You are here
Home > 2017 > August

ಸಂವೇದನಾ

http://www.3pgroup.it/?dissertation-service-in-malaysia-90an dissertation service in malaysia 90an ಅವನು ಮತ್ತೆ ಕಾಡುತ್ತಿದ್ದಾನೆ. ಮರೆತೆನು ಅಂದುಕೊಳ್ಳುವಷ್ಟರಲ್ಲಿ ಮತ್ತೆ ನೆನಪಾಗುತ್ತಾನೆ. ಎಷ್ಟೆಂದರೆ ಒಂದೊಂದು ಸಲ ಕಣ್ಣು ಮುಚ್ಚಿದರೂ, ಕಣ್ಣು ತೆರೆದರೂ, ಕನಸಲ್ಲೂ....!! ಅವನ ನೆನೆದರೆ ಒಮ್ಮೊಮ್ಮೆ ಮನಸು ಮರುಗುತ್ತದೆ. ಇನ್ನೊಮ್ಮೆ ಹೆಮ್ಮೆಯಿಂದ ನಲಿದಾಡುತ್ತದೆ... ಅಗೋ ಅಲ್ಲಿ ವಿಜಯ ಪತಾಕೆ ಹಿಡಿದು ನಲಿಯುತ್ತಿದ್ದಾನೆ. ಹ್ಞಾಂ... ಆತನೇ....!! ಆತನೇ...! ನಮ್ಮ ಹೆಮ್ಮೆಯ ಸೈನಿಕ.. ಗಡಿ ಕಾಯೋ ನಾಯಕ. ತಾಯ್ನೆಲದ ಋಣವನ್ನು ಪರಿಪೂರ್ಣವಾಗಿ ತೀರಿಸುವ ಏಕೈಕ ವ್ಯಕ್ತಿ...! ಅವನು ಹಿಮಾಲಯಕ್ಕೂ ಎತ್ತರ... ಸಾಗರಕ್ಕೂ ವಿಶಾಲ...!! ನೆಲ,

ಪೂರ್ಣಾಹುತಿ

go site ಅಳು ಬರುತ್ತಲೇ ಇಲ್ಲ. ಆಪ್ತ ಸ್ನೇಹಿತೆಯ ಸಾವು, ಹೆಣದ ಮುಂದೆ ನಿಂತರೂ ಕಣ್ಣಲ್ಲಿ ನೀರಾಡಿಲ್ಲ. ಆರ್ಯ ! ಅದೇ ಮುಗ್ಧ ಮುಖ. ಸಾವಿನಲ್ಲೂ ನಗುಮುಖ. ಬಹುಶ: ಯಾರ ಬರುವಿಕೆಗಾಗೋ ಕಾದು ಕೊನೆಯುಸಿರೆಳೆದಂತಿದೆ. ಆರ್ಯಾಳ ಮಗಳು "ಅದ್ವಿತಿ"ಯನ್ನು ಯಾರಿಂದಲೂ ಸಮಾಧಾನ ಮಾಡಲು ಆಗುತ್ತಿಲ್ಲ. ಪಾಪಾ ! ಆ ಎಳೆ ಕಂದ ಇನ್ನು ಮೂರೂ ವರ್ಷ ಕೂಡ ತುಂಬಿಲ್ಲ. ಅದು ಅಳುತ್ತಿದ್ದುದ್ದು ಅಮ್ಮನಿಗಾಗಿ ಅಲ್ಲ ಅವಳನ್ನು ಹೊರಗೆ ಆಡಲು ಯಾರು ಬಿಡುತ್ತಿಲ್ಲ ಎಂಬ

ಸೋಲೆಂದರೆ ಸೋಲಲ್ಲ, ಮುನ್ನಡೆವ ಮೆಟ್ಟಿಲು – ಮುದ್ದ

go here ಬಣ್ಣಗೆಟ್ಟ ಬದುಕು ಒಮ್ಮೊಮ್ಮೆ ಸ್ಥಗಿತವಾಗಿ ನಿಂತುಬಿಡುತ್ತದೆ. ಜೀವನದಲ್ಲಿ ಹಿಂದಡಿಯಿಟ್ಟಾಗಲೆಲ್ಲ ನೂರಾರು ಗೊಂದಲಗಳ ನಡುವೆ ಅಷ್ಟೇ ಬೆಲೆಬಾಳುವ ಬುದ್ಧಿಮಾತುಗಳು, ಕೆಲಸಕ್ಕೆ ಬಾರದ ಹತ್ತಾರು ಪ್ರಶ್ನೆಗಳು ತಲೆಯೊಳಗೆ ಬಂದು ಕುಳಿತುಬಿಡುತ್ತವೆ. ಅವುಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಲು ತನಗೆ ಸರಿಯಾದ ಮಾಗ೯ದಶ೯ನದ ಕೊರತೆ ಇದೆ ಎಂಬ ಕರಾಳ ಯೋಚನೆ ಅವಲಂಬಿಸಿ ಬಿಡುತ್ತದೆ. ನಮ್ಮ ನಿಧಾ೯ರವನ್ನು ನಾವು ತೆಗೆದುಕೊಳ್ಳಲು ಮಾಗ೯ದಶ೯ನದ ಅವಶ್ಯಕತೆ ಇದೆಯೇ....? ಪ್ರತಿಯೊಬ್ಬರಿಗೂ ವಯಸ್ಸಿಗೆ ತಕ್ಕ ಯೋಚನಾ ಶಕ್ತಿ ಇರುತ್ತದಲ್ಲವೇ...? ಅದನ್ನು ಬಳಸಿಕೊಂಡು ಅಸಹಾಯಕತೆಯ

ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS)

click ಆಂಟಿ-ಲಾಕ್ ಬ್ರೇಕಿಂಗ್ ವಾಹನಗಳಲ್ಲಿರುವ ಹಾಗೂ ಇರಲೇಬೇಕಾದ ಒಂದು ಸುರಕ್ಷತಾ ವ್ಯವಸ್ಥೆ. ಜನರು ಸಾಮಾನ್ಯವಾಗಿ ಇದರ ಬಗ್ಗೆ ಅಷ್ಟೇನು ತಿಳಿದುಕೊಂಡಿಲ್ಲ ಹಾಗೂ ಹೆಚ್ಚಾಗಿ ತಪ್ಪು ತಿಳುವಳಿಕೆಯೇ ಕಂಡುಬರುತ್ತದೆ. ಎಷ್ಟೋ ಜನ ABS ಅನ್ನು ಆಂಟಿ ಬ್ರೇಕಿಂಗ್ ಸಿಸ್ಟಮ್ ಎಂದು ಕರೆಯುವುದನ್ನು ಕಂಡಿದ್ದೇನೆ. ಇದು ತಪ್ಪು. ABS ಇರುವುದು ವಾಹನ ನಿಲ್ಲಿಸಬೇಕಾದಾಗ, ಬ್ರೇಕ್ ಅನ್ನು ಒತ್ತಿದಾಗ ಚಕ್ರವು ತಡೆನಿಲ್ಲದಂತೆ ಅಂದರೆ ಲಾಕ್ ಆಗದಂತೆ ನೋಡಿಕೊಳ್ಳುವುದಕ್ಕೆ. ಆದರೆ ಬಹಳ ಜನ ABS ನಿಂದ ಒಮ್ಮಲೇ

ಮಾಧ್ಯಮಗಳಿಗೆ ಕೆಲವೊಂದಿಷ್ಟು ಉಚಿತ ಸಲಹೆಗಳು – ಸುಧಿ ಆಚಾರ್ಯ

ಮಾಧ್ಯಮವನ್ನು ಅಲಿಖಿತವಾಗಿ ಸಂವಿಧಾನದ ನಾಲ್ಕನೆಯ ಅಂಗವಾಗಿ ಕರೆಯಲ್ಪಡುತ್ತದೆ. ಈ ಕಾರಣವೇ ತಿಳಿಯುವುದು ಜನ ಸಾಮಾನ್ಯರು ಮಾಧ್ಯಮಗಳನ್ನು ನಂಬುವ ಬಗೆ. ಇಂತಿಪ್ಪ ಮಾಧ್ಯಮಗಳು ತಮ್ಮ ಮೇಲಿಟ್ಟ ನಂಬುಗೆಗೆ ಅರ್ಹವೇ? ಯೋಚಿಸಬೇಕಾದ ವಿಚಾರ. ಅಂದಾಗೆ ಯೋಚಿಸ ಬೇಕಾದವರು ನಾವಲ್ಲ, ಸ್ವತಃ ಮಾಧ್ಯಮದವರು. ಕಾರಣ ನಮಗೆ ಆಯ್ಕೆ ಸ್ವಾತಂತ್ರ್ಯ ಇದೆ ಬದಲಾಯಿಸಲು, ಕೊನೆ ಪಕ್ಷ ಚಾನೆಲ್ನಾದರು. ಯಾವಾಗ ಎಲೆಕ್ಟ್ರಾನಿಕ್ ಮಿಡಿಯಾ( ಸುದ್ದಿ ವಾಹಿನಿಗಳು) TRP ಯ ಹಿಂದೆ ಬೀಳಲು ಶುರು ಮಾಡಿದವೋ ಇವುಗಳ ಹೊಣೆಗೇಡಿತನ ಬಟಾಬಯಲಾಗತೊಡಗಿತು.

ಸ್ವತಂತ್ರರೇ ನಾವು?

get `ಸ್ವಾತಂತ್ರ್ಯವೆಂದರೆ ಕೇವಲ ರಕ್ತಪಾತವಲ್ಲ; ಗುಂಡು ಪಿಸ್ತೂಲುಗಳ ಆರ್ಭಟವಲ್ಲ; ಗುಲಾಮಗಿರಿಯನ್ನು ಕಿತ್ತೊಗೆಯುವ ಧರ್ಮಯುದ್ಧ'. ಗಲ್ಲಿಗೇರುವ ಮುನ್ನ ಕೆಚ್ಚೆದೆಯ ಹೋರಾಟಗಾರ ಭಗತ್‍ಸಿಂಗ್ ಹೇಳಿದ ಮಾತುಗಳಿವು. ನಾವು ಸ್ವತಂತ್ರರಾಗಿ 70 ವರ್ಷಗಳಾದವು. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಕಾಡುವ ಪ್ರಶ್ನೆ... ನಾವು ಸ್ವತಂತ್ರರೇ? ಉತ್ತರ ಹೌದು ಎಂದಾದಲ್ಲಿ ನಾವು ನಿಜವಾದ ಅರ್ಥದಲ್ಲಿ ಸ್ವತಂತ್ರರೇ? ರಕ್ತಪಾತವಿಲ್ಲದೆ, ಗುಂಡು ಪಿಸ್ತೂಲುಗಳಿಲ್ಲದೆ, ಲಾಂಗು ಮಚ್ಚುಗಳಿಲ್ಲದೆ ನಿರ್ಭಯ ವಾತಾವರಣದಲ್ಲಿ ನಾವಿದ್ದೇವೆಯೇ? ನಾವು ಸ್ವತಂತ್ರರೇ? ಇದರ ಎರಡು ಆಯಾಮಗಳನ್ನು ನಾನು ಹೇಳುತ್ತಿದ್ದೇನೆ-

ನುಸಿ (ಕುಂದ ಕನ್ನಡ ) – ಚಂದ್ರ ಶೇಖರ ಶೆಟ್ಟಿ ಕೊಡ್ಲಾಡಿ

http://gpsemirates.com/dissertation-writing-services-usa-experiment/ ಅಕಾಶದಾಗ್ ಹೊಳೆಯುವ ಚಂದ್ರನ್ ಕಂಡ್ ಅವಳಿಗ್ ಮನಸ್ಸಿಗ್  ಆಯಿತ್ತ್ ಏನೋ ಒಂಥರಾ ಖುಷಿ .   ಆದರೆ   ಎನ್ ಮಾಡುದ್ ಹೊಳೆಯುವ ಚಂದ್ರನ ಕಾಂಬಕ್ಕ್   ಮನಿಂದ್ ಹೊರಗ್ ಬಂದ್ ಮೈ ತುಂಬಾ ಕಚ್ಚಿಸಿಕೊಂಡಳ್ ನುಸಿ(ಸೊಳ್ಳೆ)||

ಕುಂತಿ ನೆನಪಾದಳು – ಪ್ರದೀಪ್ ನಾಗರಾಜ್

http://www.queen-jungle.com/dissertation-culture-gnrale-mthodologie/ dissertation culture gnrale mthodologie ಅಮ್ಮ ! ನಿನಗೊಲಿದಿದ್ದ ವರ ನನಗೆ ಶಾಪವಾಯಿತೆ ನಿನ್ನ ಮಡಿಲಲ್ಲಿ ಮಲಗಬೇಕಿದ್ದ ಒಡಲು ಬಿದರಿನ ಬುಟ್ಟಿಯ ತಬ್ಬಿ ಮಲಗಿತೆ!   ನೀ ಅರಿಯಲಿಲ್ಲ ನಾ ಅನುಭವಿಸಿದ ಅವಮಾನಗಳ ನಾ ನಿನ್ನ ಕೇಳಬೇಕೆನಿಸುತ್ತಲಿತ್ತು ನಾ ಮಾಡಿದ ತಪ್ಪಾದರೂ ಏನೆಂಬುದು ಅನಾಥ ಶಿಶುವಾಗಿ...   ಜಗತ್ತಿನ ಮಾತೃ ಹೃದಯಗಳು 'ಕಲ್ಲಾಗದಿರಲಿ' ಬೇಡಿಕೊಂಬೆನು ನನ್ನಂತ ಅನಾಥ ಶಿಶುಗಳ ಪರವಾಗಿ ನಿಮಗೊಲಿಯುವ ವರ ನಮಗೆ ಶಾಪವಾಗುವುದೆಂದು

ಬೇಜಾರು – ಸುಧಿ ಆಚಾರ್ಯ

ನೀನಿರದ ಹೃದಯದಲ್ಲಿ ಇಂದೇಕೋ ಬೇಜಾರು ನೀ ಬಿಟ್ಟೋದ ಹಳೆ ನೆನಪುಗಳದೇ ಈಗ ಕಾರುಬಾರು   ಈ ಮುಸ್ಸಂಜೆಯ ಏಕಾಂತದಿ ನಿಟ್ಟುಸಿರೇ ಹಾಜರು ನೀ ಬರುವೆಯೋ ಬಾರೆಯೋ ತಿಳಿದವರು ಯಾರು?   ಅದಾಗಲೇ ಶುರುವಾಗಿದೆ ಊರೆಲ್ಲಾ ಹಬ್ಬಲು ಪುಕಾರು ಪುನಪುನಃ ತಪ್ಪಿ ಹೋಗುತಿದೆ ಏತಕೆ ಹುಷಾರು?   ನೀ ಮರೆತೋದೆಯಲ್ಲಾ ಕೊನೆತನಕ ಜೊತೆಗಿರುವ ಕರಾರು ಓ ಮನಸನ್ನ ಕಲ್ಲಾಗಿಸೋ ಶಕ್ತಿಯೇ ಬಂದೀ ಮನದಲ್ಲಿ ಬೇರೂರು   ಈ ಉಸಿರಿರದ ಶವಕ್ಕೆ ಬೇಕೇನು ಮಹಜರು? ಆ ಜವರಾಯ ಕರೆದೊಯ್ಯಲು ಬರಬೇಕಿದೆ ಜರೂರು

ಪ್ರಕೃತಿ ಪಾಠ – ಶಿಲ್ಪ ದಾಸ್

ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾಡಿ ಹಾಡಿ ಕುಣಿಯುತಿತ್ತು ಸಾಕು ಸಾಕು ನಿಲ್ಲು ಎನಲು ನನ್ನ ನೋಡಿ ನಕ್ಕಿತು   ಮರದ ತುಂಬ ಫಲಗಳಿರಲು ಬಗ್ಗಿ ತಾ ನಿಂತಿರಲು ಭಾರವೇ ಫಲಗಳೆನಲು ನನ್ನ ನೋಡಿ ನಕ್ಕಿತು   ನದಿಯಲೊಂದು ಪುಟ್ಟ ಮೀನು ಪ್ರವಾಹದೆದುರು ಈಜುತಿರಲು ಸಹಕರಿಸಲೇ ನಾನು ಎನಲು ನನ್ನ ನೋಡಿ ನಕ್ಕಿತು   ಮರದ ಬುಡದಿ ಬಳ್ಳಿಯೊಂದು ಮರವನ್ನೇ ಸುತ್ತುತಿರಲು ಸಾಕು ಸುತ್ತಬೇಡ ಎನಲು ನನ್ನ ನೋಡಿ ನಕ್ಕಿತು   ನಿನ್ನ ಕೆಲಸ ಮರೆಯಬೇಡ ಪರರ ಗೊಡವೆ ನಿನಗೆ ಬೇಡ ಪ್ರಕೃತಿ ಪಾಠ ಇದುವೇ ನೋಡ ಎಂಬ ಮರ್ಮ ಸಿಕ್ಕಿತು   ನಾನು ಅಂದು ತಿಳಿದುಕೊಂಡೆ ಹೊಸ ಬದುಕ ಕಂಡುಕೊಂಡೆ ಮೂರ್ಕ ತನವ ತಿದ್ದಿಕೊಂಡೆ ಹೊಸ ದಾರಿ ಸಿಕ್ಕಿತು

Top