You are here
Home > ನಮ್ಮ ಬಗ್ಗೆ > Webತನ ಎನ್ನುವ ಪರಿಕಲ್ಪನೆ

Webತನ ಎನ್ನುವ ಪರಿಕಲ್ಪನೆ

http://www.uk-officesupplies.com/dissertation-speech-abr/ ನಾನು ಕರ್ನಾಟಕದ ಸಾಮಾನ್ಯ ಪ್ರಜೆ. ಕನ್ನಡದ ಬರವಣಿಗೆಗಳು ಹಾಗೂ ಅವು ಕನ್ನಡಿಗರನ್ನು ತಲುಪುವ ಬಗೆಯನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಅಕ್ಕ ಪಕ್ಕದಲ್ಲಿರುವ ಭಾಷೆಗಳು ಇಂಟರ್ನೆಟ್ ಮಾಧ್ಯಮದ ಮೂಲಕ ಹೇಗೆ ಹೊರ ಹೊಮ್ಮುತ್ತಿದೆ ಎಂದು ಕಣ್ಣಾರೆ ನೋಡುತ್ತಿದ್ದೇನೆ. ಆದರೆ ಕನ್ನಡ? ಇಂಟರ್ನೆಟ್ನಲ್ಲಿ ಹರಡಿದೆಯಾ?. ಇಲ್ಲ ಕನ್ನಡದ

ಬ್ಲಾಗುಗಳು ಇಂಟರ್ನೆಟ್ ಪ್ರಪಂಚದಲ್ಲಿ ಅತೀ ವಿರಳ 🙁

ಪ್ರತಿ ಭಾಷೆ ಹಾಗು ಅದರ ಸಾಹಿತ್ಯ ಬೆಳೆಯಲು, ಕಾಲದೊಂದಿಗೆ ಬದಲಾಗುವುದು ಅತ್ಯವಶ್ಯಕ. ಕಲ್ಲಲ್ಲಿ ಕೆತ್ತುತ್ತಿದ ಚಿತ್ರಗಳು ಜಾನಪದ ಹಾಡುಗಳಾಗಿ, ತಾಳೆಗರಿಯಿಂದ ಪುಸ್ತಕಗಳಾಗಿ ಬಂದು ನಿಂತಿದೆ. ಅದರ ಮುಂದಿನ ದಾರಿ ಇಂಟರ್ನೆಟ್. ಕನ್ನಡವನ್ನು ಹೆಚ್ಚಾಗಿ ಇಂಟರ್ನೆಟ್ ಮಾಧ್ಯಮಕ್ಕೆ ತರುವ ಪರಿಕಲ್ಪನೆಯೇ ಈ ವೆಬ್ ತನ. ಹೊಸ ವಿಚಾರಗಳನ್ನು ಪ್ರಪಂಚದ ಎಲ್ಲ ಕಡೆಯಿಂದ ಸಂಗ್ರಹಿಸಿ, ನಮ್ಮ ವಿಚಾರಗಳನ್ನು ಪ್ರಪಂಚದ ಎಲ್ಲ ಕಡೆ ತಲುಪಿಸುವುದೇ ವೆಬ್ ತನ ದ ಆಶಯ.

see url ಈ ಆಶಯವನ್ನು ನನ್ನ ಮಿತ್ರರೊಂದಿದೆ ಹಂಚಿಕೊಂಡಾಗ ಅವರೆಲ್ಲ ಒಕ್ಕೊರಲ್ಲಿಂದ ಹೇಳಿದ್ದು “ಶುರುಮಾಡು, ನಾವಿದ್ದೇವೆ ” ಎಂದು. ಈಗ ವೆಬ್ ತನ ಒಂದು ತಂಡವಾಗಿ ಬೆಳೆದು ನಿಂತಿದೆ. ರಾಜಕೀಯ ರಹಿತ ಸುದ್ದಿ ಸಂಗ್ರಹವೇ ನಮ್ಮ ಗುರಿ, ಪ್ರತಿ ದಿನ ಓದುವ ರಾಜಕೀಯದ ಕೆಸರು ಮತ್ತು ಕ್ರೈಮ್ ಲೋಕದ ನೆತ್ತರು ಎರಡೂ ನಮ್ಮ ಬ್ಲಾಗ್ ತಾಣದ ಪುಟಗಳ ಮೇಲೆ ಬೀಳುವುದಿಲ್ಲ. ಪ್ರತಿ ತಿಂಗಳ ಮೊದಲ ಸೋಮವಾರದಂದು ವೆಬ್ ತನದ ಹೊಸ ಪ್ರತಿ ಬಿಡುಗಡೆಯಾಗುತ್ತದೆ.

http://growtrees.org/research-paper-earthquakes/ ಹಾಗಾದರೆ ವೆಬ್ ತನದಲ್ಲಿ ಏನೆಲ್ಲ ಇರುತ್ತದೆ ಎನ್ನುವ ಪ್ರಶ್ನೆ ನಿಮಗೆ ಮೂಡಿರಬಹುದು. ವೆಬ್ ತನದಲ್ಲಿ ಮೊದಲಿಗೆ

1. ಚಿಂತನೆ – ಹೊಸ ವಿಚಾರಗಳ ಸುದ್ದಿ ಮೂಲ

2. ಟ್ರಂಕ್ ಕಾಲ್ – ವಿದೇಶದಲ್ಲಿರುವ ಕನ್ನಡಿಗರ ಬರಹಗಳಿಗೆ ಈ ವಿಭಾಗ ಮೀಸಲು.

3. ತಿಳಿ ಹಾಸ್ಯ – ಸ್ವಲ್ಪ ಹಾಸ್ಯವಿದ್ದರಷ್ಟೇ ಬದುಕು ಪರಿಪೂರ್ಣ, ಅಂತಹ ಹಾಸ್ಯ ಕಥೆಗಳಿಗಾಗಿ ಈ ವಿಭಾಗ.

4. ಮರೆಯದ ಸಾಲು – ಕವನಗಳು ಮತ್ತು ಚುಟುಕುಗಳಿಗಾಗಿ.

5. ಮಮಕಾರ – ಮಹಿಳಾ ಲೇಖಕಿಯರಿಗೆ ಈ ವಿಭಾಗ

6. ಮಾಸದ ಕ್ರೀಡಾಪಟು – ಕ್ರೀಡಾಪಟುಗಳ ಸ್ಪೂರ್ತಿದಾಯಕ ಕಥೆ ಈ ವಿಭಾಗದಲ್ಲಿ

7. ಯಂತ್ರದೊಂದಿಗೆ – ನಮ್ಮ ಸುತ್ತ ಮುತ್ತಲಿನ ಯಂತ್ರಗಳ ಪರಿಚಯ ಕನ್ನಡದಲ್ಲಿ

8. ವಕ್ರಕೋನ – ಪ್ರತಿ ವಿಷಯಗಳ ಹಲವು ಮಗ್ಗಲುಗಳ ಅನಾವರಣ ಈ ವಿಭಾಗದಲ್ಲಿ

9. ವೇದವಾಕ್ಯ – ಜೀವನವನ್ನು ನೋಡುವ, ಅರ್ಥೈಸಿಕೊಳ್ಳುವ ಲೌಕಿಕ ವಿಚಾರಗಳ ಸಂಗ್ರಹ

ಈ ಎಲ್ಲ ವಿಭಾಗಗಳು ನಿಮಗೆ ಕನ್ನಡದಲ್ಲಿ ಅಂಕಣಗಳನ್ನು ನೀಡುತ್ತವೆ. ಕನ್ನಡಕ್ಕೆ ಹೊಸ ಲೇಖಕರನ್ನು ಪರಿಚಯಿಸುದರ ಜೊತೆಗೆ, ಇ ಬುಕ್ ಗಳನ್ನು ಪಿಡಿಎಫ್ ರೂಪದಲ್ಲಿ ತರುವುದು, ಗ್ರಾಮೀಣ ಮಟ್ಟದ ಪ್ರತಿ ಶಾಲೆಗಳನ್ನು ತಲುಪಿ ಮಕ್ಕಳಿಗೆ ಕನ್ನಡದಲ್ಲಿ ಬರೆಯಲು ಪ್ರೋತ್ಸಾಹಿಸುವುದು ನಮ್ಮ ಯೋಜನಾ ಪಟ್ಟಿಯಲ್ಲಿದೆ.

ಹಾಗಾದರೆ ಸದ್ಯಕ್ಕೆ ವೆಬ್ ತನ ದ ಬರಹಗಾರರು? ನೀವು ನಾವುಗಳೇ ವೆಬ್ ತನ ದ ಬರಹಗಾರರು. ನಿಮ್ಮ ಬರಹಗಳೇ ವೆಬ್ ತನ ದ ಇಂಧನ. ಹವ್ಯಾಸಿ ಬರಹಗಾರನ್ನು ಒಂದೇ ವೇದಿಕೆಯಲ್ಲಿ ತರುವುದು ವೆಬ್ ತನ ದ ಮೂಲ ಉದ್ದೇಶಗಳಲ್ಲೊಂದು.

ಪ್ರಪಂಚದ ಅತ್ಯಂತ ಕಷ್ಟದ ಕೆಲಸ “ಗೃಹಿಣಿಯದ್ದು”. ಸಮಾಜ ಹಾಗು ಸಂಸಾರವನ್ನು ಸಮತೋಲನದಿಂದ ನಡೆಸಿಕೊಂಡು ಮುಂದೆ ಹೋಗುವ ಗೃಹಿಣಿಯ ಆಲೋಚನೆಗಳು ನಾಲ್ಕು ಗೋಡೆಗಳ ನಡುವೆ ಮಬ್ಬಾಗಬಾರದು. ಪ್ರತಿ ದಿನ “ಲ್ಯಾಪ್ ಟಾಪ್” ಎನ್ನುವ ಜವಾಬ್ದಾರಿಯನ್ನು ಹೊತ್ತು ತರುವಾಗ ಎದುರಾಗುವ ವಿಷಯಗಳು, ಟ್ರಾಫಿಕ್ನ ಶಬ್ದ ಮಾಲಿನ್ಯದಲ್ಲಿ ಲೀನವಾಗಬಾರದು. ವಿದೇಶದಲ್ಲಿದ್ದು ಕನ್ನಡವನ್ನು ಅಲ್ಲಿ ಇಲ್ಲಿ ಹುಡುಕುವ ಮನಸ್ಸು, ನಾನೆಷ್ಟು ಕನ್ನಡವನ್ನು ಬಯಸುತ್ತೇನೆ ಎನ್ನುವುದು ಕನ್ನಡಿಗರಿಗೆ ತಿಳಿಸದೇ ಇದ್ದರೆ ಹೇಗೆ. ಮಗಳೊಂದಿಗೆ ಹೋದ ಸಂಜೆ ವಾಕ್ ನಲ್ಲಿ ಅವಳು ಕೇಳಿದ ಪ್ರಶ್ನೆಗಳು ಬರಹ ರೂಪಲ್ಲಿ ಬಂದರೆ ಹೇಗೆ? ಇಂಗ್ಲಿಷ್ ಭಾಷೆಯೆಲ್ಲೇ ಆಲೋಚಿಸಲು ಪ್ರಚೋದಿಸುವ ಶಾಲಾ ಮಾಧ್ಯಮಗಳ ನಡುವೆ ಚಿಗುರಿದ “ಕನ್ನಡದ ಹನಿಗವನ” ಮಣ್ಣಲ್ಲಿ ಸೇರಿದರೆ ಹೇಗೆ?. ಜೀವನಕೊಂದು ಸ್ಪೂರ್ತಿ ತುಂಬುವ ಕಥೆ ಮಾತೃ ಭಾಷೆಯಲ್ಲಿ ಹೇಳಿದರೆಷ್ಟು ಚೆಂದ ? ಹೌದು ಈ ಎಲ್ಲಾ ಬರವಣಿಗೆಗಳು ನಿಮ್ಮಿಂದ ಹುಟ್ಟುತ್ತದೆ. ನಿಮ್ಮ ಚಿಕ್ಕ ಪ್ರಯತ್ನ ಕನ್ನಡವನ್ನು ಶಾಶ್ವತವಾಗಿ ಇಂಟರ್ನೆಟ್ ಮಾದ್ಯಮದಲ್ಲಿರಿಸುತ್ತದೆ.

ಈ ಕಲ್ಪನೆ ನಿಮಗೆ ಹತ್ತಿರವಾಗಿದೆ ಎಂದು ತಿಳಿಯುತ್ತೇನೆ. ವೆಬ್ ತನಕ್ಕೆ ಮೊದಲು ಕೈ ಹಿಡಿದ ವಿಜಯ್, ಚಂದ್ರು, ರಾಮ್, ಅರುಣ್, ಕಿನ್ನರಿ, ವೇದಾವತಿ, ಮೇಘ, ಶಶಿಧರ, ಸುದೀಪ್ ಹಾಗು ನವೀನ ಅವರಿಗೆ ನಾನು ಚಿರಋಣಿ.

ನಿಮ್ಮ ಬರಹಗಳನ್ನು ಇ ಮೈಲ್ಗಳ ಮೂಲಕ ನಮಗೆ ತಲುಪಿಸಿ. ಕೈ ಬರಹವಾದರೆ ನಮ್ಮ ವಾಟ್ಸಪ್ಪ್ ನಂಬರಿಗೆ ಫೋಟೋ ರೂಪದಲ್ಲಿ ಕಳುಹಿಸಿ. ಕನ್ನಡವನ್ನು ಇಂಟರ್ನೆಟ್ ಮಾದ್ಯಮಕ್ಕೆ ಹೊಸದಾಗಿ ಪರಿಚಯಿಸೋಣ. ಕನ್ನಡಕ್ಕೆ ನೀಡುವ ಪ್ರೀತಿ, ವಾತ್ಸಲ್ಯವನ್ನು ವೆಬ್ ತನಕ್ಕೂನೀಡುತ್ತೀರಿ ಎನ್ನುವ ಭರವಸೆಯಿದೆ. ಬನ್ನಿ ವೆಬ್ ತನವನ್ನು ಪ್ರಪಂಚಕ್ಕೆ ತಿಳಿಸೋಣ. ಕನ್ನಡವನ್ನು “ವೆಬ್” ನ ಮಡಿಲಿಗೆ ಸೇರಿಸುವ ಹೊಸ “ತನ” ಶುರುವಾಗಲಿ.

ಪವನ್ ಅಣ್ಣಯ್ಯ,

http://www.forthelm.com/write-an-essay-on-my-best-friend/ ಕನ್ನಡಿಗ

Twitter: @shettypavan123

https://www.facebook.com/webthana/

webthanapostbox@gmail.com

+91 8105151525

Leave a Reply

Top