You are here
Home > ಪುಟ ೩ > ಸಂಯುಕ್ತಾಕ್ಷಿ – ಅಂಬಿಕಾ M

ಸಂಯುಕ್ತಾಕ್ಷಿ – ಅಂಬಿಕಾ M

ಹೆಸರು ಉಲ್ಲೇಖಿಸುವಂತೆ ಇದು ಒಂದು ಬಗೆಯ ಕಣ್ಣು. ಬಹು ಸಂಖ್ಯೆಯ ದೃಷ್ಟಿ ಘಟಕಗಳಿಂದ (ಒಮ್ಮಟಿಡಿಯ) ಸಂಯೋಜನಗೊಂಡ ಈ ಅಕ್ಷಿಯೇ “ಸಂಯುಕ್ತಾಕ್ಷಿ”.

ಕೇವಲ ಕೀಟಗಳು (Arthropods) ಈ ಬಗೆಯ ದೃಷ್ಟಿ ಹೊಂದಿರುತ್ತವೆ. ಒಂದೊಂದು ಜಾತಿಯ ಕೀಟಕ್ಕೂ ಕಣ್ಣುಗಳ ರಚನೆಯಲ್ಲಿ, ಕಾರ್ಯರೀತಿಯಲ್ಲಿ, ಉಪಯುಕ್ತತೆಯಲ್ಲಿ, ದೃಷ್ಟಿಸಾಮರ್ಥ್ಯದಲ್ಲಿ ಬಹಳ ವಿಭಿನ್ನವಾಗಿರುತ್ತವೆ. ಒಂದು ಕೋಶಕ್ಕೆ ಒಮ್ಮಟಿಡಿಯ ಎನ್ನುತ್ತಾರೆ, ಪ್ರತಿಯೊಂದು ಒಮ್ಮಟಿಡಿಯ ಪ್ರತ್ಯೇಕ ದೃಶ್ಯ ಗ್ರಾಹಕವಾಗಿ ಕಾರ್ಯ ನಿರ್ವಹಿಸುತ್ತವೆ. ಈ ರೀತಿಯ ಸಾವಿರಾರು ಒಮ್ಮಟಿಡಿಯ ಸೇರಿ ವಿಶಾಲ ದೃಷ್ಟಿ ಸಾಮರ್ಥ್ಯ ಒದಗಿಸುತ್ತವೆ.

ಮೇಲ್ನೋಟಕ್ಕೆ ಜೇನು ಗೂಡಿನಂತೆ ಕಾಣುವ ಕೋಶಗಳು, ಒತ್ತೊತ್ತಾಗಿ ನಿಂತ ಪ್ರತಿ ಒಮ್ಮಟಿಡಿಯಮ್ ಗೆ ತನ್ನದೇ ಆದ ಮಸೂರ, ಸಾಕಷ್ಟು ದ್ಯುತಿಸಂವೇದಿ ಕೋಶಗಳು ಮತ್ತು ದೃಷ್ಟಿ ನರತಂತು ಮೆದುಳಿಗೆ ಸಂಪರ್ಕ ಹೊಂದಿರುತ್ತವೆ.

ambika_im1

ಕೇವಲ ಕೀಟಗಳು (Arthropods) ಈ ಬಗೆಯ ದೃಷ್ಟಿ ಹೊಂದಿರುತ್ತವೆ. ಒಂದೊಂದು ಜಾತಿಯ ಕೀಟಕ್ಕೂ ಕಣ್ಣುಗಳ ರಚನೆಯಲ್ಲಿ, ಕಾರ್ಯರೀತಿಯಲ್ಲಿ, ಉಪಯುಕ್ತತೆಯಲ್ಲಿ, ದೃಷ್ಟಿಸಾಮರ್ಥ್ಯದಲ್ಲಿ ಬಹಳ ವಿಭಿನ್ನವಾಗಿರುತ್ತವೆ.

ಸಂಯುಕ್ತಾಕ್ಷಿಯುಳ್ಳ ಕೀಟಗಳು ಬೇರೆ ಪ್ರಾಣಿಗಳಂತೆ ದೃಷ್ಟಿಯನ್ನು ಒಂದೆಡೆ ಕೇಂದ್ರೀಕರಿಸಲು ಬರುವುದಿಲ್ಲ. ತಮ್ಮ ಕಣ್ಣುಗಳನ್ನು ಚಲಿಸಲಾಗದ ಅವು ಏಕಕಾಲದಲ್ಲಿ ಹಲವಾರು ವಿಭಿನ್ನ ಬಿಂದುಗಳಿಂದ ಮಾಹಿತಿ ಪಡೆಯುತ್ತವೆ.

ಕೆಲವೇ ಗಜಗಳ ವ್ಯಾಪ್ತಿ ಮಾತ್ರ ಗೋಚರವಾಗುವ ಇವುಗಳ ಕಣ್ಣುಗಳು ಚಲನೆಯ ಪತ್ತೆಗೆ ಉತ್ತಮವಾಗಿರುತ್ತವೆ, ಬೇಟೆಯಾಡಲು ಅಥವಾ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳಲು, ಮಂದಬೆಳಕಿನಲ್ಲಿ ಕ್ರೀಯಾತ್ಮಕವಾಗಿರಲು ಸೂಕ್ತ.

ambika_im2ಅತ್ಯಲ್ಪ ಗಾತ್ರದ ಜೀವಿಗಳಿಗೆ ಇಂಥ ದೃಷ್ಟಿಯೇ ಅತ್ಯವಶ್ಯಕ. ಕಿರಿದಾಗಿ ಇಕ್ಕಟ್ಟಿನ ಜಾಗಗಳಲ್ಲಿ ಸುರಕ್ಷಿತವಾಗಿ ವೇಗವಾಗಿ ಓಡಾಡಲು, ದಾಳಿ ಮಾಡುವ ಶತ್ರುಗಳಿಂದ ತ್ವರಿತವಾಗಿ ತಪ್ಪಿಸಿಕೊಳ್ಳಲು ಸೂಕ್ತವಾಗಿದೆ.

Leave a Reply

Top