾರಸ್ಥ ಕುಡುಕ ಹೇಳಿದ ಈಗ ನಾನು ಹೆಂಡದ ಮನೆಯ ಕಾಯಂ ಅತಿಥಿ.  ಏಕೆಂದರೆ ಮನೆಯಲ್ಲಿ ಇದ್ದಾಳೆ ಹೆಂಡತಿ. ಹಾಗೆ ಹೆಂಡತಿ ಎನ್ನುವ ಪದದ ಅರ್ಥವೇ ಯಾರು ಗಂಡನ ಪ್ರಾಣವನ್ನ ಹಿಂಡುತ್ತಾಳೋ ಅವಳೇ ಹೆಂಡತಿ. ಅದಕ್ಕೆ ಅಲ್ವಾ ಹೇಳೋದು ಮ್ಯಾರೇಜ್ ಆದ ಮೇಲೆ ಕಲಿತ್ಕೋ ಬೇಕಾಗಿರೋ ವಿದ್ಯೆ ಮ್ಯಾನೇಜ್ ಮಾಡೋದು. ಹೀಗೆ ಗಂಡು ಗಂಡನಾಗಿ ಬದಲಾಗಿ ಹೊಂಡಕ್ಕೆ ಬೀಳುವ ಸಾಂಪ್ರದಾಯಿಕ ಆಚರಣೆನೇ ಮದುವೆ.

http://deshkikhabre.com/?p=how-to-start-writing-your-dissertation ಮೊದಲೆಲ್ಲ ಮದು-ಮಕ್ಕಳು ಒಬ್ಬರೊಬ್ಬರ ಮುಖ ನೋಡುತಿದದ್ದೇ ಮದುವೆ ಮನೆಯಲ್ಲಿ. ಆದರೆ ಇಂದು ಮದುವೆಗೆ ಮುಂಚೆನೇ ಅವರ ಹನಿಮೂನ್ ಟಿಕೆಟ್ ಬುಕ್ ಆಗಿರುತ್ತೆ. ಅಷ್ಟೇ ಯಾಕೆ ಒಂದು ಹುಡುಗಿ ಹೊಸ ದುಬಾರಿ ಆಂಡ್ರಾಯ್ಡ್ ಮೊಬೈಲ್ ತಕೊಂಡ್ಲು ಅಂದ್ರೆ ಅರ್ಥ ಅವಳ ನಿಶ್ಚಿತಾರ್ಥ ಆಗಿದೆ ಎಂದು.

link ಇತ್ತೀಚಿಗೆ ಮದುವೆಗೆ ಬರುವ ಗಂಡಸರಿಗೂ ಫಲ ತಾಂಬೂಲ ಕೂಡುವ ಪದ್ಧತಿ ಜಾರಿಗೆ ಬಂದಿದೆ. ಫಲ ತಾಂಬೂಲ ರೂಪದಲ್ಲಿ ಎಣ್ಣೆ ಬಾಟಲಿಗಳು ಗಂಡಸರ ಜೋಳಿಗೆ ಸೇರುತಿದೆ. ವಾಟ್ಸ್ ಅಪ್ ಚಾಟ್ ಜೊತೆ ಮಂತ್ರ ಹೇಳುವ ಪೂಜಾರಪ್ಪ ಹೋಮದ ಹೊಗೆಗೆ ಎಲ್ಲಿ ತನ್ನ ಮೇಕ್ ಅಪ್ ಕಳಚಿ ಬೀಳುತ್ತೆ ಎಂದು ಹೆದರಿ ಹರಿಣದಂತೆ ಕಣ್ಣ ಸನ್ನೆಯಲ್ಲೇ ತನ್ನ ತಂಗಿನ ಕರೆದು ಟಚ್ ಅಪ್ ಮಾಡಿಸಿಕೂಳ್ಳುವ ವಧು. ಮದುವೆ ಛತ್ರದ ಕಸ ಗುಡಿಸುವ ಕಾಂಟ್ರಾಕ್ಟ್ ಪಡೆದು ರಂಗಸ್ಥಳದಲ್ಲಿ ಪರದೇ ಬಿಟ್ಟಂತೆ ತನ್ನ ಸೀರೆ ಸೆರಗನ್ನ ಎಳೆ ಬಿಟ್ಟುಕೊಂಡು ಸುಖ ಸುಮ್ಮನೆ ಓಡಾಡುವ ಹುಡುಗನ ತಂಗಿ. ತಲೆಗೆ ಹಚ್ಚಿದ ಕಪ್ಪಿನ ಬಗ್ಗೆ ಚಿಂತಾ ಕ್ರಾಂತರಾಗಿರುವ ಮದು-ಮಕ್ಕಳ ಅಮ್ಮಂದಿರು ಬರುವ ಉಡುಗೊರೆಯ ಯೋಚನೆಯಲ್ಲಿ ಇರುವ ಅಪ್ಪಂದಿರು ಇದು ಈಗಿನ ಮದುವೆ ಮನೆಯ ಸಾಮಾನ್ಯ ದೃಶ್ಯ.

follow url ಇಂತಾಯ ಒಂದು ಮದುವೆಯ ಕರೆಯೋಲೆ ನನಗು ಬಂತು. ಈ ಮದುವೆ ಅನ್ನೋದು ಪ್ರದೇಶದಿಂದ ಪ್ರದೇಶಕ್ಕೆ, ಜಾತಿ ಇಂದ ಜಾತಿಗೆ ವಿಭಿನ್ನವಾಗಿದೆ. ಮದುವೆಯ ಹಿಂದಿನ ದಿನ ನೆಡೆಯುವ ಮದರಂಗಿ ಇಂದು ಕರಾವಳಿ ಭಾಗದಲ್ಲಿ ಅತ್ಯಾಚಾರಕ್ಕೆ ಒಳಗಾಗಿದೆ. ಮದರಂಗಿಗೆ ಕೈ ಒಡ್ಡಿ ಕೂರುವ ಲಲನೆಯರು ಒಂದು ಕಡೆಯಾದರೆ, ಮದ್ಯಕ್ಕೆ ಕೈ ಒಡ್ಡಿ ನಿಲ್ಲುವ ಗಂಡಸರು ಒಂದು ಕಡೆ, ಕುಡಿದು ಕುಣಿಯುವ ಕುಡುಕರು ಒಂದು ಕಡೆಯಾದರೆ ಕುಣಿದು ಗುಟ್ಟಲ್ಲಿ ಕುಡಿಯುವ ಯುವಕರು ಇನ್ನೊಂದು ಕಡೆ. ಚಿರಂಜೀವಿ ಸೌಭಾಗ್ಯವತಿ ಹುಡುಗಿಯನ್ನ ಸೀತಾಮಾತೆಗೂ, ಚಿರಂಜೀವಿ ರಾಘವೇಂದ್ರ ಹುಡುಗನ್ನ ಶ್ರೀ ರಾಮಚಂದ್ರನಿಗೂ ಹೋಲಿಸಿ ಹಿರಿಯರು ಹಾಡುತಿದ್ದ ಮದುವೆ ಹಾಡುಗಳು ಮಾಯವಾಗಿ ಧ್ವನಿವರ್ಧಕ ಡಿಜೆ ಸೌಂಡ್ಗಳು ತಲೆಯೆತ್ತಿವೆ. ಇದು ಇಂದಿನ ಮದರಂಗಿಯ ಸಾಮಾನ್ಯ ದೃಶ್ಯ.

philosophy of nursing essay ಇಂತಾಯ ಒಂದು ಮದರಂಗಿ ಕಾರ್ಯಕ್ರಮಕ್ಕೆ ರಾತ್ರಿ ಹೊತ್ತು ನಾನು ನನ್ನ ಸ್ನೇಹಿತ ಹೋದೆವು. ಮದುವಣಗಿತ್ತಿ ಮೆಹಂದಿ ಮೆತ್ತಿದ ಕೈಯನ್ನು ಗಾಳಿಗೆ ಒಡ್ಡಿ ಕುಳಿತಿದ್ದಳು. ಅತ್ತ ಕಡೆ ಧ್ವನಿವರ್ಧಕದಲ್ಲಿ ಬರುತಿದ್ದ ಕನ್ನಡ ಹಾಡುಗಳಿಗೆ ಲಿಂಗ ಭೇದವಿಲ್ಲದೆ ಜನ ಕುಣಿಯುತ್ತಿದ್ದರು. ಅದೇನು ಅನಿಸಿತ್ತೊ ಏನೋ ಆ ಧ್ವನಿವರ್ಧಕದ ಹುಡುಗನಿಗೆ ನಾವು ಬಂದ ಕೂಡಲೇ ಕನ್ನಡದ ಎಷ್ಟು ಜನ boyfriend ನಿಂಗೆ ಅನ್ನೋ ಹಾಡನ್ನ ಹಾಕಿ ಬಿಟ್ಟ. ಸರಿಯಾದ ಸಮಯಕ್ಕೆ ನಮ್ಮನ ನೋಡಿದ ಹುಡುಗಿ, 10 ಜನ ಇದ್ದೀರಲ್ಲ ನೀವು  ಎಲ್ಲಿ ಮಿಕ್ಕಿದವರು ರಮೇಶ ಸುರೇಶ ಮಹೇಶ ಗಣೇಶ ಎಂದು ಬೊಬ್ಬೆ ಹೊಡಿಯೋಕ್ಕೆ ಶುರು ಮಾಡಿದಳು. ಎಷ್ಟು ಜನ boyfriend ನಿಂಗೆ ಅನ್ನೋ ಹಾಡು ಒಂದು ಕಡೆ, 10 ಜನ ಎನ್ನುವ ಅವಳ ಉತ್ತರ ಇನ್ನೊಂದು ಕಡೆ,  ಎರಡನ್ನು ಅರ್ಥ ಮಾಡಿಕೊಂಡ ಹುಡುಗ ಹಾಡನ್ನ ಬದಲಾಯಿಸಿದ.

get ಕುಣಿದು ಕುಣಿದು ಬಾರೆ ಎನ್ನುವ ಹಾಡು ಬರುವಾಗಲೇ ಅವರ ಮನೆಯ 80 ವರ್ಷದ ಅಜ್ಜಿ ಊರುಗೋಲನ ಹಿಡಿದು ನಡುಗುತ್ತಾ ನೆಡೆದು ಹೊರ ಬಂದರು. ಸರಿಯಾಗಿ ನೆಡೆಯೋಕ್ಕೆ ಆಗಲ್ಲ ನಂಗೆ ಕುಣಿದು ಕುಣಿದು ಬಂದು ಬಿದ್ದು ಬೆನ್ನು ಮುರಿದರೆ ಆಸ್ಪತ್ರೆ ಖರ್ಚು ನಿಮ್ಮ ಅಪ್ಪ ಕೂಡುತ್ತಾರ ಎಂದು ಬೈದು ಮೈಕಾಸುರನ ವಧೆ ಮಾಡಿದರು.

how to write an historiographical essay ಇದು ಮೆಹಂದಿನೋ ಇಲ್ಲ ಹೋದ ತಪ್ಪಿಗೆ ಮೇ ಹಂದಿನೋ ಒಂದು ತಿಳಿಯದೆ ವಾಪಸು ಬಂದೆವೂ.

Top