You are here
Home > ಮರೆಯದ ಸಾಲು

ನುಸಿ (ಕುಂದ ಕನ್ನಡ ) – ಚಂದ್ರ ಶೇಖರ ಶೆಟ್ಟಿ ಕೊಡ್ಲಾಡಿ

ಅಕಾಶದಾಗ್ ಹೊಳೆಯುವ ಚಂದ್ರನ್ ಕಂಡ್ ಅವಳಿಗ್ ಮನಸ್ಸಿಗ್  ಆಯಿತ್ತ್ ಏನೋ ಒಂಥರಾ ಖುಷಿ .   ಆದರೆ   ಎನ್ ಮಾಡುದ್ ಹೊಳೆಯುವ ಚಂದ್ರನ ಕಾಂಬಕ್ಕ್   ಮನಿಂದ್ ಹೊರಗ್ ಬಂದ್ ಮೈ ತುಂಬಾ ಕಚ್ಚಿಸಿಕೊಂಡಳ್ ನುಸಿ(ಸೊಳ್ಳೆ)||

ಕುಂತಿ ನೆನಪಾದಳು – ಪ್ರದೀಪ್ ನಾಗರಾಜ್

ಅಮ್ಮ ! ನಿನಗೊಲಿದಿದ್ದ ವರ ನನಗೆ ಶಾಪವಾಯಿತೆ ನಿನ್ನ ಮಡಿಲಲ್ಲಿ ಮಲಗಬೇಕಿದ್ದ ಒಡಲು ಬಿದರಿನ ಬುಟ್ಟಿಯ ತಬ್ಬಿ ಮಲಗಿತೆ!   ನೀ ಅರಿಯಲಿಲ್ಲ ನಾ ಅನುಭವಿಸಿದ ಅವಮಾನಗಳ ನಾ ನಿನ್ನ ಕೇಳಬೇಕೆನಿಸುತ್ತಲಿತ್ತು ನಾ ಮಾಡಿದ ತಪ್ಪಾದರೂ ಏನೆಂಬುದು ಅನಾಥ ಶಿಶುವಾಗಿ...   ಜಗತ್ತಿನ ಮಾತೃ ಹೃದಯಗಳು 'ಕಲ್ಲಾಗದಿರಲಿ' ಬೇಡಿಕೊಂಬೆನು ನನ್ನಂತ ಅನಾಥ ಶಿಶುಗಳ ಪರವಾಗಿ ನಿಮಗೊಲಿಯುವ ವರ ನಮಗೆ ಶಾಪವಾಗುವುದೆಂದು

ಬೇಜಾರು – ಸುಧಿ ಆಚಾರ್ಯ

ನೀನಿರದ ಹೃದಯದಲ್ಲಿ ಇಂದೇಕೋ ಬೇಜಾರು ನೀ ಬಿಟ್ಟೋದ ಹಳೆ ನೆನಪುಗಳದೇ ಈಗ ಕಾರುಬಾರು   ಈ ಮುಸ್ಸಂಜೆಯ ಏಕಾಂತದಿ ನಿಟ್ಟುಸಿರೇ ಹಾಜರು ನೀ ಬರುವೆಯೋ ಬಾರೆಯೋ ತಿಳಿದವರು ಯಾರು?   ಅದಾಗಲೇ ಶುರುವಾಗಿದೆ ಊರೆಲ್ಲಾ ಹಬ್ಬಲು ಪುಕಾರು ಪುನಪುನಃ ತಪ್ಪಿ ಹೋಗುತಿದೆ ಏತಕೆ ಹುಷಾರು?   ನೀ ಮರೆತೋದೆಯಲ್ಲಾ ಕೊನೆತನಕ ಜೊತೆಗಿರುವ ಕರಾರು ಓ ಮನಸನ್ನ ಕಲ್ಲಾಗಿಸೋ ಶಕ್ತಿಯೇ ಬಂದೀ ಮನದಲ್ಲಿ ಬೇರೂರು   ಈ ಉಸಿರಿರದ ಶವಕ್ಕೆ ಬೇಕೇನು ಮಹಜರು? ಆ ಜವರಾಯ ಕರೆದೊಯ್ಯಲು ಬರಬೇಕಿದೆ ಜರೂರು

ಪ್ರಕೃತಿ ಪಾಠ – ಶಿಲ್ಪ ದಾಸ್

ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾಡಿ ಹಾಡಿ ಕುಣಿಯುತಿತ್ತು ಸಾಕು ಸಾಕು ನಿಲ್ಲು ಎನಲು ನನ್ನ ನೋಡಿ ನಕ್ಕಿತು   ಮರದ ತುಂಬ ಫಲಗಳಿರಲು ಬಗ್ಗಿ ತಾ ನಿಂತಿರಲು ಭಾರವೇ ಫಲಗಳೆನಲು ನನ್ನ ನೋಡಿ ನಕ್ಕಿತು   ನದಿಯಲೊಂದು ಪುಟ್ಟ ಮೀನು ಪ್ರವಾಹದೆದುರು ಈಜುತಿರಲು ಸಹಕರಿಸಲೇ ನಾನು ಎನಲು ನನ್ನ ನೋಡಿ ನಕ್ಕಿತು   ಮರದ ಬುಡದಿ ಬಳ್ಳಿಯೊಂದು ಮರವನ್ನೇ ಸುತ್ತುತಿರಲು ಸಾಕು ಸುತ್ತಬೇಡ ಎನಲು ನನ್ನ ನೋಡಿ ನಕ್ಕಿತು   ನಿನ್ನ ಕೆಲಸ ಮರೆಯಬೇಡ ಪರರ ಗೊಡವೆ ನಿನಗೆ ಬೇಡ ಪ್ರಕೃತಿ ಪಾಠ ಇದುವೇ ನೋಡ ಎಂಬ ಮರ್ಮ ಸಿಕ್ಕಿತು   ನಾನು ಅಂದು ತಿಳಿದುಕೊಂಡೆ ಹೊಸ ಬದುಕ ಕಂಡುಕೊಂಡೆ ಮೂರ್ಕ ತನವ ತಿದ್ದಿಕೊಂಡೆ ಹೊಸ ದಾರಿ ಸಿಕ್ಕಿತು

ಆಷಾಡ ಗಾಳಿ-ಶ್ರಾವಣ ಮಳೆ-ನೆನಪಿನ ಬುತ್ತಿ

ಬೀಸುತಿದೆ ತಂಗಾಳಿ, ಮನದಾಳದ ನೆನಪುಗಳ ಮೆಲುಕು ಹಾಕುವಲ್ಲಿ ಸಹಕರಿಸುತ| ಆಷಾಡ ಗಾಳಿಯ ರಭಸಕ್ಕೆ ಬೀಳುವ ಎಲೆಗಳು, ಸಾರುತಿವೆ ನಾ ಬಿಟ್ಟು ಬಂದ ನಂಟನ್ನು| ವಾಲುವ ಬಳ್ಳಿ-ಹುಲ್ಲುಗಳು ನೆನಪಿಸುತಿವೆ, ನಾ ಸಹಿಸಿ ಸಾಗಿ ಬಂದ ಹಾದಿಯನ್ನು| ಮರ ಬಿಟ್ಟು ಮಣ್ಣಿಗೆ ಬಿದ್ದು ನಗುತಿರುವ ಹೂಗಳು, ತರಿಸುತಿವೆ ನನ್ನೊಳಗೊಂದು ಮಂದಹಾಸವನ್ನು||   ಇಳೆಗೆ ತಂಪನೆರೆಯುವ ಮಳೆಯ ಸೂಚನೆ ನೀಡುತಿವೆ ಪಕ್ಷಿಗಳ ಕಲರವವು| ಪಂಚಮ ಮಾಸದಾಗಮನದ ಕಾತರ ಈ ಮನಸಿಗೆ, ವರ್ಷ ಋತುವಿನಲ್ಲಿ ಮಿಂದೇಳಲು| ಎಂದೂ ಮಾಸದ ನೆನಪಿನ ಬುತ್ತಿಯ ಬಿಚ್ಚಿ, ಈ ಮಳೆಯಲ್ಲಿ

ಇನ್ನು ಭ್ರಮೆಯಷ್ಟೆ..!

(ಹೇಳಿ ಹೋದ, ಹೇಳದೆ ಹೋದ, ಹಾಗೆ ಹೋದ ಗೆಳತಿಯ / ಇನಿಯನ ನೆನಪಲ್ಲೊಂದಿಷ್ಟು ಸಾಲುಗಳು.....) ಸಾಲು ಸಾಲು ಕವಿತೆ ಗೀಚಲಿಲ್ಲ, ನನ್ನ ಬಣ್ಣಿಸಲು| ನೆರಳಂತೆ ಹಿಂಬಾಲಿಸಲಿಲ್ಲ, ನನ್ನ ಗಮನ ಸೆಳೆಯಲು| ಮಾತುಗಳ ಸರಮಾಲೆ ಪೋಣಿಸಲಿಲ್ಲ| ಉಡುಗೊರೆಗಳ ಆಡಂಬರವ ನೀ ನೀಡಲಿಲ್ಲ ಎಂದೂ||   ನೋಡುವ ಕಣ್ಣೆದುರು ನೀ ಕಾಣದಂತೆ ನಿಂತೇ| ಪಿಸುಗುಡುತ್ತಲೇ ಪ್ರೀತಿ ತಿಳಿಸಿದೆ ನಿನ್ನುಸಿರಲ್ಲೇ ಸ್ಪರ್ಶಿಸಿದೆ| ದೂರ ನಿಂತೇ ಸಹಜ ಸನಿಹತೇ ನೀ ನೀಡಿದೆ||   ನೋಡುವ ಕಣ್ಣುಗಳು ಮರೆಯಾಯಿತು| ಕೇಳುವ ಕಿವಿಗಳು ಕಿವುಡಾಯಿತು| ನಿನ್ನೊಲವ ಬಯಸಿ, ಮನವಿದು ಬಳಲಿತು| ಕಾರಣ ಹೇಳದೆ ಹಿಂತಿರುಗಿದೆ, ಏಕೆ..!||   ಖಾಲಿಯಾಗುತ್ತಿತ್ತು ಕನಸುಗಳು| ಬರಿದಾಗುತಿತ್ತು ನಿಬಿಡ ವಾಸ್ತವವು| ಕರಗುತ್ತಿದ್ದ

ಕಾಣದ ಕನಸು – ಚಂದ್ರಶೇಖರ್ ಕೊಡ್ಲಾಡಿ

ಬರುಬರುತ  ಜೀವನದ ದಾರಿಯಲ್ಲಿ ದ್ವನಿ ಬಾರದಾಗಿದೆ. ಬಯಕೆಗಳ ಮೋಡದಲ್ಲಿ ಹನಿ ಭಾರವಾಗಿದೆ.|| ಕಾಣದಿಹ ಕನಸೊಂದು ಕಣ್ಣೀರ ತರಿಸಿದೆ. ಕೈಹಿಡಿದ ಕವನದಲಿ ಅಲೆಯಾಗಿ ಈಗ ಹರಿದಿದೆ.||

ಮಳೆ ಬರುವ ಮುನ್ನ – ದಿವಾಕರ ನಾಯ್ಕ್ ವನ್ನಳ್ಳಿ

ಮಳೆ ಬರುವ ಮುನ್ನ ಕಾರ್ಮೋಡ ಕವಿಯುವದು ಸಹಜ .... ಕಲ್ಲು ಶಿಲೆಯಾಗುವ ಮುನ್ನ ನಿಶ್ಚಿತ ಉಳಿಪೆಟ್ಟಿನ ಸಜಾ ...... ಸಾಧನೆಯ ಹಾದಿಯಲಿ ಎಡೆವುವದು ಅತಿ ಸಹಜ ಏಕೆಂದರೆ ನಡೆವವ ಎಡೆವದೇ ಕುಳಿತವ ಎಡೆವನೆ ? ಮೋಡದ ಘರ್ಷಣೆಯ ನಂತರವೇ ವರ್ಷದ ಧಾರೆ ಇಳಿವುದು ಭುವಿಗೆ... ಕಷ್ಟ ಕೋಟಲೆಯ ಮೆಟ್ಟಿ ನಿಂತರಷ್ಟೇ ಬೆಳಗುವದು ಬಾಳ ದೀವಿಗೆ......

ಅವಳು ಅವಳಲ್ಲವೆ – ಪ್ರದೀಪ್ ನಾಗರಾಜ್

ಬೆತ್ತಲಾಗಿ ತಬ್ಬಿ ಮಲಗಿದ್ದವಳ ದೃಷ್ಟಿ ಬರಿದಾದ ಕಿಸೆಯೆಡೆಗೆ ಹೋಯಿತು ಹೊತ್ತಾಯಿತೆಂದಳು ದೂರಸರಿದಳು ಎಷ್ಟಾದರೂ ಅವಳು ಅವಳಲ್ಲವೆ ಒಡಲ ತೆವಲಿಗೆ ಕಿಸೆಯ ಚಿಲ್ಲರೆ ಸಮವಾಯಿತೆ ಹೊರತು ಮನಸ್ಸಿನ ಭಾರವಾದ ಭಾವನೆಗಳಿಗಾಗದಾಯಿತು....

ನೀರವ ಮೌನ – ಪ್ರದೀಪ್ ನಾಗರಾಜ್

ಸ್ಮಶಾನದಲ್ಲೆನೊ ಆರ್ತನಾದ, ಯಾರೊ ದುಃಖಿಸುವಂತಿತು ಕೇಳಿಬರುತ್ತಿದ್ದ ಧ್ವನಿಯೊಡೆಗೆ ಹೆಜ್ಜೆಗಳನ್ನಿಡುತ್ತ ನಡೆದೆ... ಆ ನೀರವ ಮೌನಕ್ಕೆ ನನ್ನದೆ ಎದೆಬಡಿತ ನನ್ನನೆ ಬೆಚ್ಚಿಸುತಿತ್ತು ಆದರೂ ದೃತಿಗೆಡದೆ ನಡೆದೆ.... ನನ್ನದೆ ಹೊಲುವ ಆಕೃತಿ,ನನ್ನದೆ ಧ್ವನಿ ಗದ್ಗದಿತ ಧ್ವನಿಯಲ್ಲಿ ಕೇಳಿದೆ ಏ ಯಾರು ನೀನು? ದುಃಖಿಸುತ ಹೇಳಿತು "ನಾ ನೀ ಮರೆತಿರುವ ನಿನ್ನೊಳಗಿನ ಆತ್ಮ"

Top