You are here
Home > ಪುಟ ೩ > ಸೋಲೆಂದರೆ ಸೋಲಲ್ಲ, ಮುನ್ನಡೆವ ಮೆಟ್ಟಿಲು – ಮುದ್ದ

ಸೋಲೆಂದರೆ ಸೋಲಲ್ಲ, ಮುನ್ನಡೆವ ಮೆಟ್ಟಿಲು – ಮುದ್ದ

ಬಣ್ಣಗೆಟ್ಟ ಬದುಕು ಒಮ್ಮೊಮ್ಮೆ ಸ್ಥಗಿತವಾಗಿ ನಿಂತುಬಿಡುತ್ತದೆ. ಜೀವನದಲ್ಲಿ ಹಿಂದಡಿಯಿಟ್ಟಾಗಲೆಲ್ಲ ನೂರಾರು ಗೊಂದಲಗಳ ನಡುವೆ ಅಷ್ಟೇ ಬೆಲೆಬಾಳುವ ಬುದ್ಧಿಮಾತುಗಳು, ಕೆಲಸಕ್ಕೆ ಬಾರದ ಹತ್ತಾರು ಪ್ರಶ್ನೆಗಳು ತಲೆಯೊಳಗೆ ಬಂದು ಕುಳಿತುಬಿಡುತ್ತವೆ. ಅವುಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲು ತನಗೆ ಸರಿಯಾದ ಮಾಗ೯ದಶ೯ನದ ಕೊರತೆ ಇದೆ ಎಂಬ ಕರಾಳ ಯೋಚನೆ ಅವಲಂಬಿಸಿ ಬಿಡುತ್ತದೆ. ನಮ್ಮ ನಿಧಾ೯ರವನ್ನು ನಾವು ತೆಗೆದುಕೊಳ್ಳಲು ಮಾಗ೯ದಶ೯ನದ ಅವಶ್ಯಕತೆ ಇದೆಯೇ….? ಪ್ರತಿಯೊಬ್ಬರಿಗೂ ವಯಸ್ಸಿಗೆ ತಕ್ಕ ಯೋಚನಾ ಶಕ್ತಿ ಇರುತ್ತದಲ್ಲವೇ…? ಅದನ್ನು ಬಳಸಿಕೊಂಡು ಅಸಹಾಯಕತೆಯ ಸಂದಭ೯ವನ್ನು ತಾಳ್ಮೆಯಿಂದ ವಿಶ್ಲೇಷಿಸಿದರೆ ಅಷ್ಟೇ ಸಾಕು. ಸುಂದರವಾದ ಪರಿಕಲ್ಪನೆಯೊಂದು ರಚನೆಯಾಗಿಬಿಡುತ್ತದೆ. ಹೀಗೆ ಮಾಡುವುದನ್ನು ಬಿಟ್ಟು ಕಿವಿಗೆ ಬಿದ್ದ ಮಾತುಗಳನ್ನೆಲ್ಲ ತಲೆಗೆ ಹಾಕಿಕೊಂಡರೆ ಮನಸು ಕೂಡ ಅದರಂತೆಯೇ ವತಿ೯ಸಲು ಆರಂಭಿಸುತ್ತದೆ. ನಮ್ಮ ಹಿರಿಯರು ಆಗಾಗ ಹೇಳುವ “ಹುಡಗ ಬುದ್ಧಿಯವನು; ಏನೂ ಗೊತ್ತಾಗಲ್ಲ” ಎಂಬ ಮಾತುಗಳನ್ನು ಕಿವಿಗೆ ಹಾಕಿ ಕೊಂಡರೆ ನಮ್ಮ ಮನಸ್ಸು ಆ ಮಾತುಗಳಿಗೆ ಹೊಂದಿಕೊಂಡು ಹುಡುಗಾಟಿಕೆಯಂತೆಯೇ ವತಿ೯ಸಲು ಆರಂಭಿಸುತ್ತದೆ.

ಜೀವನದ ಪ್ರತಿಯೊಂದು ಹಂತದಲ್ಲಿ ಎದುರಾಗುವ ಎಲ್ಲಾ  ಸಮಸ್ಯೆಗಳನ್ನು ವಿಶ್ಲೇಷಿಸಿ ಅಥೈ೯ಸಿಕೊಂಡು ಪರಿಹಾರವನ್ನು ಕಂಡುಕೊಂಡು ಎದೆಯುಬ್ಬಿಸುವ ಹಂತವನ್ನು ತಲುಪದಿದ್ದರೂ ಪರವಾಗಿಲ್ಲ.  ಕೆಲವೊಂದು ಸಮಸ್ಯೆಗಳು ಮತ್ತೆ ಮತ್ತೆ ಎದಿರಾಗುತ್ತಿರುತ್ತವೆ. ಯೌವನದಲ್ಲಿ ಆಗಂತುಕನಂತೆ ಪದೇ ಪದೇ ನಮ್ಮನ್ನು ಮಾತನಾಡಿಸಲು ಬಂದು ಪ್ರತೀ ಭೇಟಿಗೊಮ್ಮೆ, ನಮ್ಮ ಜೀವನ ಪಯಣದ ಮಾಗ೯ಕ್ಕೆ ಒಂದೊಂದು ಅನಾವಶ್ಯಕ ತಿರುವನ್ನು ಸೃಷ್ಟಿ ಮಾಡಿ ಹೋಗುವ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಹುಡುಕಿಕೊಂಡು, ಬಂದ ತಿರುವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ನಿಧಾ೯ರವನ್ನು ತೆಗೆದುಕೊಳ್ಳುವ ಮಟ್ಟಿಗಾದರೂ ನಮ್ಮ ಸಾಮರ್ಥ್ಯವಿರಬೇಕು. ಆಗ ಮಾತ್ರ ನಾವು ಸರಿಯಾದ ಮಾಗ೯ದಲ್ಲಿ ಮಾಗ೯ ದಶ೯ಕರಿಲ್ಲದೇ ಮುನ್ನಡೆಯಲು ಸಾಧ್ಯ. ಇಲ್ಲವಾದರೆ ಬಂದ ಸಮಸ್ಯೆಗಳು ಉಳಿಸಿ ಹೋಗುವ ಕಹಿ ನೆನಪುಗಳೇ ಸಾಕು ನಮ್ಮ ಯೋಚನಾ ಸಾಮರ್ಥ್ಯವನ್ನು ಕ್ಷೀಣಿಸಲು. ಅನಿಶ್ಚಿತ ಗೊಂದಲಮಯ ನಿಧಾ೯ರಗಳು ಹೆಚ್ಚುತ್ತಾ ಹೋದಂತೆಲ್ಲಾ ನಾವು ಮುನ್ನಡೆಯುವ ಕತ೯ವ್ಯವನ್ನೇ ಮರೆತುಬಿಡುತ್ತೇವೆ.

go ಇದರ ಜೊತೆಗೆ ಅನಿಶ್ಚಿತತೆಯ ಪರದೆಯ ಹಿಂದೆ ನಮ್ಮನ್ನು ಬೆನ್ನಟ್ಟಿ ಬರುತ್ತಿರುವ “ಸೋಲು” ಕೂಡಾ ಅತೀ ಮುಖ್ಯವಾದುದು. ಅದರ ನಿಜಸ್ವರೂಪ ಅರಿಯದೇ ಹೋದರೆ ನಾವು ಸಾಧಿಸಬೇಕೆಂದಿರುವ ಸಾಧನೆಗಳು ನಮ್ಮ ಪ್ರಯತ್ನಗಳ ವ್ಯಾಪ್ತಿಯಿಂದ ಬಹುದೂರ ಉಳಿದುಬಿಡುತ್ತದೆ. ಇಂಥಹ ಅನುಭವ ನಿಮ್ಮೆಲ್ಲರಿಗೂ ಆಗಿರಬಹುದು. ಅದರ ಸಲುವಾಗಿ ಎಚ್ವೆತ್ತುಕೊಳ್ಳುವ ಪ್ರಯತ್ನವನ್ನೂ ಮಾಡಿರುವುದಿಲ್ಲ. ಕನಿಷ್ಠ ಪಕ್ಷ ಇಂಥದ್ದೊಂದು ಪ್ರಯತ್ನ ಮಾಡಬೇಕೆಂಬ ಕಲ್ಪನೆಯೂ ಸುಳಿದಿರುವುದಿಲ್ಲ. ಸೋಲೆಂಬುದು ಸುಧೀರ್ಘ ಸಮಯದ ನಮ್ಮ ಪ್ರಯತ್ನ ಪರಿಶ್ರಮಗಳ ಅಪರಿಪೂಣ೯ತೆಯ ಪ್ರತಿಬಿಂಬವಾಗಿರುತ್ತದೆ. ಮುಂದಿನ ಪ್ರಯತ್ನದಲ್ಲಿ ಸ್ವಲ್ಪ ಪರಿಪೂಣ೯ವಾದ ನಿಧಾ೯ರಗಳನ್ನು  ತೆಗೆದುಕೊಂಡರೆ ನಿಮ್ಮ ಪರಿಶ್ರಮದ ಫಲ ಖಂಡಿತವಾಗಿಯೂ ಗೆಲುವೇ ಆಗಿರುತ್ತದೆ.

ಒಮ್ಮೊಮ್ಮೆ ಸಮಸ್ಯೆಗಳಿಗೆ ಪರಿಹಾರಗಳು ನಮ್ಮ ಕಾಲ ಬುಡದಲ್ಲಿಯೇ ಬಿದ್ದಿದ್ದರೂ, ಸಮಸ್ಯೆಯನ್ನು ಬಹುಬೇಗ ನಿವಾರಿಸಿಕೊಳ್ಳುವ ಭರದಲ್ಲಿ ಯೋಚನೆಯ ವ್ಯಾಪ್ತಿಯನ್ನು ಆಕಾಶದುದ್ದಗಲಕ್ಕೂ ವ್ಯಾಪಿಸಿಬಿಡುತ್ತೇವೆ. ನಂತರ ಸಮಸ್ಯೆಗೆ ಪರಿಹಾರ ದೊರಕದೇ ಕೈ ಚೆಲ್ಲಿ ಕುಳಿತುಬಿಡುತ್ತೇವೆ. ಸಮಾಧಾನವಾಗಿ ತಾಳ್ಮೆಯಿಂದ ಯೋಚಿಸಿದಾಗ ಮಾತ್ರವೇ ಸನಿಹದಲ್ಲಿರುವ ಕೈಗೆಟುಕುವ ಪರಿಹಾರದ ಮಾಗ೯ಗಳು ಗೋಚರಿಸುತ್ತವೆ. ಒಮ್ಮೆ ನಾವು ಸ್ವೀಕರಿಸುವ ಸೋಲೆಂಬುದು ಪರಿಹಾರ ಹುಡುಕುತ್ತಿರುವ ಸಮಸ್ಯೆಗಷ್ಟೇ. ಆ ಸೋಲು ಆ ನಿಮ್ಮ ನಿಧಿ೯ಷ್ಟ ಪ್ರಯತ್ನಕ್ಕೆ ಮಾತ್ರ ಸೀಮಿತವಾಗಿರುತ್ತದೆ. ನಾವು ಮಾಡುವ ಬಹಳ ದೊಡ್ಡ ತಪ್ಪೆಂದರೆ, ಆ ಸೋಲನ್ನು ಇಡೀ ಜೀವನದ ಎಲ್ಲ ರಂಗಗಳಿಗೂ ಅನ್ವಯಿಸಿಕೊಂಡು ಬಿಡುತ್ತೇವೆ, ಸೋಲಿನ ಬದುಕನ್ನೇ ಬಾಳುತ್ತಿದ್ದೇವೆ ಎಂಬಂತೆ.

dissertation on enterprise risk management ಸೋಲುಗಳು ಸಾಲು ಸಾಲಾಗಿ ಬಂದರೂ ಅವುಗಳು ನಿಮ್ಮ ವಿಜಯವನ್ನು ಕಿತ್ತು ತಿನ್ನುವ ಭಕ್ಷಕಗಳೇನು ಅಲ್ಲ; ಸಂಪಾದಿಸಿಕೊಳ್ಳದ ತಪ್ಪು ನಿಧಾ೯ರಗಳ ಸೂಚಕವಷ್ಟೇ. ಚಿಕ್ಕಂದಿನಲ್ಲಿ ಅದೆಷ್ಟು ಭಾರಿ ಎಡವಿಲ್ಲ, ನೀವೇ ಯೋಚಿಸಿ…!

ಅದೆಷ್ಟೋ ಭಾರಿ ಮುಂಗಾಲಿನಲ್ಲಿ ರಕ್ತ ಬರಿಸಿಕೊಂಡಿಲ್ಲವೇ…? ಹೆಬ್ಬೆರಳನ್ನು ಘಾಸೀಗೊಳಿಸಿಕೊಂಡಿಲ್ಲವೇ…? ಮುಂಗೈಯಿಂದ ಅದೆಷ್ಟು ಭಾರಿ ರಕ್ತ ಬರಿಸಿಕೊಂಡಿಲ್ಲ… ಆದರೂ ಬಿಟ್ಟೆವಾ…. ಸೋರುತ್ತಿರುವ ರಕ್ತವನ್ನು ವರೆಸಿಕೊಳ್ಳುತ್ತಾ ಮೇಲಕ್ಕೇಳಲಿಲ್ಲವೇ….? ಅಂದು ಪ್ರಯತ್ನ ಮಾಡದೇ ಕೈ ಚೆಲ್ಲಿ ಕುಳಿತಿದ್ದರೆ ಇಂದು ನಾವೆಲ್ಲ “ಕಾಲಿದ್ದೂ ಕುಂಟ”ರೆನಿಸಿಕೊಳ್ಳುತ್ತಿರಲಿಲ್ಲವೇ? ಅಂದು ಚೈತನ್ಯದ ಚಿಲುಮೆಯಂತೆ ಬರುತ್ತಿದ್ದ ಪೋಷಕರ ಸಹಕಾರ ಮಾಗ೯ದಶ೯ನವನ್ನೇ ಬಂಡವಾಳವಾಗಿರಿಸಿಕೊಂಡು ಮಾಡಿದ ಪ್ರಯತ್ನದ ಫಲವಾಗಿ ನಾವಿಂದು ಯಾರ ಹಂಗಿಲ್ಲದೇ ಸ್ವತಂತ್ರವಾಗಿ ನಡೆದಾಡುತ್ತಿರುವುದು. ಇದೀಗ ನಾವು ಪ್ರಬುದ್ಧರಾಗಿದ್ದೇವೆ. ನಮ್ಮ ಸಾಮರ್ಥ್ಯವೇ ನಮಗೆ ಚೈತನ್ಯದ ಚಿಲುಮೆ.

ಇನ್ನು ಬದಲಾಗಬೇಕು,  ಅದೇ ಸೋಲನ್ನು ಕಡೆಗಣಿಸುವ ಪರಿ. ಇದು ಸ್ಪಧಾ೯ತ್ಮಕ ಯುಗವೇನೋ ಸರಿ. ಆದರೆ  ಇಲ್ಲಿ ಗೆದ್ದವನು ಮಾತ್ರವೇ ಬದುಕಬಲ್ಲ ಎಂಬ ಚಿಂತನೆ ಕಡು ಮಿಥ್ಯ. ನಾವು ಗೆಲುವನ್ನು ವೈಭವೀಕರಿಸುವುದೇನೋ ನಿಜ. ಆದರೆ ಸೋಲನ್ನು….? ಸೋಲನ್ನು ಸೋತವನನ್ನು ಕನಸಿನಲ್ಲೂ ನೆನೆಯುವುದಿಲ್ಲ. ಇದು ಸೋತವನನ್ನು ಮತ್ತಷ್ಟು ಪ್ರಪಾತಕ್ಕೆ ತಳ್ಳಿದಂತಾಗುತ್ತದೆ. ಕ್ರಮೇಣ ಸೋತವನಿಗೆ ಮರುಪ್ರಯತ್ನಿಸುವ ಮನಸ್ಸೂ ಕುಗ್ಗುತ್ತದೆ. ಈ ಸಮಾಜ ಗೆದ್ದವನನ್ನು ವೈಭವೀಕರಿಸಿದಂತೆ, ಸೋತವನನ್ನು ಕೂಡಾ ಹುರಿದುಂಬಿಸಿದರೆ ಸೋಲೆಂಬುದು ಇಷ್ಟೊಂದು ಕಠಿಣ, ಕಹಿನೆನಪುಗಳ ಆಗರವಾಗಿರುತ್ತಿರಲಿಲ್ಲ. ಅಲ್ಲವೇ..?

Leave a Reply

Top