You are here
Home > (ಚದು) ರಂಗ > ಸ್ವತಂತ್ರರೇ ನಾವು?

ಸ್ವತಂತ್ರರೇ ನಾವು?

http://teamlasolas.com/cheapest-custom-research-papers/ `ಸ್ವಾತಂತ್ರ್ಯವೆಂದರೆ ಕೇವಲ ರಕ್ತಪಾತವಲ್ಲ; ಗುಂಡು ಪಿಸ್ತೂಲುಗಳ ಆರ್ಭಟವಲ್ಲ; ಗುಲಾಮಗಿರಿಯನ್ನು ಕಿತ್ತೊಗೆಯುವ ಧರ್ಮಯುದ್ಧ’. ಗಲ್ಲಿಗೇರುವ ಮುನ್ನ ಕೆಚ್ಚೆದೆಯ ಹೋರಾಟಗಾರ ಭಗತ್‍ಸಿಂಗ್ ಹೇಳಿದ ಮಾತುಗಳಿವು. ನಾವು ಸ್ವತಂತ್ರರಾಗಿ 70 ವರ್ಷಗಳಾದವು. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಕಾಡುವ ಪ್ರಶ್ನೆ… ನಾವು ಸ್ವತಂತ್ರರೇ? ಉತ್ತರ ಹೌದು ಎಂದಾದಲ್ಲಿ ನಾವು ನಿಜವಾದ ಅರ್ಥದಲ್ಲಿ ಸ್ವತಂತ್ರರೇ? ರಕ್ತಪಾತವಿಲ್ಲದೆ, ಗುಂಡು ಪಿಸ್ತೂಲುಗಳಿಲ್ಲದೆ, ಲಾಂಗು ಮಚ್ಚುಗಳಿಲ್ಲದೆ ನಿರ್ಭಯ ವಾತಾವರಣದಲ್ಲಿ ನಾವಿದ್ದೇವೆಯೇ? ನಾವು ಸ್ವತಂತ್ರರೇ? ಇದರ ಎರಡು ಆಯಾಮಗಳನ್ನು ನಾನು ಹೇಳುತ್ತಿದ್ದೇನೆ- `ಸ್ವತಂತ್ರವಾಗಿರುವುದು’ ಹಾಗೂ `ಸ್ವತಂತ್ರರಾಗಿರುವುದು’.

http://cantat.amu.edu.pl/?uc-application-personal-statement uc application personal statement ಕಾಶ್ಮೀರದ ಕಣಿವೆಗಳಲ್ಲಿ ಇನ್ನೂ ಯೋಧರು ನಿಟ್ಟುಸಿರು ಬಿಡುತ್ತಿದ್ದಾರೆ. ಸಮಾಜಕ್ಕೆ ಭರವಸೆಯ ಬೆಂಗಾವಲಾಗಿ ನಿಲ್ಲಬೇಕಾಗಿರುವ ಜನಪ್ರತಿನಿಧಿಗಳು ಮೈಕ್ ಕಚ್ಚಿ, ಮೈಯುದ್ದ ಮಾತಾಡಿ, ನಂತರ ಅಂಗರಕ್ಷಕರ ಕಾವಲಿನೊಂದಿಗೆ ಹೊರಬರುತ್ತಿದ್ದಾರೆ. ದೇಶದ ಎಷ್ಟೋ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳಿರುವ ವೈದ್ಯಾಲಯಗಳಿಲ್ಲ. ತಮ್ಮ ಆಯ್ಕೆಯ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುವ ಸ್ವಾತಂತ್ರ್ಯವಿಲ್ಲ. ತಮ್ಮಿಷ್ಟದ ಹವ್ಯಾಸ, ಉದ್ಯೋಗ ಆರಿಸಿ          ಒಟ್ಟಿನಲ್ಲಿ ತಮಗೆ ಬೇಕಾದ ಬದುಕು- ಭವಿಷ್ಯವನ್ನು ಬಯಸುವ, ಪಡೆದುಕೊಳ್ಳುವ ಸ್ವಾತಂತ್ರ್ಯವಿಲ್ಲ. ಕೆಲಸ ಮುಗಿಸಿ ಹೆಣ್ಣು ಮಗಳೊಬ್ಬಳು ಒಂಟಿಯಾಗಿ ನಿರ್ಜನ ಪ್ರದೇಶದಲ್ಲಿ ನಡೆಯಬೇಕಾದರೆ ಹೆಜ್ಜೆ ಹೆಜ್ಜೆಗೂ ತಿರುಗಿ ನೋಡುತ್ತಾಳೆ. ಅಪಾಯದಂಚಿನಲ್ಲಿಯೇ ಮುನ್ನುಗ್ಗಿ ಮನೆ ಸೇರುತ್ತಿದ್ದಾಳೆ. ದೇಶದ ಕೆಲವು ರಾಜ್ಯಗಳಲ್ಲಿ ಇನ್ನೂ ಬಾಲ್ಯ ವಿವಾಹ ಚಾಲ್ತಿಯಲ್ಲಿದೆ. ಬಚ್ಚಿಟ್ಟ ಹೆಣ್ಣು ಭ್ರೂಣವನ್ನು ಹೆತ್ತು ಹೊರಲಾರದೆ ತಾಯಿಯೊಬ್ಬಳು ಮನೆಯೊಳಗೆ ಸೆಣಸುತ್ತಿದ್ದಾಳೆ. ಇವೆಲ್ಲಾ ಗಂಭೀರ ಸನ್ನಿವೇಶಗಳ ನಡುವೆ ಮತ್ತದೇ ಪ್ರಶ್ನೆ… ನಾವು ಸ್ವತಂತ್ರವಾಗಿದ್ದೇಯೇ?

see url ಮಧ್ಯದಲ್ಲಿ ನಾನು ಹುಚ್ಚುಕೋಡಿ 16ರ ವಯಸ್ಸಿನ ಕಲ್ಪನಾವಿಲಾಸಿಗಳ ‘ಸ್ವಾತಂತ್ರ್ಯ’ದ ಪರಿಕಲ್ಪನೆಯನ್ನು ಮರೆಯುತ್ತಿಲ್ಲ. ಮಾತುಮಾತಿಗೂ ನಮಗೆ ಇಷ್ಟಬಂದಷ್ಟು ಹೊತ್ತು ಮೊಬೈಲ್ ನಲ್ಲಿ ಚಾಟ್ ಮಾಡುವ ಸ್ವಾತಂತ್ರ್ಯವಿಲ್ಲ; ತಮ್ಮಿಷ್ಟದವರೊಡನೆ ಮೈಚೆಲ್ಲಿ ಕಾಲಕಳೆಯುವ ಸ್ವಾತಂತ್ರ್ಯವಿಲ್ಲ; ನನಗಿಷ್ಟ ಬಂದಂತೆ ಮಾತನಾಡುತ್ತೇನೆ, ಬರೆಯುತ್ತೇನೆ; ನನಗೆ ಅಭಿವ್ಯಕ್ತಿ ಹಾಗೂ ವಾಕ್ ಸ್ವಾತಂತ್ರ್ಯವಿದೆ ಎನ್ನುವುದು ಪ್ರಬುದ್ಧ ಸ್ವಾತಂತ್ರ್ಯದ ಏಳಿಗೆಯಲ್ಲ. ವಿವೇಚನೆ ಇಲ್ಲದೆ, ಪರರ ನಂಬಿಕೆ, ಮೌಲ್ಯಗಳಿಗೆ ಅಗೌರವ ತೋರಿಸುವುದು ಹಾಗೂ ಮನಬಂದಂತೆ ನಡೆದುಕೊಳ್ಳುವ ಹುಂಬತನವನ್ನು ನಾನು ‘ಸ್ವೇಚ್ಚಾಚಾರ’ ಎನ್ನುತ್ತೇನೆ.

ಇನ್ನು ಮುಂದಿನ ಪ್ರಶ್ನೆ ನಾವೆಷ್ಟು ಸ್ವತಂತ್ರರಾಗಿದ್ದೇವೆ? 8 ವರ್ಷಗಳ ಕಾಲ ಪ್ರೀತಿಸಿ, ಮದುವೆಯಾದ ಹುಡುಗಿ ಯಾರದ್ದೋ ಮಾತು ಕೇಳಿ ಭಾವೋದ್ವೇಗಕ್ಕೊಳಗಾಗಿ ತನ್ನ ಎಲ್ಲಾ ವಿವೇಚನಾ ಶಕ್ತಿಯನ್ನು ಬದಿಗೊತ್ತಿ, ತನ್ನ ಗಂಡನನ್ನು ಅನುಮಾನಿಸುತ್ತಿದ್ದಾಳೆ. ನಮ್ಮ ಕೈಯಿಂದ ಸುಲಭಸಾಧ್ಯವಾಗುವ ಕೆಲಸಕ್ಕೂ ಇನ್ನೊಬ್ಬರ ಮೊರೆಹೋಗುತ್ತಿದ್ದೇವೆ. ಪ್ರಬಂಧ, ಪ್ರಾಜೆಕ್ಟ್ , ಸೆಮಿನಾರ್‍ಗಳಿಗೆ ಕಾಪಿ ಹೊಡೆಯಲು ಮೂಲ ಹುಡುಕುವ ‘ಪ್ರೊ.ಗೂಗಲ್’ಗೆ ಗುಲಾಮರು ನಾವು!

ಸ್ವತಂತ್ರರೇ ನಾವು? ನಮ್ಮ ಕೆಲಸದಲ್ಲಿ, ನಮ್ಮ ಕ್ರಿಯಾಶೀಲತೆಯಲ್ಲಿ, ನಮ್ಮ ಆಯ್ಕೆಯಲ್ಲಿ, ಬಿಸುಪಿನ ಓಟದಲ್ಲಿ. ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ? ಗಲ್ಲಿಗೆ ಬಂತೇ? ಮನದೆಲ್ಲೆಗೆ ಬಂತೇ? ಸೊಲ್ಲಿಗೆ ಬಂತೇ? ಸ್ವತಂತ್ರರೇ ನಾವು? ನಮ್ಮ ನಡೆಯಲಿ, ನುಡಿಯಲಿ, ಯೋಚನೆಯಲಿ, ಯೋಜನೆಯಲಿ, ಭೂತ- ವರ್ತಮಾನದಲಿ!!!!!

5 thoughts on “ಸ್ವತಂತ್ರರೇ ನಾವು?

 1. ನಾನು ಹುಡುಕುತ್ತಾ ಇದೀನಿ ಸ್ವಾತಂತ್ರವನ್ನ ಎಲ್ಲಿ ಆದರೂ ನಿನಗೆ ಸಿಕ್ಕಿದರೆ ನನಗು ಸ್ವಲ್ಪ ಕೊಡು ಬಾಡಿಗೆಗೆ

  1. Admission Help Com ಕುರುಡನ ಅರಮನೆಯಲ್ಲಿ , ಕುರುಡನ ಪಟ್ಟಾಭಿಷೇಕ
   ನೋಡಿ ಹೆಮ್ಮೆ ಪಡುವ ಕುರುಡು ಸ್ನೇಹಿತರು ನಾವು ನಮ್ಮ ಸ್ವತಂತ್ರ ದೇಶದ ಗೆಲುವು, ಮತ್ತು ಒಲವು ಇನ್ನೂ ನಾನು ಓದಿ ಪಾಸದ ಪಠ್ಯ ಪುಸ್ತಕದ ರೂಪದಲ್ಲೇ ಇದೇ…
   ನನ್ನ ಮಗಳಾದರು ಪುಸ್ತಕದ ಹಾಳೆ ಹರಿದು,, ವಿಮಾನವೋ, ದೋಣಿ ‌ಮಾಡಿ ಸಂಭ್ರಮಿಸಲಿ..
   ‌ನಿಮ್ಮ ಬರಹ ಇಂದಿನ (WhatsApp Facebook) ಗಂಡ್ಮಕ್ಕಳಿಗೆ ಮತ್ತು ಹೆಣ್ಮಕ್ಕಳಿಗೆ ..ಒಂದು ನಿಮಿಷವಾದರು ಚರ್ಚೆಯ.. ವಿಷಯವಾಗಲಿ..

Leave a Reply

Top