You are here
Home > ಚಿಂತನೆ > ಸತ್ಯ.. ಶಿವ ಸುಂದರ..

ಸತ್ಯ.. ಶಿವ ಸುಂದರ..

go here

ಶಿವ ಎಂದರೆ ?

here ದೇವರ? ಅಥವಾ ಒಂದು ಪುರಾಣ ಹಿಂದೂ ಸಂಸ್ಕೃತಿಯ ಸಾಮೂಹಿಕ ಕಲ್ಪನೆಯ ?

ಶಿವ ಒಂದು ತತ್ವ, ಆಳವಾದ ಅರ್ಥ. ಎಲ್ಲಿಯೂ ಸ್ಪಷ್ಟವಾಗಿ ಇದೇ ಎಂದು ಹೇಳುವ ಉತ್ತರ ಸಿಗದು. ಅವರವರ ಕಲ್ಪನೆಗೆ, ತರ್ಕಕ್ಕೆ, ಅನುಭವಕ್ಕೆ, ಅಭಿಮಾನಕ್ಕೆ, ಉನ್ಮಾದಕ್ಕೆ, ಭಕ್ತಿಗೆ ತಕ್ಕಂತೆ ಹಲವು ವಿವರಣೆ ಸಿಕ್ಕರೂ ಅರ್ಥವಾಗದ ಒಂದು ಜಿಜ್ಞಾಸೆ!

ಶಿವ ಶಬ್ದಕ್ಕೆ ಸಂಸ್ಕೃತದಲ್ಲಿಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ಅರ್ಥವೇ ಇಲ್ಲ, ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ, ಎಂದು ಕೆಲವು ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎಂದು ಕೂಡ ಹೇಳಲಾಗುತದೆ. ಹಿಂದೂ ಧರ್ಮದ ಹೆಚ್ಚಿನವರು ನಂಬುವಂತೆ ಶಿವ ತ್ರಿಮೂರ್ತಿಗಳಲ್ಲಿ ಒಬ್ಬ.ಲಯಕಾರಕ .ಸಂಹಾರಕ. ಋಗ್ವೇದದಲ್ಲಿನ ರುದ್ರನೆ ಶಿವ ಎನ್ನುತ್ತಾರೆ.

ಹುಡುಕುತ್ತಾ ಹೋದರೆ ಶಿವ ಎನ್ನುವ ಪದದ ಅರ್ಥವೇ ಅಸ್ಪಷ್ಟ ಮತ್ತು ಗೊಂದಲ. ಎಲ್ಲಿಂದ ಶುರು ಆಯ್ತು? ಎಲ್ಲಿಗೆ ನಿಮ್ಮ ಹುಡುಕಾಟ ಹೋಗುವುದು ಉತ್ತರ ಸಿಗದು. ಆದರೆ ಪ್ರತಿ ವಿವರಣೆಯಲ್ಲೂ ಆನಂದ ಸಿಗುತ್ತದೆ, ಪ್ರಶ್ನಾರ್ಥಕ ದೊಂದಿಗೆ ಮುಗಿಯುತ್ತದೆ. ಆನಂದದ ಅನುಭವವೇ ಶಿವ.

http://www.callforassistance.com/?phd-thesis-structural-analysis ಶಿವ ಪದದ ಅರ್ಥವೇಇಲ್ಲದಿರುವುದು“. ಶಿವ ಎನ್ನುವುದು ಇಲ್ಲದಿರುವುದು. ವಿಜ್ಞಾನ ಹೇಳುವಂತೆ ಬ್ರಹ್ಮಾಂಡ ನಿರ್ವಾತದಿಂದ ಬಂದು ನಿರ್ವಾತಕ್ಕೆ ಹೋಗುತ್ತದೆ. ಸೃಷ್ಟಿ ಮತ್ತು ಲಯ ಎಲ್ಲ ಶಿವಮಯ. ಇಲ್ಲಿ ತೋರುವುದು, ಎಲ್ಲವೂ ಶುರುವಾಗುವುದು ಮತ್ತು ಅಂತ್ಯವಾಗುವುದು ಇಲ್ಲದಿರುವಿಕೆಯಿಂದ ಇಲ್ಲದಿರುವಿಕೆಗೆ.

ಸದ್ಗುರು ಜಗ್ಗಿ ವಾಸುದೇವ ಕೂಡ ಹೇಳುವಂತೆ, ” ಯೋಗ ಸಂಸ್ಕೃತಿಯಲ್ಲಿ ಶಿವ ದೇವನಂತೆ ಕಾಣುವುದಿಲ್ಲ, ಅವನು ಇಲ್ಲಿ ಬಂದು ಹಿಮಾಲಯದಲ್ಲಿ ನೆಲೆಸಿದವನು. ಶಿವ ಎಂದರೆ ಇಲ್ಲದಿರುವಿಕೆ, ನಶ್ವರ, ಅಶಾಶ್ವತ. ಬ್ರಹ್ಮಾಂಡವೇ ನಶ್ವರದಿಂದ ಬಂದು ನಶ್ವರಕ್ಕೆ ಹೋಗುತ್ತದೆ, ಶಿವನಿಂದ ಬಂದು ಶಿವಕ್ಕೆ ವಿಲೀನಗೊಳ್ಳುತ್ತದೆ. ಆದಿ ಕತ್ತಲೆಯಿಂದ, ಅಂತ್ಯವೂ ಕತ್ತಲೆಗೆ. ಬೆಳಕು ಬರೀ ಬಾಹ್ಯ ಸಾಧನ, ತಾತ್ಕಾಲಿಕ. ಕತ್ತಲೆ ದೈವಿಕವಾದದು.”

ಹುಡುಕುತ್ತಾ ಹೋದರೆ ಸಾವಿರಾರು ವರ್ಷಗಳ ಹಿಂದಿನವರೆಗೆ ಶಿವನ ಕಲ್ಪನೆ, ಸಾಕ್ಷ್ಯಗಳು ಸಿಗುತ್ತದೆ. ಶಿವಾರಾಧನೆ ಸಿಂಧು ನಾಗರೀಕತೆ, ಮಹೇಂಜೊಹರಪ್ಪ ಕಾಲದಲ್ಲೂ ಕಾಣಸಿಗುತ್ತದೆ. ಇದನ್ನು ಅರಿಯುವುದೇ ಒಂದು ಸಂಶೋಧನೆ, ಪ್ರಪಂಚದಾದ್ಯಂತ ಹಲವರು ಸತ್ಯ ಸಂಶೋಧನೆಯಲ್ಲಿ ಮುಳುಗಿದ್ದಾರೆ.

ತರ್ಕ ಏನೇ ಇರಲಿ, ಶಿವ ಹಲವರ ದೈವ, ನಂಬಿಕೆ. ಅವನಿಗೂ ಒಂದು ರೂಪ ವಿದೆ, ಪುರಾಣಗಳಿವೆ, ಪುಷ್ಟಿಗೆ ಸಾಕ್ಷ್ಯಗಳಿವೆ. ಅವನು ಯೋಗಿ, ಆದಿ ಯೋಗಿ, ಸಪ್ತ ಋಷಿಗಳಿಗೆ ಯೋಗದ ಅರಿವನ್ನು ಧಾರೆಯೆಳೆದು ವಿಶ್ವಕ್ಕೆ ಹರಡಿಸಿದ. ಸಹಸ್ರಾರು ನಾಮಾಂಕಿತದಲ್ಲಿ ಆರಾಧನೆ ಗೊಳ್ಳುತ್ತಿರುವವ. ಲಿಂಗರೂಪದಲ್ಲಿ ಜನಮನದಲ್ಲಿ ನೆಲಸಿರುವವ, ಈಗಲೂ ಕೈಲಾಸದಲ್ಲಿ ನೆಲೆಸಿರುವ ಎಂದು ಜನರ ನಂಬಿಕೆ. ಅಘೋರಿಗಳು, ಸಾಧು ಸಂತರು, ಶೈವರು, ಸಾಮಾನ್ಯ ಜನರು ಸರ್ವರೂ ಆರಾಧಿಸುವ ದೇವರು.

ಶಿವ ವಿನಾಶಕ ಎಂದರೆ ಧನಾತ್ಮಕ ಅರ್ಥದಲ್ಲಿಅಹಂನನ್ನು, ತಪ್ಪು ಕಲ್ಪನೆಯನ್ನು ಅಳಿಸುವವನುಎಂದರ್ಥ.

ಸರ್ವಂ ಶಿವಂ!!

Leave a Reply

Top