You are here
Home > ಮಮಕಾರ > ಸತ್ಯ

ಸತ್ಯ

follow url ಮಲತಾಯಿ  ಧೋರಣೆಯಿಂದ ಕಣ್ಣೀರಾ ದರೆಯನ್ನ ತುಂಬಿಸಿಕೊಂಡಿದ್ದ ಸೌಮ್ಯ, ಅಪ್ಪನ ಪ್ರೀತಿ ಇದ್ದರು ಇಲ್ಲದ ಹಾಗೆ ಬೆಳೆದಳು. ಓದು ಕ್ರೀಡೆ ಎಲ್ಲಾದರು ಮುಂದೆ ಇದ್ದರು, ಫೀಸ್ ತುಂಬಿಸಿ ಡೊನೇಷನ್ ಕಟ್ಟೊ ಅಷ್ಟು ದುಡಿಮೆ ಅವಳ ತಂದೆಗೆ ಇರಲಿಲ್ಲಾ ಆದರೂ ಸೌಮ್ಯ ತನ್ನ ಚತುರತೆ ಇಂದ ಫ್ರೀ ಸೀಟ್ ಅಲ್ಲಿ ಗ್ರಾಜುಯೇಷನ್  ಮುಗಿಸಿದಳು. ಅಪ್ಪ ಅವರ ಜವಾಬ್ದಾರಿ ಕಮ್ಮಿ ಮಾಡಲು ಸೌಮ್ಯಳ ಮದುವೆ ಬಗ್ಗೆ ನಿರ್ಧರಿಸಿ ಅವರ  ಆಫೀಸಿನಲ್ಲಿ ಇದ್ದ ಮೇಲಾಧಿಕಾರಿ ಉಮೇಶನನ್ನು ಕೇಳಲು ಬಯಸಿದರು. ಅಷ್ಟರಲ್ಲಿ ಯಾವದೋ  ಒಂದು  ಕಾರ್ಯಕ್ರಮದಲ್ಲಿ ಕಂಡ ಸೌಮ್ಯಳನ್ನು ಬಹಳ ಮೆಚ್ಚಿ ಉಮೇಶ್ ಅವರ ಮನೆಗೆ ಮದುವೆ ಪ್ರಸ್ತಾಪಿಸಲು ಹೋದರು.
ಅದ್ರಷ್ಟವಷಾತ್ ಮನೆಯಲ್ಲಿ ಯಾರು ಇರಲಿಲ್ಲ ಸೌಮ್ಯ ಅವರನ್ನು ಯಾರೆಂದು ತಿಳಿಯದೆ ಸರಿಯಾಗಿ ಉಪಚರಿಸಲಿಲ್ಲ. ಆದರೂ ಉಮೇಶ್ ಪ್ರಶ್ನೆ ಮೇಲೆ ಪ್ರಶ್ನೆಗಳನ್ನ   ಕೇಳುತ್ತಾ ಇದ್ದರು ಕೊನೆಗೆ ಮದುವೆ ಬಗ್ಗೆ ಕೇಳಿದಾಗ ಸೌಮ್ಯ, ನಮ್ಮ  ಅಪ್ಪನಿಗೆ ನನ್ನ ಮದುವೆ ಖರ್ಚು ಬರಿಸುದು ಕಷ್ಟ ಅದಕ್ಕೆ ಯಾರಾದರು ನನ್ನ ಮದುವೆ ಮಾಡಿಕೊಳ್ಳಲು ಬಂದರೆ ನಾನು ಕೊರಳು ಕೊಡಲು ರೆಡಿ ಎಂದು ಮುಖಕ್ಕೆ   ಹೊಡೆದ ಹಾಗೆ ಹೇಳಿದಳು

ಅವಳ ನೇರ ನುಡಿಗಳನ್ನ ಮೆಚ್ಚಿದ ಉಮೇಶ್ ತನ್ನ ಖರ್ಚಿನಲ್ಲಿ ಮದುವೆಯ ಎಲ್ಲ ಕಾರ್ಯವನ್ನ ಮುಗಿಸುವುದಾಗಿ ಅವಳ ತಂದೆಯನ್ನ ಒಪ್ಪಿಸಿದ. ನೇರ ನುಡಿ ಮೃದು ಸ್ವಭಾವದ ಉಮೇಶನನ್ನ ಸೌಮ್ಯ ಕೂಡ  ಮದುವೆಯಾಗಲು ಒಪ್ಪಿ ವಾಲಗ ಉದಿಸಿದಳು.
ಸೌಮ್ಯಳ ಊಹೆಗೂ  ಮೀರಿದ ದೊಡ್ದ ಮನೆ ಒಳ್ಳೆ ಸಂಬಂಧ ಆಳು ಕಾಳು ಇದ್ದ ಶ್ರೀಮಂತ ಉಮೇಶ. ಉಮೇಶ ಹೃದಯ ಶ್ರೀಮಂತಿಗೆ ಕೂಡ ಇದ್ದ ಒಬ್ಬ possessive  ಗಂಡ ಮದುವೆಯ ೬-೭ ತಿಂಗಳ ಜೀವನ ತುಂಬಾ ಚನ್ನಾಗಿತ್ತು ಉಮೇಶ ಬಹಳ ತುಂಟ ತನಗೆ ಸಾಕು ಎನ್ನುವಷ್ಟು ತುಟಿಯ ಜೇನು ಹೀರಿ ಕೆನ್ನೆ ಕೆಂಪಾಗಿಸಿ ಮೈ ಕೈ ನೋಹಿಸಿ ಇಬ್ಬರು ತಂಪಾಗುತಿದ್ದರು.
ದಿನ ಕಳೆದಂತೆ    ಸೌಮ್ಯಳಿಗೆ ತಂದೆ ಮನೆ ಅಕ್ಕನ ಮನೆಗೆ ಹೋಗ  ಬೇಕೆಂಬ ಬಯಕೆ. ಹೋಗುತ್ತೇನೆ ಎಂದಾಗಲೆಲ್ಲ ಉಮೇಶ ಏನೋ ಒಂದು ಕಾರಣ ಹೇಳಿ ಸೌಮ್ಯಳನ್ನ ಎಲ್ಲೂ ಕಳಿಸುತ್ತಾ ಇರಲಿಲ್ಲ. ಅವನಿಗೆ ಅವಳನ್ನ ಬಿಟ್ಟು ಇರಲಿಕ್ಕೆ ಆಗಲ್ಲಾ ಒಂದು ರಾತ್ರಿ ಕೂಡ, ಅವಳಿಲ್ಲದೆ ಜೀವ ನಿಲ್ಲುತ್ತಿರಲಿಲ್ಲ ಹೀಗಾಗಿ ಸೌಮ್ಯ ಎಲ್ಲಿ ಹೋಗೋ ಹಾಗಿಲ್ಲದಾಗಿ   ಬೇಸರವಾಗಿ ಎಷ್ಟೋ ಬಾರಿ ಜಗಳವಾಡಲು ಹೋಗಿ ಕರಗಿ ನೀರಾಗಿ ಹಾಸಿಗೆಯಲ್ಲಿ ಎಲ್ಲವನ್ನ ಮರೆತು ಹೋಗುತಿದ್ದಳು
ಒಮ್ಮೆ ಸೌಮ್ಯ ತನ್ನ ಅಕ್ಕಳಿಗೆ ಫೋನ್ ಮಾಡಿ ಮಾತಾನಾಡುವಾಗ ಅಕ್ಕ ಹೇಳಿದಳು, ಎಲ್ಲ ಗಂಡಸರು ಹೀಗೆ ಹೊಸದರಲ್ಲಿ ಎಲ್ಲೂ ಬಿಡರು ಅವರಿಗೆ ಕಾಮದ ಹುಚ್ಚು ಹಾಗೆ ಹೀಗೆ ಅಂತ ಹೇಳಿದಳು . ಸೌಮ್ಯಳಿಗೆ  ನಿಜ ಅನಿಸಿತ್ತು  ಅದಕ್ಕೆ ದೃಢ ನಿರ್ಧಾರ ಮಾಡಿ ತಾನು ಸ್ವಲ್ಪ ದಿನದ ಮಟ್ಟಿಗೆ ತನ್ನ ಎಲ್ಲ ಗೆಳತಿಯರ ಮನೆಗೆ ಹಾಗು ತವರು ಮನೆಗೆ ಹೋಗ ಬೇಕೆಂದು ಹಠ ಹಿಡಿದಳು ಆದರೂ ಉಮೇಶ ಒಪ್ಪಲಿಲ್ಲ ಏನೋ ಒಂದು ಸಬೂಬು ನೀಡಿ ತಡೆಯಲು ಸೌಮ್ಯ ಹಠ ಹಿಡಿದು ಹೊರಡಲು ಸಿದ್ಧವಾದಳು ತಾನು  ಇಲ್ಲದೇನೆ ಅವರು ಊಟ  ಮಾಡುವುದಿಲ್ಲ ಎಲ್ಲದರಲ್ಲೂ ನಿರಾಸಕ್ತಿ ಇರುತ್ತಾರೆ ಅಂತ ಗೊತ್ತಿದ್ದರೂ ಸೌಮ್ಯ ಹೊರಟೆ ಬಿಟ್ಟಳು.

ತಂದೆ ಮನೆಗೆ ಹೋದ ಸೌಮ್ಯ ಮೊದಲ ೨ ದಿನ ಖುಷಿಯಿಂದ ಇದ್ದಳು ಮೂರನೇ ದಿನ ತಂದೆ ಗಂಡನ ಮನೆಗೆ ಎಂದು ಹೊರಡುವುದು ಎಂದು ಕೇಳಿದಾಗ ಸೌಮ್ಯ, ಮತ್ತೆ ನಾನು ಆ ಮನೆಗೆ ಹೋಗೋಲ್ಲ ಅದು ಪ್ರೀತಿಯ ಪಂಜರ ನನ್ನ ಸ್ವಂತಕ್ಕೆ ಬದುಕ ಬೇಕು ಎಂದು ಎಲ್ಲವನ್ನ ಅಪ್ಪನಿಗೆ ವಿವರಿಸಿದಳು. ಅಪ್ಪ ಎಷ್ಟು ಬುದ್ದಿವಾದ ಹೇಳಿದರು ಸೌಮ್ಯ ಕೇಳೋ ಮನಸ್ಥಿತಿ ಅಲ್ಲಿ ಇರಲಿಲ್ಲ. ಎಲ್ಲವನ್ನು ಕೇಳಿಸಿಕೊಂಡ ಮಲತಾಯಿ ಸೌಮ್ಯಳನ್ನು ಒಂದು ಕೆಲಸಕ್ಕೆ ಹೋಗಿ ದುಡಿದು ಈ ಮನೆಯ ಜವಾಬ್ದಾರಿ  ತಕೊ ಹೇಗೋ ನಿಮ್ಮ ಅಪ್ಪನಿಗೂ ವಯಸ್ಸಾಗಿದೆ ನಿನ್ನನ್ನು ಬಿಟ್ಟಿ ಈ ಮನೆಯಲ್ಲಿ ಇರಿಸಲು ಹೇಗೆ ಸಾಧ್ಯವೆಂದು  ಮೂಗು ಮುರಿದರು.
ನೊಂದ ಸೌಮ್ಯ ಗೆಳತಿಯ ಮನೆಗೆ ನೆಡೆದಳು ಗೆಳತಿಗೆ ಒಂದು ಜಾಬ್ ಕೂಡಿಸು ಎಂದಾಗ, ನಿನ್ನ ಯೌವನ, ಸೌಂದರ್ಯ, ಸುಂದರ ಮೈ ಮಾಟ ಇರುವರೆಗೆ  ಕೆಲಸ ಗ್ಯಾರಂಟಿ ಹೇಗೋ ಒಬ್ಬಳೇ ಇರಬೇಕು ಅಂತೀಯಾ, ಇಲ್ಲಿ ಎಲ್ಲ ಸುಖ ವೈಭೋಗವನ್ನ ಬಿಟ್ಟು ಇರುವುದು ಕಷ್ಟ  ಹಾಗಾಗಿ ಒಂದು  ಸಾಹುಕಾರ ಬಾಸ್ ನ ನೋಡು ಎಲ್ಲವನ್ನು ತೀರಿಸುತ್ತಾನೆ ಎಂದಳು. ಮಾತುಗಳನ್ನ ಸಹಿಸದ ಸೌಮ್ಯ ಗೆಳತಿಯನ್ನು ತರಾಟೆಗೆ ತಕೊಂಡು ಬೈದು ಅಕ್ಕನ ಮನೆ ಸೇರಿಕೊಂಡಳು.
ಅಕ್ಕ ಭಾವ ಇಬ್ಬರು ಚೆನ್ನಾಗಿ ಮಾತನಾಡಿಸಿ ಅವಳಿಗೆ ಒಂದು ಜಾಬ್ ಕೂಡ ಕೊಡಿಸುವುದಾಗಿ ಮತ್ತೆ ಎಷ್ಟು ದಿನ ಬೇಕೋ ಅಷ್ಟು ದಿನ ಅಕ್ಕನ ಮನೆಯಲ್ಲಿ  ಇರಬಹುದು ಎಂದು ಹೇಳಿ ಸಂತೈಸಿದರು .ಎಲ್ಲರೂ  ಒಟ್ಟಿಗೆ ಊಟ ಮಾಡಿ ಅವರವರ ಕೋಣೆಗೆ ಹೋಗಿ ಮಲಗಿದರು .
ಹೊಸ ಜಾಗ ಸೌಮ್ಯಳಿಗೆ ನಿದ್ದೆ ಬೇಗ ಬರಲಿಲ್ಲ ಹೇಗೋ ಹಾಗೂ ಹೀಗೋ ತಡವಾಗಿ ನಿದ್ದೆ ಹತ್ತಿತ್ತು ಆದರೆ ಸ್ವಲ್ಪ ಸಮಯದ ನಂತರ ಯಾರೋ ಅವಳನ್ನ ಚುಂಬಿಸುವ ಹಾಗೆ ಬಾಸವಾಹಿತು ಯಾರದ್ದೋ ಕೈ ಗಳು ಅವಳ ಕೆನ್ನೆಗಳನ್ನ  ಸ್ಪರ್ಶಿಸದ ಹಾಗಾಯಿತು ಗಾಬರಿಯಿಂದ ಎದ್ದು ಲೈಟ್ ಹಾಕಿ ನೋಡಿದರೆ ಅದು ಅವಳ ಭಾವ .ಗಲಾಟೆ ಮಾಡಿ ಅವರನ್ನ ಹೊರ ಹಾಕಿದಳು ಇದ್ದಕೆ ಪ್ರತಿಯುತ್ತರವಾಗಿ ಅವಳ ಅಕ್ಕ ನಾನು ಎಂದು ನನ್ನ ಗಂಡನಿಗೆ ಯಾವ ಸುಖವನ್ನು ಕೊಟ್ಟಿಲ್ಲ ಎರಡು ವರ್ಷದಿಂದ್ದ ನಮ್ಮ ದೇಹ ಸಂಪರ್ಕ ವಿಲ್ಲಾ ಅದಕ್ಕೆ ಅವರು ನಿನ್ನನ್ನು ಇಲ್ಲಿ ಬರ ಹೇಳಿದ್ದು ನೀ ಬಂದೆ  ಮೇಲೆ ಅವರ ಆಸೆ ಚಿಗುರೊಡೆಯಿತು  ಎಂದಳು .
ಈ ಎಲ್ಲ ಘಟನೆಗಳಿಂದ ನೊಂದ ಸೌಮ್ಯ ತನ್ನ ಪತಿಯ possessive ಎಷ್ಟು ಸತ್ಯ ಅನ್ನೋದು ಅರಿವಾಗಿ ಗಂಡನ  ಮನೆಗೆ ಹಿಂದಿರುಗಿದಳು ಹೋದಾಗ ಗಂಡನು ಬಾಡಿ ಹೋಗಿದ್ದ ಎಲ್ಲವನ್ನು ತೊರೆದ ಶಿವನಂತೆ ಕಂಡನು ಆ ದಿನದಿಂದ ಸೌಮ್ಯ ಹೊಸ ಬದುಕಿಗೆ ಕಾಲಿಟ್ಟಳು.

Top