You are here
Home > ಚಿತ್ರ ಪುಟ > ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ” – ಮೇಘಶ್ಯಾಮ್ ಹೆಬ್ಬಾರ್

ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ” – ಮೇಘಶ್ಯಾಮ್ ಹೆಬ್ಬಾರ್

Useful Phrases For Master Thesis ” ಕುರುರಾಯ ಇದನೆಲ್ಲಾ ಕಂಡೂ” ಅಂತ ಧಾರೇಶ್ವರರು ಪದ್ಯ ಎತ್ತುಗಡೆ ಮಾಡಿದ ಎರಡೇ ಕ್ಷಣದಲ್ಲಿ ಮೈಯಲ್ಲಿ ವಿದ್ಯುತ್ ಸಂಚಾರ… ಚಿಟ್ಟಾಣಿ ಅಜ್ಜ ” ಛಲದಂಕ ಚಕ್ರೇಶ್ವರನಾಗಿ ರಂಗಕ್ಕೆ ಪ್ರವೇಶ ಮಾಡಿದ ರೀತಿ ಇದೆಯಲ್ಲ? ವ್ಹಾ ! ನ ಭೂತೋ ನಾ ಭವಿಷ್ಯತಿ… ಈ ಆಟವನ್ನ ನಾನು ಚಿಕ್ಕವನಿರುವಾಗ ಕುಮಟಾದ ಮಣಕಿ ಮೈದಾನದಲ್ಲಿ ಪೆರ್ಡೂರು ಮೇಳದವರಿಂದ ಆಗ ಪ್ರದರ್ಶಿಸುತ್ತಿದ್ದಾಗ ನೋಡಿದ್ದು. ಒಂದಂತೂ ಅಕ್ಷರಷಃ ಸತ್ಯ. ಬೇರೆ ಯಾವುದೇ ಕಲಾವಿದ ಎಷ್ಟೇ ಕುಣಿದು ಹುಡಿಹಾರಿಸಿ ಪ್ರದರ್ಶನ ಚಂದಗಾಣಿಸಿದರೂ ಅದು ಚಿಟ್ಟಾಣಿಯವರ ಪ್ರವೇಷಕ್ಕೆ ಸರಿಸಮವಾಗಲಾರದು.. ಕುಣಿತ, ಅಭಿನಯ ಮತ್ತೆ.. ಚಿಟ್ಟಾಣಿ ಅಂದರೆ ಏನು, ಎಷ್ಟು ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ..
ಮೇಲಿನದು ಕಣ್ಣಾರೆ ಕಂಡಿದ್ದು..ಇದು ಕೇಳಿದ್ದು.೭೦ ರ ದಶಕ ಇರಬೇಕು..ಚಿಟ್ಟಾಣಿಯವರು ಆಗಷ್ಟೇ ಕೆರಮನೆ ಮೇಳಕ್ಕೆ ಬರುವುದಿಲ್ಲವೆಂದು ಹೇಳಿದ ವರ್ಷ ಇರಬೇಕು..ಹೆಚ್ಚಿನವರಿಗೆ ಇದು ಪಥ್ಯವಾಗಿರಲಿಲ್ಲ.ಕವಲಕ್ಕಿಯಲ್ಲಿ ಆಟ ಅಮ್ರತೇಷ್ವರಿ ಮೇಳ ಚಿಟ್ಟಾಣಿಯವರದ್ದು..ಆಟ ಆಡಿಸಲಿಕ್ಕೆ ಬಿಡುವುದಿಲ್ಲ ಎಂದು ವಿರೋಧಿ ಬಣದ ಪಟ್ಟು.ಆಟದ ದಿನದ ಬೆಳಗ್ಗೆ ವರೆಗೂ ,ಆಟ ಆಗುತ್ತದೋ ಬಿಡುತ್ತದೋ ಎಂಬುದಕ್ಕೆ ಖಾತ್ರಿ ಇಲ್ಲ.ಇನ್ನು ಕೊನೆ ಕ್ಷಣದಲ್ಲಿ ನಡೆದರೂ ಜನ ಹೇಗೆ ಆಗಿಯಾರು ಎನ್ನುವ ಆತಂಕ.ಜೊತೆಗೆ ಪ್ರತಿಷ್ಟೆಯ ಪ್ರಶ್ನೆ.ಚಿಟ್ಟಾಣಿಯ ಪರಮಾಪ್ತ ಇಬ್ಬರು ಮಿತ್ರರಲ್ಲಿ ಒಬ್ಬ ನನ್ನಜ್ಜ ಹೆಬ್ಬಾನುಕಾನು ನಾರಾಯಣ ಹೆಗಡೆ.ಇನ್ನೊಬ್ಬರು ಮಾಗೋಡು ರಾಮ ಹೆಗಡೆಯವರು.ಚಿಟ್ಟಾಣಿ ಏನೇ ಮಾಡಿದರೂ ನನ್ನಜ್ಜನ ಮಾತನ್ನ ಮೀರುವವರಲ್ಲ..ಮೇಳದ ಹಂದೆಯವರೂ ಕೂಡ ಚಿಟ್ಟಾಣಿ ಯವರು ಅವರ ಮಾತನ್ನ ಕೇಳದೇ ಇದ್ದಾಗ ನಮ್ಮಜ್ಜನ ಹತ್ತಿರವೇ ಬರುತ್ತಿದ್ದರು.ಅದೇ ಸಮಯದಲ್ಲಿ ಆಟದ ದಿನ ಮಹಾ ಬುದ್ದಿವಂತರಾದ ರಾಮ ಹೆಗಡೆಯವರು ಬೆಳಗ್ಗೆಯೇ ವಕೀಲರಾದ ಜಾಲಿಸತ್ಗಿ ಯವರ ಮನೆಯಲ್ಲಿಯೇ ಮೊಕ್ಕಾಂ ಹೂಡಿ ” ಸ್ಟೇ ” ಆರ್ಡರ್ ತಂದೇ ಬಿಟ್ಟರು..ಜಾಲಿಸತ್ಗಿಯವರು ಯಕ್ಷಗಾನ ನೆಲೆಸಿದಂತ ಊರಿನವರಲ್ಲದಿದ್ದರೂ ಹೊನ್ನಾವರಕ್ಕೆ ಬಂದ ನಂತರ ಚಿಟ್ಟಾಣಿಯವರ ಮಹಾ ಅಭಿಮಾನಿಯಾಗಿದ್ದರು.ಅವರು ಯಕ್ಷಗಾನದ ಅಭಿಮಾನಿಯಾಗಲೂ ಚಿಟ್ಟಾಣಿಯೇ ಕಾರಣವಾದ್ದರಿಂದಲೂ ಕೆಲಸ ಬೇಗನೆ ಮುಗಿಯಿತು.ಈ ವಾರ್ತೆ ಈಗಿನ ವಾಟ್ಸಪ್ ,ಫೇಸ್ಬಿಕ್ಕಿಂತ ಜೋರಾಗಿ ಹರಡಿತೇನೋ ಗೊತ್ತಿಲ್ಲ ರಾತ್ರಿ ಆಟಕ್ಕೆ ಜನವೋ ಜನ.ಶುರುವಾದ ೧೫ ನಿಮಿಷಕ್ಕೆ ಗೇಟ್ ಓಪನ್..ಆ ದಿನ ಚಿಟ್ಟಾಣಿಯವರ ವಿಷೇಷ ಆಕರ್ಷಣೆಯಾಗಿ ಎರಡು ವೇಷ.ಒಂದು ಅತ್ಯದ್ಬುತ ಪ್ರದರ್ಶನಕ್ಕೆ ಕವಲಕ್ಕಿ ಸಾಕ್ಷಿಯಾಯಿತು.
ನಾನು ಪುತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯ.ಹೇಳಿಕೇಳಿ ಪುತ್ತೂರು ತೆಂಕು ತಿಟ್ಟಿನ ಕ್ಷೇತ್ರ.ತೆಂಕಿನ ಯಕ್ಷಗಾನಕ್ಕೆ ಅತಿರಥ ಮಹಾರಥರನ್ನ ನೀಡಿದಂತ ಕ್ಷೇತ್ರ.ಅಲ್ಲಿನ ಹರಿಪ್ರಸಾದ ಹೋಟಲ್ಲಿಗೆ ಬೆಳಗ್ಗಿನ ಉಪಹಾರ ಸೇವಿಸಲು ಹೋದಾಗ ನನಗೆ ಆಶ್ಚರ್ಯ.ಅಲ್ಲಿ ಗೋಡೆಯ ಮೇಲೆ ಚಿಟ್ಟಾಣಿಯವರ ಕಿರೀಟದ ವೇಷದ ಚಿತ್ರ ರಾರಾಜಿಸುತ್ತಿತ್ತು.ತೆಂಕಿನ ಕಲಾವಿದರ ಬಿಟ್ಟು ಬಡಗಿನ ಕಲಾವಿದರ ಚಿತ್ರವಿದೆಯಲ್ಲ ಅಂತ ಅವರಲ್ಲಿ ವಿಚಾರಿಸಿದೆ.ಆಗ ಅವರಾಡಿದ ಮಾತು.” ಪುತ್ತೂರು ಜಾತ್ರೆಯ ಸಮಯದಲ್ಲಿ ಒಂದು ವಾರ ಪೂರ್ತಿ ಎರಡು ಮೂರು ಡೇರೆ ಮೇಳ ಮೊಕ್ಕಾಂ ಹೂಡುತ್ತಿದ್ದವು.ಅದರಲ್ಲಿ ಒಂದು ಬಡಗಿನ ಸಾಲಿಗ್ರಾಮ ಮೇಳ.ಮೊದಲೆಲ್ಲಾ ನಾವು ತೆಂಕಿನ ಆಟವನ್ನೇ ಆಸ್ವಾದಿಸುತ್ತಿದ್ದೆವು.ಆದರೂ ಬೆಳಗಿನ ಜಾವಕ್ಕೆ ಬಡಗಿನ ಆಟ ನೋಡಲು ಹೋಗಿ ಭಸ್ಮಾಸುರನ ಪಾತ್ರ ಮಾಡಿದ ಕಲಾವಿದನ ನ್ರತ್ಯ ಶಲಿಗೆ ಪೂರ್ತಿ ಮರುಳಾದ್ವಿ.ಪದ್ಯ ಹೇಳಿದ ಭಾಗವತರ ಅಭಿಮಾನಿಯೂ ಆದ್ವಿ” ಅಂತ.ಪದ್ಯ ಹೇಳಿದ್ದು ಮತ್ಯಾರು ಅಲ್ಲ ನಮ್ಮ ಕಂಚಿನ ಕಂಠದ ದಿ.ಕಾಳಿಂಗ ನಾವುಡರು.ಇದು ಎಲ್ಲಿಯವರೆ ಬಂದು ಮುಟ್ಟಿತು ಕೇಳಿದರೆ ನಾವುಡರು ಚಿಟ್ಟಾಣಿ ಇರುವ ಸಾಲಿಗ್ರಾಮ ಮೇಳದ ಟೆಂಟ್ ತೆಂಕಿನ ಎಲ್ಲಾ ಡೇರೆ ಮೇಳಕ್ಕಿಂತ ಬೇಗ ಭರ್ತಿ ಆಗುತ್ತಲಿತ್ತು.

source url ಚಿಟ್ಟಾಣಿಯವರಿಗೆ ಉತ್ತರದ ತುದಿ ಇಂದ ದಕ್ಷಿಣದ ತುದಿಯವರೆಗೆ ಅಭಿಮಾನಿಗಳಾದರು.ಇಂತ ಅಭಿಮಾನಿ ಬಳಗವನ್ನ ಪ್ರಾಯಶಹ ಯಕ್ಷಗಾನದಲ್ಲಿ ಇಬ್ಬರೇ ಪಡೆದಿರಬೇಕು ಒಬ್ಬರು ನಾವುಡರು.ಇನ್ನೊಬ್ಬರು ನಮ್ಮ ಚಿಟ್ಡಾಣಿ ಅಜ್ಜ.ನಾನು ಶಿರೂರಿನಲ್ಲಿ ಇರಬೇಕಾದರೆ ಒಬ್ಬರು ಅಭಿಮಾನಿಗಳಿದ್ದರು.ಅವರ ಉದ್ಯಮ ,ನೆಲೆನಿಂತಿರುವುದೆಲ್ಲಾ ಬಾಂಬೆ.ಆದರೂ ಅವರಿಗೆ ಚಿಟ್ಟಾಣಿಯವರ ಮೇಲೆ ಪರಮ ಅಭಿಮಾನ.ಅಭಿಮಾನ ಎಲ್ಲಿವರೆಗೆ ಕೇಳಿದರೆ, ಕೇವಲ ಚಿಟ್ಟಾಣಿಯವರಿಗಾಗಿಯೇ ಇಡೀ ರಾತ್ರಿಯ ಯಕ್ಷಗಾನ ಇಡುತ್ತಿದ್ದರು.ಚಿಟ್ಟಾಣಿಯವರ ಸಮಯ ಸಿಗಲಿಲ್ಲವೋ ಯಕ್ಷಗಾನ ಆ ವರ್ಷ ಇಲ್ಲ.ಅಲ್ಲಿಯವರೆಗೆ ಅಭಿಮಾನ.ಇಂಥ ಎಷ್ಟೋ ಅಭಿಮಾನಿಗಳು ಸಿಕ್ಕಿಯಾರು.ಮತ್ತೆ ಕೆಲವರು ಅವರ ಕುಣಿತ ವಿರೋಧಿಸಿದ್ದೂ ಉಂಟಂತೆ.ಅದೇನೋ ಪಾಯಿಖಾನೆ ಕುಣಿತ ಅಂತ.ತೈಯತ್ತಾ ತಾ ತೈ ತೈ ಗೆ ಅಜ್ಜ ಹಾಕುವ ಕುಣಿತದ ಶೈಲಿ ಅದು..ಹೇಳಿದವರು ಸಾವಿರ ಹೇಳಿಯಾರು.ಆದರೆ ವಾಸ್ತವ ಈಗಿನ ಎಲ್ಲಾ ಕಲಾವಿದರು ಅದನ್ನೇ ಅನುಸರಿಸಿದರು.ಹೆಚ್ಚಿನ ಎಲ್ಲಾ ಕಲಾವಿದರು ಅವರ ಪ್ರಭಾವಕ್ಕೆ ಒಳಗಾದವರೇ.ಮುಮ್ಮೇಳದಲ್ಲಿ ಅವರಂಥ ಬಾಕ್ಸ್ ಆಫೀಸ್ ಕಲಾವಿದ ಹಿಂದಿರಲಿಲ್ಲ, ಮುಂದೆ ಇರುವುದೂ ಇಲ್ಲ.ಕೀಚಕ,ಭಸ್ಮಾಸುರ,ರುದ್ರಕೋಪ,ಕೌರವ,ಅರ್ಜುನ, ಪರಶುರಾಮ,ಭದ್ರಸೇನ,ಕಂಸ,ದುಷ್ಟಬುದ್ದಿ,ಸುಂದರರಾವಣ,ಕಲಾಧರ,ಘಟೋತ್ಕಜ, ಸುಭದ್ರಾ ಕಲ್ಯಾಣದ ಕ್ರಷ್ಣ,ಕಾರ್ತವೀರ್ಯ ಇವೆಲ್ಲಾ ಪಾತ್ರಗಳು ಚಿಟ್ಟಾಣಿಗಾಗಿಯೇ ಇದ್ದಂತವೇನೋ ಅನಿಸುತ್ತದೆ.ಬೇರೇ ಯಾರೇ ಮಾಡಲಿ.ಉಹು.ನಾಟುವುದಿಲ್ಲ.ಏನೋ ಮಿಸ್ಸಿಂಗ್.ಎಷ್ಟೇ ಉತ್ತಮವಾಗಿ ಮಾಡಿರಲಿ ಹೊರಗೆ ಬರುವಾಗ ಹೇಳುವ ಮಾತು” ಚಿಟ್ಟಾಣಿ ಕಂಡಂಗ್ ಆಯ್ಲಾ ಮರಾಯಾ” ಯಾ ” ಎಂತದೇ ಹೇಳ ಚಿಟ್ಟಾಣಿ ನಮ್ನಿ ಆಗ್ತಿಲ್ಯ ಭಾವ” ಹೇಳುವುದು ಸಾಮಾನ್ಯ.ಯಕ್ಷಗಾನ ರಂಗದ ಯುಗಪ್ರವರ್ತಕ ಚಿಟ್ಟಾಣಿ ಅಜ್ಜ.
ತನ್ನನ್ನ ಮೇಲೆತಂದವರನ್ನ ಮರೆಯಲಿಲ್ಲ ಅಜ್ಜ .ನಮ್ಮ ಹಂಗಾರಕಟ್ಟೆ ಕೇಂದ್ರದಲ್ಲಿ ಪ್ರತಿ ಭಾಷಣದಲ್ಲಿ ಅವರು ಹೇಳುವುದುಂಟು. ಆವಾಗ ಕೇಂದ್ರ ಹಾಗೂ ಸಾಲಿಗ್ರಾಮದ ಅಭಿಮಾನಿಗಳ ವತಿಯಿಂದ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಕೂಡ ಇತ್ತು. “ನನ್ನನ್ನ ಕೈ ಹಿಡಿದದ್ದು ಈ ಕೋಟ ಪರಿಸರ.ಅಮ್ರತೇಶ್ವರಿ ತಾಯಿ. ಶ್ರೀಧರ ಹಂದೆ( ಅಮ್ರತೇಶ್ವರಿ ಮೇಳದ ಆಗಿನ ಯಜಮಾನರು) , ಉಪ್ಪೂರರು ನಾವುಡರು ಮತ್ತೆ ಈ ಪರಿಸರದ ಜನರನ್ನ ನಾ ಯಾವತ್ತೂ ಮರೆಯಲಾರೆ ಎಂಬುದಾಗಿ. ನನ್ನ ಅಪ್ಪಯ್ಯನಲ್ಲಿ ಹೇಳುವುದಿತ್ತು.” ಏನೋ ಗೊತ್ತಿಲ್ಲ ಹೆಬ್ಬಾರ್ರೆ ಈ ಪರಿಸರದಲ್ಲಿ, ಕೇಂದ್ರದ ರಂಗಸ್ಥಳದಲ್ಲಿ ಕುಣಿದರೆ ಅದೇನೋ ಹುಮ್ಮಸ್ಸು. ಎಲ್ಲಾ ಆ ತಾಯಿಯ ಕ್ರಪೆ” ಅಂತ.ಮೊನ್ನೆ ಕುಟುಂಬ ಸಮೇತವಾಗಿ ಅಜ್ಜನ ಮನೆಗೆ, ಅಜ್ಜನ ಶ್ರಾದ್ಧದ ನಿಮಿತ್ತ ಹೋದಾಗ , ಅಲ್ಲಿಗೆ ಬಂದಿದ್ದ ಚಿಟ್ಟಾಣಿ ಅಜ್ಜ ಒತ್ತಾಯಮಾಡಿ ಅವರ ಮನೆಗೆ ಕರೆದೊಯ್ದರು. ನಮಗೆ ಅಂತಲ್ಲ ಯಾರೇ ಪರಿಚಯದವರಿದ್ದರೂ ಇದೇ ಆತ್ಮೀಯತೆ. ಚಾಹಾ ಸೇವಿಸುವಾಗ ಬೇಸರಿಸಿ ಹೇಳ್ತಿದ್ದರಂತೆ ” ಹೆಬ್ಬಾರರೇ ಈಗಿತ್ಲಾಗೆ ನನ್ನ ಜಾಸ್ತಿ ಕರಿತ್ವಿಲ್ಲೆ. ನಂಗೂ ಕೂಡ್ತಿಲ್ಲೆ.ಯಕ್ಷಗಾನ ವೇಷ ಮಾಡಗಿದ್ರೂ ಕೈ ಕಾಲ್ ಓಡ್ತಿಲ್ಲೆ “. ಪಾಪ ಅನ್ನಿಸಿ ಬಿಟ್ಟಿತು. ಈಗ ವೇಷ ಕೊಡ್ತೆ ಮಾಡು ಅಂದ್ರೂ ಅಜ್ಜನೇ ಇಲ್ಲ. ಒಂದು ರೀತಿಯ ಶೂನ್ಯ ಆವರಿಸಿ ಬಿಟ್ಟಿದೆ.
ಎರಡು ವರ್ಷದಲ್ಲಿ ಎರಡು ಆಘಾತ ಯಕ್ಷಗಾನಕ್ಕೆ. ಒಬ್ಬವ ನವ್ಯ ನಾಟ್ಯದ ಪ್ರವರ್ತಕ ಕಣ್ಣಿ. ಅದರಿಂದ ಹೊರಬರುವಷ್ಟರಲ್ಲಿ ಅಜ್ಜ. ಅಜ್ಜ ವೇಷ ಮಾಡದಿದ್ದರೂ , ಮನೆ ಹಿರಿಯನಂತೆ ಇದ್ದರೆ ಸಾಕಿತ್ತು. ಇನ್ನು ಅಜ್ಜನ ಮುಗ್ಧ ನಗೆ, ” ತಮಾ ಬಂದ್ಯನ? ಕೇಳುವ ಆತ್ಮೀಯತೆ, ಒಂದೇ ಬೀಡಿಯನ್ನ ೪ ರಿಂದ ೫ ಸಲ ಹಚ್ಚಿ ಹೊಗೆ ಬಿಡುವ ಚಂದ, ಆ ರಂಗದಲ್ಲಿನ ಅಟ್ಟಹಾಸ, ಕುಣಿತ, ಕಣ್ಣಲ್ಲಿನ ಅಭಿನಯ, ಪ್ರವೇಶ, ಪದ್ಯದ ಎತ್ತುಗಡೆ ಒಂದಾ ಎರಡಾ ಎಲ್ಲವೂ ಇನ್ನು ನೆನಪು ಮಾತ್ರ. ಕಣ್ಣುಗಳು ಹನಿಗೂಡ್ತಾವೆ. ಅಜ್ಜನಿಲ್ಲದ ಯಕ್ಷಗಾನ ಊಹಿಸುವುದೂ ಕಷ್ಟ. ಪಾಂಪ್ಲೆಟ್ ಅಲ್ಲಿ ಅಜ್ಜನ ಹೆಸರಿದ್ದರೆ ಆ ಪಾಂಪ್ಲೆಟ್ಟಿನ ಖದರ್ರೇ ಬೇರೆ..” ಒಂದು ದಿನ ಸೊಬಗಿಂದ” ಅಂತ ಸಿಂಹಾಸನ ಏರಿ ಕತ್ತಿ ತಿರುಗಿಸುತ್ತಾ ವಿಜಯನನ್ನ ನೋಡುತ್ತಲಿರುವ ಚಿತ್ರ ಕಣ್ಮುಂದೆ ಬರುತ್ತದೆ. ಏನು ಮಾಡೋಣ ಕಾಲಾಯ ತಸ್ಮೈ ನಮಹ. ತೇವಗೊಂಡ ಕಣ್ಣಂಚಿನಿಂದ ,ನಡುಗುವ ಕೈಗಳಿಂದ ನಾನು ಹಾಗು ನಿನ್ನ ಅಪಾರ ಅಭಿಮಾನಿಗಳಿಂದ ನಿನಗಿದೋ ಅಶ್ರುತರ್ಪಣ. ನಿನ್ನ ನೆನಪೇ ನಮ್ಮ ಹ್ರದಯದಲ್ಲಿ ಅಜರಾಮರ. ಆದರೊಂದು ಅಜ್ಜ ಚಿಟ್ಟಾಣಿ ಹಾಗೆ ರಂಗವಾಳುವವ ,ಹಿಂದೂ ಬಂದಿರಲಿಲ್ಲ. ಮುಂದೆಯೂ ಬರಲಾರ..” ಯಕ್ಷರಂಗದ ರಾಜಕುಮಾರ”

ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ”

4 thoughts on “ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ” – ಮೇಘಶ್ಯಾಮ್ ಹೆಬ್ಬಾರ್

  1. http://www.dekart.com/?dissertation-consulting-service-correction ಬಡಗಿನ ಪರಿಸಲ್ಲಿ ಬೆಳೆದ ನನಗೆ ಚಿಟ್ಟಾಣಿ ಹೆಸರು ಪರಿಚಿತವಾಗಿದ್ದರೂ ಅವರ ವೇಷವನ್ನು ನೇರವಾಗಿ ಕಾಣಲು ಸಿಕ್ಕಿದ್ದು ಒಂದೇ ಬಾರಿ.
    ಈ ಲೇಖನದಲ್ಲಿ ಹೇಳಿದಂತೆ ಬಡಗಿನ ಅನೇಕ ವೇಷಧಾರಿಗಳಿಗೆ ತೆಂಕಿನ ಕ್ಷೇತ್ರದಲ್ಲಿ ವಾಸಿಸುವವರೂ ಅಭಿಮಾನಿಗಳಾಗಿದ್ದಾರೆ ಎನ್ನುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.

    go to link ಕಾಯಿ ಹಣ್ಣಾದಾಗ ಉದುರಿ ಬೀಳುವುದು ಪ್ರಕೃತಿ ಸಹಜ ನಿಯಮ. ಆದರೂ ಚಿಟ್ಟಾಣಿಯವರ ವೇಶವನ್ನು ನಾವು ಖಂಡಿತವಾಗಿಯೂ ಮುಂದೆ ಯಾವ ಕಲಾವಿದನಲ್ಲೂ ಕಾಣಲು ಸಾಧ್ಯವಿಲ್ಲ. ಚಿಟ್ಟಾಣಿಯವರ ಆತ್ಮಕ್ಕೆ ಶಾಂತಿ ದೊರೆಯಲಿ.

Leave a Reply

Top