You are here
Home > ತಿಳಿ ಹಾಸ್ಯ > ಹೈಫೈ ಹರಕು ಮುರುಕುಗಳು

ಹೈಫೈ ಹರಕು ಮುರುಕುಗಳು

ಗ್ರಹಣದ ಸ್ನಾನಕೆಂದು ಸಮುದ್ರಕ್ಕೆ ಬಂದ ಬ್ರಾಹ್ಮಣನೊಬ್ಬ ತಾನು ತಂದ ಮಡಿಕೆಗೆ ಹಿಡಿ ಮರಳನ್ನು ತುಂಬಿಸಿ ಸ್ನಾನಕ್ಕೆ ಹೊರಟ ಇದನ್ನ ಗಮನಿಸಿದ್ದ ಮಿಕ್ಕವರು , ಗ್ರಹಣ ಸ್ನಾನ ಮಾಡುವಾಗ
ಮಡಿಕೆಗೆ ಮರಳು ತುಂಬಿಸುದುಸಂಪ್ರದಾಯವೆಂದು ತಿಳಿದು ತಾವು ತಂದ ಮಡಿಕೆಗೆ ಹಿಡಿ ಮರಳನ್ನ ತುಂಬಿಸಿ ಸ್ನಾನಕ್ಕೆ ಹೋದರು .ಆದರೆ ಬ್ರಾಹ್ಮಣ ಮರಳು ತುಂಬಿಸಿದ್ದು ಒಂದೇ ತೆರನಾದ
ಮಡಿಕೆಗಳ ಮದ್ಯೆ ತನ್ನ ಮಡಿಕೆಯನ್ನ ಕಂಡುಹಿಡಿಯಲುವಿನಹ ಯಾವ ಸಂಪ್ರದಾಯವು ಇರಲಿಲ್ಲ.ಪ್ರಾಯಶ ಇಂದು ನಾವು ಅನುಸರಿಸುತ್ತಿರುವ ಬಹಳಷ್ಟು ಪದ್ದತಿಗಳು ಹೀಗೆ ಅಂಧಮತಿಗಳಾಗಿ  ಅನುಸರಿಸುತ್ತಾ ಬಂದಿದ್ದೇವೆ ಎಂಬುದು ತಿಳಿದವರ ಅಂಬೋಣ.

ಆದರೆ ನನ್ನ ಪ್ರಕಾರ ವೈಭೋವೋಪೂರಿತವಾಗಿ ತನ್ನ ಗಜ ಹೆಜ್ಜೆಗಳನ್ನ ಹಾಕುತ್ತಾ ಅಕ್ರಮವಾಗಿ ನುಗ್ಗುತಿರುವ ಪಾಶ್ಚಿಮಾತ್ಯ ಸಂಸ್ಕೃತಿಗಳೆಲ್ಲವೂ  ನಮ್ಮ ತವರು ಸಂಸ್ಕ್ರತಿಯ ರಿಮೇಕ್ ವರ್ಷನ್ ಗಳೆ ಕರಾವಳಿ ಬಾಗದಲ್ಲಿ ಕುಸಲಕ್ಕಿ ಅನ್ನ ಬೇಯಿಸಿದ.ನೀರು ಅಂದರೆಗಂಜಿ ತೆಳಿ ಹಾಗು ಮಲೆನಾಡು ಬಹಲುಸೀಮೆಯಲ್ಲಿ ಕಾಳುಗಳನ್ನ ಬೇಯಿಸಿದ ನೀರಿನ  ಸಾಂಬಾರು ಅಂದರೆ ಬಸ್ಸಾರು ಕುಡಿಯುವ ಪದ್ದತಿ ಇದೆ ,ಇದರ ಅಪ್ಡೇಟೆಡ್ ವರ್ಷನ್ ಹೇ ಇಂದು ಸಿಗುವ ಸೂಪ್ ಗಳು .ಅಷ್ಟೇಕೆ ಇಂದಿಗೂ ಕರಾವಳಿಯ ಮೀನುಗಾರ ಮಹಿಳೆಯರು ಮೀನನ್ನ ಉಪ್ಪುಹಾಕಿ ಒಣಗಿಸಿ ಮಳೆಗಾಲಕ್ಕೆ ಉಪಯೋಗಿಸುತ್ತಾರೆ.  ಅದರ ಮುಂದುವರಿದ ಭಾಗವೆ K.F.C ಫ್ರೈಡ್ ಚಿಕನ್ ಅಲ್ಲವೇ.

follow link ಮಂಗಳೂರಿನ ಮಾಣಿ ಹೋಟೆಲನ ಉತ್ತಪ್ಪ ( ಈರುಳ್ಳಿ ದೋಸೆ ) ಬೆಂಗಳೂರಿನ ಬೆಚ್ಚಪ್ಪನ ಮನೆಯ ಬರ್ಗರ್ ಆಗಿದೆ. ಭಾರತೀಯರ ಹೊಸ ವರ್ಷವಾದ ಯುಗಾದಿಯ ದಿನ ಎಣ್ಣೆ ಸ್ನಾನ ಮಾಡುವ ಪದ್ಧತಿ ಇದೆ. ಇದನ್ನೇ ತಪ್ಪಾಗಿ ತಿಳಿದ ಬ್ರಿಟಿಷರು  ಎಣ್ಣೆ ಹಾಕಿಕೊಂಡು ಹೊಸ ವರ್ಷ ಆಚರಿಸಲು ಹೊರಟರು ಹಾಗು ಭಾರತೀಯರಿಗಿಂತ ಮುಂದೆಇದ್ದ ಅವರು ಹೊಸ ವರ್ಷಕ್ಕು ಒಂದು ದಿನ ಮುಂಚೆ ಎಣ್ಣೆ ಹಾಕಿಕೊಂಡರಂತೆ ಅಂದಿನಿಂದಲೆ ಹುಟ್ಟಿ ಕೊಂಡಿದ್ದು ಈ 31st.

ಬ್ರಿಟಿಷರ ರಾಣಿ ಒಮ್ಮೆ ಭಾರತಕ್ಕೆ ಭೇಟಿ ಕೊಟ್ಟಾಗ ಇಲ್ಲಿನ ಮಹಿಳೆಯರ ಕೈಯಲ್ಲಿ ಮಿನುಗುತಿದ್ದ ಮದರಂಗಿಗೆ ಮಾರುಹೋಗಿ ತಾವು ಬಿಡಿಸಿಕೊಳ್ಳಲು ಮುಂದಾದರಂತೆ .ಆದರೆ ಬ್ರಿಟಿಷ್ ರಾಣಿಯಾ ಕೈ ಯಲ್ಲಿ ಯಾವಾಗಲು Gloves (ಕೈ ಚೀಲ )  ಇರುತಿದ್ದ ಕಾರಣ ಅಂಗೈಯ ಬದಲಾಗಿ ಮುಂಗೈಗೆ ಮದರಂಗಿ ಬಿಡಿಸಿಕೊಂಡರು .ಅದನ್ನ ನೋಡಿದ ಇಂಗ್ಲೆಂಡಿನಾ ಮಹಿಳೆಯರು ಮದರಂಗಿಗೆ ಮರುಳಾಗಿ ತಾವು ಕೂಡ ಮುಂಗೈಗೆ ಮದರಂಗಿಬಿಡಿಸಿಕೊಳ್ಳಲು ಇಚ್ಛಿಸಿದರು ಆದರೆ ಅಲ್ಲಿ ಮದರಂಗಿ ಗಿಡ ಸಿಗದ ಕಾರಣ ಆಗ ಅಲ್ಲಿ ಹೊಸದಾಗಿ ಹುಟ್ಟಿಕೊಂಡಿದ್ದೆ ಈ ಟ್ಯಾಟೊ.

ಆದರೆ ಕಟ್ಟಾ ಟ್ಯಾಟೊವಾದಿಗಳು ಹೇಳುತಾರೆ ಟ್ಯಾಟೊ ಹಚ್ಚೆಯ ಪ್ರತಿರೂಪ .ಆದರೆ ನನಗೆ ತಿಳಿದಂತೆ ಹಚ್ಚೆಯನ್ನ ಸಣ್ಣದಾಗಿ ಬಿಡಿಸಿಕೂಳ್ಳುತಾರೆ ,ಮನೆ ಮುಂದೆ ರಂಗೋಲಿ ಬಿಡಿಸಿದಂತೆ ಬೆನ್ನು ಹೊಟ್ಟೆ ಮುಖದ ತುಂಬಹಚ್ಚೆ ಹಾಕಿಕೊಳ್ಳುವ ಅಭ್ಯಾಸವಿಲ್ಲ . ಇತ್ತೀಚಿಗೆ ಹುಡುಗಿಯರು ಕೈಯಲ್ಲಿ ಎಲೆಕ್ಟ್ರಾನಿಕ್ಸ್ ಸರ್ಕ್ಯೂಟ್ ಟ್ಯಾಟೊ ಹಾಕಿಕೊಂಡು ಬಂದು ಪರೀಕ್ಷೆಯಲ್ಲಿ ನಕಲು ಮಾಡುತಿದ್ದರೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿ ಬರುತ್ತಿದೆ. ಮೊನ್ನೆ ಸ್ನೇಹಿತೆಯೊಬ್ಬಳು ಅದೇನೂ ಬಿಡಿಸಿದ ಛತ್ರಿಯಂತೆ ಇರುವ ಹೊಸ ಚೂಡಿದಾರ  ಹಾಕಿಕೊಂಡು ಬಂದು ಇದು ಹೊಸ ಸ್ಟೈಲ್ ಅಂಬ್ರೆಲಾ ಸ್ಟೈಲ್ ಹೇಗಿದೆ ಎಂದು ಕೇಳಿದಳು . ಅದು ಯಾವ ಹೊಸ ಸ್ಟೈಲ್ ಸ್ವಾಮಿ ಸುಮಾರು ದಶಕಗಳ ಹಿಂದಿನಿಂದಲೂ ನಮ್ಮ ಯಕ್ಷಗಾನದಲ್ಲಿ ಹಾಸ್ಯ ಪಾತ್ರ ಮಾಡುವ ಹಾಸ್ಯಗಾರ ದರಿಸುತಿದ್ದ ಬಟ್ಟೆಯೇ. ಇಂದಿನ ಅಂಬ್ರೆಲಾ ಚೂಡಿದಾರ.

follow url ಊರ ಜಾತ್ರೆಯ ಅಂಗಡಿ ಸಾಲುಗಳು ಅಥವಾ ವಾರಕೊಮ್ಮೆ ನೆಡೆಯುವ ಸಂತೆಯ ನಕಲೆ ಮಾಡ್ರನ್ ಮಾಲ್ ಗಳು ಅಂದು ಕೂಡ ಊರ ಜಾತ್ರೆಯಲ್ಲಿ ನಿಶ್ಚಿತಾರ್ಥವಾದ ಗಂಡು- ಹೆಣ್ಣು ಕದ್ದು ಮುಚ್ಚಿ ಸುತ್ತಾಡುತಿದ್ದರು  ಅದನ್ನೆ ಅನುಸರಿಸಿದ ಆಧುನಿಕ ಮಾನವರು ಮಾಲ್ ಗಳಲ್ಲಿ ಕದ್ದು ಮುಚ್ಚಿ ಸುತ್ತಾಡುತಿದ್ದರೆ ಅದಕ್ಕೆ ಅವರಿಟ್ಟ ಹೆಸರೆ ಡೇಟಿಂಗ್. ಆವಾಗ ಡೇಟ್ ಫಿಕ್ಸ್ ಆದ ಮೇಲೆ, ನೆಡೆಯುತಿತ್ತು ಡೇಟಿಂಗ್ ಇವಾಗ ಡೇಟಿಂಗ್ ಅಲ್ಲಿ ಎಲ್ಲವೂ ಫಿಕ್ಸ್ ಆದರೆ ಇಡುತಾರೆ ಡೇಟ್.

How To Write A High School Application Newspaper Article ಹಳ್ಳಿಯಲ್ಲಿ ಒಡೆದ ಕನ್ನಡಿಯ ಚೂರು ಸಿಕ್ಕರೆ ಸಾಕು ಕೋತಿಗಳು ತಮ್ಮ ಮುಖವನ್ನ ತಾವೇ ನೋಡಿ ಖುಷಿಪಡುತಿದ್ದವು ಅಲ್ಲಿಂದಾನೆ ಹುಟ್ಟಿಕೊಂಡಿತ್ತು ಈ ಸೆಲ್ಫಿ. ಸೆಲ್ಫಿ ಕಲೆಗೆ ಅಭಿಮಾನಿಗಳ ಸಂಖ್ಯೆ ಹಲವು ಕೋಟಿಗಳು,ಸೆಲ್ಫಿ ಕಲೆಯನ್ನ ಕಂಡುಹಿಡಿದದ್ದು ಕೆಲವು ಕೋತಿಗಳು ಕಿವಿಯೋಲೆಗೆ ear ring ಅಂತ ಯಾವಾಗ ಕರೆಯಲು ಶುರುಮಾಡಿದರೂ ಅಂದಿನಿಂದ ನಿಜವಾದ ಕಬ್ಬಿಣದ ರಿಂಗ್ ಗಳೆ ಕಿವಿಯೋಲೆ ಯಾದವು. ಮೂಗುಬೊಟ್ಟು nose pin ಆಯಿತು ಪ್ರತಿಫಲ ಗುಂಡು ಪಿನ್ಗಳು ಮೂಗುಬೊಟ್ಟುಗಳಾದವು.

ವಿಜ್ಞಾನ ವಿಷಯದಲ್ಲೂ ಭಾರತೀಯರೇ ಮುಂದೆ ಇದ್ದಿದ್ದು . first mother of test tube baby ಗಾಂಧಾರಿ ಅಲ್ಲವೇ ಸರೋಗೇಟ್ mother ನ್ ಸೃಷ್ಟಿ ಮಾಡಿದ್ದು ಕುಂತಿ ಅಲ್ಲವೇ, ಲಿವಿಂಗ್ together ಶಿಪ್ ಕಂಡುಹಿಡಿದದ್ದು ದುಷ್ಯಂತ ಶಕುಂತಲೆ ಅಲ್ಲವೇ. ಕುಬೇರನ ಹತ್ತಿರವಿತ್ತು ವಿಮಾನದ ಕಾಪಿ ರೈಟ್ಸ್ ಅಂತೆ ಆದರೂ ಜನ ಹೇಳುತ್ತಾರೆ ವಿಮಾನ ಕಂಡು ಹಿಡಿದದ್ದು ರೈಟ್ ಸಹೋದರಂತೆ.

ಅಂದಿನ ಗಾಂಧರ್ವ ವಿವಾಹವೇ ಇಂದಿನ ಮುಖ ತೋರಿಸದೆ ಮುಖ ಪುಸ್ತಕದಲ್ಲಿ ನೆಡೆಯುವ ಪ್ರೇಮ ಕಥೆಗಳು ಅಲ್ಲವೇ?? ಇಂದಿನ ಹುಡುಗಿಯರಿಗೆ ಲವ್ ಮಾಡಲು ಬೇಕು ಫೇಸ್ಬುಕ್ ಯಾಕೆಂದರೆ ಅವರ ಫೇಸ್ ಅಲ್ಲಿ ಇಲ್ಲ ಲುಕ್ ವೈಫೈ ಸಿಕ್ಕಿದೊಡನೆ ಅಪ್ಡೇಟ್ ಮಾಡಿಕೊಳ್ಳುವ ನಾವು  ಹೈಫೈ ಆಗಲು ಹೋಗಿ ನಮ್ಮ ಸಂಸ್ಕೃತಿಯ ಅಪ್ಡೇಟೆಡ್ ವರ್ಷನ್ ಎಂದು ಕೊಂಡು ಪಾಶ್ಚಿಮಾತ್ಯ ಸಂಸ್ಕೃತಿ ಎಂಬ ವೈರಸ್ ನ್ನ ಆತ್ಮೀಯವಾಗಿ ಸ್ವಾಗತಿಸುತ್ತಿರುದುಅಲ್ಲದೆ ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತಿದ್ದೇವೆ .ಸಿಸ್ಟಮ್ ಹ್ಯಾಂಗ  ಆಗುವ ಮೊದಲೇ ಆ ವೈರಸ್ ನ್ನ ಹೊಡೆದೋಡಿಸಲು ತವರು ಸಂಸ್ಕೃತಿಯಂಬ ಆಂಟಿ ವೈರಸ್ ಅನ್ನ ಉಪಯೋಗಿಸೋಣ.

Leave a Reply

Top