You are here
Home > ಪುಟ ೧ > ಶ್ರಮಿಕನ ನೋವು – ರಜನಿ ಅಲ್ಸೇ

ಶ್ರಮಿಕನ ನೋವು – ರಜನಿ ಅಲ್ಸೇ

ಅದೊಂದು ರವಿವಾರ… ಸೂರ್ಯನ ಕಿರಣಗಳು ಭುವಿಗಿಳಿಯುವ ಮುನ್ನವೇ ಸುಪ್ರಭಾತ ಹಾಡಿತ್ತು ನಮ್ಮನೆ ರೇಡಿಯೋ. ಅಮ್ಮನ ನಿತ್ಯ ಕೆಲಸಗಳು ಮುಗಿದಿದ್ದವು. ‘ರಜನೀ ಏಳೂ.. ಗಂಟೆ ಎಂಟಾಯ್ತು..’ ಎಂದದ್ದು ಎಲ್ಲೋ ಕನಸಲ್ಲಿ ಕೇಳಿದಂತೆ ಅನ್ನಿಸಿತ್ತು. ಬೆಚ್ಚಿ ಬಿದ್ದು ಎದ್ದು ನೋಡಿದರೆ ಗಂಟೆ ಆರೂವರೆ. ಮನಸ್ಸಿಲ್ಲದ ಮನಸ್ಸಲ್ಲಿ ಎದ್ದು ನನ್ನ ಕೆಲಸವನ್ನು ಮುಗಿಸುತ್ತಿದ್ದೆ, ಅಷ್ಟರಲ್ಲಿ ಅಪ್ಪಯ್ಯ ತೆಂಗಿನಕಾಯಿ ತೆಗೆಯುವವನಿಗೆ ಆಮಂತ್ರಣ ಕೊಟ್ಟು ಬಂದಿದ್ದರು. ಅಯ್ಯೋ.. ಸಂಡೆ ಯ ಕಥೆ ಇಷ್ಟೇ ಎಂದುಕೊಂಡು, ಒಂದು ಬಟ್ಟಲು ಕೊಚ್ಚಕ್ಕಿ ಗಂಜಿ ಸವಿದು , ಅಪ್ಪಯ್ಯ ಮತ್ತು ನಾನು ಒಂದು ಹೊರೆ ಹುಲ್ಲು ಕೊಯ್ದಿಟ್ಟು ,ಹೆಡ್ಗೆ ಹಿಡಿದು ತೋಟದ ಬದಿ ನಡೆದೆವು.

source link ತೆಂಗಿನ ತೋಟ ಇಳಿಯುತ್ತಿದ್ದಂತೆಯೇ, “ಸಿದ್ಧಣ್ಣಾ.. ಹ್ಯಾಂಗಿದ್ರಿ..? ಕಾಯಿ ಇಲ್ಲ ಅಲ್ದಾ ಈ ಸಲ, ಪೂರ ಮಂಗಂಗೇ ಆಯ್ತ್ ” ಎಂದೆ. “ಹೌದಮ್ಮಾ” ಅಂತ ತೆಂಗಿನ ಮರದ ಮೇಲಿಂದ ದನಿ ಬಂತು! ಸಿದ್ಧಣ್ಣ ಈ ಸಲ ಒಂದು ಹುಡುಗನನ್ನು ಜೊತೆಯಲ್ಲಿ ಕರೆತಂದಿದ್ರು. ಪ್ರತೀಸಲ ಭಾನುವಾರ ಮಕ್ಕಳಿಗೆ ರಜೆ, ಕಾಯಿ ಅಥವಾ ಅಡಿಕೆ ಹೆಕ್ಲಿಕ್ಕೆ ಮಕ್ಕಳಿರ್ತಾರೆ ಎಂದುಕೊಂಡೇ ಸಿದ್ಧಣ್ಣ ಏಣಿ, ಕೊಕ್ಕೆ ಮತ್ತು ಕತ್ತಿ ಹಿಡಿದು ನಮ್ಮನೆಗೆ ಬರ್ತಿದ್ದರು. ಸಿದ್ಧಣ್ಣ ಎಂದರೆ ನೆನಪಾಗುವುದು ವೀಳ್ಯ ಹಾಕಿದ ಬಾಯಿ, ಕಪ್ಪನೆಯ ಮುಖದಲ್ಲಿ ಹೊಳೆಯುವ ಕೆಂಗಣ್ಣು. ಸಿದ್ಧಣ್ಣ ತುಂಬಾ ಶ್ರಮ ಜೀವಿ. ಎಲ್ಲರ ಮನೆಯ ತೆಂಗಿನ ಕಾಯಿ, ಅಡಿಕೆ ತೆಗೆಯುವುದು, ಔಷಧ ಹೊಡೆಯವುದು, ಫಲ ಬರ್ಲಿಕ್ಕೆ ಆ ಗೊಬ್ಬರ ಹಾಕಿ, ಈ ರೀತಿ ಬೆಳೆಸಿ ಅಂತೆಲ್ಲಾ ಸಲಹೆ ಕೊಡೋ ಮುಗ್ಧ ಜೀವ..ಕಾಯಿಯನ್ನು ಒಮ್ಮೆ ನಾನು ಮತ್ತೊಮ್ಮೆ ಅಪ್ಪಯ್ಯ ಹೊತ್ತು ಮನೆಗೆ ತಂದು ಹಾಕ್ತಿದ್ದೆವು. ತೋಟದಿಂದ ಮನೆಗೆ ಒಂದು ಇಪ್ಪತ್ತು ಹೆಜ್ಜೆ ನಡೆಯಬೇಕು. ದಾರಿ ಚಿಕ್ಕದಾದರೂ ಹೊರೆ ಹೊತ್ತು, ಏರು-ತಗ್ಗು ಜಾಗದಲ್ಲಿ ನಡೆಯುವಾಗ ಕಾಲು ಹಿಂದೇಟು ಹಾಕುತ್ತಿತ್ತು. “ಆಯ್ತಮ್ಮಾ ಇನ್ನು ಹೆಚ್ಚಿಲ್ಲ” ಅಂತ ಮಧ್ಯೆ ಮಧ್ಯೆ ಸಿದ್ಧಣ್ಣನ ಉದ್ಗಾರ! ಸಿದ್ಧಣ್ಣನ ಜೊತೆ ಬಂದಿದ್ದ ಹುಡುಗ, ಸಿದ್ಧಣ್ಣನ ಕೆಲಸವನ್ನು ದಿಟ್ಟಿಸಿ ನೋಡ್ತಿದ್ದ. ತಾನೂ ಮರ ಹತ್ತಿ ಕಾಯಿ ತೆಗಿಬೇಕು ಎನ್ನಿಸುತ್ತಿತ್ತೋ ಅನ್ನುವ ಹಾಗೆ. ಹಿರಿಯರ ಕಸುಬನ್ನು ಮುಂದುವರೆಸಬೇಕು ಎನ್ನುವ ಛಲ ಅವನಲ್ಲಿತ್ತು.

http://www.giezentweewielers.nl/?phd-thesis-in-web-mining ಮಾತನಾಡಿಸುವ ಮನಸ್ಸಾಯ್ತು. ನನ್ನ ಅಪ್ಪಯ್ಯ ಕೇಳಿಯೇ ಬಿಟ್ಟರು, “ಏನು ಓದ್ತಿದ್ದೀಯ ನೀನು?”ಅಂತ. ಮೆಲುದನಿಯಲ್ಲಿ “ಎಂಟನೇ ಕ್ಲಾಸು” ಅಂದ. ನಾನೋ, ಮೊದ್ಲೇ ಮಾತುಗಾರ್ತಿ. ಯಾರಾದರೂ ಸಿಕ್ಕರೆ ವಟ ವಟ ಅಂತಿರ್ತೇನೆ. ಯಾವ ಸ್ಕೂಲು, ಏನು ಹೆಸ್ರು, ಸಿದ್ಧಣ್ಣ ನಿನಗೆ ಏನಾಗ್ಬೇಕು? ಎಂತೆಲ್ಲಾ ಐದಾರು ಪ್ರಶ್ನೆಗಳನ್ನು ಒಂದೇ ಸಲ ಕೇಳಿಬಿಟ್ಟೆ. ಪಾಪ ಹುಡುಗ! ಏನೀಯಮ್ಮ ತಲೆ ತಿನ್ತಾರಲ್ಲ ಅಂದುಕೊಂಡ್ನೋ ಏನೋ. ಆದ್ರೂ ಕೇಳಿದ್ದಕ್ಕೆಲ್ಲ ಉತ್ತರ ಮಾತ್ರ ದೊರೆಯುತ್ತಿತ್ತು.

enter site ಸಿದ್ಧಣ್ಣ ಮರ ಹತ್ತಿ ಕಾಯಿ ತೆಗೆಯುವ ಭರದಲ್ಲಿದ್ದರು. ಕೊಕ್ಕೆ ಮರಕ್ಕೆ ತಾಗಿಸಿ ನಿಲ್ಲಿಸಿದ್ದರು. ಆ ಹುಡುಗ ಬಾನೆತ್ತರದ ಕೊಕ್ಕೆಯನ್ನು ಹಿಡಿದು ಎತ್ತಿ ಎರಡು ಕಾಯಿಯನ್ನು ತೆಗೆದೇ ಬಿಟ್ಟ. ಬಡ ಬಡ ಅಂತ ನೆಲಕ್ಕುರುಳಿದ ಕಾಯಿಗೇನು ಗೊತ್ತು ಆ ಹುಡುಗ ಪಟ್ಟ ಶ್ರಮ! ಶಬ್ಧ ಕೇಳಿದ್ದೇ ತಡ, ” ಮಂಡಿ ಮೇಲ್ ಬೀಳುಕಿತ್, ನಿಂಗ್ ಆತ್ಲ ಮಾರಾಯಾ, ಕೊಕ್ಕಿ ಬೀಳತ್ತ್ , ಬದಿಗಿಟ್ಟ್ ಒಂದ್  ಬದಿ ಕೂಕೋ” ಎಂದ ಸಿದ್ಧಣ್ಣ ಏರುದನಿಯಲ್ಲಿ. ಮಗುವಿಗೆ ಏನಾಗುವುದೋ, ನಾವು ಪಟ್ಟ ಕಷ್ಟ ಮಕ್ಕಳು ಪಡಬಾರ್ದು ಅಂತ ಸಿದ್ಧಣ್ಣನ ನಿಲುವಿರಬೇಕು.

ಗಂಟೆ ಹನ್ನೊಂದೂವರೆ ಆಗಿತ್ತು. ಏನು ಇಷ್ಟು ಹೊತ್ತಾದರೂ ಚಹಾ ಬರಲಿಲ್ಲ ಎಂದುಕೊಂಡೆ. ಮೋಡ ಬಿಸಿಲಿತ್ತು. ಜೀವ ಬಾಡಿತ್ತು. ಅಷ್ಟರಲ್ಲಿ ಅಮ್ಮ ಚಾ-ತಿಂಡಿ ಹಿಡಿದುಕೊಂಡು ತೋಟಕ್ಕೆ ಬಂದ್ರು. ಚಹಾ ಲೋಟಕ್ಕೆ ಹಾಕುತ್ತಿದ್ದಂತೆಯೇ ಜೋರಾಗಿ ಮಳೆ ಬಂತು. ಭೂಮಿಗೆ ತಂಪು ನೀಡಿತ್ತು. ನನಗಂತೋ ಖುಷಿಯೋ ಖುಷಿ. ಅಮ್ಮ ತಂದ ಚಹಾ ಗೆ ಮಳೆ ನೀರು ಬಿದ್ದು ಒದಗು ಮಾಡಿತ್ತು. ಗಟ್ಟಿ ಅವಲಕ್ಕಿಗೆ ನೀರು ಬಿದ್ದು ಮೆದುವಾಗಿ ಹಲ್ಲಿನ ಕಷ್ಟ ಉಳಿಸಿತ್ತು. ಛೇ! ಮಳೆಬಂತು ಇನ್ನು ಮರಹತ್ಲಿಕ್ಕೆ ಜಾರುತ್ತೆ ಎಂದ್ರು ಸಿದ್ಧಣ್ಣ.

http://www.3pgroup.it/?home-work-online ಆ ಹುಡುಗ ಎಲ್ಲೋ ಒಂದು ಬದಿ ಕುಳಿತಿದ್ದ. ಮಧ್ಯೆ ಮಧ್ಯೆ ನನ್ನ ಕಣ್ಣು ಕಾಯಿ ಹೆಕ್ಕುವುದನ್ನು ಬಿಟ್ಟು ಅವನ ಚಟುವಟಿಕೆಗಳ ಕಡೆ ಹಾಯುತ್ತಿತ್ತು. ಸಣ್ಣ ಕೋಲನ್ನು ಹಿಡಿದು ತೋಟದ ತುಂಬಾ ತಿರುಗುತ್ತಿದ್ದ. ಬೇರೆಯವರ ಜಾಗದಲ್ಲಿ ಬಿದ್ದ ತೆಂಗಿನ ಕಾಯಿಯನ್ನು ಹೆಕ್ಕಿ ತಂದು ಹೆಡ್ಗೆಗೆ ಹಾಕುತ್ತಿದ್ದ. ತೋಟದ ಕೆಳಗೆ ಸೀತೆ ಹರಿಯುತ್ತಿದ್ದುದರಿಂದ ಸಿದ್ಧಣ್ಣನ ಕಣ್ಣೂ ಅವನ ಮೇಲಿತ್ತು. ಬಾ ಪುಟ್ಟಾ.. ಚಾ-ತಿಂಡಿ ತಿನ್ನುವ ಎಂದು ಕರೆದೆ. ಮುಜುಗರದಿಂದಲೇ ಬಂದು ಮಳೆಯಲ್ಲಿ ನಿಂತಿದ್ದ. ಮಳೆಗೂ ಅವನನ್ನು ನೋಡಿ ಕರುಣೆ ಬಂತೇನೋ..ತನ್ನ ಆರ್ಭಟ ನಿಲ್ಲಿಸಿತು. ಹೊಟ್ಟೆ ತಂಪಾದದ್ದೇ ತಡ ಮತ್ತೆ ಕಾಯಿ ಹೆಕ್ಕಿ ಹೊರಲು ಶುರು ಮಾಡಿದೆವು.

http://www.easybus.com/?plagiarism-persuasive-essay ಮಳೆಗಾಲವೇ ಚೆಂದ ಅಲ್ವಾ? ಮಳೆಯಲ್ಲಿ ನೆನೆಯುತ್ತಾ ಕೆಲಸ ಮಾಡಿದರೆ ಕೆಲಸ ಸಾಗಿದ್ದೇ ಗೊತ್ತಾಗಲ್ಲ. ಅಪ್ಪಯ್ಯ ಬೈತಿದ್ರು, “ಮರಿ ಕಾಕಿ ಹಾಂಗೆ ನೆನಿಬಡ, ಹೋಗ್ ಶೆಡ್ ಮಾಡ್ ಅಡಿ ನಿತ್ಕೋ..” ಅಂದು. “ನೀವೂ ನೆನಿತಿದ್ರ್ಯಲೆ , ಬೇಗ ಬೇಗ ಕಾಯಿ ಹೊರುವ ಅಪ್ಪಯ್ಯಾ..” ಅಂತ ಹಿಡಿದ ಕೆಲಸ ನಿಲ್ಲಿಸಲಿಲ್ಲ. ಗಂಟೆ ಮೂರಾದರೂ ಕಾಯಿ ಹೊತ್ತು ಆಗಿರಲಿಲ್ಲ. ಹಸಿವೆ ಅಂತೂ ಆಗ್ತಿರಲಿಲ್ಲ. ಕೈಕಾಲು ಮಾತ್ರ ಸೋಲನ್ನು ಒಪ್ಪಿಕೊಳ್ಳುವ ಹಂತದಲ್ಲಿತ್ತು. ಅಪ್ಪಯ್ಯನಿಗೆ ಮೊದಲೇ ಕೈ ನೋವಿತ್ತು. ಹೊರೆ ಹೊತ್ತು ಜೀವಕ್ಕೆ ಏನಾಗುವುದೊ ಎಂಬ ಚಿಂತೆ ಅವರಲ್ಲಿರಲಿಲ್ಲ. “ಛೆ ಇಷ್ಟೇ ಕಾಯಿ” ಅಂತ ಪದೇ ಪದೇ ಹೇಳ್ತಿದ್ರು. ಅಪ್ಪಯ್ಯಾನೋ ಆಲದ ಮರದಂತೆ! ಎಷ್ಟೇ ನೋವಾದರೂ ಸಹಿಸಿಕೊಳ್ಳುವ ಶಕ್ತಿ ಆ ಶಿವನೇ ಕೊಟ್ಟಿರಬೇಕು! ಸಾವಿರಾರು ಜನರಿಗೆ ಅಡುಗೆ ಮಾಡಿ ಹಾಕಿದ ಕೈ. ಒಮ್ಮೆ ಮಂದಾರ್ತಿ ಕ್ಷೇತ್ರಕ್ಕೆ ಬಂದ ಒಬ್ಬರು ಸ್ವಾಮಿಗಳು, ಅಪ್ಪಯ್ಯನ ಕೈರುಚಿ ಸವಿದು ಹೇಳಿದ್ದರಂತೆ, “ಅಲ್ಸೆರ್ರೇ! ಹಸಿದು ಬಂದ ಸರ್ವರ  ತನುಮನ ಚೇತನಗೊಂಡದ್ದು ನಿಮ್ಮ ಈ ಅಡುಗೆಯಿಂದ! ಉಂಡವರ ಆಶೀರ್ವಾದದ ಜೊತೆಗೆ ಅಮ್ಮನವರ ಕೃಪೆ ನಿಮ್ಮ ಮೇಲಿದೆ” ಎಂದು.

ಹಿಡಿದ ಕೆಲಸ ಮುಗಿಸದೇ ಇದ್ದರೆ ನಿದ್ದೆಯೇ ಬರಲ್ಲ ನನ್ನ ಅಪ್ಪಯ್ಯನಿಗೆ. ಅಮ್ಮನನ್ನು ಎಷ್ಟು ಇಷ್ಟ ಪಟ್ಟರೂ ಬಿದ್ದರೂ ಎದ್ದರೂ, ನಿಂತರೂ ಕೂತರೂ, ಖುಷಿ ಆದ್ರೂ , ನೋವಾದ್ರೂ, ಆಕಳಿಸಿದರೂ ನನ್ನ ಬಾಯಲ್ಲಿ ಬರುವ ಪದ-“ಅಪ್ಪಯ್ಯಾ..”! ನಾನೆಂದೂ ಅಪ್ಪಯ್ಯಾ ಐ ಲವ್ ಯೂ ಎಂದವಳೆ ಅಲ್ಲ.. ಹಾಗಂತ ಅಪ್ಪನಿಗೆ ಇಂಗ್ಲಿಷ್ ಅರ್ಥ ಆಗಲ್ಲ ಅಂತಲ್ಲ. ಅವರು ಸುಸ್ತಾಯ್ತು ಅಂತ ಒಂದು ಕ್ಷಣ ಕೂತದ್ದೇ ಇಲ್ಲ. ನಾನೂ ಅವರ ಹಾಗೆ ಇರಬೇಕು ಎನ್ನುವ ಆಸೆ.

“ಸಿದ್ಧಣ್ಣಾ, ಒಂದೆರಡು ಬೊಂಡ ತೆಗೆಯಿರಿ” ಎಂದೆ. ನಾಲ್ಕೈದು ತೆಗೆದ್ರು. “ಕುಡಿನಿ ಅಮ್ಮಾ” ಎಂದು ಬೊಂಡ ಕೆತ್ತಿ ಕೊಟ್ರು. ಕುಡಿದು ಸಹಜವಾಗಿ ಹೇಳುವಂತೆ “ಥ್ಯಾಂಕ್ಸ್ ಸಿದ್ಧಣ್ಣಾ..” ಎಂದೆ. “ನೀವ್ ಇಂಗ್ಲಿಷ್ ಅಂಗೆಲ್ಲಾ ಬೈಬಡಿ ಅಮ್ಮಾ” ಎಂದದ್ದು ತೋಟದ ತುಂಬಾ ನಗೆ ಹರಿಯುವಂತೆ ಮಾಡಿತ್ತು. “ಸಿದ್ಧಣ್ಣಾ.. ದಿನಾ ಕೆಲ್ಸ ಮಾಡ್ತೀರಲ್ಲಾ ಮೈ-ಕೈ  ನೋಯ್ತಿಲ್ಯಾ ?” ಅಂತ ಕೇಳ್ದೆ. “ನೋಯತ್ತಮ್ಮಾ.., ರಾತ್ರಿ ಮನ್ಕಂಬತಿಗೆ ಒಂದು ಬಾಟಲ್ ಹಾಯ್ಕಂಡ್ ಮನ್ಕಂಡ್ರ್ ಬೆಳ್ಗೆ ಸಮಾ ಆತ್ತ್” ಅಂತಂದ್ರು ಸಿದ್ಧಣ್ಣ. ನೋವನ್ನು ಮರೆಸೋಕೆ ಪರಮಾತ್ಮ(ನೂ) ಸಹಾಯಕಾರಿ ಅನ್ನೋ ನೈಜತೆ ಅರಿತೆ!

ಅಂತೂ ಇಂತೂ ಕಾಯಿ ಹೊತ್ತು ಮುಗಿದು ಮನೆಗೆ ಬಂದು ಊಟ ಮಾಡಿದೆವು. ಸಿದ್ಧಣ್ಣನ ಸಂಬಳ ಅವನ ಜೇಬು ಸೇರಿತ್ತು. ಶ್ರಮಿಕನ ದಿನದ ಅಂತ್ಯದಲ್ಲಿ ಸಣ್ಣನೆಯ ನಗುವು ಕಂಡರೂ, ಸಂಸಾರ ಜಂಜಾಟದಲ್ಲಿದ್ದ ನೋವು ಆ ನಗುವನ್ನು ಮಾಸುವಂತೆ ಮಾಡಿತ್ತು. ಮತ್ತೆ ಕೊಕ್ಕೆ ಹೆಗಲಿಗೆ ಹಾಕಿ ಮನೆ ಕಡೆಗೆ ಹೊರಟ ಸಿದ್ಧಣ್ಣನ ಕಾಲುಗಳನ್ನು ಆ ಪುಟ್ಟ ಕಾಲುಗಳು ಹಿಂಬಾಲಿಸಿದವು. ಶ್ರಮಿಕನ ಮನಸ್ಸಿನ ಜಾಡು ಹಿಡಿದು ಹೊರಟಿದ್ದ ನನ್ನ ಚಿತ್ತಕ್ಕೆ ವಾಸ್ತವ ಅರಿವಾದದ್ದು, “ಅಯ್ಯೋ.. ನಾಳೆ ಸೋಮವಾರ, ಮೇಡಂ ಕೊಟ್ಟ ಹೋಮ್ ವರ್ಕ್ಸ್ ಮಾಡಿಲ್ಲ” ಅನ್ನೋ ಚಿಂತೆಯಿಂದ!

Leave a Reply

Top