You are here
Home > ಟ್ರಂಕ್ ಕಾಲ್

ಚೀನಾದ ಗೆಳೆಯನೊಂದಿಗೆ

ಕುವೈಟಿಗೆ ಬಂದು ಒಂದು ತಿಂಗಳಾಗಿದೆ. ಮೈಯಲ್ಲಿನ ರೋಮ ಉರಿದು ಹೋಗುವಷ್ಟು ಬಿಸಿಲು. ನನ್ನ ದೇಹವನ್ನು ಕುವೈಟಿನ ಉರಿ ಬಿಸಿಲಿಗೆ ಒಡ್ಡುವ ಮುನ್ನ, ಇಂತಹ ಒಂದು ಹವಾಮಾನವನ್ನು ನೋಡೆ ಇಲ್ಲ. ಉಷ್ಣಾಂಶ ೫೦ ಡಿಗ್ರಿ ದಾಟಿದೆ. ಎಲ್ಲಾ ಕಡೆ ಬೀಸುವುದು ಬಿಸಿ ಗಾಳಿಯೇ. AC ಇಲ್ಲದೆ ಅರ್ಧ ಗಂಟೆ ಕಳೆಯುವುದನ್ನು ಯೋಚಿಸಲು ಸಾಧ್ಯವಿಲ್ಲ, ಕಿಟಕಿ ಗಾಜುಗಳಲ್ಲಿ ಬಿಸಿಯೇ ಬಿಸಿ. ಇಂತಹ ಸ್ಥಿತಿಯಲ್ಲೂ ಹಸಿರನ್ನು ಉಳಿಸಿಕೊಳ್ಳಲು ಕುವೈಟ್ ಸರ್ಕಾರ ತೋರುತ್ತಿರುವ ಶ್ರಮ ಶ್ಲಾಗನೀಯ,

ನಿಲ್ಲದ ಪಯಣ

ಮತ್ತೆ ಕೆಲಸದ ಕರೆ ಬಂದಿದೆ. ಸಿಕ್ಕಿದೆಲ್ಲ ಹರಡಿ ಎಳದು ೩೦ ಕೆಜಿ ಆಗುವಷ್ಟು ಬಟ್ಟೆ , ತಿಂಡಿಗಳನ್ನು ತುಂಬಿದ ಬ್ಯಾಗ್ ಹಿಡಿದು ಈಗಷ್ಟೇ  ಕಣ್ಣು ತೆರದ ಬೆಂಗಳೂರಿನ ಮುಂಜಾನೆಯ ನಡುವೆ ನನ್ನ ಏಕಾಂತ ಪಯಣ ಆರಂಭವಾಗಿದೆ. ಮತ್ತದೇ ಏರ್ಪೋರ್ಟ್ ಅದೇ ಚೆಕಿಂಗ್ ಎಲ್ಲ ಮುಗಿಸಿ ಒಂದು ಕಡೆ ಕುಳಿತುಕೊಂಡೆ. ಏರ್ಪೋರ್ಟ್ ಒಂದು ತರಹದ ಭಾವನಾತ್ಮಕ ತಾಣ ಅಲ್ಲಿ ತನ್ನ ಜನ, ಊರು ಬಿಟ್ಟು ಹೋಗುವವರ ನೋವು ಒಂದೆಡೆಯಾದರೆ, ಅದೇ ಊರು,

San Francisco to ಸದಾಶಿವನಗರ – ಅಭಿಷೇಕ್ ಐಯಂಗಾರ್

source site ಬೆಂಗಳೂರು ಬೆಳೆದು ದೊಡ್ಡ ಗಾತ್ರದಲ್ಲಿ ನಮ್ಮ ದೇಶವನ್ನು ಅಕ್ರಮಸಿಕೊಂಡಿತು. ಮೈಸೂರ್ ಮಹಾರಾಜರು ಅಂದಿಗೆ ಕಟ್ಟಿದ ಬೆಂಗಳೂರು ಪ್ಯಾಲೇಸಿನ ಸುತ್ತ ಮುತ್ತ  ಇವತ್ತು ಸದಾಶಿವನಗರ ಎಂದು ಹೆಸರಿಡಲಾಗಿತ್ತು, ‘Real Estate’ ಎತ್ತರಕ್ಕೆ ಬೆಳೆದು ಯಾರಿಗೂ ಸಿಗದೇ ಗಾಜಿನಲ್ಲಿ ಇಟ್ಟ ಬೊಂಬೆಯಾಗಿತ್ತು. ಹಾಳಾಗ್ತಿದ್ದ  ಸ್ಯಾಂಕಿ ಟ್ಯಾಂಕನ್ನು ಹಲವಾರು ಸಂಸ್ಥೆಗಳು ಒಟ್ಟಿಗೆ ಸೇರಿ ಸರಕಾರದ ಜೊತೆ ಕೈ ಜೋಡಿಸಿ ಒಂದು ಸುಂದರವಾದ ಉಪವನವನ್ನಾಗಿ ಮಾಡಿದ್ದು ಒಂದು ದೊಡ್ಡ ರೆವಲ್ಯೂಷನ್!  ಸದಾಶಿವನಗರದ ೭ನೇ ಮೇನ್ ನಲ್ಲಿ ಬಲಕ್ಕೆ

ಒಡನಾಟ

ಕಣ್ಣೆದುರಿನ ಕಿಟಕಿಯಿಂದ ಒಂದೊಂದೇ ಹಡಗುಗಳು ತೀರಕ್ಕೆ ಬರುವುದನ್ನು ಸುಮಾರು ಹತ್ತು ನಿಮಿಷಗಳಿಂದ ನೋಡುತ್ತಾ ಕುಳಿತಿದ್ದೆ. ಕಿಟಕಿಯ ಹೊರಗಡೆ ಮರಳು ಮಿಶ್ರಿತ ಗಾಳಿ! ನನಗೂ ಇದು ಹೊಸತು. ಕುವೈಟ್ ಸಿಟಿಯಲ್ಲಿ ಕೂತು ಇಂದಿಗೆ ಸುಮಾರು ೨ ತಿಂಗಳು ಕಳೆದಿವೆ. ಕೆಲಸದ ಒತ್ತಡ ಇನ್ನೂ ಕಮ್ಮಿ ಆಗಿಲ್ಲ. "ಮಾಹಿ" ಎನ್ನುವ ಹೈದರಾಬಾದ್ ಹುಡುಗ ಹಬೆಯಾಡುವ ಕಾಫೀ ಕಪ್ ತಂದು ಮುಂದೆ ಇಟ್ಟು 'ಸರ್' ಎಂದ. ತಿರುಗಿ ಒಂದು ಪರಿಚಯದ ನಗು ಕೊಟ್ಟೆ. ಕಾಫೀಯ

ವಿಮೋಚನೆಯ ಇಪ್ಪತ್ತೈದರ ಸಂಭ್ರಮದಲ್ಲಿ ಕುವೈಟ್

source url ಭೂಗೋಳದ ಮಧ್ಯ ಭಾಗದಲ್ಲಿ ಕಣ್ಣು ಹಾಯಿಸಿದರೆ, ಹಸಿರೇ ಕಾಣದ ಪ್ರದೇಶಗಳಿಗೆ "Middle East” ದೇಶಗಳು ಎಂದು ಕರೆಯಬಹುದು. ನಾನು ಇಂದು ಈ ಅಂಕಣವನ್ನು ಬರೆಯುತ್ತಿರುವುದು ಅಲ್ಲೇ ಕೂತು, ಕುವೈಟ್ ದೇಶದಲ್ಲಿ ಕಚೇರಿಯ ಕೆಲಸದ ನಿಮ್ಮಿತ್ತ, ಮೂರು ತಿಂಗಳ ಸಮಯ ಇಲ್ಲೆ ಕಳೆಯುವ ಯೋಜನೆಯಿದೆ. ಅಂದ ಹಾಗೆ ಫೆಬ್ರವರಿ 25 ಹಾಗೂ 26 ಕುವೈಟಿಯನ್ನರಿಗೆ ಸಂಭ್ರಮದ ದಿನಗಳು. 25ರಂದು ನ್ಯಾಷನಲ್ ಡೇ ಆದರೆ 26ರಂದು ಲಿಬರೇಶನ್ ಡೇ. ಕುವೈಟ್ ದೇಶದ ಬಗ್ಗೆ

ಹ್ಯಾಪಿ ಹಾಲಿಡೇ

go to site ಡಿಸೆಂಬರ್ ಬಂತೆಂದರೆ ಅಮೇರಿಕ ಯಾಕೆ, ಜಗತ್ತಿನ ಅನೇಕ ಬಾಗಗಳಲ್ಲಿ ಎಲ್ಲ ಯಂತ್ರಗಳ ಚಾಲನೆಯು ನಿಲ್ಲುತ್ತದೆ. ಅಮೆರಿಕದಲ್ಲಂತು ಡಿಸೆಂಬರ್ ೧೫ ರ ಬಳಿಕ ಏನೂ ಚಲಾವಣೆ ಇರುವುದಿಲ್ಲ ಎಲ್ಲರೂ ತಮ್ಮ ಫ್ಯಾಮಿಲೀ ಗಳ ಜೊತೆ "ಹಾಲಿಡೇ" ಗೆ ರೆಡಿ ಆಗುತ್ತಾರೆ. ಶಾಪಿಂಗ್, ಟ್ರಾವೆಲ್ ಎಲ್ಲ ಸಖತ್ತಾಗಿ ಪ್ಲಾನ್ ಮಾಡುತ್ತಾ ವರ್ಷದಲ್ಲಿ ಗಳಿಸಿರುವ ಹಣ, ರಜೆ ಎಲ್ಲವನ್ನೂ ಖರ್ಚು ಮಾಡುತ್ತಾರೆ, ನ್ಯೂಯಿಯರ್ ನತ್ತ ಹೊಸ ಹುರುಪಿನೊಂದಿಗೆ ಮುನ್ನುಗ್ಗುತ್ತಾರೆ. ಹೊಸ ವರ್ಷವನ್ನು ಅತ್ಯದ್ಭುತವಾಗಿ ಆಚರಿಸಿ,

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಎನ್ನುವ ದೈತ್ಯಾಕಾರದ "ಬಿಸ್ನೆಸ್ ಮ್ಯಾನ್", ವಿಶ್ವದ ಅತ್ಯಂತ ಬುದ್ದಿಶಾಲಿ ದೇಶದ ಅಧ್ಯಕ್ಷನಾಗಿ ಎಲೆಕ್ಟ್ ಆಗಿ ಒಂದು ತಿಂಗಳಾದ್ರೂ ಇದೊಂದು ಇನ್ನೂ ಬಿಸಿ ಬಿಸಿ ಸುದ್ದಿ. ಪ್ರಥಮ ದಿನದಿಂದಲೇ ಅಧ್ಯಕ್ಷ ಆಭ್ಯರ್ಥಿ ಏನೇನು ಮಾಡಬಾರದೋ ಅದನ್ನೇ ಮಾಡಿ ಆದರೂ ಗೆದ್ದ ಬಲಿಷ್ಟ ಶಕ್ತಿ. ಅತ್ಯಂತ ರಂಗಿನ ಬದುಕು ನಡೆಸಿ, ವಿಜಯ ಮಲ್ಯನಿಗಿಂತ ಹತ್ತು ಪಟ್ಟು ಆಶಾರಾಮಿ ಜೀವನ ನಡೆಸಿದ ಈ ವ್ಯಕ್ತಿ ಗೆಲ್ಲುತ್ತಾನೆಂದು ಒಬ್ಬ ಅನಿವಾಸಿ ಭಾರತೀಯನೂ ಊಹಿಸಿರಲಿಲ್ಲ. ಹಿಲರೀ! ಎನ್ನುವ ಪಳಗಿದ

ದ್ವಂದ್ವ

"ದೂರದ ಬೆಟ್ಟ ನುಣ್ಣಗೆ" ಅನ್ನುವ ಗಾದೆ ಮಾತಿನಂತೆ, ನಮ್ಮಂತಹ ಅನೇಕರು ಹಲವಾರು ಆಸೆ, ಕನಸು, ಏನೂ ಸಾಧಿಸುವ ಛಲದೊಂದಿಗೆ ವಿದೇಶದಲ್ಲಿ ಉದ್ಯೋಗಾವಕಾಶಕ್ಕೆ ಎದುರು ನೋಡುತಿರುತ್ತೇವೆ. ಗೆಳೆಯರ  ಫೇಸ್ಬುಕ್ ಪೋಸ್ಟ್ ಗಳು, ವಿಧವಿಧದ  ಶೋ ಆಫ್ ಪ್ರೊಫೈಲ್ ಫೋಟೋಸ್, ಟ್ವಿಟ್ಟರ್ನ  140 ಅಕ್ಷರಗಳಲ್ಲಿ ಹೊಗಳುವ ತೆಗಳುವ ವಿದೇಶ ಸುದ್ದಿ ಸಮಾಚಾರಗಳು ಎಲ್ಲರನ್ನೂ ಒಂದು ತರಹ ಆಕರ್ಷಿಸುತ್ತದೆ. ನಮ್ಮಲ್ಲಿ ಕೆಲವರಿಗೆ ಹೇಗೋ ಅವಕಾಶ ಒಂದು ಸಿಗುತ್ತದೆ, ಮಿಶ್ರ ಮನಸ್ಸಿನ ತಲ್ಲಣಗಳನ್ನು ಬೆಂಗಳೂರಿನ ವಿಮಾನನಿಲ್ದಾಣದಲ್ಲಿ ಕಟ್ಟಿ ಹಾಕಿ.

Top