You are here
Home > 2016 > October

whatspp ಒಳಗೊಂದಿನ

ಇತ್ತ ಕಡೆ ಬದಲಾವಣೆ ಜಗದ ನಿಯಮ ಅನ್ಕೊಂಡು ಪದೇ ಪದೇ ಟಿವಿ ಚಾನೆಲ್ ಬದಲಾಯಿಸಿ ಬದಲಾದ್ವಿ,ಅನ್ಕೊಂಡು ಅನ್ಕೊಂಡು ಊರಿನ ಹೆಸರನ್ನೇ ಬದಲಾಯಿಸಿದ,ಬದಲಾವಣೆ ಪುರದ ಹೆಂಗಸರು ಬದಲಾಗಲೇ ಬೇಕು ಅಂತ ಡಿಸೈಡ್ ಮಾಡಿ ಸ್ತ್ರಿ ಶಕ್ತಿ ಸಂಘದಿಂದ ದಸರಾ ಆಫರ್ ಲ್ಲಿ  ಒಂದ್ ಆಂಡ್ರಾಯ್ಡ್ ಮೊಬೈಲ್ ತಗೊಂಡೆ ಬಿಟ್ರು. ಅತ್ತ ಕಡೆ ಮಹಿಳೆ ಅಂತರ್ಮುಖಿ ಅಲ್ಲ ಸಮಾಜಮುಖಿಯಾಗಬೇಕು ಅದು ಇದು   ಅಂತ ಮಹಿಳೆಯರಿಗೆ ಅರ್ಥವಾಗದ ಇಂಗ್ಲಿಷ್ ಮಿಶ್ರಿತ ಕನ್ನಡsorry  ಕನ್ನಡ ಮಿಶ್ರಿತ ಇಂಗ್ಲಿಷ್( ಅಂದ್ರೆ ಇತ್ತೀಚಿನ ಹೊಸ  style – ಮೈ ಮಾಮ್ prepared  ಚಟ್ನಿ super  ಯಾ  light ಖಾರ ಯಾ otherwise ಸಕತ್ತ್ ಆಗಿ ಇತ್ತು  ಯಾ  ಇಡ್ಲಿ ಸೊನೈಸ್ ಯಾ ಲಿಟಲ್ ಮಚ್ ದಪ್ಪ ನಾನು   eat  ಜಸ್ಟ್ 2 ಇಡ್ಲಿಸ್ವಲ್ಪ ಚಟ್ನಿ) ಎಂಬ   ವಿಭಿನ್ನ ನವ ನವೀನ  ಹೊಸತಲೆಮಾರಿನ ಸಾಫ್ಟವೆರ್ ಕನ್ನಡವನ್ನ  ಉಪಯೋಗಿಸಿfacebook  ನಲ್ಲಿ ಪೋಸ್ಟರ್ ಹಾಕೊಂಡ್ ಇದ್ದ ನಮ್ಮsoftware  ಸುಂದರಿಯರಿಗೆ ಯಾರೋ ಹಾಕಿದ ಕಾಮೆಂಟ್ ” ನಿಮ್ಮ ಫೇಸ್ಬುಕ್ ಪೋಸ್ಟರ್ ಕ್ಕಿಂತ ,  ಮಹಿಳೆಯರು ನೀವು ಫೇಸ್ ಗೆ ಹಾಕಿರೋ ಪೌಡರ್ ಗೆ ಜಾಸ್ತಿ ಇಷ್ಟಪಡ್ತಾರೆ.ಯಾಕೆ ನೀವು ಮಹಿಳೆಯರಿಗಾಗಿ ಹೊಸ   ಕ್ರೀಮ್ ಕಂಡುಹಿಡಿಯ ಬಾರದು ”   ಅನ್ನೋದನ್ನ ನೋಡಿ ಬೇಜಾರುಮಾಡ್ಕೊಂಡು ಸಮಾಜಸೇವೆ ಮಾಡ್ಲೆ ಬೇಕು ಅಂತ ಪಣತೊಟ್ಟು ಬದಲಾವಣೆ ಪುರದ ಕಡೆ ಹೊರಟರು. ಆಂಡ್ರಾಯ್ಡ್ ಮೊಬೈಲ್ ಉಪಯೋಗಿಸಲು ಕಷ್ಟಪಡ್ತಾ ಇದ್ದ ನಮ್ಮ ಬದಲಾವಣೆ ಪುರದ ಹೆಂಗಸರಿಗೆ software ಸುಂದರಿಯರು ಏರ್ಪಡಿಸಿದ ” ಆಂಡ್ರಾಯ್ಡ್ ಮೊಬೈಲ್ ನ ಬಳಕೆ ಹೇಗೆ ” ಎಂಬ ಒಂದು ದಿನದ ಶಿಬಿರ ಬಹಳ ಹುಮ್ಮಸ್ಸು ತಂದು ಕೊಡ್ತು  ಸ್ವಲ್ಪ ತಿಳ್ಕೊಂಡ್ರೆ ಸಾಕು ವಾರ್ಮಾಡೋ ನಾರಿಯರು ಶಿಬಿರಕ್ಕೆ ಹೋಗ್ಬನ್ದ್  ಮೇಲೆ ಕೇಳೋ ಹಂಗೆ ಇಲ್ಲ . ಗಂಡ ತಂದ್ ಕೊಡ್ತಾ ಇದ್ದ ಮೆಂಥೆಸೊಪ್ಪು ದಂಟಿನಸೊಪ್ಪುಆ ಸೊಪ್ಪು, ಈ ಸೊಪ್ಪು, ನೋಡಿ ನೋಡಿ ಸುಸ್ತಾದ  ನಮ್ಮಹೆಂಗಸರು ಹೊಸದಾಗಿ ಬಂದ ವಾಟ್ಸಪ್ಪು ನ್ನ ತಮ್ಮ್ mobile ಅಲ್ಲಿ install  ಮಾಡ್ಕೊಂಡ್ ಒಂದು ಗ್ರೂಪ್ ಕ್ರಿಯೇಟ್ ಮಾಡ್ಬಿಟ್ರು. ಕೇರಿಗೆ ಬಂದವಳು ನೀರಿಗೆ ಬರಲ್ವಾ, ಮೊಬೈಲ್ತಗೊಂಡವಳು ವಾಟ್ಸಪ್ಪ್ಪ್ ಹಾಕ್ಸ್ಕೊಳಲ್ವಾ  ,ವಾಟ್ಸಪ್ಪ್ಇದ್ದವಳು online  ಗೆ ಬರಲ್ವಾ ಎಂಬ ಸಾಫ್ಟವೆರ್ಸುಂದರಿಯರು ಹೇಳಿಕೊಟ್ಟ ಮೂಲ   ಸಿದ್ಧಾಂತವನ್ನೇ ನಂಬಿದ್ದ   ಅಪ್ರತಿಮ ಗ್ರಾಮೀಣ ಪ್ರತಿಭೆ ಸುಮ್ನೆ ಕೂರೋಕೆಆಗ್ದೇ ಇರೋ ನಮ್ಮ ಸುಬ್ಬಿ ಗ್ರೂಪ್ ಚಾಟ್ ಶುರು ಮಾಡ್ಬಿಟ್ಲು ಸುಬ್ಬಿ :  ರೀ ಸುಂದರಿಯರ ಯಾವ ಧಾರಾವಾಹಿ ನೋಡತಾ ಇದಿರಾ? ರಂಗಮ್ಮ : ಬಿಗ್ ಬಾಸ್, ಬಿಗ್ ಬಾಸ್ ಸುಬ್ಬಿ : ಜಯ ಮತ್ತು ಸುಷ್ಮಾ ಜಯ: ನಮ್ದು ಅಮ್ಮ ನಾಗಮ್ಮ ಶಾಂತಮ್ಮ : ಎಲ್ಲರ ಮೆಚ್ಚಿನ ಅಮ್ಮ ನಾಗಮ್ಮ ರಂಗಮ್ಮ : ಏನ್ ಶಾಂತಮ್ಮ ನವರು ಆನ್ಲೈನ್ ಅಲ್ಲಿ ಇದಿರಾ? ಶಾಂತಮ್ಮ : ಏನಿಲ್ಲಾ,  ಹಾಂಗೆ ನನ್ ಗಂಡಂಗೆ ಲೈನ್ಹೊಡ್ದು  ಪಾತ್ರೆ ತೊಳಿಯೋಕ್ಕೆ ಕಳಿಸಿ ಆನ್ಲೈನ್ ಗೆ ಬಂದೆ ಜಯ ” ಕೇಳಿದ್ರೇನೇ ಸುದ್ದಿನಾ ??? ಮೇಲಿನ ಬೀದಿಯ ನಾಗಿಮಗಳು ಮ್ಯಾಗಿ ಮಾರೋ ಹುಡುಗನ್ ಜೊತೆ ಓಡಿ ಹೋದ್ಲಅಂತೆ ರಂಗಮ್ಮ : ಸುಬ್ಬಿ ಏನ್ ಕಥೆ ನೇ ಅದು ಸುಬ್ಬಿ : ಹೇಳ್ತೀನಿ ಕೇಳಿ ಅವರ ಕಥೀನ       ” ತಪ್ಪಾಗಿ ಬಂದಾ ಒಂದು ತಪ್ಪಿದ ಕರೆ ಇಂದಅಪರಚಿತರು ಪರಿಚಿತರಾಗಿ ,ಸಂದೇಶ  ರವಾನೆಗಳು ಶುರುವಾಗಿ, ಸಂಪರ್ಕದಲ್ಲಿ ಸುಳ್ಳು ಹೆಸರಿನೊಂದಿಗೆ ಒಂದು ಖಾತೆ ಆರಂಭಿಸಿ, ದೂರವಾಣಿ ಸಂಖ್ಯೆಯನ್ನ ಭದ್ರವಾಗಿಸಿ,ಕರೆಗಳ ಮೂಲಕ ಹತ್ತಿರವಾಗಿ, ಬಾಕಿ ಮೊತ್ತಖಾಲಿಯಾಗುವವರೆಗೂ ಒಳಬರುವ ಹಾಗು ಹೊರಹೋಗುವ ಕರೆಗಳಿಗೆ ಮಿತಿ ಇಲ್ಲದೆ ದಿನ ದೂಡುತಿದ್ದ  ಮ್ಯಾಗಿ ಹುಡುಗ ಹಾಗು ನಾಗಿ ಮಗಳು ಪರಸ್ಪರ ಪ್ರೀತಿಸಲು ಶುರುಮಾಡಿ ,ಜೋಡಣೆಯಲ್ಲಿ ಬಾರಿ ಬದಲಾವಣೆಯನ್ನ ಮಾಡಿ ,ಆಟದಲ್ಲಿ ಒಂದಾಗಿ ಪ್ರೇಮಗೀತೆಯನ್ನ  ಕರೆಯ ರಾಗಗಳಿಗೆ ಹೊಂದಿಸಿ,ಗಡಿಯಾರದ ಘಂಟೆಗಳ್ಳನೇ ಬದಲಾಯಿಸಿಕೊಂಡು ಪ್ರೀತಿಸುತಿದ್ದ ಅಹ ಮ್ಯಾಗಿ– ಹಾಗು ನಾಗಿ   ಮಗಳು ಜೋಡಿ ಹೋಗಿದೆ ಇವತ್ತು ಓಡಿ ಲತಾ : ಅದನ್ನ ಬಿಡ್ರೆ   ನೋಡ್ರೆ ನಮ್ಮ ವಿಶಾಲೂನ್ನ Dp ಹಾಕೊಳೋಕ್ಕೆ ಅಂತಾನೆ ಹೊಸ ಸೀರೆ ತಗೊಂಡ್ಳು ಸುಬ್ಬಿ : ನೋಡೇ ನಮ್ಮ ವಿಶಾಲೂ ಸಂಭ್ರಮನ್ನ ಗಂಡನ ಜೇಬಿನ ದುಡ್ಡು ಕದ್ದು data  pack  ಹಾಕೆಸ್ಕೊಂಡುಆನ್ಲೈನ್ಅಲ್ಲಿ ಮೆರಿತಾ ಇರೋದು. ಲತಾ : ಅವ್ಳ ಬಿಡೆ ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಮೊಬೈಲ್ಗೆ ಡೇಟಾ ಪ್ಯಾಕ್ ಬೇಕು ಅನ್ನುವಳು, ಗಂಡನ ಪಂಚೆಮಾರಿಯಾದರು ಡೇಟಾ ಪ್ಯಾಕ್ ಹಾಕಿಸಿಕೊಳ್ತಾಳೆ ವಿಶಾಲಾಕ್ಷಿ ಲೆಫ್ಟ್ : ಸುಬ್ಬಿ: ನನ್ ಅಡ್ಮಿನ್ ಅಷ್ಟು ಹೇಳೋ ಹಂಗೆ ಇಲ್ವಾ ನನ್ಮತ್ತೆ add  ಮಾಡಲ್ಲ ಲತಾ : ಹೂ ಬಿಡ್ರೆ ಮತ್ತೆ add  ಮಾಡ ಬೇಡಿ ಗ್ರೂಪ್ ಬಿಟ್ಟ ಮೆಂಬರ್ ವಾಟ್ಸಪ್ಪ್ ಕುಲದ  ಹೊರಗೆ , ಲೆಫ್ಟ್ ಆದವರನ್ನ ಆಡ್ ಮಾಡೋದನ್ನ ಖಂಡಿಸ್ತಿನಿ ರಂಗಮ್ಮ : ಅಲ್ಲ ಲತಾ ಅವರ ಇವರ ಚಾಟ್   ಮದ್ಯೆ smileyಹಾಕೋ ಬದಲು ಸಂಜೆ ಗಂಡ   ಮನೆಗೆ ಬಂದಾಗ ಸ್ಮೈಲ್ಕೊಟ್ಟಿದ್ರೆ  ಅವನ್ ಡೈವೋರ್ಸ್ ಕೊಟ್ಟು  ನಿನ್ನ ಬಿಟ್ಟುಹೋಗ್ತಾ ಇದ್ನ ಮನೇಲಿ ಹಾಕೊಳೋದ್ದು ಹಳೆ ನೈಟಿ ಆದರೂ ವಾಟ್ಸಪ್ಪ್ DP   ಅಲ್ಲಿ ಬಾರಿ ಶೋಕಿ ನಿಂಗೆ ಲತಾ  ಲೆಫ್ಟ್ ‘ ಸುಬ್ಬಿ: ಹೂ ಕಣೆ ರಂಗಮ್ಮ ನೀನ್  ಹೇಳಿದ್ದು ಒಳ್ಳೆ ಹಂದಿ ತಾನಿರೋ ಚಂದಕ್ಕೆ ನಂದಿವನನ್ನ ಆಡಿಕೊಂಡಹಾಂಗಾಯಿತು ” ನಿನ್ ಗಂಡ ಯಾಕ ಬಿಟ್ಟ ನಿನ್ನ,, ಗಂಡ ಅಡುಗೆ ಮಾಡು ಅಂದ್ರೆ ಅಮೃತವರ್ಷಿಣಿ ಮುಗಿದಿಲ್ಲ ಅಂದ್ಲು ಅಂತೆ ಸುಪುನಾತಿ  ..ಇರು ಒಂದ್ 2 ನಿಮಿಷ ಟೈಪ್ಮಾಡಿ ಸೆಂಡ್ ಮಾಡ್ತಿನಿ ರಂಗಮ್ಮ ಲೆಫ್ಟ್ ಜಯ: ಹಾಸಿಗೆ ಇರುವಷ್ಷ್ಟು ಕಾಲು ಚಾಚಿ data ನೋಡ್ಕೊಂಡ್ ವಾಟ್ಸಪ್ಪ್ ಉಪಯೋಗಿಸಿ   ಗಂಡನ ಜೊತೆ ಪ್ರೀತಿ   ಇರಲಿ ವಾಟ್ಸಪ್ಪ್ ನಲ್ಲಿ ಮಿತಿ ಇರಲಿ    ಶಾಂತಮ್ಮ : ಅಹ ನಮ್ಮ ಜಯ ನ್  ನೋಡೇ ಡೇಟಾ ಮೇಲೆ ಅಸೆ ವಾಟ್ಸಪ್ಪ್ ಮೇಲೆ ಪ್ರೀತಿ, ಚಾಟು ಆಗ ಬೇಕು ಡೇಟನು ಖಾಲಿ ಆಗ ಬಾರದು  ಅಂದ್ರೆ ಹಂಗೆ ಜಯ : ನಾನ್ ನಿಮ್ಮ  ತರ ಅಲ್ಲ ,ಕಟ್ಕೊಂಡ್ ಗಂಡನ್ನ ಬಿಟ್ರು ವಾಟ್ಸಪ್ಪ್ ಬಿಡಲ್ಲ ನೀವು ಸುಬ್ಬಿ :  ಹಂಗಲ್ಲ   ಶಾಂತು ನಮ್ಮ್ ಜಯ ನ್ ಕಥೆ ಏನ್ಗೊತ್ತಾ ಗಂಡನ ಡೇಟಾ ದಲ್ಲಿ   ವಾಟ್ಸಪ್ಪ್ ನೋಡವಳೇ ಜಾಣೆ ”     ಬಿಟ್ಟಿ ಡೇಟಾ ಅಂದ್ರೆ   ನಂದ್ ಒಂದು ಡೌನ್ಲೋಡ್ ಅನ್ನೋ  ಕುಲದವಳು ಜಯ ಲೆಫ್ಟ್   4g ಸ್ಪೀಡ್ ಕಿಂತಲೂ ಜಾಸ್ತಿ ಮಾತು ಆಡುವ ನಮ್ಮ ಗ್ರಾಮೀಣ ಪ್ರತಿಭೆ ಸುಬ್ಬಿ ಸಹವಾಸನೆ ಸಾಕು ಅಂತ ಎಲ್ಲಹೆಂಗಸರು ಗ್ರೂಪ್ ಇಂದ ಲೆಫ್ಟ್ ಆದರೂ ..ಇವರ ಜಗಳನೋಡತಾ ಇದ್ದ   ಮೆಂಥೆಸೂಪ್ಪು ಒಳಗೊಳಗೇ ನಗ್ತಾ ಇತ್ತು. ಹಿಂದುಗಡೆಯಿಂದ ಟಿವಿ ಅಲ್ಲಿ ನೋಕಿಯಾ ಕನೆಕ್ಟಿಂಗ್ಪೀಪಲ್ ಅನ್ನೋ ಜಾಹಿರಾತು ನೋಡಿ ಏನು ಅರ್ಥಆಗದೆ ನಮ್ಮ ಸುಬ್ಬಿ  ತಬಿಬ್ಬು  ಆದಳು.

ಕುಡಿದವರ ನಾ ಕ೦ಡ೦ತೆ

next ಐದ೦ಕಿಯ ಸ೦ಬಳ ಎಣಿಸುವ ನನ್ನ೦ತವರಿಗೆ ಗಣಕ ಯ೦ತ್ರ ನಿಯ೦ತ್ರಿಸುವುದು ಗೊತ್ತು. ಆದರೆ ನನ್ನ ಭಾವನೆಗಳನ್ನು , ನನ್ನ ಮನಸ್ಸಿನ ತೊಳಲಾಟವನ್ನು ನಿಯತ್ರಿಸಲಾಗದೆ ಹಪಹಪಿಸುತ್ತೇನೆ. ಅದಕ್ಕೆ ಎನಿಸಿತು ತೊಚಿದ್ದನ್ನು ಗೀಚಿದರೆ ಮಸಸ್ಸಿಗೂ ಮುದ ಸಿಗಬಹುದು ಎ೦ದು. ನಾ ಹುಟ್ಟಿದ್ದು ಉಡುಪಿಯ ಚಿಕ್ಕ ಹಳ್ಳಿಯಲ್ಲಿ.ಇತ್ತೀಚಿಗೆ ನಾ ಊರಿಗೆ ಹೋದಾಗ ತಿಳಿದ ಕೆಲವು ನೈಜ ಘಟನೆಗಳು ಮಹಿಳೆಯರ ಹೀನ ಸ್ಥಿತಿಯನ್ನು ಅಣಕಿಸುವ೦ತೆ ಇತ್ತು. 1)ಅಲ್ಲೊಬ್ಬ ಹೆಣ್ಣು ಮಗಳಿದ್ದಾಳೆ. ಹಾಲು ಮಾರಿಯೇ ಜೀವನ ಸಾಗಿಸುವ ಧೈರ್ಯಗಾತಿ ಆಕೆ.

ಮುಗಿಯದ ಬದುಕಿಗೆ ಪೂರ್ಣಚುಕ್ಕಿ ಇಡುವ ಮುನ್ನ

http://admisiones.uprrp.edu/wp-content/?essay=174&writingservice=need-someone-to-write-my-lab-report need someone to write my lab report ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ ಆತ್ಮಹತ್ಯೆ... ಮೇಲಾಧಿಕಾರಿಗಳ ಒತ್ತಡ ತಡೆಯಲಾಗದೆ ನೇಣಿಗೆ ಶರಣು... ಜೀವದ ಗೆಳೆಯ ಕೈಕೊಟ್ಟ ಎಂಬ ಕಾರಣಕ್ಕೆ ಮನನೊಂದು ವಿಷ ಸೇವನೆ... ಅಬ್ಬಬ್ಬಾ... ದಿನಬೆಳಗಾದರೆ ಒಂದಲ್ಲ ಒಂದು ಬಗೆಯಲ್ಲಿ ಜೀವ ತೆತ್ತ ಧೀರರ(?) ಯಶೋಗಾಥೆ. ಅದ್ಯಾವ ಪೀಳಿಗೆಗೆ ಮಾದರಿಯಾಗ ಹೊರಟಿಹರೋ ಇವರು... ನಮ್ಮ ನೈತಿಕತೆಯ ತಳಹದಿ ಕುಸಿಯುತ್ತಿರುವುದಕ್ಕೆ ಇದಕ್ಕಿಂತ ಉದಾಹರಣೆ ಇನ್ನೇನು ಬೇಕು..? ಒಮ್ಮೊಮ್ಮೆ ಜೀವನಕ್ಕಿರುವ ಬೆಲೆ ಇಷ್ಟೆನಾ ಅನ್ನೋ ಯೋಚನೆಗೆ ನೂಕಿಬಿಡುತ್ತವೆ ಇಂತ ಪ್ರಸಂಗಗಳು... ಇವರೆಲ್ಲ ಹೊರಟು

ದ್ವಂದ್ವ

dissertation ideas geography "ದೂರದ ಬೆಟ್ಟ ನುಣ್ಣಗೆ" ಅನ್ನುವ ಗಾದೆ ಮಾತಿನಂತೆ, ನಮ್ಮಂತಹ ಅನೇಕರು ಹಲವಾರು ಆಸೆ, ಕನಸು, ಏನೂ ಸಾಧಿಸುವ ಛಲದೊಂದಿಗೆ ವಿದೇಶದಲ್ಲಿ ಉದ್ಯೋಗಾವಕಾಶಕ್ಕೆ ಎದುರು ನೋಡುತಿರುತ್ತೇವೆ. ಗೆಳೆಯರ  ಫೇಸ್ಬುಕ್ ಪೋಸ್ಟ್ ಗಳು, ವಿಧವಿಧದ  ಶೋ ಆಫ್ ಪ್ರೊಫೈಲ್ ಫೋಟೋಸ್, ಟ್ವಿಟ್ಟರ್ನ  140 ಅಕ್ಷರಗಳಲ್ಲಿ ಹೊಗಳುವ ತೆಗಳುವ ವಿದೇಶ ಸುದ್ದಿ ಸಮಾಚಾರಗಳು ಎಲ್ಲರನ್ನೂ ಒಂದು ತರಹ ಆಕರ್ಷಿಸುತ್ತದೆ. ನಮ್ಮಲ್ಲಿ ಕೆಲವರಿಗೆ ಹೇಗೋ ಅವಕಾಶ ಒಂದು ಸಿಗುತ್ತದೆ, ಮಿಶ್ರ ಮನಸ್ಸಿನ ತಲ್ಲಣಗಳನ್ನು ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಕಟ್ಟಿ ಹಾಕಿ.

ಹಲವು ಮನಸ್ಸಿನ ಹಲಬುಗಳು

go to link ಅತಿ ಹೆಚ್ಚು ತಪ್ಪು ಅರ್ಥೈಸುವಿಕೆಗೊಳಪಟ್ಟ ವಿಷಯವೆಂದರೆ ಮನಶಾಸ್ತ್ರೀಯ ಖಿನ್ನತೆ, ಅಥವಾ ಡಿಪ್ರೆಶ್ಶನ್. ನಾವು ಇರುವುದನ್ನು ಇರುವಹಾಗೆಕಾಣುವ ಮನಸ್ಥಿತಿ ಇಂದ ವಿಮುಖಗೊಂಡು,ಎಲ್ಲವೂ ತನ್ನ ನಿಯಂತ್ರಣ ಮತ್ತುಅರಿವಿನ ವ್ಯಾಪ್ತಿಯೊಳಗೆ ಬರಬೇಕೆಂಬ ತುಡಿತವೂ ಇದಕ್ಕೊಂದು ಕಾರಣ ಇರಬಹುದು.  ಪ್ರಸ್ತುತ ನಾವು ಯಾವುದೇ ಗೊಂದಲ ಹಾಗೂ ಅಸ್ಪಷ್ಟತೆಯನ್ನು ಒಪ್ಪಿಕೊಳ್ಳುತ್ತನೆ ಇಲ್ಲ. ಸ್ಪಷ್ಟದ ಹಾಗೆ ಅಸ್ಪಷ್ಟತೆ ಕೂಡ ಅಸ್ಮಿತೆ. ನಾವು ಎಲ್ಲವನ್ನೂ ಬಗೆದು ಹರಡಿಕೊಂಡು ಅದನ್ನು ತಿಳಿದುಕೊಳ್ಳುವ ಪ್ರಯತ್ನದಲ್ಲಿ ವ್ಯಸ್ತವಾಗಿ ವಾಸ್ತವವನ್ನೇ ಮರೆತಿರುತ್ತೇವೆ.  ಅಥವಾ ಪ್ರಜ್ಞಾಪೂರಕವಾಗಿ ಮರೆಯಲು ಪ್ರಯತ್ನಿಸುತ್ತೇವೆ. ಮಾಹಿತಿ ತಂತ್ರಜ್ಞಾನದ ಪ್ರಭಾವದಿಂದ ವಾಣಿಜ್ಯವಾಗಿ ಮೊದಲು ಇದರ ಪ್ರವೇಶವಾಯ್ತು. ಒಬ್ಬ ಮಾರ್ಕೆಟಿಂಗ್ ಮಾಣಿಯ ಡಾಯ್ರಿ ಪರೀಕ್ಷಿಸಿದರೆ ಇದು ಸ್ಪಷ್ಟವಾಗುತ್ತದೆ. ಗಂಟೆ, ದಿನ, ವಾರ, ತಿಂಗಳುಗಳ ರಿಪೋರ್ಟ್ ಕಾರ್ಡು. ಸ್ಪಷ್ಟ ಈ ದಿನ ಎಷ್ಟು ಕ್ಲೈಂಟ್ಸ್‌ಗಳನ್ನು ಭೇಟಿಯಾದೆ, ಅವರ ವರ್ಗೀಕರಣ, ಉತ್ಪನ್ನದ ಈ ಕ್ಷಣದ ಬಳಕೆದಾರನಾಗಿದ್ದಾರೆ ಹಾಟ್, ಮುಂದ್ಯಾವಗಲಾದರೂ ತಗೊಳ್ಳಲು ಆಲೋಚಿಸುವವನಾದರೆ

ಟೆನ್ನಿಸ್ ರಂಗದ ಛಲದಂಕ ಚಕ್ರೇಶ್ವರ

ಮೈಕಲ್ ಫೆಲ್ಪ್ಸ್, ಸಾಕ್ಷಿ ಮಲಿಕ್, ವಿಜೇಂದರ್ ಸಿಂಗ್, ಪಿ.ವಿ.ಸಿಂಧು, ರವಿ ಅಶ್ವಿನ್, ಕ್ರಿಶ್ಚಿಯಾನೊ ರೊನಾಲ್ಡೊ ಇವರೆಲ್ಲಾ ಇತ್ತೀಚಿನ ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡಿದವರು ಹಾಗೂ ಚರ್ಚೆಯಲ್ಲಿದ್ದವರು. ಆದರೆ ನಾನೀಗ ಹೇಳಹೊರಟಿರುವುದು ಕ್ರೀಡಾ ಪ್ರಪಂಚದಲ್ಲಿ  ಸದ್ದುಗೈದು ,ಮಿಂಚಿ ನಮ್ಮ ಸ್ಮ್ರತಿಪಟಲದಿಂದ ಮರೆಯಾದವರ ಬಗ್ಗೆ.ನನ್ನ ಕ್ರೀಡಾಲೋಕದಲ್ಲೊಂದು ಮೆಲುಕು ಇಂತಹ ಆಟಗಾರರ ಬಗ್ಗೆಯೇ ಆಸ್ಥೆಯಿಂದ ನೆನಪಿಸಿಕೊಳ್ಳುವುದರ ಜೊತೆಜೊತೆಗೆ ನಿಮಗೂ ಅವರನ್ನ ನೆನಪಿಸುತ್ತದೆ..ಈ ಲೇಖನ ನಿಮ್ಮ ಆಸಕ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಯಿತೇ ಆದಲ್ಲಿ ನಮ್ಮೀ ಪ್ರಯತ್ನ ಸಾರ್ಥಕ. ಟೆನಿಸ್ ಅಂದ

ಸತ್ಯ.. ಶಿವ ಸುಂದರ..

ಶಿವ ಎಂದರೆ ? ದೇವರ? ಅಥವಾ ಒಂದು ಪುರಾಣ ಹಿಂದೂ ಸಂಸ್ಕೃತಿಯ ಸಾಮೂಹಿಕ ಕಲ್ಪನೆಯ ? ಶಿವ ಒಂದು ತತ್ವ, ಆಳವಾದ ಅರ್ಥ. ಎಲ್ಲಿಯೂ ಸ್ಪಷ್ಟವಾಗಿ ಇದೇ ಎಂದು ಹೇಳುವ ಉತ್ತರ ಸಿಗದು. ಅವರವರ ಕಲ್ಪನೆಗೆ, ತರ್ಕಕ್ಕೆ, ಅನುಭವಕ್ಕೆ, ಅಭಿಮಾನಕ್ಕೆ, ಉನ್ಮಾದಕ್ಕೆ, ಭಕ್ತಿಗೆ ತಕ್ಕಂತೆ ಹಲವು ವಿವರಣೆ ಸಿಕ್ಕರೂ ಅರ್ಥವಾಗದ ಒಂದು ಜಿಜ್ಞಾಸೆ! ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ 'ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ಅರ್ಥವೇ ಇಲ್ಲ, ಶಿವ

Top