You are here
Home > ಚಿಂತನೆ

ಅಯ್ಯೋ ದೇವರೇ

ಆ ದೇವರಿಗಿಂತ ಈ ದೇವರು ದೊಡ್ಡವನು, ಒಳ್ಳೆಯವನು. ನಂಬುದ್ರೆ ಕೈ ಬಿಡಲ್ಲ. ಅವನ್ ಮನ್ಸ್ ಮಾಡುದ್ರೆ ಜಾಕ್ಪಾಟೆ!! “ಅಪ್ಪ ದೇವರೇ, 10% ನಿಂಗೆ ಕೊಡ್ತೀನಿ, ಕಣ್ಣ್ ಬಿಡಪ್ಪಾ, ಈ ಕೆಲ್ಸದಲ್ಲಿ ಸಕ್ಕತ್ ಕಮಾಯಿ ಮಾಡ್ಕೊಡು.” ಇದು ನಮ್ ದೇವರು, ಹೆಚ್ಚಿನ ಜನರ ದೇವರ ಜೊತೆಗಿನ ಒಡನಾಟ ಮತ್ತು ಆಚರಣೆ. ಜನರನ್ನ ದೇವ್ರು ಸೃಷ್ಠಿ ಮಾಡ್ದ ಅಂತಾರೆ; ಅವನ್ ತರಾನೆ. ಆದ್ರೆ ಜನರು ದೇವ್ರ್ಗಳನ್ನ ಅವ್ರ್ ಅವ್ರ್ ತರಾನೆ ಸೃಷ್ಠಿ ಮಾಡ್ಕೊಂಡ್ರು!!

ಮತ್ತೆ ಅವ.., ಶಿವ !

ಶಿವ ಹಾಗೂ ಭೂಮಿಯ ಮೇಲೆ ಅವನ ಅವತಾರ.. ಶಿವನ ಅವತಾರದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಇದರ ಬಗ್ಗೆ ಹುಡುಕುತ್ತಾ ಹೋದಾಗ ಸಿಕ್ಕ ಕೆಲವು ಮಾಹಿತಿ. ಶಿವ ಜನಮನದ ಆರಾಧ್ಯ ದೇವ, ಭೂಮಿಯ ಮೇಲೆ ಆದರ್ಶವಾದ ಕೆಲಸಗಳನ್ನು ಮಾಡಲು, ಶಿವನು ಕೂಡ ಅವತರಿಸಿದ ಎಂದು ಹೇಳಲಾಗುತ್ತದೆ. ಅವತಾರಗಳು ಕೆಲವರನ್ನು ರಕ್ಷಿಸುವುದಕ್ಕಾಗಿ, ಲೋಕ ಕಲ್ಯಾಣಕ್ಕಾಗಿ. ಅವತಾರ ಹಲವಾರು ಎಂದು ಹೇಳಲಾಗುತ್ತದೆ. ಶೈವತ್ವದಲ್ಲಿ ಶಿವನ ಅವತಾರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲ, ಒಪ್ಪಿಕೊಳ್ಳುವುದು ಕಡಿಮೆ. ಲಿಂಗ ಪುರಾಣವು ಇಪ್ಪತ್ತೆಂಟು

ತರಂಗಾಂತರಂಗ – ಅಂತರಂಗದಲೆಗಳ ಬಗ್ಗೆ

ನಿಂತ ನೀರಲ್ಲಿ ಪ್ರತಿಬಿಂಬ ನೋಡಬಹುದು, ನಿಶ್ಚಲ ನಿರ್ಮಲ ನೀರಿನಾಳದಲ್ಲಿ ಅದರ ಒಳಗರ್ಭವನ್ನೂ ನೋಡಬಹುದು. ಆದರೆ ನಿಂತ ನೀರಿಗಿಂತ, ಅಲೆಗಳ ಏರಿಳಿತವಿರುವ ಸಾಗರ-ಸಮುದ್ರಗಳ ಮೇಲೆ ಹೆಚ್ಚು ಒಲವು; ಕಾರಣ ತಿಳಿದಿಲ್ಲ. ನಿಶ್ಚಲವಾದ ನೀರು ಬಹುಷಃ ನಿರ್ಮಲ ಮನಸ್ಸಿನ ಪ್ರತೀಕವಾಗಿರಬಹುದು, ಎಲ್ಲ ಹಾಗು-ಹೋಗುಗಳ ಮೀರಿ ಎಲ್ಲ ಭಾವನೆಗಳ ಪರಿಧಿ ದಾಟಿ, ತಟಸ್ಥವಾಗಿ ಯಾವ, ಯಾರ ಹಂಗೂ ಇಲ್ಲದ ಶಾಂತಸ್ವಭಾವಿ. ಆದರೆ ವಾಸ್ತವ ಭಿನ್ನವಲ್ಲವೇ..? ತೀರದಿಂದ, ದಿಗಂತದವರೆಗೂ ಏರಿಳಿತಗಳ ಕಲರವ, ಕೆಲವೊಮ್ಮೆ ತಿಳಿಯಾಗಿ, ಕೆಲವೊಮ್ಮೆ

ಕರ್ಮ

ನಮ್ಮ ದೈನಂದಿನ ಕೆಲಸಗಳು, ಆಚರಣೆಗಳು, ನಮ್ಮ ಗತಕಾಲದ ಕಾರ್ಯಗಳು ಇವೆಲ್ಲ ಸುಮ್ಮನೆ ಹಾಗೆ ಪ್ರತಿಫಲ ಇಲ್ಲದೆ ಕಳೆದುಹೋಗುವಂತದಲ್ಲ. ಎಲ್ಲಾದಕ್ಕೂ ಒಂದು ಲೆಕ್ಕ ಅಂತ ಇರಬೇಕಲ್ಲಾ? ನಾವು ಮಾಡಿದ ಕೆಲಸಗಳ ಪರಿಣಾಮ ಅಥವಾ ಫಲಿತಾಂಶ ಏನೇ ಇದ್ದರು ಅದನ್ನು ನಾವೇ ಅನುಭವಿಸಬೇಕು. ಈ ಲೆಕ್ಕಾಚಾರವೇ ಕರ್ಮ. ವಿಜ್ಞಾನವೇ ಹೇಳುವಂತೆ ಇಲ್ಲಿನವು ಎಲ್ಲ ಇಲ್ಲಿಯೇ ಹುಟ್ಟಿ, ಇಲ್ಲೆ ಬದುಕಿ, ಇಲ್ಲೆ ನಶಿಸಬೇಕು. ಇದಕ್ಕೆ ನ್ಯೂಟನ್ ನ ಮೂರನೇ ನಿಯಮವನ್ನು ಕೂಡ ಹೊಂದಿಸಬಹುದು. ಅಂತೆಯೇ,  ಆಧ್ಯಾತ್ಮಿಕ

ಭಕ್ತಿ

ನಿಮ್ಗೆ ಭಯ ಭಕ್ತಿ ಏನಾದ್ರೂ ಇದ್ಯಾ? ಎಷ್ಟು ವಯಸ್ಸಾಗಿದೆ, ಸ್ವಲ್ಪ ಆದ್ರೂ ಬೇಡ್ವಾ? ಸ್ವಲ್ಪ ಭಕ್ತಿ ಯಿಂದ ನಡ್ಕೊಳ್‌ರಪ್ಪ. ಇದೆಲ್ಲ ಹಿರಿಯರು ಕೋಪ ಬಂದಾಗ, ಕಿರಿಯರಿಗೆ, ಕಿರಿಕಿರಿ ಉಂಟುಮಾಡುವವರಿಗೆ ಹೇಳುವ ಮಾತುಗಳು. ಸಾಮಾನ್ಯವಾಗಿ ನಾವೆಲ್ಲ ಕೇಳಿರ್ತೀವಿ. ಆದ್ರೆ ಎಂದಾದ್ರೂ ನಾವುಗಳು ಏನಪ್ಪಾ ಹಾಗಂದ್ರೆ; ಭಯ ಅಂದ್ರೆ; ಅಥವಾ ಭಕ್ತಿ ಅಂದ್ರೆ ಏನು ಎಂದು ಯೋಚನೆ ಮಾಡಿದ್ದೀವಾ? ಮಾಡಿದ್ರು, ಭಕ್ತಿ ಅಂದ್ರೆ ಏನು ಅಂಥಾ ತಿಳ್ಕೊಂಡಿದ್ದೀವಾ? ಪ್ರಶ್ನೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು, ತಿಳಿದವರೊಂದಿಗೆ ಚರ್ಚಿಸಿದರೆ,

ಸರ್ವಂ ಶಿವಂ!!

ಹಾಗಾದರೆ ಶಿವನ ಸೃಷ್ಟಿ ಎಲ್ಲಿಂದ ಎನ್ನುವ ಪ್ರಶ್ನೆ ಹುಟ್ಟದೆ ಇರದು. ಎಲ್ಲಾ ವಸ್ತುಗಳಿಗೂ, ವಿಷಯಗಳಿಗು, ಅಣು ಅಣುವಿಗೂ ಮೂಲ ಇರಬೇಕಲ್ಲವೇ? ಪ್ರಶ್ನೆಯು ಕುತೂಹಲಕಾರಿ. ಹಲವರಲ್ಲಿ, ಹಲವಾರು ತರಹದ ವಾದಗಳಿರಬಹುದು, ತರ್ಕಗಳಿರಬಹುದು. ಎಲ್ಲವೂ ಒಂದೇ ಕಡೆ ಸಿಗುವುದಂತೂ ಕಷ್ಟಸಾಧ್ಯ. ನಾನು ಕೂಡ ಇದರ ಬಗ್ಗೆ ಅವಲೋಕಿಸಿದವನೇ. ಕಥೆಗಳಲ್ಲಿ, ಪುರಾಣದಲ್ಲಿ ಬರುವ ಒಂದು ವಿಷಯವನ್ನು ಎಲ್ಲಾರು ಉಲ್ಲೇಖಿಸುತ್ತಾರೆ. ಸ್ವಾರಸ್ಯಕರ. ಸದ್ಗುರು ಜಗ್ಗಿ ವಾಸುದೇವರವರು ಕೂಡ ಒಂದು ಕಡೆ ಇದನ್ನೇ ಉಲ್ಲೇಖಿಸುತ್ತಾರೆ. ಒಮ್ಮೆ ಸಾಧು ಶಿವನನ್ನು ಕೇಳುತ್ತಾನೆ.

ಸತ್ಯ.. ಶಿವ ಸುಂದರ..

ಶಿವ ಎಂದರೆ ? ದೇವರ? ಅಥವಾ ಒಂದು ಪುರಾಣ ಹಿಂದೂ ಸಂಸ್ಕೃತಿಯ ಸಾಮೂಹಿಕ ಕಲ್ಪನೆಯ ? ಶಿವ ಒಂದು ತತ್ವ, ಆಳವಾದ ಅರ್ಥ. ಎಲ್ಲಿಯೂ ಸ್ಪಷ್ಟವಾಗಿ ಇದೇ ಎಂದು ಹೇಳುವ ಉತ್ತರ ಸಿಗದು. ಅವರವರ ಕಲ್ಪನೆಗೆ, ತರ್ಕಕ್ಕೆ, ಅನುಭವಕ್ಕೆ, ಅಭಿಮಾನಕ್ಕೆ, ಉನ್ಮಾದಕ್ಕೆ, ಭಕ್ತಿಗೆ ತಕ್ಕಂತೆ ಹಲವು ವಿವರಣೆ ಸಿಕ್ಕರೂ ಅರ್ಥವಾಗದ ಒಂದು ಜಿಜ್ಞಾಸೆ! ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ 'ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ಅರ್ಥವೇ ಇಲ್ಲ, ಶಿವ

Top