You are here
Home > ಪುಟ ೪ > ವಕ್ರತುಂಡ ಮಹಾಕಾಯ

ವಕ್ರತುಂಡ ಮಹಾಕಾಯ

ನನ್ನ ನೆನಪಿನ ಶಕ್ತಿಯನ್ನು ನೆಚ್ಚಿಕೊಳ್ಳುವುದಾದರೆ, ನಮ್ಮ ಮನೆಯಲ್ಲಿ ನಡೆಯುವ ಗಣೇಶೋತ್ಸವ ಆಚರಣೆಯನ್ನು ಇಲ್ಲಿಯವರೆಗೆ ತಪ್ಪಿಸಿಕೊಂಡವನಲ್ಲ. ಬೇರೆಲ್ಲಾ ಹಬ್ಬಗಳು ಮಧ್ಯಮ ವರ್ಗದ ಯೋಗ್ಯತೆಗನುಗುಣವಾಗಿ ನಮ್ಮ ಮನೆಯಲ್ಲಿ ಆಚರಿಸುತ್ತಾ ಬಂದಿದ್ದು, ಕಾಲಾಂತರದಲ್ಲಿ ಅದು ಬದಲಾವಣೆ ಹೊಂದಿದ್ದೂ ಇದೆ. ಆಚರೆ ಚೌತಿಯ ಆಚರಣೆ ಮಾತ್ರ ನಮ್ಮ ಕುಟುಂಬಕ್ಕೆ ಸೇರಿದ ಹಿರಿಯರ ಮನೆಯಲ್ಲಿ ಅಂದಿನಿಂದ ಇಂದಿನವರೆಗೂ ಯಾವುದೇ ಕುಂದಿಲ್ಲದಂತೆ ಆಚರಿಸಿಕೊಂಡು ಬಂದಿದ್ದೇವೆ.  ಚೌತಿಯ ಆಚರಣೆ ಕೇವಲ ವಿಭಜಿತ ಕುಟುಂಬದ ಆಚರಣೆಯಲ್ಲ. ಇದು ಒಂದು ಕುಟುಂಬಕ್ಕೆ ಸೇರಿದ ಎಲ್ಲಾ ಸದಸ್ಯರು ಒಟ್ಟಾಗಿ ಆಚರಿಸುವ ಹಬ್ಬ. ಒಂದು ಅರ್ಥದಲ್ಲಿ ಗಣೇಶ, ನಮ್ಮ ಕುಟುಂಬದ ಸಾರ್ವಜನಿಕ ದೇವರು ಎನ್ನಬಹುದು. ಇಲ್ಲಿ ಕುಟುಂಬದ ನೂರಾರು ಸದಸ್ಯರು ಒಟ್ಟಾಗುತ್ತಾರೆ.

follow link ನನ್ನ ಬಾಲ್ಯವನ್ನು ನಾನು ನಮ್ಮ ಕುಟುಂಬಕ್ಕೆ ಸೇರಿದ ಮನೆಯಲ್ಲಿ ಕಳೆದಿರಲಿಲ್ಲ. ಆ ಊರಿಗೆ ನಮ್ಮ ಪಯಣ ಏನಿದ್ದರೂ ಗಣೇಶ ಚತುರ್ಥಿ ಅಥವಾ ಏನಾದರೂ ಕಾರ್ಯಕ್ರಮ ಇದ್ದಾಗ ಮಾತ್ರವಿತ್ತು. ಮೊದಲೇ ಕೂಡು ಕುಟುಂಬವಿದ್ದ ಮನೆಯಲ್ಲಿ (ಆಮೇಲೆ ಅಡುಗೆ ಮನೆ ಬೇರೆಯಾಯಿತು) ಏನಾದರೂ ಹಬ್ಬ, ಕಾರ್ಯಕ್ರಮಗಳು ಬಂತೆಂದರೆ ಇನ್ನಷ್ಟು ಅತಿಥಿಗಳು ಸೇರುತ್ತಿದ್ದರು. ಹಾಗಾಗಿ ತುಂಬಿದ ಮನೆಗೆ ಹೋಗುವುದು ನನಗೆ ಯಾವತ್ತಿಗೂ ಸಡಗರವೆನಿಸುತ್ತಿತ್ತು. ಕುಟುಂಬ ಸದಸ್ಯರು, ಭಾರತದ ಯಾವ ಪ್ರದೇಶದಲ್ಲೇ ಇದ್ದರೂ, (ಕೆಲವೊಮ್ಮೆ ವಿದೇಶದಲ್ಲಿದ್ದರೂ ಕೂಡ) ಚೌತಿಗೆ ತಮ್ಮ ರಜೆಯನ್ನು ಹೊಂದಿಸಿಕೊಂಡು ಬರುತ್ತಾರೆ. ಇದೊಂದು ರೀತಿಯಲ್ಲಿ ಧಾರ್ಮಿಕ get together.  ಹಿರಿಯರು ಆಚರಣೆಗೆ ಸಂಬಂಧಪಟ್ಟ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ, ಸಣ್ಣ ಮಕ್ಕಳಿಗೆ ಇದು ಆಟದ ಮನೆ ಇದ್ದ ಹಾಗೆ.  ಈ ಹಬ್ಬ ಮಳೆಗಾಲದಲ್ಲಿ ಬರುವುದರಿಂದ ಅಂಗಳದಲ್ಲಿ ಅಥವಾ ಗದ್ದೆಯಲ್ಲಿ ಆಡಲು ಸಾಧ್ಯವಾಗುವುದತ್ತಿರಲಿಲ್ಲ. ಹಾಗಾಗಿ ಮನೆಯೊಳಗೇ ಆಡಲು ಸಾಧ್ಯವಾಗುವ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆವು.

follow site ಬೆಳೆದ ಹುಡುಗರು ಜಗುಲಿಯಲ್ಲಿ ಕಬಡ್ಡಿ ಆಟ ಆಡಲು ತೊಡಗಿದ್ದರೆಂದರೆ, ಹಿರಿಯರೆಲ್ಲ ಸುತ್ತ ನಿಂತು ನೋಡುತ್ತಿದ್ದರು. ಬಹುಶಃ ಅದು ಅವರಿಗೆ ತಮ್ಮ ಯೌವನವನ್ನು ನೆನಪಿಸುತ್ತದೋ ಏನೋ. ಕೆಲವೊಮ್ಮೆ ಅವರೂ ಪಂಚೆ ಎತ್ತಿ ಕಟ್ಟಿ ಒಂದೆರಡು ಆಟ ಆಡುವುದೂ ಉಂಟು. ಇನ್ನೊಂದು ಕಡೆ ತಾಯಂದಿರು ತಮ್ಮ ಮಕ್ಕಳ ಸಾಹಸವನ್ನು ಪರಸ್ಪರರ ಬಳಿ ಕೊಚ್ಚಿಕೊಳ್ಳುವುದುಂಟು. ಅವರ ಮಾತುಕತೆಯ ವಿಷಯ ಅನೇಕ ಬಾರಿ ಸುತ್ತುವುದು ತಮ್ಮ ಮಕ್ಕಳ ಪರೀಕ್ಷಾ ವಿಕ್ರಮದ ಬಗ್ಗೆ. ನನ್ನ ಹೆಸರು ವಿಕ್ರಮನೇ ಆದರೂ ಹಲವು ವರ್ಷಗಳ ಕಾಲ ನನ್ನ ತಾಯಿಗೆ ನನ್ನ ಬಗ್ಗೆ ಮೆಚ್ಚುಗೆ ಸೂಚಿಸುವ ಮಾತುಗಳನ್ನಾಡುವ ಕಷ್ಟ ಕೊಡಲಿಲ್ಲ. ತಮ್ಮ ಮಕ್ಕಳ ಅಂಕಗಳು ತಮ್ಮ ಪ್ರತಿಷ್ಠೆಯೆಂದೇ ಪರಿಗಣಿಸುವ ತಾಯಂದಿರು ಕೆಲವೊಮ್ಮೆ ಹೇಳುವ ಅಂಕಿ ಸಂಖ್ಯೆಗಳು ಹೆಚ್ಚು ಕಮ್ಮಿ ಆಗುವುದೂ ಉಂಟು!.

ನಮ್ಮ ಮನೆಗೆ ಗಣೇಶನನ್ನು ಮನೆಗೆ ಮೆರವಣಿಗೆಯಲ್ಲಿ ಕರೆ ತರುವುದೇ ಒಂದು ದೊಡ್ಡ ಸಂಭ್ರಮ. ಗಣೇಶನ ವಿಗ್ರಹ ತಯಾರಾಗುವ ಸ್ಥಳ ನಮ್ಮ ಮನೆಯಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿರುವ ಸಾರ್ವಜನಿಕ ಕಲ್ಯಾಣ ಮಂಟಪದಲ್ಲಿ. ಜಾಗಟೆ, ಶಂಕನಾದಗಳೊಂದಿಗೆ ‘ಗಣಪತಿ ಬಪ್ಪಾ ಮೋರಯಾ’ ಎನ್ನುವ ನಮ್ಮ ಜಯಘೋಷಕ್ಕೆ ಊರಿಗೆ ಊರೇ ಸಾಕ್ಷಿಯಾಗಿರುತ್ತಿತ್ತು. ನಮ್ಮ ಮನೆಯನ್ನು ಹೊರತುಪಡಿಸಿ, ಸುತ್ತಮುತ್ತಲೂ ಇನ್ನಾರ ಮನೆಯಲ್ಲೂ ಗಣೇಶನ ವಿಗ್ರಹ ಇಡದೇ ಇದ್ದುದರಿಂದ, ನೆರೆಕೆರೆಯಲ್ಲಿದ್ದವರೆಲ್ಲರೂ ಗಣೇಶನ ದರ್ಶನಕ್ಕೆ ಸಾಯಂಕಾಲ ನಮ್ಮ ಮನೆಗೆ ಬರುತ್ತಿದ್ದರು. ಪ್ರಸಾದ ರೂಪದಲ್ಲಿ ಮೂಡು ಗಣಪತಿ ಪೂಜೆಗೆಂದು ಒಡೆದ ತೆಂಗಿನಕಾಯಿ ಹಾಗೂ ಪಂಚಕಜ್ಜಾಯ ಪಡೆದು ಹೋಗುತ್ತಿದ್ದರು.

get link ಮನೆಯಲ್ಲಿ ಯುವಕರಿಗೆ ಬೆಂಗಳೂರಿನಿಂದ ದೊಡ್ಡಪ್ಪ ಕಳಿಸಿದ ಹೂವಿನಲಂಕಾರ ಮಾಡುವ ಕೆಲಸ ಒಪ್ಪಿಸಲಾಗುತ್ತಿತ್ತು. ಅದರ ಜೊತೆಗೇ ಮೂಡುಗಣಪತಿಗೆ ತೆಂಗಿನಕಾಯಿಗಳನ್ನು ಒಡೆಯುವುದು ಹಾಗೂ ಊಟ ಬಡಿಸುವ ಕೆಲಸವೂ ಇರುತ್ತದೆ. ಮೂಡುಗಣಪತಿಗೆ ಬೆಳೆದ ಹುಡುಗರು ತೆಂಗಿನಕಾಯಿ ಒಡೆಯುತ್ತಿರುವಾಗ ಹಿರಿಯರು ಪಕ್ಕದಲ್ಲಿ ನಿಂತು ಸೂಚನೆಗಳನ್ನು ನೀಡಿ ತಮ್ಮ ಯೌವನದಲ್ಲಿ ತಾವು ಎಷ್ಟು ತ್ವರಿತವಾಗಿ ತೆಂಗಿನಕಾಯಿ ಒಡೆಯುತ್ತಿದ್ದೆವು ಎಂದೆಲ್ಲಾ ನೆನಸಿಕೊಳ್ಳುತ್ತಿದ್ದರು. ಅದಕ್ಕೆ ಉತ್ತರವಾಗಿ ನಾವು ಯುವಕರೂ ಕೂಡ,”ಹೌದು, ನಾವು ಮುದಕರಾದಾಗ ನಾವು ಕೂಡ ನಮ್ಮ ಮುಂದಿನ ತಲೆಮಾರಿನವರಿಗೆ ಇದನ್ನೇ ಹೇಳುತ್ತೇವೆ. ಯಾಕೆಂದರೆ ಹೇಗಿದ್ದರೂ ನಮ್ಮ ವೇಗವನ್ನು ನೋಡಲು ಅವರಿರಲಿಲ್ಲ” ಎಂದು ತಮಾಷೆಯ ಜವಾಬು ನೀಡುತ್ತಿದ್ದೆವು.

Homework Help Year 7 ಬೆಂಗಳೂರಿನಲ್ಲೇ ಬೆಳೆದ, ನನಗಿಂತಲೂ ಹಲವು ವರ್ಷ ಹಿರಿಯರಾದ ನನ್ನ ಡೊಡ್ಡಪ್ಪನ ಮಗ ಒಬ್ಬರಿದ್ದಾರೆ. ಪ್ರತಿ ವರ್ಷ ಗಣೇಶ ಚತುರ್ಥಿಯಂದು ಅವರು ಮನೆಗೆ ಬಂದ ಮೇಲೆ ನಮ್ಮೆಲ್ಲರ ಹೆಸರನ್ನು ಗುರುತಿಸಿ ಹೇಳಲು ಪ್ರಯತ್ನಿಸುವುದು ವಾಡಿಕೆ. ಹಾಗೆಯೇ ನಾವು ಓದುವ ತರಗತಿಯ ಬಗ್ಗೆಯೂ ವಿಚಾರಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ನಾನು ಉಪಾಹಾರ ಬಡಿಸುತ್ತಿದ್ದೆ. ಉಪಾಹಾರ ಸೇವಿಸುತ್ತಿದ್ದ ಅವರು ನನ್ನನ್ನು ನೋಡಿ, “ಮಗೂ, ನೀನೀಗ ಏನು ಕಲಿತಾ ಇದ್ದೀಯ?’ ಎಂದರು. ಅದಕ್ಕೆ ನಾನು, “ನಾನು ಕಲಿತಾ ಇಲ್ಲ, ಕಲಿಸ್ತಾ ಇದ್ದೀನಿ” ಎಂದೆ. ಆಗ ನಾನು ಅಧ್ಯಾಪಕನ ವೃತ್ತಿಗೆ ಇಳಿದು ಎರಡು ವರ್ಷ ಸಂದಿತ್ತು. ನಾನಿನ್ನೂ ವಿದ್ಯಾರ್ಥಿ ಆಗಿಯೇ ಉಳಿದಿದ್ದೇನೆ ಎಂದು ನನ್ನ ಬಗ್ಗೆ ತಪ್ಪು ತಿಳಿದಿದ್ದರೂ ನನ್ನ ನಿಜವಾದ ವಯಸ್ಸಿಗಿಂತ ಸಣ್ಣ ವಯಸ್ಸಿನವ ಎಂದು ತಿಳಿದದ್ದು ಹೆಚ್ಚು ಸಂತೋಷ ನೀಡಿತ್ತು.

ಚೌತಿ ಆಚರಿಸಲು ಸಂಭ್ರಮದಿಂದ ಎಲ್ಲರೂ ಸೇರಿದಾಗ ಎಷ್ಟು ಸಡಗರವೆನಿಸುವುದೋ, ಚೌತಿ ಮುಗಿಯುವಾಗ ಅಷ್ಟೇ ಬೇಸರವಾಗುವುದು. ದೂರದ ಊರುಗಳಲ್ಲಿ, ವಿದೇಶಗಳಲ್ಲಿ ನೆಲೆಯಾದವರು ತಮ್ಮ ಊರು ಸೇರಿಕೊಳ್ಳುವ ಧಾವಂತದಲ್ಲಿದ್ದರೆ, ಮನೆಯ ಹೆಂಗಸರು ಈ ಎಲ್ಲಾ ಪ್ರಕ್ರಿಯೆಗಳನ್ನು ವಿಲೇವಾರಿ ಮಾಡುವ ತಲೆ ಬಿಸಿಯಲ್ಲಿರುತ್ತಾರೆ. ಇಷ್ಟೆಲ್ಲದರ ನಡುವೆಯೂ ನಮ್ಮ ಮೋಜಿಗೆ ಯಾವ ಕೊರತೆಯೂ ಇರುವುದಿಲ್ಲ.  ವಿಸರ್ಜನೆಯ ಸಂದರ್ಭದಲ್ಲಿ ಗಣಪತಿಯನ್ನು ಬಾವಿಯ ಕಟ್ಟೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಒಂದು ಸಣ್ಣ ಆರತಿಯ ನಂತರ ಗಣೇಶನನ್ನು ಬಾವಿಯೊಳಗೆ ವಿಸರ್ಜಿಸುವುದು ಕ್ರಮ. ಈ ಸಂದರ್ಭದಲ್ಲಿ “ಗೋವಿಂದಾನ್ ಗೋವಿಂದ..”ಎಂದು ಜಯಘೋಷ ಮಾಡುತ್ತೇವೆ. ಯಾರಾದರೊಬ್ಬರು “ಗೋವಿಂದಾನ್ ಗೋವಿಂದ..”ಎಂದು ಜಯಘೋಷ ಕೂಗಿದರೆ ಉಳಿದವರು ಒಕ್ಕೂರಲಿನಿಂದ “ಗೋವಿಂದ” ಎಂದು ಕೂಗುತ್ತಾರೆ. ಆದರೆ ಕೆಲವೊಮ್ಮೆ ಹಿರಿಯರಿಗೆ ತಮಾಷೆ ಮಾಡಲು ನಾವು, ಅವರು ಗೋವಿಂದಾನ್ ಗೋವಿಂದಾ ಎಂದು ಕೂಗಿ ಅದಕ್ಕೆ ಉತ್ತರವಾಗಿ ನಮ್ಮ ಜಯಘೋಷದ ನಿರೀಕ್ಷೆಯಲ್ಲಿದ್ದಾಗ ಅವರನ್ನು ಬೇಸ್ತು ಬೀಳಿಸಲು ಯಾವ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಸ್ವತಃ ಅವರ ಮಕ್ಕಳು ಕೂಡ!

Qualities Of A Good Friend Essay ನಮ್ಮ ಬಾಲ್ಯಾವಸ್ಥೆಯನ್ನು ಕಳೆದು ಈಗ ಬಹಳ ವರ್ಷಗಳು ಸಂದಿವೆ. ಅಂದು ಕಬಡ್ಡಿ, ಕ್ರಿಕೆಟ್ ಅಥವಾ ಇಸ್ಪೀಟು ಆಡುತ್ತಿದ್ದ ಮಕ್ಕಳು, ಈಗ ದೊಡ್ಡವರಾಗಿದ್ದಾರೆ. ಕೆಲವರಿಗೆ ಬೆಳೆದು ನಿಂತ ಮಕ್ಕಳೂ ಇದ್ದಾರೆ. ಈಗಿನ ಸಣ್ಣ ಮಕ್ಕಳು ಎಲ್ಲಾ ಆಟಗಳನ್ನು ಸ್ಮಾರ್ಟ್ ಫೋನಿನಲ್ಲೇ ಆಡುತ್ತಾರೆ. ಅವರಿಗೆ ಫೋನ್ ನೀಡಿದರೆ ಅವರಿಂದ ಯಾವ ಉಪದ್ರಪವೂ ಇರದು ಎಂದು ಹಿರಿಯರಿಗೂ ನಿರಾಳ ಭಾವ.

ಯಾಕೋ ಕಳೆದ ಅನೇಕ ವರ್ಷಗಳಿಂದ ಗಣೇಶ ಚತುರ್ಥಿಗೆ ಸೇರುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಅಂತ ಅನ್ನಿಸುತ್ತಿದೆ. ಮನೆಯ ಹೆಣ್ಣು ಮಕ್ಕಳೆಲ್ಲಾ ವಿವಾಹವಾಗಿ ತಮ್ಮ ಗಂಡನ ಮನೆ ಸೇರಿದ್ದಾರೆ ಎನ್ನುವುದು ಒಂದು ಕಾರಣವಾದರೂ ಅದು ಸರಿಯಾದ ಕಾರಣವಲ್ಲ. ಏಕೆಂದರೆ ಕೆಲವು ಹೆಣ್ಣು ಮಕ್ಕಳು ಈಗಲೂ ತಮ್ಮ ಸಂಸಾರ ಸಮೇತ ಚೌತಿ ಆಚರಿಸಲು ಇಲ್ಲಿ ಬರುತ್ತಾರೆ. ಇನ್ನು ಕೆಲವು ನೆಂಟರು ಈ ಹಿಂದೆ ನಮ್ಮ ಮನೆಗೆ ಬರುತ್ತಿದ್ದರೂ, ನಂತರ ತಮ್ಮ ಕುಟುಂಬದಲ್ಲೂ ಆಚರಣೆ ಆರಂಭವಾಗಿ ಅಲ್ಲೇ ಆಚರಿಸುತ್ತಾರೆ. ಆದರೂ ನಮ್ಮ ಕುಟುಂಬಕ್ಕೆ ಬರುತ್ತಿರುವ ಹೊಸ ಸದಸ್ಯರ ಸಂಖ್ಯೆ, ಉತ್ತಮಗೊಂಡ ಸಾರಿಗೆ ವ್ಯವಸ್ಥೆ, ಬಂದು ಹೋಗುವ ಆರ್ಥಿಕ ಹಾಗೂ ಇತರ ಅನುಕೂಲತೆಗಳನ್ನು ಗಮನಿಸಿದಾಗ ಸಂಖ್ಯೆ ಜಾಸ್ತಿಯಾಗಬೇಕಿತ್ತು. ಆದರೆ ನನ್ನ ಕಣ್ಣಿಗೆ ಏಕೋ ಹಾಗೆ ಕಾಣುತ್ತಿಲ್ಲ.

ಚೌತಿಯ ದಿನವೇ ಮನೆಗೆ ಬಂದು ತಲುಪಿದ ನನ್ನ ಚಿಕ್ಕಪ್ಪನ ಮಗನೊಬ್ಬ, ಈ ಬಾರಿ ಏಕೋ ಚೌತಿ ಬಹಳ ಬೇಗ ಮುಗಿದಂತೆ ಅನ್ನಿಸುತ್ತಿದೆ ಎಂದ. ಅದಕ್ಕೆ ಆತನ ಅಪ್ಪ, ಹೌದು ನಿನಗೇನೋ ಇವತ್ತು ಬಂದು ಬೇಗ ಮುಗಿದಂತೆ ಅನ್ನಿಸುತ್ತಿದೆ. ಆದರೆ ನನಗೆ ಹದಿನೈದು ದಿನದ ಹಿಂದೆಯೇ ಆರಂಭವಾಗಿದೆ ಎಂದರು. ಅವರು ಚೌತಿಗೆ ಮನೆಗೆ ಬೇಕಾದ ಸಾಮಾನುಗಳು, ಕೆಲಸದಾಳು ಮುಂತಾದ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.

ನಮ್ಮ ಮನೆಯಲ್ಲಿ ಮೂವತ್ತು ನಲವತ್ತು ವರ್ಷಗಳಿಂದ ಯಾವ ತಲೆಮಾರು ಚೌತಿಯನ್ನು ನಡೆಸಿಕೊಂಡು ಬರುತ್ತಾ ಇದೆಯೋ, ಇಂದಿಗೂ ಅವರೇ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರಲ್ಲ ಎಂದು ಅನ್ನಿಸಿದ್ದೇ ಆಗ. ನನ್ನ ಹಿರಿಯ ತಲೆಮಾರಿನ ಅತಿ ಚಿಕ್ಕ ಸದಸ್ಯರ ವಯಸ್ಸು ಐವತ್ತು ದಾಟಿದೆ. ಆದರೆ ನಾವಿನ್ನೂ ಆ ಹೊಣೆಯನ್ನು ಹೊತ್ತಿಕೊಂಡಿಲ್ಲ ಎಂದು ನನ್ನ ಚಿಕ್ಕಪ್ಪ ತಮ್ಮ ಮಾತಿನಲ್ಲಿ ಸೂಚ್ಯವಾಗಿ ಹೇಳಿದಂತಿತ್ತು.

5 thoughts on “ವಕ್ರತುಂಡ ಮಹಾಕಾಯ

  1. ಕಥೆಯಲ್ಲಿ ಬಹಳ ನೈಜತೆ ಇದೆ ಹಾಗೂ ಚೌತಿಯ ಮಹತ್ವವನ್ನು ಪರಿಚಯಿಸಿದ್ದೀರಿ …
    ” ಚೌತಿ is not just a festival… It is reunion of relationships”

  2. ತುಂಬಾ ಚೇನ್ನಗಿದೆ ಇದರಿಂದ ಅನೇಕ ವಿಷಯಗಳು ನಮಗೆ ಕಂಡು ಬರುತ್ತದೆ.

Leave a Reply

Top