You are here
Home > 2017 > April

ಸಮಾನತೆ

ಬಾಗೂರಿನ ಸುಖಾನಂದ ರಾಯರು ಇಡೀ ಊರಿಗೆ ಶ್ರೀಮಂತರು. ಬ್ರಿಟೀಶರ ಕಾಲದಲ್ಲೆ ಪ್ರಖ್ಯಾತ ವಕೀಲರಾದ್ದರಿಂದ ಅವರಿಗೆ ದಕ್ಕಿದ ಸಮ್ಮಾನಗಳೆಷ್ಟೋ!! ಮೊದಮೊದಲು ನ್ಯಾಯವನ್ನು  ಗೆಲ್ಲಿಸಿಕೊಡುತ್ತಿದ್ದ ರಾಯರು ತದನಂತರ ಹಣದ ಹಿಂದೆ ಬಿದ್ದು ಅನ್ಯಾಯವನ್ನು ಗೆಲ್ಲಿಸತೊಡಗಿದರು. ಹಿಂದೆಲ್ಲ ರಾಜರು ದೇವಸ್ಥಾನಗಳಿಗೆ ಉಂಬಳಿಯಾಗಿ ಎಕೆರೆಗಟ್ಟಲೆ ಜಾಗ ಕೊಡುತ್ತಿದ್ದರಂತೆ. ಅಂತೆಯೇ ತಮ್ಮ ಕಡೆಗೇ ನ್ಯಾಯ ಒಲಿಯಲಿ ಎಂದು ಬಡವರು-ಶ್ರೀಮಂತರೂ ಸಹ ತಮ್ಮ ಜಮೀನನ್ನು ರಾಯರಿಗೆ ಉಂಬಳಿಯಾಗಿ ಕೊಡುತ್ತಿದ್ದರು.  ಒಂದು ವಾದಕ್ಕೆ ಕೊನೇಪಕ್ಷ ಒಂದು ಎಕರೆ ಸಿಕ್ಕರೂ ಲಾಭವೇ

ಡಾಟ್ ಕಾಮ್ ?

ಆಫೀಸಿಗೆ ಹೋಗಿ ಕೂತವನೇ ನನ್ನ ಮೇಲ್ ಚೆಕ್ ಮಾಡಿದೆ. ಕಲ್ಯಾಣ ಡಾಟ್ ಕಾಮ್ ನಿಂದ ಎಂದಿನಂತೆ ಇವತ್ತೂ ಒಂದು ಪ್ರೇಮ ಪತ್ರ ಬಂದಿತ್ತು.  ನಾನು ರಿಕ್ವೆಸ್ಟ್ ಕಳಿಸಿದ ನಾಲಕ್ಕೂ ಹುಡುಗಿಯರ ನಿರಾಕರಣೆಯ ನೋಟಿಫಿಕೇಶನ್! ಕಳಿಸಿದ ನಾಲಕ್ಕು ರಿಕ್ವೆಸ್ಟ್ ಗಳಲ್ಲಿ ಮೂರು ತಪ್ಪಿ ಹೋದದ್ದು. ಆದರೂ ನಿರಾಕರಣೆಯ ಅವಮಾನವನ್ನು ಸಹಿಸಲೇಬೇಕು ತಾನೆ? ನಾನಿನ್ನೂ ಮಾಟ್ರಿಮೋನಿಯಲ್ ಸೈಟ್ ನಲ್ಲೇ ಇರುವುದನ್ನು ನನ್ನ ಹಿಂದೆ ನಿಂತಿದ್ದ ಮ್ಯಾನೇಜರ್  ಗಮನಿಸಿದರು. ಅವರು ನೋಡುತ್ತಿದ್ದಂತೆ ಆ ಪೇಜ್ ಕ್ಲೋಸ್

ಮತ್ತದೇ ಬೇಸರ

“ಆಕೆ ನೆಟ್ಟ ಕಣ್ಣು ಅಲುಗಿಸದೇ ನಿಂತುಬಿಟ್ಟಿದ್ದಾಳೆ. ಕಣ್ಣಂಚಲಿ ಚೂರೂ ನೀರಿಲ್ಲ. ಎಲ್ಲೋ ನೋಡಿದಂತಿದೆ ಮುಖ. ಗುಂಗುರು ಕೂದಲಿನ ದುಂಡು ಮುಖದ ದೊಡ್ಡ ದೇಹದ ಕಂದು ಫ್ರೇಮಿನ ಭಾವಚಿತ್ರವೊಂದು ನೀಲಿ ಗೋಡೆಯ ಮೇಲೆ ನೇತಾಡುತ್ತಿದೆ. ಹಣೆಯಲ್ಲಿ ಕೆಂಪು ಕುಂಕುಮ. ಫ್ರೇಮಿಗೊಂದು ದೊಡ್ಡ ಹೂವಿನ ಹಾರ. ಅತ್ತಿತ ಓಡಾಡುವಾಗಲೂ ಆ ಫೋಟೊ ನೋಡಿದರೆ ನಾನು, ಅಪ್ಪ ತಲೆತಗ್ಗಿಸಿಕೊಂಡು, ಕಣ್ಣಲ್ಲಿ ನೀರುತುಂಬಿಕೊಂಡು ಹೋಗುತ್ತೇವೆ. ಆಕೆಗೆ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲ. ಆಕೆ ನನ್ನ ತಾಯಿ.

ಇಲ್ಲಿಯೂ, ಅಲ್ಲಿಯೂ ಸಲ್ಲುವರಯ್ಯ – (ಕಲ್ಪ ಶ್ರೀ )

ಇಲ್ಲಿ ಯಾವುದೊ ವಚನ ಸಾಹಿತ್ಯ ವಿಮರ್ಶೆ ಮಾಡುತ್ತಿಲ್ಲ; ಸಲ್ಲುವ, ಸಲ್ಲದಿರುವ ಬಗ್ಗೆ ಒಂದು ಸ್ವಗತವಷ್ಟೇ..! ಧರಣಿ, ಧರಿತ್ರಿ, ವಸುಂಧರೆ, ಇಳೆ ಎಂಬಿತ್ಯಾದಿ ಸಮಾನಾರ್ಥಕ ಪದಗಳಿಂದ ಕರೆಯಲ್ಪಡುವ ಭೂಮಿ ತಾಯಿ, ಹೆಣ್ಣಾಗಿ ಬಿಂಬಿತಳಾಗಿದ್ದಾಳೆ. ಎಲ್ಲರಿಗು ಸಲ್ಲುವ, ಎಲ್ಲರನ್ನು ಯಾವುದೇ ಬೇಧ-ಭಾವ ಮಾಡದೆ ತನ್ನೊಡಲಲ್ಲಿಟ್ಟುಕೊಂಡಿರುವ ಸ್ತ್ರೀ-ಸ್ವರೂಪಿಣಿ. ಇಂತಹ ಈ ವಿಶಾಲ ಒಡಲೊಳಗೆ ಹೆಣ್ಣು ಜನಿಸಿದಾಗ, ಆಕೆ ಸಲ್ಲುವುದಾದರೂ ಎಲ್ಲಿಗೆ..? ಬಾಲ್ಯ ಸವಿದು, ಪ್ರೌಢಾವಸ್ಥೆ ತಲುಪಿ, ಯೌವನ ಕಳೆಯುವುದರೊಳಗೆ 'ಕಲ್ಯಾಣಮಸ್ತು' ಎಂದು ಹರಸಿ ಗೃಹಸ್ಥಾಶ್ರಮ ವಾಸಕ್ಕೆ ಅಡಿಯಿಡಿಸುತ್ತಾರೆ; ಹೆತ್ತು-ಸಾಕಿ-ಸಲಹಿ-ಬೆಳೆಸಿದ

ಅಮ್ಮ -(ಶ್ರುತಿ ವಸಿಷ್ಠ )

ಏ ಹೋಗಮ್ಮ. ಯಾವಾಗಲೂ ಇದೆ ಗೋಳು ನಿಮ್ಮದು. ಇನ್ನು ಮುಂದೆ ನಿನ್ನ ಜೊತೆ ಎಲ್ಲಿಗೂ ಬರೋಲ್ಲ. ಎಲ್ಲಿ ನಾನು ಸಿಕ್ಕಿದರು ಅದೇ ಮಾತು. ನನ್ನ ಸಾಕೋಕೆ ಕಷ್ಟವಾದರೆ ಹೇಳು ನಾನು ದುಡಿದು ನನಗೆ ಬೇರೆ ವ್ಯವಸ್ಥೆ ಮಾಡ್ಕೋತೀನಿ. ನೀನು ನಿನ್ನ ಗಂಡ ಮಗನೊಂದಿಗೆ ಹಾಯಾಗಿರು. ಆಯ್ತಾ. ಪ್ಲೀಸ್ ಅಮ್ಮ, ನನ್ನ ಕಾಲ ಮೇಲೆ ನಾನು ನಿಂತ್ಕೋತೀನಿ ಆಮೇಲೆ ನನ್ನ ಮದುವೆ ವಿಷಯ. ನಮ್ಮ ಸರದಿ ಬಂದಿದೆ ನಡಿ ಊಟಕ್ಕೆ ಹೋಗೋಣ

ಕೆರೆಯಂಚಿನ ಪ್ರೇಮಕಥೆ – (ಗಜೇಂದ್ರ ಗುಳ್ಳಾಡಿ)

ಗಂಭೀರ ನಿಲುವಿನ ವ್ಯಕ್ತಿತ್ವ ಅವನದು. ಅವನೆಂದರೆ ಗೌರವವಿದೆ, ಭಯವಿದೆ. ಸಾಮಾನ್ಯ ಗೂಡಚರ್ಯೆಯಲ್ಲಿದ್ದವನು ಸೇನಾಧಿಕಾರಿಯಾಗಿ ಬೆಳೆದದ್ದು ಎಲ್ಲರಿಗೂ ಗೊತ್ತಿದೆ. ಅವನು ತೆರೆದ ಪುಟದಂತೆ. ಆದರೆ ಯಾರಿಗೂ ಗೊತ್ತಿರದ ಕಟುಸತ್ಯ ಅವನಲ್ಲಿ ಅಡಗಿದೆ. ಅದರ ಬಗ್ಗೆ ಇಲ್ಲಿಯ ತನಕ ಆತ ಯಾರಿಗೂ ಹೇಳಲಿಲ್ಲ, ಹೇಳಿಕೊಳ್ಳಬೇಕು ಅಂತ ಅನಿಸಲೂ ಇಲ್ಲ. ಆದರೆ ಅಂದಿನ ಮುಂಜಾವು ಆಕೆಯ ನೆನಪ ತರಿಸಿತ್ತು. ಮುಂಜಾನೆಗೆ ಗಂಟುಬಿದ್ದು, ದಿನವಿಡಿ ಕಾಡುವ ಹಾಡಿನಂತೆ ಆಕೆಯ ನೆನಪು ಕಾಡತೊಡಗಿತು. ಮುಗಿದ ಅಧ್ಯಾಯವೊಂದು ತೆರೆದುಕೊಳ್ಳುವತ್ತ

ನೆನ್ನೆ-ನಾಳೆಗಳ ನಡುವೆ -(ಕಲ್ಪ ಶ್ರೀ)

ಮುಂದೆ ಹೋಗುತ್ತಿರುವ ಈ ಪ್ರಪಂಚದಲ್ಲಿ, ಎಲ್ಲರಿಗೂ ಮುಂದೆ ಹೋಗುವ ತವಕ, ಹಲವರಿಗೆ ಹಿಂದಿನದನ್ನೆ ನೆನೆಯುವುದು ಪುಳಕ;   ಮುಂದಿರುವ ಆ ಆಶ್ಚರ್ಯಗಳಲ್ಲಿ ಭರವಸೆಯಿದೆ, ಹಿಂದಿರುವ ಆಕಸ್ಮಿಕಗಳಲ್ಲೂ ನಲುಮೆಯಿದೆ;   ಕಳೆದುದರ ಬಗ್ಗೆ ಕೊರಗಿಲ್ಲ, ಬರುವುದರ ಬಗ್ಗೆ ಭಯವಿಲ್ಲ, ನಿನ್ನೆ-ನಾಳೆಗಳ ನಡುವೆ ಸಿಕ್ಕಿರುವ ಈ ದಿನವ ಕಳೆದು ಕರಗುವ ಮನವಿದೆ;   ನಿನ್ನೆ ಕಳೆದುದು ನಾಳೆ ಸಿಗಬಹುದು, ನಾಳೆ ಬರುವುದು ನಿನ್ನೆಯೇ ಕಾಣಿಸಿರಬಹುದು, ಇಂದಿನ ಚಿಂತನೆಗೆ ಮರುಹುಟ್ಟು ನೀಡಿ, ಈ ದಿನವ ಕಳೆವ ಮನವಿದೆ;   ನಿನ್ನೆಯ ಯೌವನವ, ನಾಳೆಯ ಮುಪ್ಪಿನಲಿ, ಪ್ರಸ್ತುತ ಅನುಕ್ಷಣದ ಕನಸನು ನನಸಾಗಿಸಿ, ಇಂದಿನ ಈ ಬದುಕ ಬಾಳುವಾಸೆಯಿದೆ;

ನಮ್ಮ ಇಚ್ಚಾ ದೃಷ್ಟಿ

ಸಾಮನ್ಯವಾಗಿ ಎಲ್ಲರಿಗೂ ಸಿರಿವಂತರಾಗಬೇಕು ಅನ್ನೂ ಆಸೆ ಬೆಟ್ಟದಷ್ಟು ಇರುತ್ತೆ, ಅದಕ್ಕಾಗಿಯೇ ತುಂಬ ಶ್ರಮಿಸುತ್ತಾರೆ. ಇನ್ನು ಕೆಲವರು shortcut ಹುಡುಕುತ್ತಾರೆ. ಹೀಗೂಮ್ಮೆ ಒಬ್ಬ ಸಾಮಾನ್ಯನು ತುಂಬಾ ಕಷ್ಟಪಟ್ಟು, ಜೀವತೆದು ತುಂಬಾ ಸಿರಿ ಸಂಪಾದಿಸಿದ. ಅದನ್ನ ಗುಡ್ಡೆ ಹಾಕಿದ. ಶ್ರೀಮಂತನು ಆದ. ಸಿರಿವಂತಿಕೆ ಜೊತೆ ಜೂತೆಗೆ ಅಧಿಕಾರ, ಸಮಾಜದಲ್ಲಿ ಸ್ಥಾನಮಾನ, ಐಚ್ಛಿಕ ಸುಖ ಭೂಗಗಳು ಸಿಕ್ಕಿತು. ಹೀಗೆ ದಿನ ಕಳೆದಂತೆ ಅವನಿಗೆ ಅವನ ಸಿರಿವಂತಿಕೆ ಮೇಲೆ ವ್ಯಾಮೋಹ ಹುಟ್ಟಿತು. ಕಾಲ ಕಳೆದಂತೆ  ವೃದ್ದಾಪ್ಯ ಸಮೀಪಿಸಿತು.

ಒಡನಾಟ

ಕಣ್ಣೆದುರಿನ ಕಿಟಕಿಯಿಂದ ಒಂದೊಂದೇ ಹಡಗುಗಳು ತೀರಕ್ಕೆ ಬರುವುದನ್ನು ಸುಮಾರು ಹತ್ತು ನಿಮಿಷಗಳಿಂದ ನೋಡುತ್ತಾ ಕುಳಿತಿದ್ದೆ. ಕಿಟಕಿಯ ಹೊರಗಡೆ ಮರಳು ಮಿಶ್ರಿತ ಗಾಳಿ! ನನಗೂ ಇದು ಹೊಸತು. ಕುವೈಟ್ ಸಿಟಿಯಲ್ಲಿ ಕೂತು ಇಂದಿಗೆ ಸುಮಾರು ೨ ತಿಂಗಳು ಕಳೆದಿವೆ. ಕೆಲಸದ ಒತ್ತಡ ಇನ್ನೂ ಕಮ್ಮಿ ಆಗಿಲ್ಲ. "ಮಾಹಿ" ಎನ್ನುವ ಹೈದರಾಬಾದ್ ಹುಡುಗ ಹಬೆಯಾಡುವ ಕಾಫೀ ಕಪ್ ತಂದು ಮುಂದೆ ಇಟ್ಟು 'ಸರ್' ಎಂದ. ತಿರುಗಿ ಒಂದು ಪರಿಚಯದ ನಗು ಕೊಟ್ಟೆ. ಕಾಫೀಯ

ನೀ ಮೊಬೈಲ್ ಒಳಗೋ? ಮೊಬೈಲ್ ನಿನ್ ಒಳಗೋ?

ನೀ ಮೊಬೈಲ್ ಒಳಗೋ,? ಮೊಬೈಲ್ ನಿನ್ನೊಳಗೋ?  ನೀ ಆಪ್ ಒಳಗೋ ,ಆಪ್ ನಿನ್ನೊಳಗೋ?? ನೀ ಮೊಬೈಲ್ ಎಂಬ ಮಾಯೆಯೊಳಗೋ? ಮನಸ್ಸು ದೇಹಗಳನ್ನ, ಹಾಳು ಮಾಡುವ ಸುಳಿಯಂತಿರುವ, ಮೊಬೈಲ್ ಒಳಗೋ??  ಡಾರ್ವಿನನ್ನ ಜೀವ ವಿಕಾಸವಾದದಂತೆ, ಮೊಬೈಲ್ ವಿಕಾಸವಾದವನ್ನ ಗಮನಿಸಿದರೆ, ಅಜ್ಜ - ಅಜ್ಜಿಯಂದಿರು ಎಲೆ - ಅಡಿಕೆ ಕುಟ್ಟಲು ಉಪಯೋಗಿಸುತಿದ್ದ ಕುಟಾಣಿ ತರಹದ, ಕಪ್ಪು ಮೂತಿಯ, ತಲೆ ಮೇಲೆ ಕೋಳಿ ಜುಟ್ಟಿನಂತಹ ಆಂಟೆನಾ ಹೊಂದಿದ್ದ 1100 ಮೊದಲು ಬಂದದ್ದು.. ಆಗೆಲ್ಲ ಅದನ್ನು ನಮ್ಮ ಊರಿನಲ್ಲಿ ಮಂಗ ಓಡಿಸಲು ಉಪಯೋಗಿಸುತಿದ್ದ ನೆನಪು. ಅದನ್ನೇ

Top