You are here
Home > ವಕ್ರ ಕೋನ

ಮಾಧ್ಯಮಗಳಿಗೆ ಕೆಲವೊಂದಿಷ್ಟು ಉಚಿತ ಸಲಹೆಗಳು – ಸುಧಿ ಆಚಾರ್ಯ

ಮಾಧ್ಯಮವನ್ನು ಅಲಿಖಿತವಾಗಿ ಸಂವಿಧಾನದ ನಾಲ್ಕನೆಯ ಅಂಗವಾಗಿ ಕರೆಯಲ್ಪಡುತ್ತದೆ. ಈ ಕಾರಣವೇ ತಿಳಿಯುವುದು ಜನ ಸಾಮಾನ್ಯರು ಮಾಧ್ಯಮಗಳನ್ನು ನಂಬುವ ಬಗೆ. ಇಂತಿಪ್ಪ ಮಾಧ್ಯಮಗಳು ತಮ್ಮ ಮೇಲಿಟ್ಟ ನಂಬುಗೆಗೆ ಅರ್ಹವೇ? ಯೋಚಿಸಬೇಕಾದ ವಿಚಾರ. ಅಂದಾಗೆ ಯೋಚಿಸ ಬೇಕಾದವರು ನಾವಲ್ಲ, ಸ್ವತಃ ಮಾಧ್ಯಮದವರು. ಕಾರಣ ನಮಗೆ ಆಯ್ಕೆ ಸ್ವಾತಂತ್ರ್ಯ ಇದೆ ಬದಲಾಯಿಸಲು, ಕೊನೆ ಪಕ್ಷ ಚಾನೆಲ್ನಾದರು. ಯಾವಾಗ ಎಲೆಕ್ಟ್ರಾನಿಕ್ ಮಿಡಿಯಾ( ಸುದ್ದಿ ವಾಹಿನಿಗಳು) TRP ಯ ಹಿಂದೆ ಬೀಳಲು ಶುರು ಮಾಡಿದವೋ ಇವುಗಳ ಹೊಣೆಗೇಡಿತನ ಬಟಾಬಯಲಾಗತೊಡಗಿತು.

ಪ್ರೀತಿ ಗೀತಿ ಇತ್ಯಾದಿ! -ಭರತ್

ಪ್ರೀತಿ, ನಂಬಿಕೆ, ವಿಶ್ವಾಸ. ಈ ಶಬ್ಧಗಳೇನೋ ಚಿಕ್ಕವು. ಆದರೆ ಅವುಗಳ ಭಾವ ಈ ಭೂಮಿಯಷ್ಟು ಹಿರಿದು. ಕೆಲವೊಮ್ಮೆ ಒಂದು ಪ್ರೀತಿಗೋಸ್ಕರ, ಒಬ್ಬರ ವಿಶ್ವಾಸ ಉಳಿಸಿಕೊಳ್ಳಲು, ಒಬ್ಬರಿಗೆ ನಂಬಿಕೆ ದ್ರೋಹ ಮಾಡದೆ ಇರಲು ಹೋಗಿ ಇನ್ನೊಂದನ್ನು ಕಳೆದು ಕೊಳ್ಳುವೆವೋ ಏನೋ. ಕಳೆದು ಕೊಂಡಾಗಿನ ನೋವು ಬಹುಷಃ ಎಲ್ಲದಕ್ಕಿಂತನು ಕಹಿ. ಅದ್ಯಾಕೋ ಗೊತ್ತಿಲ್ಲ ಆ ಒಂದು ಘಟನೆ ಅದೆಷ್ಟು ಮರಿಬೇಕಂದ್ರು ಕಣ್ಣ ಮುಂದೆ ಬರುತ್ತದೆ. ಒಂದು ಹೆಣ್ಣು, ಆರ್ಥಿಕವಾಗಿ ಒಳ್ಳೆಯ ಮನೆ ಇಂದ ಬಂದವರು,

ನಾವೆಷ್ಟು ಬಾರಿ ಅವರಾಗಿದ್ದೇವೆ – ಪಾರ್ವತೀಸುತ

ನಿಮಗೆ ಅವರು ಗೊತ್ತಾ? ಅಂತವರು ಖಂಡಿತ ನಿಮ್ಮ ಆಚೆ ಈಚೆ ಇರುವವರೇ. ಖಂಡಿತ ನಮ್ಮ ನಿಮ್ಮಂತೇ ಮನುಷ್ಯರು. ನಮ್ಮ ಹಾಗೇ ಅವರು ಕೂಡ ಪ್ರತಿದಿನ ಅಜಮಾಸು 146 ಗ್ರಾಂ ಅಕ್ಕಿಯನ್ನ ಸೇವಿಸುವವರೇ. ನಮ್ಮ ನಿಮ್ಮ ಹಾಗೆ ರಾಜಕಾರಣಿಗಳ ಬಗ್ಗೆ ತಮ್ಮ ರೋಷವನ್ನ ವ್ಯಕ್ತಪಡಿಸುವವರೇ. ನಮ್ಮ ನಡುವೇ ಇರುವವರೇ! ಆದರೆ ಕೊಂಚಮಟ್ಟಿಗೆ ವಿಭಿನ್ನವಾಗಿರುವವರು! ಕಾಲೆಳೆಯುವ ಕೆಟ್ಟ ಗುಣದವರು! ಅದ್ಯಾಕೋ ಗೊತ್ತಿಲ್ಲ. ಬಯಲಿನ ಮಾವಿನಮರದ ಹಣ್ಣು ಅವರಿಗೆ ಸಿಗದಿದ್ದರೂ ಚಿಂತೆಯಿಲ್ಲ, ನಿಮಗೆ ಸಿಕ್ಕಿತೋ, ಅವರಿಗೆ ಧಿಮಿ_ಧಿಮಿ ಶುರು.

ಇರುವುದೆಲ್ಲವ ಬಿಡದೇ – (ಒಂದು ಮೊಟ್ಟೆಯ ಕಥೆ ವಿಮರ್ಶೆ)

ಭಗವಂತ ಜಗತ್ತನ್ನು ಸೃಷ್ಟಿಸಿದಾಗ ಸೌಂದರ್ಯಕ್ಕೆ ಯಾವ ವ್ಯಾಖ್ಯೆಯನ್ನೂ ನೀಡಿರಲಿಲ್ಲ. ಯಾವುದನ್ನು ನಾವು ಸುಂದರ ವಸ್ತು/ವ್ಯಕ್ತಿ ಎಂದು ಕರೆಯಬೇಕು, ಯಾವುದನ್ನು ಕರೆಯಬಾರದು ಎಂದೆಲ್ಲ ಮಾನವನೇ ನಿರ್ಧರಿಸಿದ‌. ಪುರುಷನಿಗೆ ಹೆಣ್ಣು ಸುಂದರವಾಗಿ ಕಾಣುತ್ತಾಳೆ. ಹಾಗಾಗಿ ಆಕೆಯಂತಿರುವವರೆಲ್ಲ ಸುಂದರ ವ್ಯಕ್ತಿಗಳು ಎಂದು ನಿರ್ಧರಿಸಿದ. ಹಾಗಾಗಿ ಬಹುಷಃ ಭಗವಂತನಿಗೆ ರೂಪ ಕೊಟ್ಟ ಚಿತ್ರ ಕಲಾವಿದರು ಅನೇಕ ದೇವರುಗಳಿಗೆ ಮೀಸೆ, ಗಡ್ಡ ಬಿಡಿಸಲಿಲ್ಲ. ಏಕೆಂದರೆ ಅವರು ಸೌಂದರ್ಯವನ್ನು ಅಳೆಯುವಾಗ ಹೆಣ್ಣನ್ನು ಮನದಲ್ಲಿಟ್ಟುಕೊಂಡೇ ಅಳೆದದ್ದು. ಹೆಣ್ಣಿಗೆಂದೂ ಮೀಸೆ ಗಡ್ಡ

ವಾಮಣೇಯ ಮಹಾತ್ಮೆ

ಚಿಗರೆಕಟ್ಟೆಯ ವಾಮಣೇಯ ಎ೦ದರೆ ಇಡೀ ಊರಿಗೆ ವರ್ಲ್ಡ್ ಫೇಮಸ್. ಅವರ ನಿಜ ನಾಮಧೇಯ ವಾಮನ. ಆದರೆ ದೇವನೊಬ್ಬ ನಾಮ ಹಲವು ಎನ್ನುವ೦ತೆ ಅವರನ್ನು ವಿವಿಧ ಜನರು ಅವರವರ ತಿಳುವಳಿಕೆಗೆ ಮತ್ತು ಅನುಕೂಲಕ್ಕೆ ತಕ್ಕ೦ತೆ ಅವರನ್ನು ಕರೆಯುತ್ತಾರೆ. ಒಡೆಯರ ಮನೆತನದವರಾಗಿದ್ದುದರಿ೦ದ ಸುತ್ತ ಮುತ್ತಲಿನ ಒಕ್ಕಲಿಗರು ಅವರ ಹೆಸರಿನ ಮು೦ದೆ ಅಯ್ಯ ಅ೦ದು ಸೇರಿಸಿದಾಗ ಬರುವ ಪದ ವಾಮನ್ನಯ್ಯ ಎ೦ದಾಗಬೇಕಿತ್ತು. ಆದರೆ ಅಯ್ಯ ಎನ್ನುವ ಒತ್ತಕ್ಷರ ಉಚ್ಚರಿಸಲು ಕಷ್ಟವಾದುದರಿ೦ದಲೋ ಅಥವಾ ಉದಾಸೀನವಾದುದರಿ೦ದಲೂ ವಾಮನ್ನಯ್ಯ

ಪರೀಕ್ಷೆ ಮತ್ತು ನಕಲು

ಪರೀಕ್ಷೆಯಲ್ಲಿ ನಕಲು ಮಾಡಿ ಮೊದಲ ಬಾರಿ ಸಿಕ್ಕಿ ಹಾಕಿಕೊ೦ಡಾಗ ನಾನು ನಾಲ್ಕನೆಯ ತರಗತಿಯ ವಿದ್ಯಾರ್ಥಿ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿರುವುದನ್ನು ಕ೦ಡು ಗಾಬರಿಯಾಗಬೇಡಿ. ಮೂರನೇ ತರಗತಿಯಲ್ಲಿರುವಾಗಲೇ ನಾನು ಒ೦ದು ವಾರ ಸಸ್ಪೆ೦ಡ್ ಆಗಿದ್ದೆ ಎ೦ದು ತಿಳಿದರೆ ನಿಮಗೆ ಇನ್ನೂ ಗಾಬರಿಯಾದೀತು. ಅದರ ಬಗ್ಗೆ ಇನ್ನೆ೦ದಾದರೂ ಬರೆದೇನು. ನಾನು ನಕಲು ಮಾಡಿ ಸಿಕ್ಕಿ ಹಾಕಿಕೊ೦ಡದ್ದು ಕಿರು ಪರೀಕ್ಷೆ ನಡೆಯುತ್ತಿರುವ ಸ೦ದರ್ಭದಲ್ಲಿ ಅಲ್ಲ. ಅದರ ಉತ್ತರ ಪತ್ರಿಕೆಯನ್ನು ನಮ್ಮ ಮೇಡಮ್

ಡಾಟ್ ಕಾಮ್-2

ಡಿಗ್ರಿ ಆದ ಮೇಲೆ ಮದುವೆ ಮಾಡ್ತೇವೆ ಅಂತ, ಒಂದು ವರ್ಷ ಕೆಲಸಕ್ಕೆ ಹೋಗಿ ಮದುವೆ ತಪ್ಪಿಸಿಕೊಂಡೆ. ಆಮೇಲಾದ್ರೂ ಮದುವೆ ಮಾಡೋಣ ಅಂದ್ರೆ, ಇನ್ನೆರಡು ವರ್ಷ ತಪ್ಪಿ‌ಸಿಕೋಳ್ಳೋಕೆ ಪೋಸ್ಟ್ ಗ್ರಾಜುಯೇಶನ್ ಮಾಡ್ಕೊಂಡೆ. ಹತ್ತಿರದಲ್ಲಿದ್ರೆ ಮದುವೆಗೆ ಬಲವಂತ ಮಾಡ್ತೀವಿ ಅಂತ ಮೈಸೂರಿಗೆ ಕೆಲಸ ಅಂತ ಹೋದೋಳು ನೀನೇ. ಈಗ ಅಳುಮುಂಜಿ ತರ  ಮಾಡಿದ್ರೆ ನಾನೇನು ಮಾಡಲಿ, ಅಂತ ಅಮ್ಮ ಆ ಕಡೆಯಿಂದ ಪುಟ್ಟ ಭಾಷಣ ಬಿಗಿದರು. ಅಮ್ಮ ಹೇಳೋದು ಸರಿನೇ. ಮದುವೆ ತಪ್ಪಿಸಿಕೊಳ್ಳೋಕೆ ಓದು,

ಮರ್ಮ- ದೂಡ್ಡವರ ಸಣ್ಣ ತಪ್ಪುಗಳು

ಸಾವಿತ್ರಿ ಒಂದು ಬಡ ಕುಂಟುಬದಿಂದ ಬಂದ ಹುಡುಗಿ .ಇಂದು ಯಾರೂಂದಿಗೂ ಹಸೆ ಹಂಚಿ ಮಲಗಿದ್ದಾಳೆ .ನೂಡಲಿಕ್ಕೆ ಅಷ್ಟೊಂದು ಸ್ಪುರದ್ರುಪಿ ಅಲ್ಲದಿದ್ದರೂ ಮೈ ಕೈ ತುಂಬಿ ಕೂಂಡಿದ್ದಳು.ಹೀಗೆ ಅವಳ ಗೆಳತಿ ರಮ್ಯಾ ಸಮಾಜ ಸೇವಕಿ ಯಾರಿಂದಲೂ ಅವಳಿಗೆ ಸುದ್ದಿ ಬಂತು,ಅವಳ ಗೆಳತಿ ಸಾವಿತ್ರಿ ವ್ಯೆಶೆ ಎಂದು.ನಂಬಲಿಕ್ಕಾದೆ ದೂರು ಮುಟ್ಟಿಸಿದವರನ್ನ ತರಾಟೆಗೆ ತಕೂಂಡಳು.ಆದರೂ ತನ್ನ ಗೆಳತಿ ಹೀಗಾದಾಳ ಎಂದು ಯೋಚಿಸಿ ಪರೀಕ್ಷಿಸಲು ತನ್ನ ಸಮಾಜ ಸೇವಕ ವ್ರಂದದೂಂದಿಗೆ ಹೋದಳು. ಎಷ್ಟು ಒಗಟ್ಟು ಅಂತಿರಾ ಆ

ಡಾಟ್ ಕಾಮ್ ?

ಆಫೀಸಿಗೆ ಹೋಗಿ ಕೂತವನೇ ನನ್ನ ಮೇಲ್ ಚೆಕ್ ಮಾಡಿದೆ. ಕಲ್ಯಾಣ ಡಾಟ್ ಕಾಮ್ ನಿಂದ ಎಂದಿನಂತೆ ಇವತ್ತೂ ಒಂದು ಪ್ರೇಮ ಪತ್ರ ಬಂದಿತ್ತು.  ನಾನು ರಿಕ್ವೆಸ್ಟ್ ಕಳಿಸಿದ ನಾಲಕ್ಕೂ ಹುಡುಗಿಯರ ನಿರಾಕರಣೆಯ ನೋಟಿಫಿಕೇಶನ್! ಕಳಿಸಿದ ನಾಲಕ್ಕು ರಿಕ್ವೆಸ್ಟ್ ಗಳಲ್ಲಿ ಮೂರು ತಪ್ಪಿ ಹೋದದ್ದು. ಆದರೂ ನಿರಾಕರಣೆಯ ಅವಮಾನವನ್ನು ಸಹಿಸಲೇಬೇಕು ತಾನೆ? ನಾನಿನ್ನೂ ಮಾಟ್ರಿಮೋನಿಯಲ್ ಸೈಟ್ ನಲ್ಲೇ ಇರುವುದನ್ನು ನನ್ನ ಹಿಂದೆ ನಿಂತಿದ್ದ ಮ್ಯಾನೇಜರ್  ಗಮನಿಸಿದರು. ಅವರು ನೋಡುತ್ತಿದ್ದಂತೆ ಆ ಪೇಜ್ ಕ್ಲೋಸ್

ಗಾಂಧಿನಗರಕ್ಕೆ ಕರಾವಳಿಯ ಪ್ರತಿಭೆಗಳು

ಸಾಮಾನ್ಯವಾಗಿ ನಾವ್ಯಾರೂ ಜಾತಿ, ಧರ್ಮ, ಪ್ರಾಂತ್ಯ, ಭಾಷೆ ನೋಡಿ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ನಮ್ಮ ಗುಣಸ್ವಭಾವದೊಂದಿಗೆ connect ಆಗುವ ಯಾವುದೇ ವ್ಯಕ್ತಿಗಳೊಂದಿಗೆ ನಾವು ಆತ್ಮೀಯ ಸಂಬಂಧವನ್ನು ಹೊಂದುತ್ತೇವೆ.ಆದರೂ ನಮ್ಮ ಭಾಷೆ, ಸಂಸ್ಕೃತಿಗಳ ಮೇಲೆ ನಮಗಿರುವ ಮೋಹ ಒಂದಿನಿತೂ ಕಡಿಮೆಯಾಗದು. ವಿದೇಶಕ್ಕೆ ಹೋದರೆ ದೇಶೀಯ ಭಾಷೆ ಮಾತನಾಡುವ ಯಾವನೇ ವ್ಯಕ್ತಿ ಸಿಕ್ಕರೂ ಸಂಭ್ರಮಪಡುತ್ತೇವೆ. ಅದೇ ರೀತಿ ಪರರಾಜ್ಯಕ್ಕೆ ಹೋದರೆ ರಾಜ್ಯ ಭಾಷೆ, ಬೆಂಗಳೂರಿಗೆ ಹೋದರೆ ನಮ್ಮ ಜಿಲ್ಲೆಯ ಊರಿನ ಜನರು ಮಾತನಾಡಲು

Top