You are here
Home > ಪುಟ ೩ > ವಿರೋಚನ – ಸುದೀಪ್ ಶೆಟ್ಟಿ

ವಿರೋಚನ – ಸುದೀಪ್ ಶೆಟ್ಟಿ

ಭೂತದ ಕರಿ ನೆರಳು ವಾಸ್ತವದ ಮೇಲೆ ಬಿದ್ದು , ಭವಿಷ್ಯದ  ಕತ್ತಲೆ ಕಣ್ಣ ಮುಂದೆ ಬಂದು ರೌದ್ರ ತಾಂಡವವಾಡಿದಾಗ, ಹೆದರಿ ಮಾಡಿದ ಒಂದು ಸಣ್ಣ ತಪ್ಪಿಗೆ,  ವರ್ತಮಾನ ಮತ್ತೆ ಭವಿಷ್ಯ ಎರಡರಿಂದಲೂ ಭೂಗತನಾದೆ. ಸೂರ್ಯ ಭೂಮಿಯ ಮದ್ಯೆ ಬಂದು ಗ್ರಹಣ ಸ್ರಷ್ಟಿಸಿದ ಚಂದ್ರನನ್ನ ಅಪರಾಧಿಸಲೇ ಅಥವಾ ಗ್ರಹಣಕ್ಕೆ ಹೆದರಿ ಬದುಕಿನ ಕನಸನ್ನು ಚಟ್ಟ ಹತ್ತಿಸಿ ರಕ್ತಸಂಬಂದವನ್ನ? ಚಿತೆಯಲ್ಲಿ ಸುಟ್ಟುಹಾಕಿ ಗ್ರಹಣದ ಕರಿ ಮುಗಿಲಿಗೆ  ಹೆದರಿ ಘೋರ ಕತ್ತಲೆಯ ಅರಮನೆಯಲ್ಲಿ ಸಮಾಧಿಯಾದ ಅವನನ್ನ ದೂಷಿಸಲೇ. ಮುಂಜಾನೆಯ ಸೂರ್ಯನ ಲಯನಗಳು ಮಂಜಿನ ಹನಿಯ ಮೇಲೆ ಬಿದ್ದು ಹೊನ್ನಿನ ಬಣ್ಣದ ಇಬ್ಬನಿಯ ತೋರಣದಿಂದ ಅವನಿಯನ್ನ ಅಲಂಕರಿಸುವ ಹಾಗೆ ಅವಳ ಮುಗ್ಧ ಮಂದಹಾಸ ನನ್ನಲ್ಲಿ ಚೈತನ್ಯ ತುಂಬುತಿತ್ತು. ಎಷ್ಟೇ ಆದರೂ ಅವಳ ಹೆಸರು ಅದೇ ತಾನೇ  ಬಾನುಜ ಸೂರ್ಯನ ಮಗಳು ಯಮುನೆಯ ಇನ್ನೊಂದು ಹೆಸರು ಅದೇ ಅವಳ ಹೆಸರು ಬಾನುಜ. ಎಲ್ಲ ಸಿನಿಮಾ ಕತೆಗಳಲ್ಲಿ ಬರುವ ಕಥಾ ನಾಯಕಿಯರ ಹಾಗೆ ಸುಂದರ ಮೈ ಮಾಟ ನೀಳ ಕೇಶರಾಶಿ, ತಿದ್ದಿ ತೀಡಿದ ಹುಬ್ಬು, ರಸಿಕತೆಯನ್ನು  ಹೆಚ್ಚಿಸುವ ತುಟಿ, ಸ್ಪ್ರಿಂಗಿನಂತ ಮುಂಗುರುಳು, ಗುಳಿಕೆನ್ನೆ ಇದು ಯಾವುದು ನನ್ನ ಬಾನುಜಾಳಿಗೆ ಇರಲಿಲ್ಲ. ಸಾಮಾನ್ಯ ನೋಟ ಎಣ್ಣೆ ಗಪ್ಪು ಬಣ್ಣ ಸರಳ ಉಡುಗೆ ಕಪ್ಪಾದರು ಲಕ್ಷಣವಾದ ಹುಡುಗಿ.

buy completed coursework ಪದವಿ ಜೀವನದಲ್ಲಿ ನಮ್ಮ ಗೆಳೆಯರ ತಂಡ ಆ ಹುಡುಗಿ ನನಗೆ, ಈ ಹುಡುಗಿ ನಿನಗೆ , ಅವಳು ನನ್ನವಳು, ಇವಳು ನಿನ್ನವಳು ಎಂದು ದೂರದಲ್ಲಿ ಬರುವ ಹುಡುಗಿಯರನ್ನ ನೋಡಿ ಆರಿಸಿಕೊಳ್ಳುವ ಸಮಯದಲ್ಲಿ ನನ್ನ ಹುಡುಗಾಟದ ಆಯ್ಕೆಯಾಗಿದ್ದು ಪಾಪದ ಬಾನುಜ. ವಯಸ್ಸಿನ ಪುಂಡತನ ಹುಂಬಗೆಳೆಯರ ಧೈರ್ಯದ ಮಾತುಗಳು ಎರಡರ ಫಲಶ್ರುತಿಯಾಗಿ ಒಮ್ಮೆ ಬಾನುಜಾಳಿಗೆ ನನ್ನ ಪ್ರೇಮ ನೈವೇದ್ಯವನ್ನ ಅರ್ಪಿಸಿದೆ.  ಪ್ರಥಮ ಚುಂಬನ ದಂತ ಭಗ್ನ ದೇವಿ ಒಲಿಯಲಿಲ್ಲ. ಮತ್ತೆ ಮತ್ತೆ ಅದೇ ಪ್ರಯತ್ನ ಅದೇ ಸ್ನೇಹಿತರ ಹುಚ್ಚು ಪ್ರೋತ್ಸಾಹ ನನ್ನ ಹುಡುಗಾಟದ ಪ್ರೇಮವನ್ನ ನಿಜವೆಂದು ನಂಬಿಯೂ ಅಥವಾ ನನ್ನ ಬಿಟ್ಟು ಬಿಡದ ಪ್ರಯತ್ನಕ್ಕೊ ಅಥವಾ ಅವಳ ಎಲ್ಲ ಸ್ನೇಹಿತೆಯರು ಅದಾಗಲೇ ಬಾಯ್ ಫ್ರೆಂಡ್ಸ್ ಹೊಂದಿದ್ದು ಇವಳು ಒಂಟಿಯಾಗಿ ಉಳಿದಿದ್ದಿಕ್ಕೋ? ಏನೋ ಕೊನೆಗು ಬಾನುಜ ನನ್ನ ಪ್ರೀತಿಯನ್ನ ಒಪ್ಪಿದಳು. ಎಲ್ಲ ಪ್ರೇಮಿಗಳ ಹಾಗೆ ನಾವು ಕೂಡ  ಪಾರ್ಕಿನ ಕಲ್ಲು ಬೆಂಚಿನ ಖಾಯಂ ವಾರಸದಾರರು ಆದ್ವಿ.

ಆಲಿ ಬಾಯಿಯ ಅಂಗಡಿಯಲ್ಲಿ ತಿಂದ ಪಾನೀಪುರಿಯ ಲೆಕ್ಕ ಲಕ್ಷಕ್ಕೆ ಮೀರುತ್ತಿತ್ತು .. ವೇದನಾಥೇಶ್ವರ ದೇವಸ್ಥಾನದಲ್ಲಿ ಗಂಡ ಹೆಂಡತಿಯರ ಹಾಗೆ ಹೋಗಿ ಪೂಜೆ ಮಾಡಿಸಿದ್ದು ರಾತ್ರಿ ಹೊತ್ತು ಧೈರ್ಯ ಮಾಡಿ ಅವಳ ಹಾಸ್ಟೆಲ್ ಗೆ ನುಗ್ಗಿ ಅವಳಿಗೆ ಕೇಶಕಾಂತಿ  ಶಾಂಪೂ ತಂದು ಕೊಟ್ಟಿದು, ಕಾಲೇಜು ಫೀಸ್ ಅಂತ ಸುಳ್ಳು ಹೇಳಿ ಒಬ್ಬರಿಗೊಬ್ಬರು ಬಟ್ಟೆ ಕೊಡಿಸಿದ್ದು, ವಿಶಾಲ್ ಚಿತ್ರಮಂದಿರದಲ್ಲಿ ನೆಡೆಯುತಿದ್ದ ನಮ್ಮ ಭಾನುವಾರದ ಸ್ಪೆಷಲ್ ಕ್ಲಾಸ್ ಗಳು, ವಿರೋಚನ ಎನ್ನುವ ನನ್ನ ಹೆಸರನ್ನ ಅವಳು ಗಿ ಎಂದು ಕೈಯಲ್ಲಿ  ಮದರಂಗಿ ಇಂದ ಬಿಡಿಸಿ ಕೊಂಡಿದ್ದು, ನನ್ನ ಕೈಯಲ್ಲಿ ಇರುವ ಅಕ್ಷರದ ಹಚ್ಚೆ  ಎಲ್ಲವೂ ಕೊಡ ನೆನಪಿನ ಆಲ್ಬಮ್ ಅಲ್ಲಿ ಅಳಿಸಿಸಲಾಗದ ಫೋಟೋಗಳು. ರಾತ್ರಿಯಾಗುತ್ತಿದಂತೆ  ಮೋಬೈಲಿನಲ್ಲಿ ಶುರು ಆಗುತ್ತಿದ್ದ ನಮ್ಮ ಭವಿಷ್ಯದ ಸಂಸಾರದ ರೂಪುರೇಷೆಗಳು, ಎಲ್ಲಿಯ ತನಕ ಯೋಚನೆ ಯೋಜನೆ ಎಂದರೆ ನಮ್ಮ ಮರಿ ಮಕ್ಕಳ ಹೆಸರನ್ನ  ಚರ್ಚಿಸುವ ತನಕ. ಬಾನುಜಳ ಪ್ರೀತಿ ಪ್ರೇಮದ ಜೊತೆ ಪದವಿ ಮುಗಿದದ್ದೇ ಗೊತ್ತಾಗಲಿಲ್ಲ.

enter site ಎಲ್ಲವನ್ನ ತನ್ನ ಒಡಲೊಳಗೆ ಸೇರಿಸಿಕೊಳ್ಳುವ ಕಡಲ ಹಾಗೆ ಎಲ್ಲರಿಗೂ ಕೆಲಸ ಕೊಟ್ಟು ತನ್ನ ಕಡೆ ಬರ ಸೆಳೆಯುವ ಬ್ರಹತ್ ಬೆಂಗಳೂರು. ನಮ್ಮ ಸ್ವಂತ ಊರು ಜೊತೆಗೆ  ಪದವಿ ಎರಡು  ನನ್ನ ಬಳಿ ಇದ್ದರೂ, ವಿಧಿಯಾಟದಲ್ಲಿ ಸೂತಕ ತಾಗಿದ್ದು ನನ್ನ ವೃತ್ತಿ ಜೀವನಕ್ಕೆ ಪದವಿಗೆ ಹೋಲಿಕೆಯಾಗದ ಸಣ್ಣ ಕೆಲಸ, ಕಡಿಮೆ ಸಂಬಳ, ಅಕ್ಕನ ಮದುವೆಯ ಮಾಡಿಸ ಬೇಕು, ವಯಸ್ಸಾದ ತಂದೆ ತಾಯಿ ಸಮಸ್ಯೆಗಳ ಸರಮಾಲೆಗಳು ದಿನಾ ನನ್ನ ಸ್ವಾಗತಿಸುತ್ತಾ ಇದ್ದವು. ಆಗೆಲ್ಲ ನನ್ನಲಿ ಚೈತನ್ಯ ತುಂಬುತ್ತಿದದ್ದೇ ಬಾನುಜ. ವಿರೋಚನ ಯೋಚಿಸ ಬೇಡ ನಾವಿಬ್ಬರು ಮದುವೆಯಾಗಿ ಇಬ್ಬರು ಕೆಲಸಕ್ಕೆ ಹೋದರೆ ನಿನ್ನ ಸಮಸ್ಸೆ ಕಡಿಮೆಯಾಗುತ್ತೆ. ಅದು ಎಂತ ಮಾತುಗಳು, ಬಾನುಜಳ ನಿಸ್ವಾರ್ತ ಪ್ರೇಮದ ಆ ಮಾತುಗಳು ಕೇಳಿ ಅವಳ ಮೇಲಿನ ಪ್ರೀತಿ ಇಮ್ಮಡಿ  ಆಯ್ತು.  ಅಲ್ಲಿಂದಲೇ ಅವಳನ್ನ ಹುಚ್ಚು ಪ್ರೇಮಿಯಂತೆ ಪ್ರೀತಿಸಲು ಶುರುಮಾಡಿದೆ. ಅರೆ ಕ್ಷಣ ಅವಳನ್ನ ಬಿಟ್ಟು ಇರಲಾರದಷ್ಟು ಬಾನುಜಳ ಹುಚ್ಚು ಪ್ರೇಮಿ ವಿರೋಚನ ನಾನಾದೆ.

ಅಂದು ನಮ್ಮ ನಾಲ್ಕನೇ ವರ್ಷದ ಪ್ರೇಮ ದಿನೋತ್ಸವ. ಯಾಕೋ ಏನು ಅಂದು ವರುಣನ  ಆರ್ಭಟ ಸ್ವಲ್ಪ ಜೋರೇ ಇತ್ತು. ಮಳೆ ನಿಂತ ಕ್ಷಣಕ್ಕೆ ಭಾನುಜಳನ್ನ ಭೇಟಿಮಾಡಲು ದೇವೈಯ್ಯ ಪಾರ್ಕ್ ಕಡೆಗೆ ಹೋದೆ. ಅಂದು ಯಾಕೋ ಬಾನುಜಳ ಮುಖದಲ್ಲಿ ಮಂದಹಾಸ ಇರಲಿಲ್ಲ. ವಿರು, ವಿರೋಚನ ಸಾರೀ ಕಾಣೋ ,ನನ್ನ ಮರೆತು ಬಿಡು ನಂಗೆ ಮದುವೆ ನಿಶ್ಚಯ ಆಗಿದೆ ಮುರುಳಿ ಬಾಲಕೃಷ್ಣ ಅಂತ ಸಾಫ್ಟ್ವೇರ್ ಇಂಜಿನಿಯರ್ . ನೀನೇ ಯೋಚನೆ ಮಾಡು ?ನಿಂಗೆ ಇನ್ನ ಸರಿಯಾದ ಕೆಲಸ ಇಲ್ಲ, ಮನೆಯಲ್ಲಿ ಮದುವೆಯಾಗದ ಅಕ್ಕ ಬೇರೆ ,ನೀನು ಸೆಟಲ್ ಆಗೋಕ್ಕೆ ಇನ್ನ ನಾಲ್ಕು ವರ್ಷ ಬೇಕು ಅಷ್ಟರಲ್ಲಿ ನಾನು  ನನ್ನ ಕತೆ ಏನು ??. ಒಂದು ಕ್ಷಣ ಸಿಡಿಲು ನನ್ನ ಪಕ್ಕದಲ್ಲೇ ಬಿದ್ದ ಹಾಗೆ ಬಾಸವಾಹಿತು ಜಾರಿಬರುತಿದ್ದ ಕಣ್ಣೀರು ಕೂಡ ಭಾರವಾಹಿತು. ಮನದ ಮೊಲೆ ಮೊಲೆ  ಕೂಡ  ಶೂನ್ಯದಂತೆ ಬಾಸವಾಹಿತು ಆದರೂ ಸುದಾರಿಸ್ಕೊಂಡು ಕೇಳಿದೆ ಬಾನುಜ, ನೀನು ,ನಮ್ಮ ಪ್ರೀತಿಗೆ ಪಂಚಾಂಗ ಹಾಕಿದ ಮರು ಕ್ಷಣನೇ ಈ ಯೋಚನೆ ಮಾಡ ಬೇಕಿತ್ತು, ಈಗ ಮನದಲಿ ಪ್ರೀತಿಯ ಅರಮನೆ ಕಟ್ಟಿ ಹೇಗೆ ಕೆಡೆದು ಹಾಕಲಿ ಬಾನುಜ. ಮರಿ ಮಕ್ಕಳ ಹೆಸರು ಯೋಚಿಸಿದ ನಿನಗೆ ಆಗೆಲ್ಲ ಯಾಕೆ ಈ ಯೋಚನೆ ಬರಲಿಲ್ಲ ? ಅಥವಾ ನಿನಗೆ ಟೈಮ್ ಪಾಸ್ ಗೆ ಅಂತ ಒಬ್ಬ ಹುಡುಗ ಬೇಕಿತ್ತಾ ?

ನಾನು ನಾಲ್ಕು ವರ್ಷದ ನಿನ್ನ ಪ್ರೀತಿಗೆ ಬೆಲೆ ಕೂಡ  ಬೇಕಾ ಇಲ್ಲ, ಇಪ್ಪತ್ನಾಲ್ಕು ವರ್ಷದ ಹೆತ್ತವರ ಪ್ರೀತಿಗೆ ಬೆಲೆ ಕೂಡ  ಬೇಕಾ ನೀನೇ ಹೇಳು?  ನೀನು ಸ್ವಾರ್ಥಿ  ಕಾಣೊ, ನಿನ್ನ ಪ್ರೀತಿ ಮಾಡಿ ತಪ್ಪು ಮಾಡಿದೆ ಗುಡ್ ಬೈ ನಿನ್ನ ಮುಖ ನಂಗೆ ತೋರಿಸಬೇಡ. ಏನು ತಪ್ಪು ಮಾಡದ ನನಗೆ ಅಪರಾಧಿ ಪಟ್ಟ ಕಟ್ಟಿ ಹೊರಟೆ ಬಿಟ್ಟಳು. ಬಾನುಜ ನೀನು ಇಲ್ಲ ಅಂದ್ರೆ ನಾನು ಸತ್ತು  ಹೋಗ್ತೀನಿ ಪ್ಲೀಸ್ ಬಾನುಜ ಇಲ್ಲ. ತಿರುಗದೆ ಹೊರಟು ಹೋದಳು. ಅವತ್ತು ಚರಂಡಿ ಸೇರಿದ್ದು ಅವಳಿಗಾಗಿ ತಂದ ಅವಳ ಇಷ್ಟದ  ಗುಲಾಬಿ ಬಣ್ಣದ ಹೈ ಹಿಲ್ಡ್ಸ್ ಚಪ್ಪಲಿ ಮತ್ತೆ ನನ್ನ ಕಣ್ಣೀರು. ಅಯ್ಯೋ ಎಂಥ ಹುಚ್ಚ ಪ್ರೇಮಿ ನಾನು, ಚಪ್ಪಲಿಯನ್ನ ಗಿಫ್ಟ್ ಆಗಿ ಕೂಡುವಷ್ಟು ಹುಚ್ಚ.

ವಿರು ,ವಿರೋಚನ ,ಈ ಕಡೆ ಬಾ. ಅರೆ ಇದೇನಿದು! ಅಹ ಘಟನೆ ನೆಡೆದು , ನಾಲ್ಕು ವರ್ಷದ ನಂತರ ನನ್ನ ಬಾನುಜಳ ಸ್ವರ .ಹೌದು ಬಾನುಜನೇ!  ಕರೆದದ್ದು ವಿರೋಚನನ್ನೇ,

ಆದರೆ

ಆದರೆ

ನಾನು ಅಲ್ಲ …..ಅವಳ ಮಗ ವಿರೋಚನ…. ವಿರೋಚನ ಮುರುಳಿ ಬಾಲಕೃಷ್ಣನನ್ನ.

ಇದೇನಿದು ಬಾನು ನಾನು ಇರೋ ಕಡೆ ಬಂದಿದಾಳೆ ..ಅಯ್ಯೋ ಬಾನು ನೀನು ನನ್ನ ತುಳೀತಾ ಇದ್ದೀಯ ಅಹ ಕಡೆ ಹೋಗು ,ಅದು ಬೇರೆ  ಗುಲಾಬಿ ಬಣ್ಣದ ಹೈ ಹಿಲ್ಡ್ಸ್ ಚಪ್ಪಲಿ  ಹಾಕೊಂಡು, ನೋವು  ಆಗುತ್ತೆ ಅಹ ಕಡೆ ಹೋಗು ಬಾನು ಎಬ್ಬ ಹೇಗಪ್ಪಾ ಇವಳಿಗೆ ಹೇಳಲಿ??

ಹೌದು ನಾಲ್ಕು ವರ್ಷದ  ಹಿಂದೆ ಬಾನುಜ ನನ್ನ ಬಿಟ್ಟು ಮುರುಳಿಯನ್ನ ಮದುವೆಯಾದಳು .ಅವಳಿಲ್ಲದೆ ಬದುಕು ಶೂನ್ಯ ಎನಿಸಿತು. ಅವಳ ಮೇಲಿಟ್ಟ ಹುಚ್ಚು ಪ್ರೀತಿಯಿಂದ ಅವಳಿಲ್ಲದೆ,  ಮಾನಸಿಕ ಸ್ಥಿಮಿತ ಕಳೆದು ಕೊಂಡು ಒಂದು ದಿನ ನೇಣಿಗೆ ಶರಣಾದೆ ನನ್ನ  ಪ್ರಾಣವನ್ನ ನಮ್ಮ ಪ್ರೇಮಕ್ಕೆ ಬಲಿಕೊಟ್ಟೆ. ಇವತ್ತು ಬಾನುಜ, ಗುಲಾಬಿ ಬಣ್ಣದ ಹೈ ಹಿಲ್ಡ್ಸ್ ಚಪ್ಪಲಿ  ಹಾಕೊಂಡು ನಿಂತಿದಳಲ್ಲಾ ಅಲ್ಲೇ ಅಲ್ಲೇ ಕೆಳಗೆ ಮಣ್ಣಿನ ಸಮಾಧಿಯೊಳಗೆ ನಾನು ಇದೀನಿ. ಎಷ್ಟು ಚನ್ನಾಗಿ ಇದ್ದಾಳೆ ಬಾನು. ಆ ಗಾಳಿಗೆ ಎಣ್ಣೆಗಪ್ಪು ಬಣ್ಣ ಹೋಗಿ ಬಿಳಿಯಾಗಿದ್ದಾಳೆ ,ಮೈ ಕೈ ತುಂಬಿ ಸುಂದರವಾಗಿದ್ದಾಳೆ. ಆದರೆ ನಾನು ಕೊಳೆತ ಶವವಾಗಿ , ಮಾಂಸವೆಲ್ಲ ಕರಗಿ, ಮೂಳೆಗೆ  ಗೆದ್ದಲು ಹಿಡಿದು ಅನಾಚಾರವಾಗಿ ಮುಕ್ತಿ ಸಿಗದ ಅಂತರಾತ್ಮವಾಗಿದೀನಿ.”

“ಎಷ್ಟು ಚನ್ನಾಗಿ ಇದೆ ಬಾನುಜಳ ಸಂಸಾರ ,ಮುದ್ದಾದ ಮಗು, ಪ್ರೀತಿ ಮಾಡೋ ಗಂಡ, ಅತ್ತೆ, ಮಾವ, ಅಪ್ಪ ಅಮ್ಮ ಎಲ್ಲ ಇದ್ದಾರೆ. ಆದರೆ ನನ್ನ ಸಂಸಾರ? ಇರೋ ಒಬ್ಬ ಮಗ ನೇಣು ಹಾಕಿಕೊಂಡಿದನ್ನ ನೋಡಿ ಮಾನಸಿಕ ಹುಚ್ಚಿ ಯಾಗಿ ನಿಮ್ಹಾನ್ಸ್ ಸೇರಿರೋ ನನ್ನ ಅಮ್ಮ . ಅಮ್ಮನ  ಆಸ್ಪತ್ರೆ ಖರ್ಚಿಗೆ ಇರೋ ಒಂದು ಮನೇನು ಮಾರಿ 60 ವರ್ಷದಲ್ಲೂ   ಹಗಲಲ್ಲಿ ಕೆಲಸಕ್ಕೆ ಹೋಗಿ ರಾತ್ರಿ ಅಮ್ಮನ ಸೇವೆ ಮಾಡೋ  ಕೆಮ್ಮು ಉಬ್ಬಸ ಇರೋ ಅಪ್ಪ. 35ಆದರೂ ಮದುವೆ ಯಾಗದೆ ಅಕ್ಕ. ಮೂರೂ ಹೊತ್ತು  ಊಟಕ್ಕೆ ಗತಿ ಇಲ್ಲದೆ ಬೀದಿಗೆ ಬಂದಿದೆ ನನ್ನ ಸಂಸಾರ”.

ಯಾರಾದರೂ ನನ್ನ ಬದುಕಿಸ್ತೀರಾ ಪ್ಲೀಸ್, ನಾನು ಮತ್ತೆ ಬದುಕ ಬೇಕು ಆಸ್ಪತ್ರೆಯಲ್ಲಿ ಹುಚ್ಚಿ ಯಾಗಿರೋ ನನ್ನ ಅಮ್ಮನಿಗಾಗಿ ಬದುಕ ಬೇಕು . 60 ವರ್ಷದ ನನ್ನ ತಂದೆಗೆ  ಕೊನೆ ಪಕ್ಷ ಯುಗಾದಿಗಾದರು ಒಂದು ಹೊಸ ಬಟ್ಟೆ ಕೊಡಿಸೋಕ್ಕಾದರೂ ನಾನು ಮತ್ತೆ ಬದುಕ ಬೇಕು. ನನ್ನ ಬದುಕಿಸ್ತೀರಾ ಪ್ಲೀಸ್, ನನ್ನ ಅಕ್ಕಂಗೆ ಮದುವೆ ಮಾಡಿ ಕಾಮುಕರ ಕೆಟ್ಟ ದ್ರಷ್ಟಿ ಇಂದ ಅವಳನ್ನ ಬಿಡಿಸಿ ಅವಳ ಸುಖದ ಸಂಸಾರ ನೋಡಲಿಕ್ಕೆ ಆದರೂ ನಾನು ಮತ್ತೆ ಬದುಕ ಬೇಕು. ನನ್ನ ಬದುಕಿಸ್ತೀರಾ ಪ್ಲೀಸ್. ನಮ್ಮ ಹಳೆ ಹುಡುಗಿ ಅವಳ ಮಗನಿಗೆ ನಮ್ಮ ಹೆಸರು ಇಟ್ಟ ಕೂಡಲೇ ಸತ್ತು ಹೋಗಿರೋ ನಾವುಗಳು ನಮ್ಮ ಹೆತ್ತವರಿಗೆ ವಾಪಸ ಸಿಗ್ತೀವಾ ? ನಮ್ಮ ಹೆತ್ತವರ ನೆಮ್ಮದಿಗಳನ್ನ ನಮ್ಮ ಶವದ ಜೊತೇನೆ ಸಮಾಧಿ ಮಾಡ್ಕೊಂಡು ಆತ್ಮಗಳಾಗಿ ದಿನಾಲೂ ನೋವು ಅನುಭವಿಸ್ತಾ ಇರೋ ನನ್ನ ಅಂತ ಎಷ್ತ್ತೋ ಆತ್ಮ ಈ ಸ್ಮಶಾನದಲ್ಲಿ ಇದೆ.  ಕೊನೆ ಪಕ್ಷ ನನ್ನ ಕಥೇನ ಪ್ರೀತಿ ಪ್ರೇಮ ಅಂತ ಬದುಕನ್ನ ಹಾಳು ಮಾಡಿಕೊಳ್ಳೋ ಯುವುಕ ಯುವತಿಯರಿಗೆ ಹೇಳ್ತೀರಾ ಪ್ಲೀಸ್.

ನಾನೊಬ್ಬ ಹುಚ್ಚ ಎಲ್ಲಿ ನನ್ನ ಕಥೆ ನನ್ನ ಗೋಳು ನಿಮಗೆ ಕೇಳಿಸುತ್ತೆ .  ನಿಮಗೆ ಬಿಡಿ ಪಕ್ಕದಲ್ಲೇ ನಿಂತಿರುವ ಬಾನುಜಾಳಿಗೆ ನನ್ನ ಅಳು ಗೋಳು ಕೇಳಿಸ್ತಾ. ಇಲ್ಲ ಯಾಕಂದ್ರೆ ನಾನು ಮುಕ್ತಿ ಸಿಗದ ವಿರೋಚನನ ಆತ್ಮ.

Leave a Reply

Top