You are here
Home > ಮಮಕಾರ > ಹಸಿರು

ಹಸಿರು

ಹಸಿರು ಹೊಸತನದ ಸಂಕೇತ, ಶಾಶ್ವತತೆಯ ಚಿನ್ಹೆ, ಸಮೃದ್ಧಿಯ ನಿಶಾನೆ, ಉಲ್ಲಾಸದ ಅನುಭೂತಿ, ನಡೆ ಮುಂದೆ ಎಂಬ ಪ್ರೋತ್ಸಾಹದ ಗುರುತು, ಹೆಣ್ಮಕ್ಕಳಿಗೆ ಹಿತವಾದ ಅನುಭವ, ಕಣ್ಣಿಗೆ ತಂಪು ತರುವ ಬಣ್ಣ. ಕೆಲವೊಮ್ಮೆ ಕೇವಲ ಬಣ್ಣವಷ್ಟೆ ಅಲ್ಲ, ಭಾವನೆಗಳ, ಆಲೋಚನೆಗಳ, ನೆನಪುಗಳ, ನಗು-ಅಳುವಿನ ಸಂಗಾತಿ.

ವಿಶಾಲ ಜಗದ ಅಂಗಳದಲ್ಲಿ ಕಣ್ಣು ಹಾಯಿಸಿದಷ್ಟು ಕಾಣಸಿಗುವುದು (ಮಹಾಪಟ್ಟಣಗಳ ಕಟ್ಟಡಗಳನ್ನು ಹೊರತು ಪಡಿಸಿ) ನೀಲಾವೃತ ಬಾನು ಮತ್ತು ಹಸಿರು ಹೊದ್ದಿರುವ ಧರಿತ್ರಿ (ಜಲಾವೃತ ಧರಣಿಯು ಇದೆ ಹಾಗು ಮಣ್ಣು-ಮರಳು ತುಂಬಿದ ಧರೆಯೂ ಇದೆ). ಮೋಡ ಮಳೆ ಸುರಿಸಿ, ಇಳೆ ಹಸಿರುಟ್ಟು ಕಂಗೊಳಿಸಲು ಹಬ್ಬದ ಸಡಗರ, ಸಂಭ್ರಮದ ಕಳೆ ಸಮಸ್ತ ಜೀವಜಂತುಗಳಿಗೆ..! ಬಣ್ಣ ಬಣ್ಣದ ಹೂಗಳು ಅರಳಿ ನಿಲ್ಲುವುದು ಈ ಹಸಿರು ಎಲೆಗಳ ನಡುವಲ್ಲಿಯೇ. ಅಂತಹ ಹಸಿರು ಕಣ್ಣು ಹಾಯಿಸಿದಷ್ಟು ಸಿಕ್ಕರೆ ಖುಷಿಯೋ ಖುಷಿ.

ಹಾಗೆ ನೋಡಿದರೆ, ಹಸಿರು, ಪ್ರಕೃತಿಯ ನಡುವಿನ ಸಂಬಂಧ ಸೋಜಿಗವೇ ಸರಿ..! ಹಸಿರು ನಳನಳಿಸಲು ಮಳೆ/ನೀರು ಬೇಕು. ಎಲೆಗಳಲ್ಲಿರುವ ಹಸಿರು ಬಣ್ಣಕ್ಕೆ ಕಾರಣವಾಗಿರುವ ಪತ್ರಹರಿತ್ತು, ಸೂರ್ಯನ ಶಾಖವ ಬಳಸಿಕೊಂಡು, ದ್ಯುತಿ ಸಂಶ್ಲೇಷಣ ಕ್ರಿಯೆ ನಡಿಸಿ, ಶಕ್ತಿ ಪರಿವರ್ತನೆ ಮಾಡುತ್ತದೆ. ಇನ್ನು ಈ ಹಸಿರಿಗೆ ಶಕ್ತಿ ನೀಡುವ ಬೇರು, ಮಣ್ಣಿಗೆ ಅಪ್ಪಿಕೊಂಡಿದೆ. ಹಸಿರು ಆಮ್ಲಜನಕ ಉತ್ಪತ್ತಿ ಮಾಡಲು, ಗಾಳಿಯು ಬೇಕು; ಸಕಲ ಜೀವಾತ್ಮಗಳು ಉಸಿರಾಡಲು, ಜೀವಿಸಲು.

ಇನ್ನು ಹೆಣ್ಣು ಮಕ್ಕಳ ಜೀವನದ ಪ್ರಮುಖ ಹಂತದ ಪ್ರತಿ ಹೆಜ್ಜೆಯಲ್ಲೂ, ಹಸಿರಿಲ್ಲದೆ ಯಾವ ಆಚರಣೆ ನಡೆದೀತು..? ಹಸಿರು ಸೀರೆ, ಹಸಿರು ಬಳೆಗಳಿಲ್ಲದೆ ಬಾಗಿನ ಹೇಗೆ ಪೂರ್ತಿಯಾದೀತು..? ಜೇಡ್, ಪಚ್ಚೆ ಆಭರಣಗಳು ಹಸಿರು ಬಣ್ಣದಿಂದ ಕಂಗೊಳಿಸುತ್ತವೆ, ಅವುಗಳನ್ನು ತೊಟ್ಟು, ಹೆಂಗಳೆಯರೂ ಕಂಗೊಳಿಸುತ್ತಾರೆ. click here ಹಸಿರು get link ಗಾಜಿನ ಬಳೆಗಳೇ …..” Online Editing Services , “ ಹಸಿರು link ಸಿರಿಯಲೀ source url , ಮನಸು ಮರೆಯಲಿ, ನವಿಲೇ…..” ಎಂಬ ಹಲವಾರು ಹಾಡುಗಳು ಇಂದಿಗೂ ಹಚ್ಚ ಹಸಿರಾಗಿವೆ.

ಭವ್ಯ ಭಾರತದ ಬಾವುಟದಲ್ಲಿಯೂ ಹಸಿರು ಹಾರಾಡುತ್ತಿರುತ್ತದೆ; ಫಲವತ್ತತೆ, ಬೆಳವಣಿಗೆ, ಸಮೃದ್ಧಿ, ಶುಭಸೂಚಕದ ಸಂಕೇತವಾಗಿ. ಇವಲ್ಲದೆ, ರಸ್ತೆ ಸಂಚಾರ ನಿಯಮಗಳ ಪಾಲನೆಯಲ್ಲಿಯು ಹಸಿರು ನಿಶಾನೆ ನಮ್ಮನ್ನು ಮುನ್ನಡೆಸುತ್ತದೆ, ನಮ್ಮ ಗಮ್ಯದೆಡೆಗೆ. ಆಹಾರ ಪದಾರ್ಥ ಖರೀದಿಸುವಾಗಲು ಹಸಿರು ಚಿನ್ಹೆ ನೋಡಿ, ಸಸ್ಯಜನ್ಯವೆಂದು ಖಚಿತಪಡಿಸಿಕೊಂಡು ಕೊಳ್ಳುತ್ತೇವೆ. ದೇಹದ ಏಳು ಶಕ್ತಿ ಕೇಂದ್ರಗಳಲ್ಲಿ ನಾಲ್ಕನೆಯದಾದ, ಅನಾಹತ ಚಕ್ರವು ಹೃದಯ ಸಮೀಪ ಇರುವ ಚಕ್ರವಾಗಿದೆ; ಹನ್ನೆರಡು ಕಮಲಗಳ ವಿನ್ಯಾಸವಿರುವ ಇದರ ಬಣ್ಣ ಹಸಿರು.

ಹೀಗೆ ಹಸಿರು ಎಲ್ಲೆಲ್ಲೂ ಬೆರೆತು ಹಚ್ಚ-ಹಸಿರಾಗಿದೆ. ಹಸಿರು ಎಂದರೆ ಪರಿಸರ, ಪರಿಸರದ ಮೊದಲ ಅಂಗ ಹಸಿರು ಎಂದು ನೆನಪಾಗುವುದು ಸಹಜವೇ ಆಗಿದೆ. ಪ್ರತಿವರ್ಷ ಜೂನ್  ರಂದು ವಿಶ್ವ ಪರಿಸರ ದಿನ ದಂದು ಒಂದು ಗಿಡ ನೆಟ್ಟು, ನೀರು ಹಾಕಿ ಪರಿಸರ ದಿನವನ್ನು ಆಚರಿಸುತ್ತೇವೆ. ಆಚರಣೆಗಾಗಿ ಮಾತ್ರವೇ..!? ದೊಡ್ಡ ದೊಡ್ಡ ಮರಗಳನ್ನು ಕೆಡವಿ ಹಾಕಿ ಅವುಗಳ ಸಮಾದಿಯ ಮೇಲೆ ನಾವು ಕಟ್ಟಡ ಕಟ್ಟಿ ಜೀವಿಸುತ್ತೇವೆ. ಹೆಮ್ಮರವಾಗಿ ಬೆಳೆಯುವ ಶಕ್ತಿ ಇರುವ ಮರಗಳಿಗೆ ಅವುಗಳ ಅಗಾಧ ಸಾಮರ್ಥ್ಯವನ್ನು ಸಂಕುಚಿತಗೊಳಿಸಿ ಬೋನ್ಸಾಯ್ ಎಂದು ಹೆಸರಿಟ್ಟು ಕಟ್ಟಡದೊಳಗೆ ಬಂಧನದಲ್ಲಿರಿಸುತ್ತೇವೆ. ಫಲ-ಪುಷ್ಪ ಪ್ರದರ್ಶನದ ಸಮಯದಲ್ಲಿ ವಿವಿಧ ಬಗೆಯ ಹೂ-ಹಣ್ಣುಗಳು ಕೇವಲ ಕೆಲವು ದಿನಗಳ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರುತ್ತವೆಯೇನೋ..!?

ಶತ-ಶತಮಾನಗಳಿಂದ, ಮಾನವ ಜಾತಿಯು ನಾಗರಿಕತೆಯ ಹೆಸರಿನಲ್ಲಿ, ತನ್ನೊಡನಿರುವ ನಿರ್ಜೀವ ವಸ್ತುಗಳನ್ನು ಬೆಳೆಸುತ್ತ ಬಂದಿದ್ದಾನೆ. ಆದರೆ ಇತರ ಜೀವಿಗಳು, ಈ ಅಗಾಧ ಪರಿಸರದ ಅವಿಭಾಜ್ಯ ಅಂಗವಾಗಿರುವ ಹಲವು ಚರಾಚರಗಳು, ಈ ಬೆಳವಣಿಗೆಯ ಹೆಸರಲ್ಲಿ ಅವನತಿಯತ್ತ ಸಾಗುತ್ತಿವೆ. ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಬೇಕಿದೆ. ಬದುಕಿ, ಬದುಕಲು ಬಿಡಿ ಇದನ್ನು ಅರ್ಥೈಸಿಕೊಂಡು ಜೀವಿಸಬೇಕಿದೆ. ಕನ್ನಡದ ಆದಿ ಮಹಾಕವಿ ಪಂಪ ರ ಮಾನವ ಕುಲ ತಾನೊಂದೇ ವಲಂ ಎಂಬ ವಿಶ್ವಮಾನವ ತತ್ವವನ್ನು ಗ್ರಹಿಸಿಕೊಳ್ಳಬೇಕಿದೆ.

ಹೇಳುವವರು ಹೇಳುತ್ತಲೇ ಬಂದಿದ್ದಾರೆ, ಆದರೆ ಕೇಳುವ ಕಿವಿಗಳು ಕಿವುಡಾಗಿವೆ ಅಥವಾ ತೀವ್ರಗತಿಯ ಅಭಿವೃದ್ಧಿಯ ಭರದಲ್ಲಿ ಪರಿಸರ ಕಾಳಜಿ ಮಂಕಾಗಿದೆ. ಇನ್ನಾದರೂ ನಿರ್ಜೀವಕ್ಕೆ ಜೀವ ತುಂಬುವ ಕೆಲಸ ಕಡಿಮೆಗೊಳಿಸಿ ಜೀವ ಸಂಕುಲ ಬೆಳೆಸಬೇಕಿದೆ. ಅರಿ-ಷಡ್ವರ್ಗಗಳನ್ನು ತ್ಯಜಿಸಿ, ಸಮಸ್ತ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕಿದೆ. ಜೀವಿಸುತ್ತಿರುವ ನಾವು ಕೋಟ್ಯಂತರ ಸಂಖ್ಯೆಯಲ್ಲಿರಬಹುದು, ಆದರೆ ಅಷ್ಟೆಲ್ಲ ಶತ-ಕೋಟಿ ಅಣುಗಳಿಗೆ ಇರುವೊದೊಂದೇ ಭೂಮಿ. ಇಳೆ ಕಂಗೊಳಿಸುತ್ತಿರಲಿ ಹಸಿರುಟ್ಟು, ಉಸಿರು ನೀಡುತ್ತಾ, ಹಚ್ಚಹಸಿರಾಗಿ.

ಕಲ್ಪನಾ ಲೋಕ
writings from kalpa shree

Leave a Reply

Top